ಜಮಿನ್ದಾರು ಚಿತ್ರದ ನಾಯಕಿ ಬೀದಿಗೆ ಬೀಳಲು ಕಾರಣವೇನು ?

in ಕನ್ನಡ ಮಾಹಿತಿ/ಸಿನಿಮಾ 91 views

ಚಂದನವನದಲ್ಲಿ ದೊಡ್ಡ ದೊಡ್ಡ ಸ್ಟಾರ್ ನಟರಾದ ವಿಷ್ಣುವರ್ಧನ್, ಕ್ರೇಜಿ ಸ್ಟಾರ್ ರವಿಚಂದ್ರನ್, ರಮೇಶ್ ಅರವಿಂದ್ ಅಂತಹ ದಿಗ್ಗಜ ನಟರ ಜೊತೆಗೆ ನಾಯಕಿಯಾಗಿ ಬೆಳ್ಳಿತೆರೆಯನ್ನು ಹಂಚಿಕೊಂಡು ಸಾಕಷ್ಟು ಜನರಿಗೆ ಮನರಂಜನೆ ನೀಡಿದರು ನಟಿ ರಾಶಿ. ಹೌದು ಒಂದು ಕಾಲದಲ್ಲಿ ಸಾಕಷ್ಟು ಹೆಸರು ಮಾಡಿದ್ದ ನಟಿ ರಾಶಿ ಅವರು ತೆಲುಗು,ತಮಿಳು, ಸೇರಿದಂತೆ ಕನ್ನಡ ಸೂಪರ್ ಡೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿ ಅಪಾರ ಜನಮನ್ನಣೆ ಪಡೆದುಕೊಂಡಿದ್ದಾರೆ. ನಿನ್ನೇ ಪ್ರೀತಿಸುವೆ, ಜಮೀನ್ದಾರ್ರು, ಸ್ನೇಹ ,ರಾಜ ನರಸಿಂಹ ಇನ್ನೂ ಅನೇಕ ಸೂಪರ್ ಹಿಟ್ ಸಿನಿಮಾದಲ್ಲಿ ಅಭಿನಯಿಸಿ ಕನ್ನಡಿಗರ ಮಬೆ ಮಗಳಾಗಿದ್ದ ನಟಿ ರಾಶಿ ಸೂಪರ್ ಸ್ಟಾರ್ ನಟಿಯಾಗಿದ್ದವರು. ಆದರೆ ಸಮಯ ಒಂದೇ ರೀತಿ ಮುಂದುವರೆಯುವುದಿಲ್ಲ ಎಂಬಂತೆ ದಿನಗಳು ಉರುಳಿದಂತೆ, ಇವರಿಗೆ ಸಿನಿಮಾಗಳಲ್ಲಿ ಅವಕಾಶಗಳು ಕಡಿಮೆಯಾಗುತ್ತಾ ಹೋಗುತ್ತದೆ. ಆಗಿನ ಕಾಲದಲ್ಲಿ ನಟಿಯರಿಗೆ ಅಷ್ಟಾಗಿ ಹೆಚ್ಚು ಸಂಭಾವನೆ ಕೊಡುತ್ತಿರಲಿಲ್ಲ, ಹೆಸರು ಹಣ ಇದ್ದರೂ ಅವಕಾಶ ಇಲ್ಲದೇ ಈ ನಟಿ ಪೋಷಕ ಪಾತ್ರಗಳಲ್ಲಿ ನಟಿಸಲು ಪ್ರಾರಂಭ ಮಾಡುತ್ತಾರೆ.

Advertisement

 

Advertisement


ತೆಲುಗಿನ ಖ್ಯಾತ ನಟರಾದ ಮಹೇಶ್ ಬಾಬು ಅವರ ಸಿನಿಮಾದಲ್ಲಿ ತಾಯಿಯ ಪಾತ್ರದಲ್ಲಿ ಅಭಿನಯಿಸಿದ ಅವರು,ಇದರಲ್ಲಿ ನೆಗೆಟಿವ್ ಶೆಡ್ ನಲ್ಲಿ ಬಣ್ಣ ಹಚ್ಚಿದ್ದರು. ಇನ್ನು ನಟಿ ರಾಶಿ ಅವರು ಇದೀಗ ಆರ್ಥಿಕವಾಗಿ ಹಣದ ಮುಗ್ಗಟ್ಟು ಎದುರಿಸುತ್ತಿದ್ದು, ಸಾಕಷ್ಟು ಸಾಲ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಇಷ್ಟು ಮಾತ್ರವಲ್ಲದೆ ‘ ಅವರು ಮಾನಸಿಕ ಖಿನ್ನತೆಗೆ ಒಳಗಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಸುದ್ದಿ ಎಲ್ಲಾ ಕಡೆ ಹರಡುತ್ತಿದ್ದಂತೆ ನಟಿ ರಾಶಿ ಅವರು ತಮ್ಮ ಯೂಟ್ಯೂಬ್ ಚಾನಲ್ ನಲ್ಲಿ ಇದಕ್ಕೆ ಸ್ಪಷ್ಟವಾಗಿ ಮಾಹಿತಿಯನ್ನು ಕೊಟ್ಟಿದ್ದು, ‘ ನಾನೂ ಚೆನ್ನಾಗಿಯೇ ಇದ್ದೇನೆ, ನನ್ನ ಅಭಿಮಾನಿಗಳು ಗಾಬರಿಪಡುವ ಅಗತ್ಯವಿಲ್ಲ. ದಯವಿಟ್ಟು ಈ ರೀತಿಯ ಗಾಳಿ ಸುದ್ದಿ ಹಬ್ಬಿಸಬೇಡಿ ‘ಎಂದು ಮನವಿ ಮಾಡಿಕೊಂಡಿದ್ದರು.

Advertisement

Advertisement

ಈ ರೀತಿಯಾಗಿ ನಟಿ ರಾಶಿ ಸ್ಪಷ್ಟನೆ ಕೊಟ್ಟರು, ಕೆಲವರು ಮಾತ್ರ ಆಕೆ ಆರ್ಥಿಕ ಸಂಕಷ್ಟ ಎದುರಿಸುತ್ತಿರುವಿದು ನಿಜ ಎಂದು ಮಾತನಾಡುತ್ತಿದ್ದಾರೆ. ಇದು ಸತ್ಯ ಎಂಬಂತೆ ಅವರ ಆಪ್ತ ಬಳಗದವರು ಕೂಡ ಹೇಳುತ್ತಿದ್ದಾರೆ. ಒಂದು ಕಾಲದ ಟಾಪ್ ನಟಿಯಾಗಿ ಮಿಂಚಿದ್ದ ನಟಿ ರಾಶಿ ಅವರು ಈ ರೀತಿಯ ಪರಿಸ್ಥಿತಿ ಅನುಭವಿಸುತ್ತಿರುವುದು ಬೇಸರದ ಸಂಗತಿ ಅಲ್ಲವೇ?

Advertisement
Share this on...