ಶಂಕರ್ ನಾಗ್ ಅವರ ಜೊತೆ ಅಭಿನಯಿಸಿದ್ದ ಕಲಾವಿದಿರ ಕುಟುಂಬಕ್ಕೆ ಅಪ್ಪು ಮಾಡಿದ ಸಹಾಯವೇನು ಗೊತ್ತಾ?

in ಕನ್ನಡ ಮಾಹಿತಿ 41 views

ಈ ಮಹಾಮಾರಿ ಕೊರೋನಾ ಸೊಂಕಿನಿಂದ ಇಡೀ ವಿಶ್ವದ ಜನರ ಪರಿಸ್ಥಿತಿ ಚಿಂತಾಜನಕವಾಗಿದೆ. ನಮ್ಮ ರಾಜ್ಯದಲ್ಲೂ ಕೂಡ ಸಾಮಾನ್ಯ ಜನರಿಗೆ ದೊಡ್ಡ ಮಟ್ಟದಲ್ಲಿ ಹೊಡೆತಾ ಬಿದ್ದಿದ್ದು, ಒಂದು ಹೊತ್ತಿನ ಊಟಕ್ಕೂ ಪರೆದಾಡುವಂತಹ ಪರಿಸ್ಥಿತಿ ಬಂದೊದಗಿದೆ.ಈ ರೀತಿಯಾಗಿ ಸಂಕಷ್ಟ ಎದೆರುಸುತ್ತಿರುವ ಬಡವರಿಗೆ ರಾಜ್ಯದ ಗಣ್ಯರು ಹಾಗು ಸಿನಿಮಾ ತಾರೆಯರು ಸಾಹಾಯ ಹಸ್ತ ಚಾಚಿದ್ದು, ಕೆಲವು ದಿನಗಳ ಹಿಂದೆಯಷ್ಟೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ೫೦ ಲಕ್ಷ ರೂ ಗಳನ್ನು ದೇಣಿಗೆಯಾಗಿ ನೀಡಿದ್ದರು. ಇದರ ಬೆನ್ನೆಲ್ಲೆ ಅಪ್ಪು ತೆರೆ ಮರೆಯಲ್ಲೆ ಕೆಲವು ಕಲಾವಿದರ ಸಂಕಷ್ಟಕ್ಕೆ ಮಣಿದು ಹಸ್ತ ಚಾಚಿರುವುದು ಬಹಿರಂಗವಾಗಿದೆ. ಕನ್ನಡ ಚಿತ್ರರಂಗದಲ್ಲಿ ದಶಕಗಳಿಂದ ದುಡಿಯುತ್ತಿರುವ ಚಿನ್ನಪ್ಪ ಎಂಬುವವರು ಕೊರೋನಾ ಭೀತಿಯುಂದ ಕೆಲಸವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದರು.

Advertisement

 

Advertisement

Advertisement

 

Advertisement

ಈ ಮಾರಾಣಾಂತಿಕ ಕಾಯಿಲೆಯಿಂದ ಸಂಕಷ್ಟಕ್ಕೆ ಒಳಗಾದವರಲ್ಲಿ ಚಿನ್ನಪ್ಪ ಅವರ ಕುಟುಂಬ ಕೂಡ ಒಂದು. ಏಕೆಂದರೆ ಸಿನಿಮಾ ಕ್ಷೇತ್ರದಲ್ಲಿ ಬ್ಯಾನರ್ ಕಲಾವಿದರಾಗಿ ಗುರುತಿಸಿಕೊಂಡಿದ್ದ ಇವರಿಗೆ ಲಾಕ್​ಡೌನ್​ನಿಂದ ದಿಕ್ಕೇ ತೋಚದಂತಾಗಿತ್ತು.

 

 

ಚಿನ್ನಪ್ಪ ಅವರ ಡಾ. ರಾಜ್​ಕುಮಾರ್, ವಿಷ್ಣುವರ್ಧನ್, ಶಂಕರ್​ನಾಗ್​, ಅಂಬರೀಷ್​ ಅವರಿಂದ ಹಿಡಿದು ಎಲ್ಲ ಸ್ಟಾರ್ ಸಿ ನಟ-ನಟಿಯರ ಪೋಸ್ಟರ್​ ಕಟೌಟ್​ ಗಳಿಗೆ ಕುಂಚದಿಂದಲೇ ಜೀವ ತುಂಬುತ್ತಿದ್ದರು . ಈ ರೀತಿಯಾಗಿ ಸಿನಿಮಾವನ್ನೇ ನಂಬಿ ಬದುಕುತ್ತಿದ್ದ ಕಟುಂಬಗಳು ಕೊರೋನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಅತಂತ್ರಕ್ಕೆ ಒಳಗಾಗಿತ್ತು. ಈ ವಿಷಯ ಅಪ್ಪು ಅವರ ಕಿವಿಗೆ ಬಿದ್ದಿದೆ.

 

 

ಈ ವಿಷಯ ತಿಳಿಯುತ್ತಿದ್ದಂತೆ ಈ ದೊಡ್ಮನೆ ಹುಡುಗ ಅವರ ನೆರವಿಗೆ ನಿಂತಿದ್ದು, ತಮ್ಮ ಆಪ್ತರ ಮೂಖಂತಾರ ಚಿನ್ನಿಪ್ಪ ಅವರಿಗೆ ಸುಮಾರು ೫೦ ಸಾವಿರ ಹಣವನ್ನು ಕಳುಹಿಸಿಕೊಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಮೂಲಕ ಲಾಕ್​ಡೌನ್​ನಿಂದ ಬಳಲುತ್ತಿದ್ದ ಕಲಾವಿದನ ಕುಟುಂಬಕ್ಕೆ ತೊಂದರೆ ಆಗದಂತೆ ಪವರ್ ಸ್ಟಾರ್ ನೊಡಿಕೊಂಡಿದ್ದು ತಮ್ಮ ಹ್ರುದಯವಂತಿಕೆಯಲ್ಲಿ ಮೆರೆದಿದ್ದಾರೆ

Advertisement
Share this on...