ಬಣ್ಣದ ಲೋಕದಲ್ಲಿ ಕಮಾಲ್ ಮಾಡುತ್ತಿರುವ ಗುಳಿ ಕೆನ್ನೆಯ ಚೆಲುವೆ

in ಮನರಂಜನೆ/ಸಿನಿಮಾ 129 views

ಮುದ್ದಾದ ಗುಳಿಕೆನ್ನೆಯಿಂದಲೇ ಮೋಡಿ ಮಾಡಿದ್ದ ಈಕೆ ಸಿನಿ ಪ್ರಿಯರ ಪಾಲಿನ ಪ್ರೀತಿಯ ಡಿಂಪಲ್ ಕ್ವೀನ್ ಹೌದು! ಮನೋಜ್ಞ ಅಭಿನಯದ ಮೂಲಕ ಬಣ್ಣದ ಲೋಕದಲ್ಲಿ ಛಾಪು ಮೂಡಿಸುತ್ತಿರುವ ರಚಿತಾ ರಾಮ್ ಮೂಲ ಹೆಸರು ಬಿಂದ್ಯಾ ರಾಮ್. ಕಿರುತೆರೆಯ ಮೂಲಕ ಬಣ್ಣದ ಪಯಣ ಶುರು ಮಾಡಿರುವ ಈಕೆ ಬೆಳ್ಳಿತೆರೆಯ ಫೇಮಸ್ಸು ನಟಿ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಅರಸಿ ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸಿದ ರಚಿತಾ ಅವರು ನೆಗೆಟಿವ್ ರೋಲ್ ನಲ್ಲಿ ಕಾಣಿಸಿಕೊಂಡಿದ್ದರು. ಅರಸಿ ಧಾರಾವಾಹಿಯ ನಂತರ ಸಿನಿ ರಂಗಕ್ಕೆ ಮುಖ ಮಾಡಿದ್ದ ರಚಿತಾ ರಾಮ್ ಬುಲ್ ಬುಲ್ ಚಿತ್ರದ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟರು. ಚಾಲೆಂಜಿಗ್ ಸ್ಟಾರ್ ದರ್ಶನ್ ಅವರೊಂದಿಗೆ ತೆರೆ ಹಂಚಿಕೊಂಡಿದ್ದ ಡಿಂಪಲ್ ಕ್ವೀನ್ ಮತ್ತೆ ಹಿಂತಿರುಗಿ ನೋಡಿದ್ದೇ ಇಲ್ಲ.ಬೆಳ್ಳಿತೆರೆಯಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸಿದ್ದ ಈಕೆ ಬುಲ್ ಬುಲ್ ನಂತರ ದಿಲ್ ರಂಗೀಲಾ ಸಿನಿಮಾದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಅವರಿಗೆ ನಾಯಕಿಯಾಗಿ ನಟಿಸಿದ್ದರು.

Advertisement

Advertisement

ಮುಂದೆ ಅಂಬರೀಶ, ರನ್ನ, ರಥಾವರ, ಚಕ್ರವ್ಯೂಹ, ಪುಷ್ಪಕ ವಿಮಾನ, ಭರ್ಜರಿ, ಜಾನಿ ಜಾನಿ ಯಸ್ ಪಪ್ಪಾ, ನಟಸಾರ್ವಭೌಮ, ಅಯೋಗ್ಯ, ಉಪ್ಪಿ ಐ ಲವ್ ಯೂ, ಆಯುಷ್ಮಾನ್ ಭವ ಸಿನಿಮಾಗಳಲ್ಲಿ ರಚಿತಾ ರಾಮ್ ಅಭಿನಯಿಸಿದ್ದರು. ಕಿಚ್ಚ ಸುದೀಪ್, ರೋರಿಂಗ್ ಸ್ಟಾರ್ ಶ್ರೀಮುರಳಿ, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್, ರಮೇಶ್ ಅರವಿಂದ್, ಧ್ರುವ ಸರ್ಜಾ, ದುನಿಯಾ ವಿಜಯ್, ನೀನಾಸಂ ಸತೀಶ್ ರಂತಹ ನಟನಾ ದಿಗ್ಗಜರಿಗೆ ನಾಯಕಿಯಾಗಿ ರಚಿತಾ ರಾಮ್ ಕಾಣಿಸಿಕೊಂಡಿದ್ದಾರೆ. ಇದರ ಜೊತೆಗೆ ಜಗ್ಗುದಾದಾ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಮಿಂಚಿದ್ದ ಈಕೆ ಆಗಿ ಸುದೀಪ್ ಮತ್ರು ಉಪೇಂದ್ರ ಅಭಿನಯದ ಮುಕುಂದ ಮುರಾರಿ ಚಿತ್ರದ ಹಾಡಿನಲ್ಲಿಯೂ ಹೆಜ್ಜೆ ಹಾಕಿದರು.

Advertisement

Advertisement

ಇದರ ಜೊತೆಗೆ ಇದೀಗ ಸಾಲು ಸಾಲು ಸಿನಿಮಾಗಳು ಡಿಂಪಲ್ ಕ್ವೀನ್ ಕೈಯಲ್ಲಿದೆ. ಪ್ರೇಮ್ ನಿರ್ದೇಶನದ ಏಕ್ ಲವ್ ಯಾ, ರಮೇಶ್ ಅರವಿಂದ್ ನಿರ್ದೇಶನದ 100 ಜೊತೆಗೆ ತೆಲುಗಿನ ಸಿನಿಮಾದಲ್ಲಿಯೂ ಆಕೆ ನಟಿಸಿದ್ದಾರೆ. ಕಲ್ಯಾಣ್ ದೇವ್ ಜೊತೆ ಅಭಿನಯದ ಸೂಪರ್ ಮಚ್ಚಿ ಸಿನಿಮಾದಲ್ಲಿಯೂ ಆಕೆ ನಾಯಕಿಯಾಗಿ ನಟಿಸುವ ಮೂಲಕ ಪರಭಾಷೆಯಲ್ಲಿಯೂ ತಮ್ಮ ನಟನಾ ಛಾಪನ್ನು ಪಸರಿಸಿದ್ದಾರೆ. ಮತ್ತು ಇದರ ಜೊತೆಗೆ ಸತೀಶ್ ನೀನಾಸಂ ಜೊತೆ ಮ್ಯಾಟ್ನಿ, ಲಿಲ್ಲಿ ಹಾಗೂ ಪ್ರಜ್ವಲ್ ದೇವರಾಜ್ ಜೊತೆ ವೀರಂ ಹೀಗೆ ಕೆಲವೊಂದು ಸಿನಿಮಾಗಳು ರಚಿತಾ ಅವರ ಬತ್ತಳಿಕೆಯಲ್ಲಿವೆ. ನಟಿಯಾಗಿ ಸಿನಿ ಪ್ರಿಯರ ಮನ ರಂಜಿಸುತ್ತಿದ್ದ ಈ ಚೆಲುವೆ ತೀರ್ಪುಗಾರರಾಗಿ ಕಿರುತೆರೆಗೆ ಮರಳಿದ್ದು, ಆ ಮೂಲಕ ಕಿರುತೆರೆ ವೀಕ್ಷಕರ ಮನ ಗೆದ್ದಿದ್ದಾರೆ. ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಹಾಸ್ಯ ಕಾರ್ಯಕ್ರಮ ಮಜಾಭಾರತದ ತೀರ್ಪುಗಾರರಾಗಿ ಗುಳಿ ಕೆನ್ನೆಯ ಚೆಲುವೆ ಕಾಣಿಸಿಕೊಂಡಿದ್ದರು.
– ಅಹಲ್ಯಾ

ಮೋಡಿ ಮಾಂತ್ರಿಕರು ಪ್ರಸಿದ್ಧಜ್ಯೊತಿಷಿಗಳಾದ ಶ್ರೀ ಮಂಜುನಾಥ್ ಭಟ್ ಅವರು ಗಂಡ ಹೆಂಡತಿ ಕಲಹ, ಡೈವರ್ಸ ಪ್ರಾಬ್ಲಮ್, ಆಸ್ತಿಯಲ್ಲಿ ಕದನ, ಕೋರ್ಟ್ ಕೇಸ್, ಆರೋಗ್ಯದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಂತಾನ ಫಲ, ಸಾಲ ಭಾದೆ, ಮದುವೆ ವಿಚಾರದಲ್ಲಿ ವಿಘ್ನ , ಅತ್ತೆ ಸೊಸೆ ಕಲಹ, ನಿಮ್ಮ ಮನದಾಳದ ಯಾವುದೇ ಗುಪ್ತ ಸಮಸ್ಯೆ  ಇದ್ದರೆ ಜೀವನದಲ್ಲಿ ಜಿಗುಪ್ಸೆ ಹೊಂದ್ದಿದರೆ ನಿಮ್ಮ ಒಂದೇ ಒಂದು ಫೋನ್ ಕರೆ 9591706765 ನಿಮ್ಮ ಜೀವನವನ್ನೇ ಬದಲಾಯಿಸಿ ಬಿಡುತ್ತದೆ.
ವಿಶೇಷ  ಸೂಚನೆ : ಕೊಳ್ಳೆಗಾಲದ ಮಂತ್ರ ಶಕ್ತಿಯಿಂದ ಸ್ತ್ರೀ- ಪುರುಷ ವಶೀಕರಣ 3 ದಿನಗಳಲ್ಲಿ 100% ಪರಿಹಾರ ಶತಸಿದ್ಧ. ಅಸಾದ್ಯವಾದದ್ದು ಇಲ್ಲಿ ಸಾದ್ಯ.

Advertisement
Share this on...