ನನಗಿಂತ ನನ್ನ ಮಗಳ ಇಂಗ್ಲಿಷ್ ಚೆನ್ನಾಗಿದೆ ಎಂದ ಸ್ಟಾರ್ ನಟ !

in ಕನ್ನಡ ಮಾಹಿತಿ/ಮನರಂಜನೆ 63 views

ನಿರ್ದೇಶಕ ಸಚಿ ಹಠಾತ್ ನಿಧನರಾದ ನಂತರ ಅವರ ಆಪ್ತ ಸ್ನೇಹಿತ ಪೃಥ್ವಿರಾಜ್ ಬಹಳ ಬೇಸರದಿಂದ ಕಾಲ ಕಳೆಯುತ್ತಿದ್ದಾರೆ. ಇದೆಲ್ಲದರ ನಡುವೆ ವಿಶ್ವ ಅಪ್ಪಂದಿರ ದಿನದಂದು ಪೃಥ್ವಿ ಅವರ ಪುಟ್ಟ ಮಗಳು, ಪ್ರೀತಿಯಿಂದ ಅಲಿ ಎಂದು ಕರೆಯಲ್ಪಡುವ ಅಲಂಕೃತ ತನ್ನ ತಂದೆಗೆ ಪ್ರೀತಿಯಿಂದ ಮುದ್ದಾದ ಪತ್ರ ಬರೆದು ಸರ್ ಪ್ರೈಸ್ ನೀಡಿದ್ದಾಳೆ. ಪೃಥ್ವಿರಾಜ್ ಸುಕುಮಾರನ್ ಅವರ ಇಂಗ್ಲಿಷ್ ಭಾಷೆಯ ಪ್ರಾವೀಣ್ಯತೆಯ ಬಗ್ಗೆ ಆಗಾಗ್ಗೆ ಎಲ್ಲರೂ ಮಾತನಾಡುತ್ತಿರುತ್ತಾರೆ. ಇದೀಗ ಅವರ ಪುಟ್ಟ ಮಗಳು ಸಹ ಕೇವಲ 5 ವರ್ಷಕ್ಕೆ ಇಂಗ್ಲೀಷ್ ಭಾಷೆಯ ಮೇಲೆ ಹಿಡಿತ ಸಾಧಿಸಿದ್ದಾರೆ ಎಂದು ತೋರುತ್ತದೆ. ತಮ್ಮ ಇನ್ಸ್ಟಾಗ್ರಾಮ್ ಪುಟದಲ್ಲಿ ಮುದ್ದುಮಗಳ ಕೈಬರಹದ ಪತ್ರವನ್ನು ಹಂಚಿಕೊಂಡಿರುವ ಪೃಥ್ವಿರಾಜ್, ಫೋಟೋ ಗಮನಿಸಿ…ಅವಳಿಗಿನ್ನು 5 ವರ್ಷ, ಆದರೆ ಅವಳ ಇಂಗ್ಲಿಷ್ ನನ್ನ ಇಂಗ್ಲಿಷ್’ಗಿಂತ ಉತ್ತಮವಾಗಿದೆ ಎಂದು ಬರೆದುಕೊಂಡಿದ್ದಾರೆ.

Advertisement

Advertisement

ಪೃಥ್ವಿರಾಜ್ ಸುಕುಮಾರನ್ ಅವರ ಏಕೈಕ ಪುತ್ರಿ ಅಲಂಕೃತ ಮೆನನ್. ಜೋರ್ಡಾನ್ನಲ್ಲಿ ಸುಮಾರು ಮೂರು ತಿಂಗಳು ಕಳೆದ ನಂತರ, ಇತ್ತೀಚೆಗೆ ತನ್ನ ಕುಟುಂಬವನ್ನು ಸೇರಿಕೊಂಡಿದ್ದಾರೆ ಪೃಥ್ವಿರಾಜ್ . ಅಲ್ಲಿ ಅವರು ತಮ್ಮ ಮುಂಬರುವ ಚಿತ್ರ ‘ಆದುಜೀವಿತಂ’ ಚಿತ್ರದ ಚಿತ್ರೀಕರಣದಲ್ಲಿ ಲಾಕ್ ಆಗಿದ್ದರು. ‘ಆದುಜೀವಿತಂ’ ಈ ವರ್ಷದ ಅವರ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದ್ದು, ಈ ಚಿತ್ರದಲ್ಲಿ ಅಮಲಾ ಪೌಲ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಚಿತ್ರವನ್ನು ಬ್ಲೆಸಿ ನಿರ್ದೇಶನ ಮಾಡುತ್ತಿದ್ದಾರೆ.
ಅಂದಹಾಗೆ 1921 ರ ಮಲಬಾರ್ ಕ್ರಾಂತಿಯನ್ನು ಆಧರಿಸಿದ ‘ವಾರಿಯಂಕುನ್ನನ್’ ಚಿತ್ರಕ್ಕಾಗಿ ಪೃಥ್ವಿರಾಜ್ ಸುಕುಮಾರನ್ ಮತ್ತು ನಿರ್ಮಾಪಕ ಆಶಿಕ್ ಅಬು ಮೊದಲ ಬಾರಿಗೆ ಕೈಜೋಡಿಸಲು ಸಜ್ಜಾಗಿದ್ದಾರೆ. ಕಂಪ್ಯಾಶನ್ ಮೂವೀಸ್ ಬ್ಯಾನರ್ ಅಡಿಯಲ್ಲಿ ಜಿಕಂದರ್ ಮತ್ತು ಮೊಯಿದೀನ್ ನಿರ್ಮಿಸಲಿರುವ ಈ ಚಿತ್ರದಲ್ಲಿ ಪೃಥ್ವಿರಾಜ್ ವಾರಿಯನ್ ಕುನ್ನತ್ ಕುಂಜಹಮ್ಮದ್ ಹಾಜಿ ಎಂಬ ಹೆಸರಿನ ಪಾತ್ರವನ್ನು ನಿರ್ವಹಿಸಲಿದ್ದಾರೆ.

Advertisement

 

Advertisement
View this post on Instagram

 

She’s been seeing me low for a few days and said she was waiting for Father’s Day to make me a “present”. ❤️❤️❤️ PS: Watch out. Her English is way better than mine was at 5!

A post shared by Prithviraj Sukumaran (@therealprithvi) on

ಉಳಿದ ಪಾತ್ರವರ್ಗದ ಬಗ್ಗೆ ಇನ್ನೂ ಅಧಿಕೃತವಾಗಿ ಘೋಷಿಸಲಾಗಿಲ್ಲ.
ಏತನ್ಮಧ್ಯೆ, ಪೃಥ್ವಿರಾಜ್ ಅವರ ಕೈಯ್ಯಲ್ಲಿ ಹಲವಾರು ಚಿತ್ರಗಳಿವೆ. ಇತ್ತೀಚೆಗಷ್ಟೇ ಬಿಡುಗಡೆಯಾದ ಪೃಥ್ವಿರಾಜ್ ನಟನೆಯ, ಸಚಿ ನಿರ್ದೇಶನದ ಅಯ್ಯಪ್ಪನೂಮ್ ಕೊಶಿಯಮ್ ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ರಿಮೇಕ್ ಆಗಲು ಸಜ್ಜಾಗಿದೆ. ಜಾನ್ ಅಬ್ರಹಾಂ ಈಗಾಗಲೇ ಹಿಂದಿ ರಿಮೇಕ್ ಹಕ್ಕುಗಳನ್ನು ಪಡೆದುಕೊಂಡಿದ್ದಾರೆ.

Advertisement
Share this on...