ಈ ಫೋಟೋದಲ್ಲಿ ಎಲ್ಲರ ಗಮನ ಸೆಳೆದದ್ದು ಪ್ರಿಯಾಂಕಾ ಪತಿ, ಯಾಕೆ ಗೊತ್ತಾ?

in Uncategorized 53 views

ನಿಕ್ ಜೊನಸ್ ಮತ್ತು ಪ್ರಿಯಾಂಕಾ ಚೋಪ್ರಾ ಬಾಲಿವುಡ್ ಮತ್ತು ಹಾಲಿವುಡ್ನ ಅತ್ಯಂತ ಜನಪ್ರಿಯ ಜೋಡಿಗಳು. ಇಬ್ಬರೂ ತಮ್ಮ ಸ್ಟೈಲ್ ಸ್ಟೇಟ್’ಮೆಂಟ್ ಅನ್ನು ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ. ಉದಾಹರಣೆಗೆ ನಾವು ನಿಮಗೆ ಕೊಡುವ ಪುರಾವೆ ನಿಕ್ ಜೊನಸ್ ಅವರ ಗಡಿಯಾರ. ಈ ವಾಚನ್ನು ದೊಡ್ಡ ಖ್ಯಾತನಾಮರಿಗೆ ಖರೀದಿಸಲು ಆಗುವುದಿಲ್ಲ. ಸದ್ಯ ನಿಕ್ ಜೊನಸ್ ಅವರ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಫೋಟೋ ಸುಂದರವಾದ ಸಂಜೆಯಲ್ಲಿ ನಡೆದ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಸಮಾರಂಭದ್ದಾಗಿದೆ. ಇದರಲ್ಲಿ ನಿಕ್ ಜೊನಸ್ ಪ್ರಿಯಾಂಕಾ ಚೋಪ್ರಾ ಇಬ್ಬರೂ ಇದ್ದಾರೆ. ಆದರೆ ಈ ಫೋಟೋದಲ್ಲಿ ಎಲ್ಲರ ಗಮನ ಸೆಳೆದದ್ದು ನಿಕ್ ಜೊನಸ್ ಗಡಿಯಾರದ ಕಡೆಗೆ. ಹೌದು, ನಿಕ್ ಜೊನಸ್ ಬಲ್ಗರಿ ಆಕ್ಟೊ ಎಲ್ ಒರಿಜಿನೇಲ್ ಬ್ಲೂ ಫುಲ್ ಬ್ಯಾಗೆಟ್ ಬ್ರಾಂಡ್ ವಾಚ್ ಧರಿಸಿದ್ದರು. ಇದು ವಿಶ್ವದ ಅತ್ಯಂತ ದುಬಾರಿ ವಾಚ್ ಆಗಿದ್ದು, ಇದರ ಮೌಲ್ಯ ಏಳು ಕೋಟಿ ರೂಪಾಯಿಗಳಿಗಿಂತ ಹೆಚ್ಚಿದೆ. ಅಂದರೆ 9,28,000 ಡಾಲರ್.

Advertisement

 

Advertisement

Advertisement

ನಿಕ್ ಜೊನಸ್ ಅವರ ಈ ಗಡಿಯಾರದ ವಿಶೇಷವೆಂದರೆ ಈ ಗಡಿಯಾರವು ಒಟ್ಟು 50.25 ಕ್ಯಾರೆಟ್’ನ 1,172 ಸ್ಟೋನ್’ಗಳನ್ನು ಹೊಂದಿದೆ. ಇದನ್ನು ಬಿಳಿ ಚಿನ್ನದಿಂದ ತಯಾರಿಸಲಾಗಿದ್ದು, ವಾಚ್ ಡಯಲ್ ಅನ್ನು 192 ಬ್ಯಾಗೆಟ್ ಕಟ್ ಡೈಮಂಡ್ಸ್ ಮತ್ತು ರೌಂಡ್ ರೋಸ್ ಕಟ್ ಡೈಮಂಡ್‘ನೊಂದಿಗೆ ವಿನ್ಯಾಸಗೊಳಿಸಲಾಗಿದೆ.
ರಿಪಬ್ಲಿಕ್ ವರ್ಲ್ಡ್ ವರದಿಯ ಪ್ರಕಾರ ನಿಕ್ ಜೊನಸ್ ಅವರ ಒಟ್ಟು ನಿವ್ವಳ ಆದಾಯ 25 ಮಿಲಿಯನ್ ಡಾಲರ್ ಅಂದರೆ 1, 171 ಕೋಟಿ ಎಂದು ಅಂದಾಜಿಸಲಾಗಿದೆ. ಹಾಡುಗಳನ್ನು ಬರೆಯುವುದು ಮಾತ್ರವಲ್ಲದೆ, ಹಲವಾರು ಸಂಗೀತ ವೀಡಿಯೊಗಳು, ಟಿವಿ ಕಾರ್ಯಕ್ರಮಗಳು ಮತ್ತು ಚಾಟ್ ಶೋಗಳಲ್ಲಿಯೂ ನಿಕ್ ಕಾಣಿಸಿಕೊಂಡಿದ್ದಾರೆ.

Advertisement


ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಬಳಿಯೂ ಅಮೂಲ್ಯವಾದ ಕೈಗಡಿಯಾರಗಳ ಉತ್ತಮ ಸಂಗ್ರಹವಿದೆ. ಹೆಚ್ಚು ಕಡಿಮೆ ವಿರಾಟ್ ಕೊಹ್ಲಿ ಬಳಿ 70-70 ಲಕ್ಷ ರೂ ಬೆಲೆ ಬಾಳುವ ವಾಚುಗಳ ಸಂಗ್ರಹವಿದೆ. ಈ ಹಿಂದೆ ಅನುಷ್ಕಾ ಶರ್ಮಾ ಅವರೊಂದಿಗೆ ವಿರಾಟ್ ಕೊಹ್ಲಿ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಾಗ, ಅವರ ಕೈಯಲ್ಲಿದ್ದ ಗಡಿಯಾರದಲ್ಲಿ ಚಿನ್ನ, ನೀಲಮಣಿ ಮತ್ತು ವಜ್ರಗಳು ಇದ್ದವು. ಇದರ ಬೆಲೆ ಸುಮಾರು 70 ಲಕ್ಷ ರೂಪಾಯಿ.

Advertisement
Share this on...