ಯಾರಾಗಲಿದ್ದಾರೆ ಸ್ಯಾಂಡಲ್ ವುಡ್ ನ ರಾಬಿನ್ ಹುಡ್..?

in ಮನರಂಜನೆ/ಸಿನಿಮಾ 122 views

ಕೊ’ರೊನಾ ಲಾಕ್ ಡೌನ್ ಮುಗಿದ ಬಳಿಕ ಚಿತ್ರರಂಗ ಇದೀಗ ನಿಧಾನವಾಗಿ ಚೇತಿರಿಸಿಕೊಳ್ಳುವ ಯತ್ನದಲ್ಲಿದ್ದು, ಒಂದೆಡೆ ಅರ್ಧಕ್ಕೆ ನಿಂತಿದ್ದ ಸಿನಿಮಾ ಚಿತ್ರೀಕರಣ ಪೂರ್ಣಗೊಳ್ಳುತ್ತಿದ್ದರೆ, ಇನ್ನೊಂದೆಡೆ ಹೊಸ ಸಿನಿಮಾಗಳ ಘೋಷಣೆಯೂ ಆರಂಭವಾಗಿದೆ. ಈ ನಡುವೆ ಪೋಸ್ಟರ್ ಮೂಲಕವೇ ಸಾಕಷ್ಟು ಕುತೂಹಲವನ್ನು ಮೂಡಿಸುತ್ತಿದೆ ಸ್ಯಾಂಡಲ್ ವುಡ್ ನ ರಾಬಿನ್ ಹುಡ್ ಚಿತ್ರ. ನಿರ್ದೇಶಕ ಸಿಂಪಲ್ ಸುನಿ ರಾಬಿನ್ ಹುಡ್ ಮೂಲಕ ಹೊಸ ಚಿತ್ರವನ್ನು ಘೋಷಿಸಿದ್ದಾರೆ. ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ಖ್ಯಾತಿಯ ನಿರ್ದೇಶಕ ಸಿಂಪಲ್ ಸುನಿ ಅವರಿಗೆ ಹುಟ್ಟುಹಬ್ಬದ ಸಂಭ್ರಮ. ಇದೇ ವೇಳೆ ತಮ್ಮ ಹೊಸ ಚಿತ್ರದ ಪ್ರಕಟಣೆ ಮಾಡಿದ್ದು, ರಾಬಿನ್ ಹುಡ್ ಚಿತ್ರದ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಸಿನಿ ರಸಿಕರಿಗೆ ಗಿಫ್ಟ್ ನೀಡಿದ್ದಾರೆ.

Advertisement

Advertisement

ಸಿನಿಮಾದ ಪೋಸ್ಟರ್ ನೋಡಿಯೇ ಪ್ರೇಕ್ಷಕರಲ್ಲಿ ಕುತೂಹಲ ಇಮ್ಮಡಿಗೊಂಡಿದೆ. ಖ್ಯಾತ ನಿರ್ಮಾಪಕ ಪುಷ್ಕರ್​ ಮಲ್ಲಿಕಾನರ್ಜುನಯ್ಯ ಅವರು ಈ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ಕಿರಿಕ್​ ಪಾರ್ಟಿ, ಗೋಧಿ ಬಣ್ಣ ಸಾಧಾರಣ ಮೈಕಟ್ಟು, ಅವನೇ ಶ್ರೀಮನ್ನಾರಾಯಣ ಸಿನಿಮಾಗಳ ಮೂಲಕ ಗುರುತಿಸಿಕೊಂಡಿರುವ ಪುಷ್ಕರ್​ ಅವರ ಬ್ಯಾನರ್​ನಿಂದ ಸಾಕಷ್ಟು ವಿಭಿನ್ನವಾದ ಚಿತ್ರಗಳು ಮೂಡಿ ಬರುತ್ತಿವೆ. ಹಾಗಾಗಿ ರಾಬಿನ್ ಹುಡ್ ಮೇಲೆ ಸಹಜವಾಗಿ ನಿರೀಕ್ಷೆ ಹೆಚ್ಚಿದೆ.

Advertisement

ನಿರ್ದೇಶಕರು ರಾಬಿನ್ ಹುಡ್ ಪೋಸ್ಟರ್ ಮಾತ್ರ ಬಿಡುಗಡೆ ಮಾಡಿದ್ದು, ನಾಯಕನ ಬಗ್ಗೆ ಯಾವುದೇ ಸುಳಿವು ನೀಡಿಲ್ಲ. ಹೀಗಾಗಿ ಸ್ಯಾಂಡಲ್​ವುಡ್​ನಲ್ಲಿ ರಾಬಿನ್​ ಹುಡ್​ಯಾರಾಗಲಿದ್ದಾರೆ ಎಂಬ ಚರ್ಚೆ ಆರಂಭವಾಗಿದೆ. ಕೆಲವರು ನಿರ್ದೇಶಕರೇ ನಾಯಕನಿರಬಹುದಾ ಎಂದು ಉದ್ಗರಿಸಿದ್ದಾರೆ. ಚಿತ್ರದ ನಾಯಕ-ನಾಯಕಿ ಬಗ್ಗೆ ಇನ್ನೂ ಯಾವುದೇ ಮಾಹಿತಿಯನ್ನು ನೀಡಿಲ್ಲ ಸಿಂಪಲ್ ಸುನಿ. ಆದರೆ ರಾಬಿನ್ ಹುಡ್ ಚಿತ್ರದ ಮೂಲಕ ತಮ್ಮ ಮತ್ತೊಂದು ಕನಸಿನ ಕೂಸಿಗೆ ಜಾಗಮಾಡಿಕೊಟ್ಟಿದ್ದಕ್ಕೆ ನಿರ್ಮಾಪಕರಿಗೆ ಧನ್ಯವಾದ ಎಂದು ಹೇಳಿದ್ದಾರೆ.

Advertisement

Advertisement
Share this on...