ಸಂಕೋಚ ಬಿಟ್ಟು ತನ್ನ ಆಸೆಯನ್ನ ಹೇಳಿಕೊಂಡ ರಚಿತಾ ರಾಮ್ !

in ಮನರಂಜನೆ/ಸಿನಿಮಾ 407 views

ಲಾಕ್ ಡೌನ್  ಆದಾಗಿನಿಂದ ರಚಿತಾ ರಾಮ್ ಅವರು  ಏನು ಮಾಡುತ್ತಿದ್ದಾರೆ ಮತ್ತು ಅವರ ಮದುವೆ ಸುದ್ದಿ ಏನಾಯಿತು ಎಂಬ ಕುತೂಹಲ ಎಲ್ಲರಿಗೂ ಕೂಡ ಇದೆ. ರಚಿತಾ ರಾಮ್ ಬುಲ್ ಬುಲ್  ಎಂಬ ಚಿತ್ರದ ಮೂಲಕ ದರ್ಶನ್ ಅವರಿಗೆ ನಾಯಕಿಯಾಗಿ  ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಚಿತ್ರರಂಗಕ್ಕೆ ಕಾಲಿಟ್ಟು ಇಂದಿಗೆ ಏಳು ವರ್ಷ ಕಳೆದಿದ್ದರೂ ಅವರಿಗೆ ಇನ್ನೂ ಬೇಡಿಕೆ ಇದೆ. ಬ್ಯಾಕ್ ಟು ಬ್ಯಾಕ್  ಸ್ಟಾರ್ ನಟರುಗಳ ಸಿನಿಮಾಗಳಲ್ಲಿ  ನಾಯಕಿಯಾಗಿ ಅಭಿನಯಿಸುವ ಅವಕಾಶ ಅವರನ್ನು ಹುಡುಕಿಕೊಂಡು ಬರುತ್ತಲೇ ಇದೆ. ಸ್ಟಾರ್ ನಟರುಗಳ ಜೊತೆ  ಅಭಿನಯಿಸುವುದು ಮಾತ್ರವಲ್ಲದೆ  ಹೊಸಬರ ಚಿತ್ರಗಳಿಗೆ ಕೂಡ ಅವರು ಸೈ ಎನ್ನುತ್ತಿದ್ದಾರೆ. ಇತ್ತೀಚೆಗೆ ಮಹಿಳಾ ಪ್ರಧಾನ ಮತ್ತು ಪ್ರಯೋಗಾತ್ಮಕ ಚಿತ್ರಗಳತ್ತ ಒಲವು ತೋರುತ್ತಿದ್ದಾರೆ.  ಈ ಎಲ್ಲ ಭಿನ್ನ ಆಯ್ಕೆಗಳ ಕಾರಣದಿಂದಾಗಿ ರಚಿತಾ ರಾಮ್ ಅವರ ಅಭಿಮಾನಿ ಬಳಗ ದೊಡ್ಡದಾಗುತ್ತಲೇ ಇದೆ. ಆದರೆ ರಚಿತಾ ರಾಮ್ ಅವರು ಒಬ್ಬ ದೊಡ್ಡ ಸ್ಟಾರ್ ನಟನ ಋುಣವನ್ನು ತೀರಿಸಲು ಹೊರಟಿದ್ದಾರೆ. ಮತ್ತು ಅವರು ಮಾಡಲು ಹೊರಟಿರುವ ಕೆಲಸವೇನು ಎಂಬುದನ್ನು ಸಂಪೂರ್ಣವಾಗಿ ನಾವು ನಿಮಗೆ ತಿಳಿಸಿಕೊಡಲು ಪ್ರಯತ್ನಿಸುತ್ತಿದ್ದೇವೆ.

Advertisement

 

Advertisement

Advertisement

ರಚಿತಾ ರಾಮ್ ಅವರಿಗೆ ಸಿನಿಮಾ ರಂಗದಲ್ಲಿ ನೆಲೆ ನಿಲ್ಲಲು ಜೀವನ ರೂಪಿಸಿಕೊಟ್ಟ ದೊಡ್ಡ ನಟನಿಗೆ ನಾನು ಋಣ ತೀರಿಸಬೇಕು ಎಂಬುದರ ಬಗ್ಗೆ ರಚಿತಾ ರಾಮ್ ಈ ರೀತಿಯಾಗಿ ಹೇಳಿಕೊಂಡಿದ್ದಾರೆ. ನನಗೆ ಮೊದಲಿನಿಂದಲೂ ನಿರ್ಮಾಣ ಸಂಸ್ಥೆಯನ್ನು ಕಟ್ಟಬೇಕು ಎಂಬ ಆಸೆ ಇದೆ. ಇದೇ ಕಾರಣಕ್ಕೆ ರಿಷಭಪ್ರಿಯ ಎಂಬ ಕಿರುಚಿತ್ರವನ್ನು ಮಾಡಿದೆ. ಮುಂದಿನ  ದಿನಗಳಲ್ಲಿ ಪೂರ್ಣ ಪ್ರಮಾಣದ ಚಿತ್ರವನ್ನು ನಿರ್ಮಾಣ ಮಾಡುವ ಆಸೆ ಇದೆ. ನನ್ನನ್ನು ಕನ್ನಡ ಚಿತ್ರರಂಗಕ್ಕೆ ಲಾಂಚ್ ಮಾಡಿದ್ದು ತೂಗುದೀಪ ಶ್ರೀನಿವಾಸ್  ಬ್ಯಾನರ್ ಮತ್ತು ದರ್ಶನ್ ಸರ್.

Advertisement

ನಾನು ನಿರ್ಮಾಣ ಮಾಡುವ ಮೊದಲ ಸಿನಿಮಾದಲ್ಲಿ ದರ್ಶನ್ ಅವರು ನಾಯಕರಾಗಿರಬೇಕು ಎಂಬುದು ನನ್ನ ಕನಸು. ಆ ಕನಸು ನೆರವೇರುತ್ತದೊ ಅಥವಾ ಇಲ್ಲವೋ ಗೊತ್ತಿಲ್ಲ ಆದರೆ ಆ ಭಾಗ್ಯ ನನಗೆ ಸಿಕ್ಕರೆ ಅವರ ಋಣ  ತೀರಿಸಲು ಒಂದು ಅವಕಾಶ ಸಿಕ್ಕಂತೆ ಆಗುತ್ತದೆ ಎಂದು ಹೇಳಿದ್ದಾರೆ. ನಟಿ ರಚಿತಾ ರಾಮ್ ಅವರ ಈ ಕನಸು ನನಸಾಗಲಿ ಮತ್ತು ದರ್ಶನ ಮತ್ತು ರಚಿತಾ ರಾಮ್ ಇಬ್ಬರು ಒಟ್ಟಿಗೆ ನಟಿಸಲಿ  ಎಂದು ಕನ್ನಡಿಗರಾದ ನಾವು ಆಶಿಸೋಣ.

Advertisement
Share this on...