ಪುನೀತ್ ಬ್ಯಾನರ್ ನಲ್ಲಿ ನಾಯಕಿಯಾದ ಪ್ರಜ್ವಲ್ ದೇವರಾಜ್ ಪತ್ನಿ ! ಇನ್ನು ೧೦ ದಿನದಲ್ಲಿ ಸಿನಿಮಾ ಬಿಡುಗಡೆ..

in ಮನರಂಜನೆ/ಸಿನಿಮಾ 32 views

ಕನ್ನಡದ ಹೆಮ್ಮೆಯ ನಟ, ದೊಡ್ಮನೆಯ ಹೆಮ್ಮೆಯ ಪುತ್ರ, ಅಭಿಮಾನಿಗಳ ಅಪ್ಪು, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಇದೀಗ ವಿಶಿಷ್ಟ ಕಥೆಗಳುಳ್ಳ ಹೊಸ ತಂಡಕ್ಕೆ ಸಿನಿಮಾವನ್ನು ಮಾಡಲು ಅವಕಾಶ ಮಾಡಿಕೊಡುತ್ತಿದ್ದಾರೆ. ಅಲ್ಲದೇ ಪಿ ಆರ್ ಕೆ ಯಲ್ಲಿ ನಿರ್ಮಾಣವಾಗುವ ಸಿನಿಮಾಗಳು ಬಹಳ ವಿಭಿನ್ನವಾಗಿರುತ್ತದೆ ಎಂಬುದು ಪ್ರೇಕ್ಷಕರ ನಂಬಿಕೆಯೂ ಹೌದು .  ಈಗಾಗಲೇ  ಪಿ ಆರ್ ಕೆ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾದ ಕವಲುದಾರಿ ಹಾಗೂ ಇದೇ ವರುಷ ತೆರೆಕಂಡ ಮಾಯಾಬಜಾರ್ ಸಿನಿಮಾಗಳು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆಯನ್ನು ಗಿಟ್ಟಿಸಿಕೊಂಡಿದ್ದು, ಇವರೆಡು ಹಿಟ್ ನ ಬಳಿಕ ಇದೀಗ ಸಾಲು ಸಾಲು ಸಿನಿಮಾಗಳನ್ನು ಅಪ್ಪು ನಿರ್ಮಿಸುತ್ತಿದ್ದಾರೆ.ಇದೀಗ ಪಿ ಆರ್ ಕೆ ಪ್ರೊಡಕ್ಷನ್ಸ್ ನಲ್ಲಿ ಹಂಬಲ್ ಪೊಲಿಟಿಷಿಯನ್ ಖ್ಯಾತಿಯ ಡಾನಿಶ್ ಸೇಟ್ ಅಭಿನಯದ ಫ್ರೆಂಜ್ ಬಿರಿಯಾನಿ, ಹಾಗೂ ಲಾ ಎಂಬ ಸಿನಿಮಾಗಳು ಬಿಡುಗಡೆಗೆ ತುದಿಗಾಲಿನಲ್ಲಿ ನಿಂತಿವೆ. ಇದೀಗ ಪುನೀತ್ ರಾಜ್ ಕುಮಾರ್ ಅವರು ಲಾ ಸಿನಿಮಾದ ಕೆಲವೊಂದು ಅಪ್ಡೇಟ್ ಗಳನ್ನು ಅಭಿಮಾನಿಗಳಲ್ಲಿ ಹಂಚಿಕೊಂಡಿದ್ದಾರೆ.

Advertisement

Advertisement

 

Advertisement

ಅಪ್ಪು ಮಹರಾಜ್ ಅವರು ಸಾಮಾಜಿಕ ಜಾಲತಾಣದ ಟ್ವಿಟರ್ ಖಾತೆಯಲ್ಲಿ ಲಾ ಸಿನಿಮಾದ ಮೋಶನ್ ಪೋಸ್ಟರ್ ಅನ್ನು ಬಿಡುಗಡೆ ಮಾಡಿದ್ದು,  ಚಿತ್ರದ ಅಫಿಶಿಯಲ್ ಟ್ರೇಲರ್ ನಾಳೆ ಬಿಡುಗಡೆಯಾಗಲಿದೆ ಎಂಬ ಸಿಹಿ ಸುದ್ಧಿಯನ್ನು ಅಭಿಮಾನಿಗಳಲ್ಲಿ ಹಂಚಿಕೊಂಡಿದ್ದಾರೆ.ಇನ್ನು ಮಹಿಳಾ ಪ್ರಧಾನ ಸಿನಿಮಾವಾದ ಲಾ ಸಿನಿಮಾವೂ,ಕಾನೂನು ಹೋರಾಟದ ಕಥೆಯುಳ್ಳ ಸಿನಿಮಾವಾಗಿದೆ. ವಿಶೇಷವೇನೆಂದರೆ ಸಿನಿಮಾದಲ್ಲಿ ನಾಯಕಿಯಾಗಿ, ನಟ ಪ್ರಜ್ವಲ್ ದೇವರಾಜ್ ಅವರ ಪತ್ನಿ ರಾಗಿಣಿ ಚಂದ್ರನ್ ಅವರು ಅಭಿನಯಿಸುತ್ತಿದ್ದು, ಎಲ್ಲರಲ್ಲೂ ಕುತೂಹಲ ಕೆರಳಿಸಿದೆ. ಲಾ ಸಿನಿಮಾದಲ್ಲಿ ರಾಗಿಣಿ ಅವರು  ಮಹಿಳಾ ವಕೀಲ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Advertisement

ಸಿನಿಮಾದ ಟ್ರೇಲರ್ ಬಿಡುಗಡೆ ಆಗುತ್ತದೆ ಎಂದು ಪುನೀತ್ ರಾಜ್‌ಕುಮಾರ್ ಅವರು ತಮ್ಮ ಪೋಸ್ಟ್ ನಲ್ಲಿ  ತಿಳಿಸಿದ್ದು, ಇದೇ ತಿಂಗಳ 17 ರಂದು ಲಾ  ಸಿನಿಮಾ ಅಮೆಜಾನ್ ಪ್ರೈಂ ನಲ್ಲಿ   ವಿಶ್ವಾದ್ಯಂತ ಬಿಡುಗಡೆಯಾಗಲಿದೆ. ಇನ್ನು ಈ ಮಹಳಾ ಅಧಾರಿತ ಲಾ ಸಿನಿಮಾವನ್ನು ಪುನೀತ್ ರಾಜ್ ಕುಮಾರ್ ಅವರ ಪತ್ನಿ ಅಶ್ವಿನಿ ಹಾಗೂ ಗೋವಿಂದ್ ಅವರು ನಿರ್ಮಿಸಿದ್ದು,  ರಘು ಸಮರ್ಥ್ ಎಂಬ ಯುವ ನಿರ್ದೇಕರು, ಲಾ ಸಿನಿಮಾವನ್ನು  ನಿರ್ದೇಶಿಸಿದ್ದಾರೆ.

ಇದರ ಜೊತೆಗೆ ಪಿಆರ್‌ಕೆ ಪ್ರೊಡಕ್ಷನ್‌ನಿಂದ ನಿರ್ಮಿತವಾದ ಫ್ರೆಂಚ್ ಬಿರಿಯಾನಿ ಮುಂದಿನ ತಿಂಗಳು ಇದೇ ಅಮೆಜಾನ್ ಪ್ರೈಂ ನಲ್ಲಿ ಬಿಡುಗಡೆಯಾಗುತ್ತಿದೆ. ಇದರ ಜೊತೆಗೆ O2 ಎಂಬ ವಿಜ್ಞಾನ ಥ್ರಿಲ್ಲರ್ ಕತೆಯುಳ್ಳ ಸಿನಿಮಾವನ್ನು ಸಹ ನಿರ್ಮಾಣ ಮಾಡುತ್ತಿದೆ.

Advertisement
Share this on...