ಬಾಲಿವುಡ್ ಮಂದಿ ಪುನೀತ್ ರಾಜ್ ಕುಮಾರ್ ಅವರನ್ನು ನೋಡಿ ಕಲಿಯಬೇಕು..!?

in ಮನರಂಜನೆ/ಸಿನಿಮಾ 332 views

ಡಾ.ರಾಜ್ ಕುಮಾರ್ ಕುಟುಂಬ ಎಂದಿಗೂ ಅಭಿಮಾನಿಗಳನ್ನು ದೇವರ ರೂಪದಲ್ಲಿ ನೋಡುತ್ತ ಬಂದಿದೆ. ಇದು ಅಣ್ಣಾವ್ರು ತನ್ನ ಕುಟುಂಬಕ್ಕೆ ಹೇಳಿಕೊಟ್ಟ ಹಾಗೂ ಬಿಟ್ಟು ಹೋದ ದೊಡ್ಡ ಕಾಣಿಕೆಗಳಲ್ಲಿ ಒಂದು. ಕರುನಾಡು ಕೂಡ ಅಣ್ಣಾವ್ರ ಕುಟುಂಬವನ್ನು ಅಷ್ಟೇ ಪ್ರೀತಿ ವಿಶ್ವಾಸ ಆತ್ಮೀಯತೆಯಿಂದ‌ ಕಾಣುತ್ತಿದೆ. ಇಡೀ ಕುಟುಂಬವೇ ಅಭಿಮಾನಿಗಳ ಕಷ್ಟ ಸುಖದಲ್ಲಿ‌ ಜೊತೆ ನಿಂತು ಅಭಯ ನೀಡುವ ಕೆಲಸ ಮಾಡುತ್ತ ಬಂದಿದೆ. ಕಳೆದ ವರ್ಷ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಒಂದು ಕಾರ್ಯಕ್ರಮದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ತನ್ನ ನೆಚ್ಚಿನ ಅಭಿಮಾನಿ ಕುಟುಂಬವನ್ನು ಭೇಟಿಯಾಗಿ ಅವರ ಆಸೆಯನ್ನ ಈಡೇರಿಸಿದ್ದರು. ಉತ್ತರ ಕರ್ನಾಟಕದ ಅಪ್ಪಟ ಅಪ್ಪು ಫ್ಯಾನ್ ತನ್ನ ಇಡೀ ಕುಟುಂಬ ಕಷ್ಟದಲ್ಲಿ ಇದ್ರೂ, ಪವರ್ ಸ್ಟಾರ್ ರಂತೆ ಸ್ಟಂಟ್ ಗಳನ್ನ ಕಲಿತು ಅವರ ಮುಂದೆ ತನ್ನ ಕಲೆಯನ್ನ ಪ್ರದರ್ಶನ ಮಾಡುವ ಆಸೆಯನ್ನ ಹೊಂದಿದ್ದರು. ಕಡು ಬಡತನದಲ್ಲೂ ಸಾಹಸ ಕಲೆಯನ್ನ ಕರಗತ ಮಾಡಿಕೊಂಡ ಅಭಿಮಾನಿಗೆ, ದೊಡ್ಡಮನೆ ಮಗನನ್ನ ಕಾಣುವ ಅವಕಾಶ ಒದಗಿ ಬಂದಿತ್ತು. ತನ್ನ ಅಭಿಮಾನಿಯ ಆಸೆಯನ್ನು ಈಡೇರಿಸಿದ ಪವರ್ ಸ್ಟಾರ್, ಆತನ ಇಡೀ ಕುಟುಂಬವನ್ನು ಭೇಟಿಯಾಗಿದ್ದಾರೆ.

Advertisement

Advertisement

ಶೂಟಿಂಗ್ ಸೆಟ್ ನಲ್ಲಿ ತನ್ನ ನೆಚ್ಚಿನ ನಟನ ಮುಂದೆ ಆತ ಸ್ಟಂಟ್ ಮಾಡುವ ಮೂಲಕ ಅಪ್ಪು ಅವರ ಮನಗೆದ್ದಿದ್ದಾನೆ‌. ಅದರ ಪ್ರೊಮೊ ಕಳೆದ ವರ್ಷ ವೈರಲ್ ಆಗಿತ್ತು. ಬಾಲಿವುಡ್ ಮಂದಿಯೂ ಕೂಡ ಇದನ್ನು ನೋಡಿ ಶ್ಲಾಘನೆ ವ್ಯಕ್ತಪಡಿಸಿದ್ದರು. ಇದೀಗ ಅವರು ಮಾಡುತ್ತಿರುವ ಮಹಾನ್ ಕೆಲಸವನ್ನು ನೋಡಿ ಬಾಲಿವುಡ್ ಮಂದಿ ಅಪ್ಪು ಅವರನ್ನು ನೋಡಿ ಕಲಿಯಿರಿ ಎನ್ನುತ್ತಿದ್ದಾರೆ. ಹಾಗಾದರೆ ಅದೇನು? ಹೆಮ್ಮೆ ಪಡುತ್ತಿರೀ ! ಮುಂದೇ ಓದಿ…

Advertisement

ಇತ್ತೀಚೆಗಷ್ಟೆ ಉದಯೋನ್ಮುಖ ನಟ  ಶರಣಾದರು. ಇದೊಂದು ಸಾವು ಬಾಲಿವುಡ್ ಚಿತ್ರರಂಗದ ಅಸಲಿ ಮುಖವನ್ನು ಅನಾವರಣ ಮಾಡಿಬಿಟ್ಟಿದೆ. ಸ್ಟಾರ್ ನಟನ ಸಾವಿನಿಂದ ಕಂಗೆಟ್ಟು, ಬಾಲಿವುಡ್ ನಲ್ಲಿನ ನೆಪೋಟಿಸಂ ಬಗ್ಗೆ ನಟಿ ಕಂಗನಾ ಅವರು ಮಾದ್ಯಮಗಳನ್ನು ಹಾಗೂ ಬಾಲಿವುಡ್ ನ ಸ್ಟಾರ್ ಕುಟುಂಬಗಳನ್ನು ಜಡಾಯಿಸಿಬಿಟ್ಟಿದ್ದಾರೆ. ಇದರ ಬೆನ್ನಲ್ಲೇ ನಡೆಯುತ್ತಿರುವ ಅನ್ಯಾಯದ ಕುರಿತು ಇದರ ವಿರುದ್ಧ ಅನೇಕರು ಧ್ವನಿ ಎತ್ತತೊಡಗಿದ್ದಾರೆ. ಸ್ಟಾರ್ ಕುಟುಂಬಗಳ ಕುಡಿಗಳನ್ನು ಬೆಳೆಸುವ ಕರಣ್ ಜೋಹರ್ ವಿರುದ್ಧ ತೀವ್ರ ಟೀಕೆಗಳು ವ್ಯಕ್ತವಾಗುತ್ತಿದ್ದು, ಬಾಲಿವುಡ್ ನ ಪ್ರಶಸ್ತಿಗಳು ಕೂಡಾ ಹೇಗೆ ಸ್ಟಾರ್ ಕುಟುಂಬದ ಕುಡಿಗಳ ಪಾಲಾಗುತ್ತಿದೆ ಎಂಬುದು ಕೂಡಾ ಚರ್ಚೆಗೆ ಗ್ರಾಸವಾಗಿದೆ.

Advertisement

ಇನ್ನು ಈ ಬಾಲಿವುಡ್ ಚಿತ್ರರಂಗದ ಬಣ್ಣ ಬಯಲಾಗುತ್ತಿದ್ದಂತೆ ಅಲ್ಲಿನ ಜನ ನಮ್ಮ ದಕ್ಷಿಣದ ಚಿತ್ರರಂಗದ ಕಡೆ ಗಮನ ಹರಿಸಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ವರನಟ ರಾಜ್ ಕುಮಾರ್ ಅವರ ಸುಪುತ್ರ ಪುನೀತ್ ರಾಜ್‍ಕುಮಾರ್ ಅವರು ಹೊಸ ಪ್ರತಿಭೆಗಳಿಗೆ ನೀಡುತ್ತಿರುವ ಅವಕಾಶಗಳ ಬಗ್ಗೆ ಇದೀಗ ವ್ಯಾಪಕವಾಗಿ ಮೆಚ್ಚುಗೆ ನೀಡುತ್ತಿದ್ದಾರೆ. ಅನೇಕರು ಬಾಲಿವುಡ್ ಮಂದಿ ಪುನೀತ್ ರಾಜ್ ಕುಮಾರ್ ಅವರನ್ನು ನೋಡಿ ಕಲಿಯಬೇಕು ಎನ್ನುತ್ತಿದ್ದಾರೆ. ಇದರಲ್ಲಿ ಅಶ್ಚರ್ಯ ಪಡುವ ವಿಷಯ ಏನಿಲ್ಲಾ ಯಾಕೆಂದರೆ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರು ತಮ್ಮ ಪಿ ಆರ್ ಕೆ ಪ್ರೊಡಕ್ಷನ್ ಮೂಲಕ ಹೊಸ ಪ್ರತಿಭೆಗಳಿಗೆ ಅವಕಾಶ ನೀಡುತ್ತಿರುವುದು ಮೊದಲಿಂದಲು ಮೆಚ್ಚುಗೆಗೆ ಪಾತ್ರವಾಗಿದೆ.

 

ಹೀಗೆ ಅವರಿಗೆ ಅಪಾರ ಮೆಚ್ಚುಗೆ ಬರಲು ಕಾರಣವೇನೆಂದರೆ ಅವರ ನಿರ್ಮಾಣದಲ್ಲಿ ಬರುತ್ತಿರುವ ಸಿನಿಮಾಗಳೆಲ್ಲಾ ಫ್ಯಾಮಿಲಿ ಪ್ಯಾಕ್ ಸಿನಿಮಾಗಳು. ಈ ಹಿಂದೆ ಅವರ ಬ್ಯಾನರ್ ನಲ್ಲಿ ನಿರ್ಮಾಣವಾಗುತ್ತಿರುವ ಸಂಕಷ್ಟಹರ ಗಣಪತಿ ಸಿನಿಮಾದ ನಿರ್ದೇಶಕ ಅರ್ಜುನ್ ಕುಮಾರ್ ಅವರು ಕೂಡ ಯುವ ನಿರ್ದೇಶಕರಾಗಿದ್ದು, ಅದೇ ಸಿನಿಮಾದ ನಾಯಕ ಲಿಖಿತ್ ಶೆಟ್ಟಿ ಕೂಡ ಈ ಹೊಸ ನಾಯಕನಾಗಿದ್ದಾರೆ. ಪಾಪ್ ಕಾರ್ನ್ ಮಂಕಿ, ಲವ್ ಮಾಕ್ಟೇಲ್ ಸಿನಿಮಾ ಖ್ಯಾತಿಯ ನವ ನಟಿ ಅಮೃತಾ ಅಯ್ಯಂಗಾರ್ ಸಿನಿಮಾದ ನಾಯಕಿಯಾಗಿದ್ದು, ರಂಗಾಯಣ ರಘು ಅವರು ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದು ಸಿನಿಮಾದ ಮೋಷನ್ ಪೋಸ್ಟರ್ ವೈರಲ್ ಆಗಿದೆ.

ಸೋಶಿಯಲ್ ಮೀಡಿಯದಲ್ಲಿ ಈ ಸಿನಿಮಾ‌ದ ಪೋಸ್ಟರ್ ನೋಡಿದ ಅನೇಕ ನೆಟ್ಟಿಗರು ಅಪಾರ ಮೆಚ್ಚುಗೆ ಸೂಚಿಸಿದ್ದು, ಹೊಸಬರಿಗೆ ಅವಕಾಶ ನೀಡುವ ಪುನೀತ್ ರಾಜ್ ಕುಮಾರ್ ಅವರಿಗೆ ಹ್ಯಾಟ್ಸಾಫ್ ಹೇಳುತ್ತಿದ್ದಾರೆ. ಅಲ್ಲದೇ ಬಾಲಿವುಡ್ ಮಂದಿ ಅವರನ್ನು ನೋಡಿ ಕಲೀಬೇಕು ಎನ್ನುತ್ತಿದ್ದಾರೆ. ಉತ್ತರ ಭಾರತದ ಸಿನಿ ಪ್ರಿಯರಿಗೂ ಪುನೀತ್ ಅವರ ಈ ನಡೆ ಮೆಚ್ಚುಗೆಯಾಗಿದೆ.‌ ಪುನೀತ್ ರಾಜ್‍ಕುಮಾರ್ ಅವರು ಸ್ಟಾರ್ ಕುಟುಂಬದಿಂದ ಬಂದಿದ್ದರೂ ಸ್ವಜನ ಪಕ್ಷಪಾತಕ್ಕೆ ಎಂದೂ ಪ್ರೋತ್ಸಾಹ ನೀಡಿದವರಲ್ಲ. ಸಿನಿಮಾ ನಿರ್ಮಾಣ ಅವರ ಕುಟುಂಬದಲ್ಲಿ ದಶಕಗಳಿಂದ ಸಾಗುತ್ತಾ ಬಂದಿದೆ. ಇವರ ಕೆಲಸಕ್ಕೆ ಎಲ್ಲರೂ ಕೂಡ ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ.

Advertisement