ಪುಟ್ಟಣ್ಣ ಕಣಗಾಲ್ ನಮ್ಮನ್ನಗಲಿ ಇಂದಿಗೆ 35 ವರ್ಷಗಳು…ಅವರ ಬಗ್ಗೆ ನಿಮಗೆಷ್ಟು ಗೊತ್ತು..?

in ಸಿನಿಮಾ 58 views

ಜೂನ್ 5, ಇಂದು ಚಿತ್ರಬ್ರಹ್ಮ ಪುಟ್ಟಣ್ಣ ಕಣಗಾಲ್ ಅವರ ಪುಣ್ಯಸ್ಮರಣೆ. ಇಂದಿಗೆ ಅವರು ನಮ್ಮನ್ನು ಅಗಲಿ 35 ವರ್ಷಗಳು ತುಂಬಿವೆ. ಕನ್ನಡ ಚಿತ್ರ ನಿರ್ದೇಶಕ ಎಂದರೆ ನೆನಪಾಗುವುದೇ ಪುಟ್ಟಣ್ಣ ಕಣಗಾಲ್. ಏಕೆಂದರೆ ನಿರ್ದೇಶಕನಾಗಿ ಚಿತ್ರರಂಗದಲ್ಲಿ ಅವರು ಮಾಡಿರುವ ಸಾಧನೆಯನ್ನು ಇದುವರೆಗೂ ಯಾವ ನಿರ್ದೇಶಕ ಕೂಡಾ ಮಾಡಲಾಗಲಿಲ್ಲ ಎನ್ನಬಹುದು.ಲೇಖಕಿ ತ್ರಿವೇಣಿ ಅವರ ಕಾದಂಬರಿ ಆಧಾರಿತ ‘ಬೆಳ್ಳಿಮೋಡ’ ಚಿತ್ರದ ಮೂಲಕ ನಿರ್ದೇಶಕನಾಗಿ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಪುಟ್ಟಣ್ಣ ಕಣಗಾಲ್ ಅದಕ್ಕೂ ಮುನ್ನ ಮಲಯಾಳಂ ಹಾಗೂ ತೆಲುಗು ಚಿತ್ರಗಳನ್ನು ನಿರ್ದೇಶಿಸಿದ್ದರು. ಪುಟ್ಟಣ್ಣ ಅವರು ಕೇವಲ ನಿರ್ದೇಶನ ಮಾತ್ರವಲ್ಲದೆ ಕಥೆ, ಚಿತ್ರಕಥೆ, ಛಾಯಾಗ್ರಹಣ, ಸಂಗೀತ ಹಾಗೂ ಇನ್ನಿತರ ವಿಚಾರಗಳ ಬಗ್ಗೆ ಆಸಕ್ತಿ ಇತ್ತು. ಸಿನಿಮಾ ಹೇಗೆ ಮಾಡಬೇಕೆಂದು ಮನಸ್ಸಿನಲ್ಲಿ ಅಂದುಕೊಳ್ಳುತ್ತಿದ್ದರೋ ಒಂದು ಸಣ್ಣ ಬದಲಾವಣೆ ಕೂಡಾ ಇಲ್ಲದೆ ಚಿತ್ರವನ್ನು ಮಾಡಿ ಮುಗಿಸುತ್ತಿದ್ದರು.

Advertisement

 

Advertisement

Advertisement

ಇನ್ನು ಪುಟ್ಟಣ್ಣ ಅವರು ತಮ್ಮ ಬಳಿ ಕೆಲಸ ಮಾಡುವವರಿಗೆ ಹೊಡೆಯುತ್ತಾರೆ, ಬೈಯ್ಯುತ್ತಾರೆ ಎಂಬ ಮಾತಿದೆ. ಆದರೆ ಈ ಬಗ್ಗೆ ಅವರ ಬಳಿ ಮೂರು ಸಿನಿಮಾಗಳಲ್ಲಿ ಛಾಯಾಗ್ರಾಹಕರಾಗಿ ಕೆಲಸ ಮಾಡಿರುವ ಬಿ.ಎಸ್​​​. ಬಸವರಾಜ್ ಅವರ ಬಳಿ ಕೇಳಿದರೆ ಅವರಿಂದ ಬರುವ ಉತ್ತರವೇ ಬೇರೆ. ಪುಟ್ಟಣ್ಣ ಅವರಿಗೆ ಲೈಟ್​​​ಬಾಯ್​​ನಿಂದ ಹಿಡಿದು ದೊಡ್ಡ ಕಲಾವಿದರವರೆಗೂ ಯಾರೇ ಆಗಲಿ ಪ್ರಾಮಾಣಿಕತೆಯಿಂದ ಕೆಲಸ ಮಾಡುವವರು ಬೇಕಿತ್ತು. ಶ್ರಮ, ಚಾಕಚಕ್ಯತೆ, ತಾವು ಮಾಡುವ ಕೆಲಸದಲ್ಲಿ ಆಸಕ್ತಿ ಇದ್ದವರು ಅವರಿಂದ ಹೊಗಳಿಸಿಕೊಳ್ಳುತ್ತಿದ್ದರು. ನಾನು ಅವರ ಬಳಿ ಮೂರು ಸಿನಿಮಾಗಳಿಗೆ ಕೆಲಸ ಮಾಡಿದ್ದೆ. ಆದರೆ ಒಮ್ಮೆಯೂ ಅವರು ನನಗೆ ಹೊಡೆಯಲಿಲ್ಲ ಅಥವಾ ಬೈಯ್ಯಲಿಲ್ಲ ಎನ್ನುತ್ತಾರೆ ಬಸವರಾಜು.’ಬೆಳ್ಳಿಮೋಡ’ ಚಿತ್ರದ ನಂತರ ಪುಟ್ಟಣ್ಣ ಮಾನಸ ಸರೋವರ, ಧರಣಿ ಮಂಡಳ ಮಧ್ಯದೊಳೆ, ಅಮೃತ ಘಳಿಗೆ, ಕಪ್ಪು ಬಿಳುಪು, ಮಲ್ಲಮ್ಮನ ಪವಾಡ, ಶರಪಂಜರ, ಸಾಕ್ಷಾತ್ಕಾರ, ನಾಗರಹಾವು, ಎಡಕಲು ಗುಡ್ಡದ ಮೇಲೆ, ಬಿಳಿಹೆಂಡ್ತಿ ಸೇರಿ ಸಾಕಷ್ಟು ಹಿಟ್ ಸಿನಿಮಾಗಳನ್ನು ನೀಡಿದರು. ಅವರ ಸಿನಿಮಾಗಳಲ್ಲಿ ಏನಾದರೂ ಒಂದು ವಿಶೇಷತೆ ಇರುತ್ತಿತ್ತು.

Advertisement

ಇನ್ನು ಪುಟ್ಟಣ್ಣ ಅವರು ಚಿತ್ರರಂಗಕ್ಕೆ ಪರಿಚಯಿಸಿದ ಎಷ್ಟೋ ನಟ-ನಟಿಯರು ಸ್ಟಾರ್​​​ಗಳಾಗಿ ಮಿಂಚಿದ್ದಾರೆ. ಅರ್ಧದಲ್ಲೇ ನಿಂತಿದ್ದ ಪುಟ್ಟಣ್ಣ ಅವರ ‘ಸಾವಿರ ಮೆಟ್ಟಿಲು’ ಚಿತ್ರವನ್ನು ಕೆ.ಎಸ್​​.ಎಲ್ ಸ್ವಾಮಿ 2006 ರಲ್ಲಿ ಪೂರ್ಣಗೊಳಿಸಿ ಬಿಡುಗಡೆ ಮಾಡಿದ್ದರು. ಯಾರೇ ಆಗಲಿ ಅವರಿಂದ ಹೇಗೆ ಕೆಲಸ ತೆಗೆಯಬೇಕು ಎನ್ನುವುದು ಪುಟ್ಟಣ್ಣ ಅವರಿಗೆ ತಿಳಿದಿತ್ತು. ಕನ್ನಡ ಚಿತ್ರರಂಗ ಪುಟ್ಟಣ್ಣ ಅವರ ನೆನಪಿಗಾಗಿ ಇಂದಿಗೂ ಪ್ರತಿ ವರ್ಷ ಅವರ ಹೆಸರಿನಲ್ಲಿ ನಿರ್ದೇಶಕರಿಗೆ ಪ್ರಶಸ್ತಿ ನೀಡುತ್ತಾ ಬರುತ್ತಿದೆ.

ವಿವಾದ ಎಂಬುದು ಇಂತ ದೊಡ್ಡ ನಿರ್ದೇಶಕನನ್ನೂ ಬಿಡಲಿಲ್ಲ. ಖ್ಯಾತಿ ಜೊತೆಗೆ ಕೆಲವೊಂದು ವಿಚಾರಗಳಲ್ಲಿ ಅವರು ವಿವಾದಕ್ಕೆ ಒಳಗಾಗಿದ್ದರು. ಹೃದಯದ ಕಾಯಿಲೆಯಿಂದ ಬಳಲುತ್ತಿದ್ದ ಪುಟ್ಟಣ್ಣ ಅವರು 1985 ಜೂನ್ 5 ರಂದು ಇಹಲೋಕ ತ್ಯಜಿಸಿದರು. ಒಟ್ಟಿನಲ್ಲಿ ಪುಟ್ಟಣ್ಣ ಕಣಗಾಲ್ ಅವರು ಕನ್ನಡ ಚಿತ್ರರಂಗಕ್ಕೆ ನೀಡಿದ ಸಿನಿಮಾಗಳು ಎಂದಿಗೂ ಅಜರಾಮರ.

Advertisement
Share this on...