ಪ್ರಿಯಾಂಕಾ ಚೋಪ್ರಾ ಅವರ ಈ ಉಡುಗೆ ಬೆಲೆ ಬಹಳ ಕಡಿಮೆ !

in ಮನರಂಜನೆ/ಸಿನಿಮಾ 136 views

ನಟಿ ಪ್ರಿಯಾಂಕಾ ಚೋಪ್ರಾ ದುಬಾರಿ ಬಟ್ಟೆ, ಫ್ಯಾಷನ್ಗೆ ಹೆಸರುವಾಸಿ. ಆದರೂ ಪ್ರಿಯಾಂಕಾ ಅಗ್ಗದ ಉಡುಪುಗಳನ್ನು ಖರೀದಿಸಲು ಹಿಂಜರಿಯುವುದಿಲ್ಲ. ಹೌದು, ಪ್ರಿಯಾಂಕಾ ಸಾಮಾನ್ಯವಾಗಿ ತನ್ನ ದುಬಾರಿ ಉಡುಪುಗಳು, ಬೂಟುಗಳು, ಬ್ಯಾಗ್’ಗಳು ಇತ್ಯಾದಿಗಳಿಂದ ಜನರನ್ನು ಬೆರಗುಗೊಳಿಸುತ್ತಾರೆ. ಆದರೂ ಫ್ಯಾಶನ್ ಲವರ್ ಪ್ರಿಯಾಂಕಾ ಸಣ್ಣ ಬ್ರಾಂಡ್ಗಳ ಬಟ್ಟೆಗಳನ್ನು ಧರಿಸಲು ಹಿಂದೆ ಮುಂದೆ ಆಲೋಚಿಸುವುದಿಲ್ಲ. ಪ್ರಿಯಾಂಕಾ ಅವರಿಗೆ ತಾವು ನೋಡಿದ ಉಡುಪು ಇಷ್ಟವಾಯಿತೆಂದರೆ ಮುಗಿಯಿತು ಅದು ದೊಡ್ಡ ಬ್ರಾಂಡ್ ಅಲ್ಲದಿದ್ದರೂ ಸಹ ಅದನ್ನು ಖರೀದಿಸುತ್ತಾರೆ. ಇದೀಗ ಪ್ರಿಯಾಂಕ ಕಡಿಮೆ ಬೆಲೆಯ ಉಡುಪನ್ನು ಧರಿಸಿ ಗಂಡ ನಿಕ್’ನೊಂದಿಗೆ ಪ್ಯಾರಿಸ್’ನಲ್ಲಿ ಕಾಲ ಕಳೆಯುತ್ತಿದ್ದಾಗ ಅವರನ್ನು ಗುರುತಿಸಲಾಗಿದೆ.  ಫೋಟೋದಲ್ಲಿ ಕಾಣುವ ಪ್ರಕಾರ ಪ್ರಿಯಾಂಕಾ ಕಪ್ಪು ಸ್ಲಿಪ್ ಉಡುಗೆ ಧರಿಸಿದ್ದು, ಇದಕ್ಕೆ ಸ್ಪಾಗೆಟ್ಟಿ ಸ್ಲೀವ್ಸ್ ಮತ್ತು ಡೀಪ್ ಕಟ್ ನೆಕ್ ಲೈನ್ಸ್ ಬಂದಿದೆ. ಪ್ರಿಯಾಂಕಾ ಕಪ್ಪು ಸ್ಲಿಪ್ ಉಡುಪಿನೊಂದಿಗೆ ಬಿಳಿ ಕಿವಿಯೋಲೆ ಧರಿಸಿದ್ದಾರೆ. ಜೊತೆಗೆ ಸ್ಟೈಲಿಶ್ ಆದ ಕಪ್ಪು ಕನ್ನಡಕವನ್ನು ಸಹ ಧರಿಸಿದ್ದಾರೆ. ಅಷ್ಟೇ ಅಲ್ಲ, ನ್ಯೂಡ್ ಮೇಕ್ಅಪ್, ಚೆರ್ರಿ ರೆಡ್ ಲಿಪ್ಸ್ಟಿಕ್ ಅನ್ನು ಹಚ್ಚಿದ್ದಾರೆ. ಹಾಗೆಯೇ ಪೋನಿ ಟೇಲ್ ಹೇರ್ ಸ್ಟೈಲ್ ಕೂಡ ಮಾಡಿಕೊಂಡಿದ್ದಾರೆ.

Advertisement

 

Advertisement


ವರದಿಗಳ ಪ್ರಕಾರ ಪ್ರಿಯಾಂಕಾ ಚೋಪ್ರಾ ಅವರ ಈ ಉಡುಗೆ ಅರಿಟ್ಜಿಯಾ ಬ್ರಾಂಡ್ಎಂದು ತಿಳಿದು ಬಂದಿದೆ. ಇದು ದುಬಾರಿ ರಿಟೇಲ್ ಬ್ರಾಂಡ್ ಆಗಿದ್ದು, ಇದು ಮಹಿಳೆಯರಿಗೆ ಮಾತ್ರ ಬಟ್ಟೆಗಳನ್ನು ತಯಾರಿಸುತ್ತದೆ. ಪ್ರಿಯಾಂಕಾ ಅವರ ಸ್ಲಿಪ್-ಆನ್ ಉಡುಗೆ ಯುಎಸ್ ಕರೆನ್ಸಿ ಪ್ರಕಾರ ಅಂದಾಜು 40 ಡಾಲರ್ ಎಂದು ಹೇಳಲಾಗುತ್ತದೆ. ಅಂದರೆ ಸುಮಾರು 3000 ರೂಪಾಯಿಗಳು. ಇದು ಕಾಲೇಜಿಗೆ ಹೋಗುವ ಹುಡುಗಿಯರು ಬಳಸಬಹುದಾದ ಉಡುಪಾಗಿದ್ದು, ಪ್ರಿಯಾಂಕಾ ಅಭಿಮಾನಿಗಳು ಈ ಡ್ರೆಸ್ ನೋಡಿ ವ್ಹಾವ್ ಎನ್ನುತ್ತಿರುವುದಂತು ಸುಳ್ಳಲ್ಲ.

Advertisement

Advertisement

ಕಂದು ಬಣ್ಣದ ಹುಡುಗಿ ಪ್ರಿಯಾಂಕಾ ಇಂದು ವಿಶ್ವದ ಫ್ಯಾಷನ್ ಐಕಾನ್ ಆಗುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ. ಫ್ಯಾಶನ್ ಜಗತ್ತಿನಲ್ಲಿ ದೊಡ್ಡ ಹೆಸರು ಗಳಿಸಿರುವ ಪ್ರಿಯಾಂಕಾ ಚೋಪ್ರಾ ಅವರ ಕೆಲವು ಲುಕ್’ಗಳನ್ನು ಹಲವು ಬಾರಿ ಟ್ರೋಲ್ ಸಹ ಮಾಡಲಾಗಿದೆ. ಅಷ್ಟೇ ಅಲ್ಲ, ಅಂತರ್ಜಾಲದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದೆ. ಪ್ರಿಯಾಂಕಾ ಹಾಟ್ ಲುಕ್ ಎಲ್ಲರ ಗಮನ ಸೆಳೆದಿದ್ದರೂ, ಕೆಲವು ಜನರು ಇದನ್ನು ವಿಚಿತ್ರ ಮತ್ತು ಕಳಪೆ ಫ್ಯಾಷನ್ ಎಂದು ಹೆಸರಿಸಿದ್ದಾರೆ. ಅಷ್ಟೇ ಏಕೆ, ಪ್ರಿಯಾಂಕಾ ಫ್ಯಾಷನ್ ಹಾಲಿವುಡ್ ಮತ್ತು ಬಾಲಿವುಡ್’ನ ಜನರನ್ನು ಪ್ರತಿ ಬಾರಿಯೂ ಅಚ್ಚರಿಗೊಳಿಸಿದೆ.

Advertisement
Share this on...