ಅಪ್ಪು ಸಾ’ವಿ’ನ ಬಗ್ಗೆ ರಾಯರು ಮೊದಲೇ ಸೂಚನೆ ನೀಡಿದ್ರಾ…?

in ಕನ್ನಡ ಮಾಹಿತಿ 234 views

ಕರ್ನಾಟಕ ಮಾತ್ರವಲ್ಲದೆ, ಭಾರತದಾದ್ಯಂತ ಅಭಿಮಾನಿಗಳು ಯುವರತ್ನನ ಕಳೆದುಕೊಂಡ ದುಃ’ಖದಲ್ಲಿದ್ದಾರೆ. ಡಾನ್ಸ್, ಫೈಟ್, ಗಾಯನ, ಆಕ್ಟಿಂಗ್ ಮಾತ್ರವಲ್ಲದೆ ಸಮಾಜ ಸೇವೆ, ಕರುಣೆ, ನಿರೂಪಣೆ ಮತ್ತು ಸಹನೆಗೆ ಹೆಸರಾಗಿದ್ದವರು ನಟ ಪುನೀತ್ ರಾಜ್ ಕುಮಾರ್. ಸದಾ ನಗಮೊಗದ ವ್ಯಕ್ತಿತ್ವ ಈ ಯುವರತ್ನನದು. ಅಭಿಮಾನಿಗಳ ಪಾಲಿಗೆ ಶುಭ ಶುಕ್ರವಾರ ಆಗಬೇಕಿತ್ತು ಆದರೆ ಬ್ಲ್ಯಾ’ಕ್ ಫ್ರೈಡೇ ಆಗಿ ಬದಲಾಗಿತ್ತು. ಗುರುವಾರ ರಾತ್ರಿ ಗುರುಕಿರಣ್ ಅವರ ಹುಟ್ಟುಹಬ್ಬದ ಆಚರಣೆಗೆ ತೆರಳಿದ್ದ ಪುನೀತ್ ಶುಕ್ರವಾರ ಬೆಳಿಗ್ಗೆ ಎದ್ದು ಜಿಮ್ ಗೆ ಹೋಗಿ ಬಂದ ನಂತರ ಸುಸ್ತಾಯಿತೆಂದು ಆ’ಸ್ಪ’ತ್ರಗೆ ನಡೆದುಕೊಂಡೇ ಹೋದವರು ಮರಳಿ ಮನೆಗೆ ಬಂದಿದ್ದು ಶ’ವವಾಗಿ. ಚಿತ್ರರಂಗ ಮಾತ್ರವಲ್ಲದೆ ಜನಸಾಮಾನ್ಯರಿಗೂ ಬಹಳ ಅಚ್ಚಮೆಚ್ಚಾಗಿದ್ದ ನಟ ಪುನೀತ್ ರಾಜ್ ಕುಮಾರ್ ಅವರು ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುತ್ತಿದ್ದರು ಎಂದು ಇದುವರೆಗೂ ಯಾರಿಗೂ ತಿಳಿಯದ ಸಂಗತಿ. ಆದರೆ ಇದೀಗ ಪುನೀತ್ ಅವರ ಸಾ’ವಿ’ನ ಸೂಚನೆ ಮೊದಲೇ ಸಿಕ್ಕಿತ್ತ ಎನ್ನುವ ಸಂಶಯ ಮೂಡುತ್ತಿದೆ.

Advertisement

Advertisement

ಹೌದು ಅಪ್ಪಟ ಬಂಗಾರ ಈ ನಮ್ಮ ಅಪ್ಪು, 2020 ರಲ್ಲಿ ಮಂತ್ರಾಲಯದ ರಾಯರ ಸನ್ನಿಧಿಗೆ ದರ್ಶನಕ್ಕೆ ತೆರಳಿದ್ದರು. ಆ ಸಂಧರ್ಭದಲ್ಲಿ ಮಂತ್ರಾಲಯದಲ್ಲಿ ಸಣ್ಣ ಸನ್ಮಾನ ಕಾರ್ಯಕ್ರಮವನ್ನು ಅಪ್ಪು ಅವರಿಗೆ ರಾಯರ ಸಮ್ಮುಖದಲ್ಲಿ ಏರ್ಪಡಿಸಲಾಗಿತ್ತು. ನಂತರ ಮೈಕ್ ಹಿಡಿದು ಮಾತನಾಡಿದ ಪುನೀತ್ ರಾಜ್ ಕುಮಾರ್, ಮುಂದಿನ ಸಲಾ ರಾಯರ ಆರಾಧನೆಗೆ ಬಂದೆ ಬರುವೆ ಎಂದು ಹೇಳುತ್ತಿರುವಾಗಲೇ ರಾಯರ ಮುಕುಟ ಮುಂದಕ್ಕೆ ವಾಲಿತ್ತು. ಆಗ ಸ್ಥಳದಲ್ಲಿದ್ದವರು ಬೀಳದಂತೆ ಅದನ್ನು ತಡೆದರು. ಹಾಗಾದರೆ ರಾಯರು ಮುಂದಿನ ಆರಾಧನೆಗೆ ಪುನೀತ್ ಬರುವುದಿಲ್ಲ, ಬದಲಿಗೆ ರಾಯರ ಬಳಿಗೇ ಹೋಗುತ್ತಾರೆ ಎಂಬುದು ಇದರ ಅರ್ಥವೆ ಎಂದು ಈಗ ಸಂಶಯ ಮೂಡಿದೆ. ಸದಾ ಪರೋಪಕಾರಿಯಗಿದ್ದ ನಟ ಪುನೀತ್ ರಾಜ್ ಕುಮಾರ್ 45 ಉಚಿತ ವಸತಿ ಶಾಲೆ, 16 ವೃದ್ಧಾಶ್ರಮ, 19 ಗೋಶಾಲೆ, 26 ಅನಾಥಾಶ್ರಮಗಳನ್ನು ತಮ್ಮ ಸ್ವಂತ ಸಂಭಾವನೆಯಿಂದ ನಡೆಸುತ್ತಿದ್ದರಲ್ಲದೆ, 1800 ಹೆಚ್ಚು ಅನಾಥ ಮಕ್ಕಳಿಗೆ ಉಚಿತ ಶಿಕ್ಷಣ ಮತ್ತು 20 ಕಾರ್ಪೊರೇಷನ್ ಶಾಲೆಗಳನ್ನು ನಡೆಸುತ್ತಿದ್ದರು. ಹಾಗೆಯೇ ಕಿಡ್ನಿ ವೈಫಲ್ಯ ಇರುವ ಮಕ್ಕಳಿಗೆ ಆರ್ಥಿಕ ನೆರವು ಸಹ ನೀದುತ್ತಿದ್ದರು. ಎಡಗೈಯಲ್ಲಿ ಕೊಟ್ಟಿದ್ದು ಬಲಗೈ ಗೆ ಗೊತ್ತಾಗಬಾರದು ಎಂಬ ತತ್ವದ ಮೇಲೆ ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುತ್ತಿದ್ದರು.

Advertisement

Advertisement

ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಕನಸುಗಳನ್ನು ಕಂಡಿದ್ದ ಅಪ್ಪು ಚಿಕ್ಕ ವಯಸ್ಸಿನಲ್ಲಿಯೇ ಬದುಕಿನ ಪಯಣ ಮುಗಿಸಿದ್ದು ನಿಜಕ್ಕೂ ಆಶ್ಚರ್ಯ. 6 ತಿಂಗಳ ಮಗುವಿದ್ದಾಗಲೇ ರಾಜ್ ಕುಮಾರ್ ಅಭಿನಯದ ಪ್ರೇಮದ ಕಾಣಿಕೆ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದ ಅಪ್ಪು ಅವರಿಗೆ ಬೆಟ್ಟದ ಹೂ ಚಿತ್ರದಲ್ಲಿನ ಅಮೋಘ ಅಭಿನಯ ಕ್ಕೆ ರಾಷ್ಟ್ರ ಪ್ರಶಸ್ತಿ ದೊರೆತಿತ್ತು. ಹಾಗೆಯೇ ಭಕ್ತ ಪ್ರಹ್ಲಾದ ದಂತಹ ಪೌರಾಣಿಕ ಪಾತ್ರಗಳನ್ನು ಮಾಡಿ ಮೋಡಿ ಮಾಡಿದ್ದರು. ಚಿಕ್ಕವಯಸ್ಸಿನಲ್ಲೇ ಗಾಯನ, ಆಕ್ಟಿಂಗ್ ಮಾತ್ರವಲ್ಲದೆ ಪರೋಪಕಾರದ ಗುಣವನ್ನು ಬೆಳೆಸಿಕೊಂಡಿದ್ದರು ಅಪ್ಪು. ನಿರೂಪಣೆಯಲ್ಲಿ ಬಹಳ ನಿಪುಣತೆ ಹೊಂದಿರುವ ಅಪ್ಪು ‘ಕನ್ನಡದ ಕೋಟ್ಯಾಧಿಪತಿ’ ಕಾರ್ಯಕ್ರಮದ ನಿರೂಪಣೆ ಮಾಡುವ ಮೂಲಕ ಕೋಟಿ ಮನಗಳ ಗೆದಿದ್ದರು. ಅದಾದ ನಂತರ ದಿ ಪರ್ಫೆಕ್ಟ್ ಫ್ಯಾಮಿಲಿ ಮ್ಯಾನ್ ಕಲರ್ಸ್ ಕನ್ನಡ ವಾಹಿನಿಯ ‘ಫ್ಯಾಮಿಲಿ ಪವರ್’ ಕಾರ್ಯಕ್ರಮ ನಿರೂಪಣೆ ಮಾಡುವ ಮೂಲಕ ಹಲವರಿಗೆ ಸಹಾಯ ಮಾಡಿದ್ದರು. ಇದುವರೆಗೂ 29 ಚಿತ್ರಗಳಲ್ಲಿ ನಾಯಕ ನಟನಾಗಿ ಅಭಿನಯಿಸಿರುವ ಪುನೀತ್ ಒಟ್ಟು 49 ಚಿತ್ರಗಳಲ್ಲಿ ನಟಿಸಿ ಎಲ್ಲರ ಮನದಲ್ಲಿ ನೆಲೆಸಿದ್ದ ಕೋಟಿ ಮನಗಳ ಅಧಿಪತಿ ಬಾಳ ದಾರಿಯಿಂದ ಜಾರಿದ. ಎಲ್ಲ ಕಡೆ ಸಂತೋಷ ತುಂಬಿಸುತ್ತಿದ್ದ ಪುನೀತ್ ಕಳೆದುಕೊಂಡ ನಂತರ ಎಲ್ಲೆಲ್ಲೂ ಮೌನ, ಬರೀ ಕಣ್ಣೀರು ಮಾತನಾಡುತ್ತಿದೆ.

Advertisement