ಪುನೀತ್ ರಾಜಕುಮಾರ್ ಜೊತೆ ನಟಿಸಿರುವ ಈ ನಟಿಗೆ ತೊಂದರೆ ಇದ್ದರೂ, ಚಾಲೆಂಜ್ ಆಗಿ ತೆಗೆದುಕೊಂಡು ಸಾಧಿಸಿರುವುದೇನು ಗೊತ್ತಾ ?

in Uncategorized/ಸಿನಿಮಾ 38 views

ನಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ನಮಗೆ ಮಾತು ಬರಬೇಕು.  ಬೇರೆಯವರ ಭಾವನೆಗಳನ್ನು ಕೇಳಿಸಿಕೊಳ್ಳಲು ನಮಗೆ ಕಿವಿ ಕೇಳಿಸುತ್ತಿರಬೇಕು.  ಇವೆರಡೂ ಇಲ್ಲ ಅಂದ್ರೆ ಜೀವನ ಹೇಗಿರುತ್ತೆ ಎಂಬುದನ್ನು ಊಹೆ ಮಾಡಿಕೊಳ್ಳುವುದು ಕೂಡ ತುಂಬಾ ಕಷ್ಟ . ಮಾತು ಬಾರದೇ ಇದ್ದರೂ ಕಿವಿ ಕೇಳಿಸದೇ ಇದ್ದರೂ ತಾನೊಬ್ಬ ನಾಯಕಿಯಾಗಬೇಕು ಎಂಬ ಕನಸು ಕಾಣುತ್ತಾರೆ ಈಕೆ. ಕಿವಿ ಕೇಳಿಸದಿದ್ದರೂ ಮಾತು ಬಾರದೇ ಇದ್ದರೂ  ಬದುಕನ್ನು ಚಾಲೆಂಜ್ಆಗಿ ತೆಗೆದುಕೊಂಡ ಈ ನಟಿಯ ಹೆಸರು ಅಭಿನಯ.ಅಭಿನಯ ಹುಟ್ಟಿದ ಮೂರು ತಿಂಗಳಾಗಿದ್ದಾಗಲೇ  ಕೇಳುವ ಮತ್ತು ಮಾತನಾಡುವ  ಶಕ್ತಿಯನ್ನು ಕಳೆದುಕೊಂಡರು. ಆ ನಂತರ ಜೀವನ ತುಂಬಾ ಕಷ್ಟವಾಯಿತು. ನಂತರ  ಟಿವಿಯಲ್ಲಿ ಸಿನಿಮಾವನ್ನು ನೋಡುತ್ತಿದ್ದಾಗ ಏನೂ ಕೇಳಿಸದೇ ಅರ್ಥವಾಗದೆ ನೊಂದುಕೊಳ್ಳುತ್ತಿದ್ದರು.

Advertisement

 

Advertisement

Advertisement

ಆಗ ಇವರ ತಂದೆ ಆನಂದ್ ವರ್ಮಾ ಅವರು ಪ್ರತಿ ದಿನ  ಮಗಳಿಗೆ ಎಲ್ಲವನ್ನೂ ಅರ್ಥವಾಗಿಸುವ ಸಲುವಾಗಿ ಟ್ರೈನಿಂಗ್ ಕೊಡಲು ಪ್ರಾರಂಭಿಸಿದರು. ನಂತರ ಅದರಲ್ಲಿ ಯಶಸ್ವಿ ಕೂಡ ಅವರಿಗೆ ಸಿಕ್ಕಿತ್ತು. ಬೆಳೆಯುತ್ತಿದ್ದಂತೆ ಅಭಿನಯ ನಟನೆಯಲ್ಲಿ ಆಸಕ್ತಿಯನ್ನು ಬೆಳೆಸಿಕೊಂಡರು. ಇದನ್ನು ನೋಡಿದ ತಂದೆ ಮಗಳನ್ನು ನಟಿಯಾಗಿ ಮಾಡಬೇಕು ಎಂಬ ಆಸೆಯಿಂದ ಮಾಡೆಲಿಂಗ್ ಕ್ಷೇತ್ರಕ್ಕೆ ಕಳುಹಿಸಿದರು. ಅಭಿನಯ ಅವರ ಸ್ಥಿತಿಯನ್ನು ಕಂಡು ಯಾರೂ ಕೂಡ ಅವರಿಗೆ ಅವಕಾಶವನ್ನು ಕೊಡಲಿಲ್ಲ.  ನಂತರ ಇವರ  ನಟನಾ ಕಲೆಯನ್ನು ನೋಡಿದ ನಿರ್ದೇಶಕರೊಬ್ಬರು ನಾಡೋಡಿಗಲ್  ಎಂಬ ಸಿನಿಮಾದಲ್ಲಿ ಅವಕಾಶವನ್ನು ಕೊಟ್ಟರು. ನಂತರ ಈ ಸಿನಿಮಾ ಕನ್ನಡದಲ್ಲಿ ಹುಡುಗರು ಮತ್ತು ತೆಲುಗಿನಲ್ಲಿ ಶಂಭೋ ಶಿವ ಶಂಭೋ ಎಂಬ ಹೆಸರಿನಲ್ಲಿ ರಿಮೇಕ್ ಆಯಿತು .

Advertisement

 

ಈ ಸಿನಿಮಾ ನಟಿ ಅಭಿನಯ ಅವರಿಗೆ ಒಳ್ಳೆಯ ಹೆಸರಿನ ಜೊತೆಗೆ ಅವಕಾಶಗಳು ಅವಾರ್ಡ್ಗಳನ್ನು ಕೂಡ ತಂದುಕೊಟ್ಟಿತ್ತು.ಅಭಿನಯ ಕನ್ನಡದ ಹುಡುಗರು ಚಿತ್ರದ ಮೂಲಕ ಚಿತ್ರರಂಗವನ್ನು ಪ್ರವೇಶಿಸುತ್ತಾರೆ. ಈ ಚಿತ್ರದಲ್ಲಿ ಪುನೀತ್ ರಾಜ್ಕುಮಾರ್ ಅವರ ತಂಗಿಯಾಗಿ ಮತ್ತು ಶ್ರೀನಗರ ಕಿಟ್ಟಿಗೆ ಪ್ರೇಯಸಿಯಾಗಿ ಅಭಿನಯಿಸಿದ್ದಾರೆ. ತಮ್ಮ  ಅದ್ಭುತ ಅಭಿನಯದಿಂದಾಗಿ ಎಲ್ಲರನ್ನೂ  ಮೂಕವಿಸ್ಮಿತರನ್ನಾಗಿ ಮಾಡಿದರು.  ಇಲ್ಲಿಯವರೆಗೆ  ಇವರು ಸುಮಾರು ಮೂವತ್ತು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

 

ಮಾತು ಬಾರದ  ಮಗಳ ಬಗ್ಗೆ ಪ್ರತಿ ಕ್ಷಣ ಆಲೋಚನೆ ಮಾಡುತ್ತಿದ್ದ ತಂದೆ ಆನಂದ ವರ್ಮಾ ರವರು ಕತ್ತಲಾದ ಅಭಿನಯ ರವರ ಬದುಕಿನಲ್ಲಿ ಬೆಳಕನ್ನು ಮೂಡಿಸಿದರು. ಮಗಳಿಗಾಗಿ ಹೊಸ ಪ್ರಪಂಚವನ್ನೇ  ಸೃಷ್ಟಿಸಿದರು. ಅಲ್ಲದೆ ನಟಿಯಾಗಬೇಕೆಂಬ ಕನಸನ್ನು ನನಸು ಮಾಡಿದರು. ಬದುಕನ್ನು ಚಾಲೆಂಜ್ಆಗಿ ತೆಗೆದುಕೊಂಡ ಅಭಿನಯ , ಮಗಳಿಗೆ ಬದುಕನ್ನು ರೂಪಿಸಿದ ತಂದೆಯ ಪ್ರೀತಿ ಎಲ್ಲರಿಗೂ  ಆದರ್ಶವಾಗಲಿ  ಮತ್ತಷ್ಟು ಪ್ರತಿಭೆಗಳು ಬೆಳಕಿಗೆ ಬರಲಿ.

Advertisement
Share this on...