ಅಷ್ಟಕ್ಕೂ ಡಿಂಪಲ್ ಕ್ವೀನ್ ಈ ಆಟೋ ಚಾಲಕನನ್ನು ಹುಡುಕುತ್ತಿರುವುದಾದರು ಯಾಕೆ?

in ಮನರಂಜನೆ/ಸಿನಿಮಾ 40 views

ಚಂದನವನದ ಮೇರುನಟಿ, ಡಿಂಪಲ್ ಕ್ವೀನ್, ಲಕ್ಕಿ ಗರ್ಲ್ ರಚಿತಾ ರಾಮ್ ಅವರು ಸದ್ಯ ಆಟೋ ಚಾಲಕನೊಬ್ಬರನ್ನು ಹುಡುಕುತ್ತಿದ್ದು, ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಲಕುಮಿ ಎಂಬ ಕಿರುತೆರೆ ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದ ಈ ನಟಿ, ನಂತರ ತೂಗುದೀಪ ಪ್ರೊಡಕ್ಷನ್ಸ್ ಅಡಿ ಬುಲ್ ಬುಲ್ ಎಂಬ ಸಿನಿಮಾದಲ್ಲಿ ಚಾಲೆಂಜಿಗ್ ಸ್ಟಾರ್ ದರ್ಶನ್ ಅವರಿಗೆ ನಾಯಕಿಯಾಗಿ ತಮ್ಮ ಸಿನಿ ಜೀವನವನ್ನು ಪ್ರಾರಂಭಿಸಿದರು. ಮೊದಲ ಸಿನಿಮಾದಲ್ಲೇ ಡಿ ಬಾಸ್ ಎಂಬ ದೊಡ್ಡ ಬ್ರಾಂಡ್ ಜೊತೆ ಅವಕಾಶವನ್ನು ಗಿಟ್ಟಿಸಿಕೊಂಡ ಈ ಗುಳಿಕೆನ್ನೆ ಸುಂದರಿ, ಸಿಕ್ಕ ಅವಕಾಶವನ್ನು ಸರಿಯಾಗಿ ಉಪಯೋಗಿಸಿಕೊಂಡರು. ಈ ಸಿನಿಮಾ ಅವರಿಗೆ ಚಂದನವನದಲ್ಲಿ ಗಟ್ಟಿಯಾಗಿ ನೆಲೆಯೂರುವಂತೆ ಮಾಡಿಬಿಟ್ಟಿತು. ಕಿರುತೆರೆಯಿಂದ ಬಂದ ಈ ನಟಿ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಇದೀಗ ಕನ್ನಡದಲ್ಲಿ ಬಹು ಬೇಡಿಕೆಯ ನಟಿಯಾಗಿದ್ದಾರೆ. ಒಂದು ಕಾಲದಲ್ಲಿ ರಮ್ಯಾ ಹಾಗೂ ರಕ್ಷಿತಾ ಅವರು ಯಾವ ರೀತಿ ಹೆಸರು ಮಾಡಿದ್ದರೋ, ಆ ರೀತಿ ಖ್ಯಾತಿಯನ್ನ ಈ ಗುಳಿಕೆನ್ನೆ ಸುಂದರಿ ಗಳಿಸಿದ್ದಾರೆ. ಇದೀಗ ತೆಲುಗು ಚಿತ್ರರಂಗದಲ್ಲೂ ಕೂಡ ನಿರತರಾಗಿರುವ ಡಿಂಪಲ್ ಕ್ವೀನ್ ತಮ್ಮದೇ ಆದ ಫ್ಯಾನ್ ಫಾಲೋಯಿಂಗ್ ಸಂಪಾದಿಸಿಕೊಂಡಿದ್ದಾರೆ.

Advertisement

 

Advertisement

Advertisement

ಇದೀಗ ರಚಿತಾರಾಮ್ ತಮ್ಮ ಅಭಿಮಾನಿಯೊಬ್ಬರನ್ನು ಹುಡುಕುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದನ್ನು ಹಾಕಿ, ಈ ಫೋಟೋದಲ್ಲಿ ತೋರಿರುವ ಯುವಕ ಕಂಡ ಕೂಡಲೇ ಇದನ್ನು ಶೇರ್ ಮಾಡಿಕೊಂಡು ನನ್ನ ಹೆಸರನ್ನು ಟ್ಯಾಗ್ ಮಾಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಸಾಮಾನ್ಯವಾಗಿ ತಮ್ಮ ನೆಚ್ಚಿನ ನಟನನ್ನು ನೋಡಲೇಬೇಕೆಂಬ ಹಂಬಲದಿಂದ ಅವರ ಮನೆಯ ಬಳಿ ತೆರಳುವುದು ಸಾಮಾನ್ಯವಾಗಿರುತ್ತದೆ. ಆದರೆ ನಾಯಕ ನಟಿಯರ ವಿಚಾರದಲ್ಲಿ ಇದು ಅಪರೂಪವೇ ಸರಿ. ಆದರೆ ಡಿಂಪಲ್ ಕ್ವೀನ್ ಅವರನ್ನು ನೋಡಲು ಆಗಾಗ ಅವರ ಮನೆಯ ಬಳಿ ಅಭಿಮಾನಿಗಳು ತೆರಳುತ್ತಿರುತ್ತಾರೆ. ಅಂತೆಯೇ ಕೆಲದಿನಗಳ ಹಿಂದೆ ಮೂವರು ಆಟೋ ಓಡಿಸುವ ಯುವಕರು ರಚಿತಾ ಅವರ ಮನೆಗೆ ತೆರಳಿದ್ದು, ಅವರನ್ನು ಭೇಟಿ ಮಾಡಿ ಮರಳಿದ್ದಾರೆ.

Advertisement

ಆದರೇ ಇದೀಗ ರಚಿತಾ ರಾಮ್ ಆ ಹುಡುಗನನ್ನು ಹುಡುಕುತ್ತಿದ್ದು,ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾರೆ. “ಅಭಿಮಾನಿಗಳೇ ದೇವರು ಎಂದ ಅಣ್ಣಾವ್ರ ಮಾತು ಅಕ್ಷರಶಃ ಸತ್ಯ, ಪ್ರತಿದಿನ ಎಷ್ಟೋ ಅಭಿಮಾನಿಗಳು ಸೋಷಿಯಲ್ ಮೀಡಿಯಾದ ಮುಖಾಂತರ ಅಭಿಮಾನವನ್ನ ವ್ಯಕ್ತಪಡಿಸ್ತಾರೆ.. ತುಂಬಾ ಸಂತೋಷ ಆಗುತ್ತೆ. ಆದ್ರೇ ಇವತ್ ಬೆಳಿಗ್ಗೆ ಅಮ್ಮ ಬಂದು “ರಚ್ಚು ಬೆಳಿಗ್ ಬೆಳಿಗ್ಗೆನೇ ಯಾರೋ ಮನೆ ಮುಂದೆ ಕಾಯ್ತಿದಾರೆ ನೋಡು ಅಂದರು.. ನಾನು ಹೊರಗಡೆ ಬಂದು ನೋಡ್ದೇ ಒಂದು ಆಟೋ ಪಕ್ಕ ಮೂರು ಜನ ನಮ್ಮ ಮನೆಯ ಕಡೆ ಮುಖ ಮಾಡಿ ನಿಂತಿದ್ರು. “ನನ್ನ ನೋಡ್ತಿದ್ದ ಹಾಗೆ ತುಂಬಾ ಎಕ್ಸೈಟ್ ಆದ್ರು, ಅವರ ಬಳಿ ಹೋಗ್ತಿದ್ದ ಹಾಗೆ ನನ್ನ ಒಂದು ಮಾತು ಆಡಕ್ಕೂ ಬಿಡ್ದೇ “ಮೇಡಂ ನಾವ್ ನಿಮ್ ದೊಡ್ ಅಭಿಮಾನಿ ಮೇಡಂ ನನ್ ಆಟೋ ಮೇಲ್ 1st ಫೋಟೋ ನಿಮ್ದೇ ಇರ್ಬೇಕು ಮೇಡಂ” ಎಂದು ಗಿಫ್ಟ್ ಓಪನ್ ಮಾಡ್ಸಿ ನನ್ನ ಫೋಟೋನ ಆಟೋ ಮೇಲೆ ಅಂಟಿಸಿ ನನ್ನ ಆಟೋಗ್ರಾಫ್ ತೆಗೆದುಕೊಂಡು, ಅವರ ನೆಚ್ಚಿನ ಆಟೋ ಜೊತೆ ನನ್ನ ಫೋಟೋ ಕ್ಲಿಕ್ಕಿಸಿ ತಾವೂ ಸೆಲ್ಫಿ ತೆಗೆದುಕೊಂಡು ಹೊರಡಲು ಮುಂದಾದರು, ನಿಜಕ್ಕೂ ಭಾವುಕಳಾದೆ..

 

View this post on Instagram

 

“ಅಭಿಮಾನಿಗಳೇ ದೇವ್ರು” ಎಂದ ಅಣ್ಣಾವ್ರ ಮಾತು ಅಕ್ಷರಶಃ ಸತ್ಯ, ಪ್ರತಿದಿನ ಎಷ್ಟೋ ಅಭಿಮಾನಿಗಳು ಸೋಷಿಯಲ್ ಮೀಡಿಯಾದ ಮುಖಾಂತರ ಅಭಿಮಾನವನ್ನ ವ್ಯಕ್ತ ಪಡಿಸ್ತಾರೆ ತುಂಬಾ ಸಂತೋಷ ಆಗುತ್ತೆ. ಆದ್ರೇ ಇವತ್ ಬೆಳಿಗ್ಗೆ ಅಮ್ಮ ಬಂದು “ರಚ್ಚು ಬೆಳಿಗ್ಬೆಳಿಗ್ಗೆನೇ ಯಾರೋ ಮನೆ ಮುಂದೆ ಕಾಯ್ತಿದಾರೆ ನೋಡು ಅಂದ್ರು”, ನಾನು ಹೊರಗಡೆ ಬಂದು ನೋಡ್ದೇ ಒಂದು ಆಟೋ ಪಕ್ಕ ಮೂರು ಜನ ನಮ್ಮ ಮನೆಯ ಕಡೆ ಮುಖ ಮಾಡಿ ನಿಂತಿದ್ರು ನನ್ನ ನೋಡ್ತಿದ್ದ ಹಾಗೆ ತುಂಬಾ ಎಕ್ಸೈಟ್ ಆದ್ರು, ಅವರ ಬಳಿ ಹೋಗ್ತಿದ್ದ ಹಾಗೆ ನನ್ನ ಒಂದು ಮಾತು ಆಡಕ್ಕೂ ಬಿಡ್ದೇ “ಮೇಡಂ ನಾವ್ ನಿಮ್ ದೊಡ್ ಅಭಿಮಾನಿ ಮೇಡಂ ನನ್ ಆಟೋ ಮೇಲ್ 1st ಫೋಟೋ ನಿಮ್ದೇ ಇರ್ಬೇಕು ಮೇಡಂ” ಎಂದು ಗಿಫ್ಟ್ ವ್ರಾಪರ್ ಒಪೆನ್ ಮಾಡ್ಸಿ ನನ್ನ ಫೋಟೋನ ಆಟೋ ಮೇಲೆ ಅಂಟಿಸಿ ನನ್ನ ಆಟೋಗ್ರಾಫ್ ತೆಗೆದುಕೊಂಡು, ಅವರ ನೆಚ್ಚಿನ ಆಟೋ ಜೊತೆ ನನ್ನ ಫೋಟೋ ಕ್ಲಿಕ್ಕಿಸಿ ತಾವೂ ಸೆಲ್ಫಿ ತೆಗೆದುಕೊಂಡು ಹೊರಡಲು ಮುಂದಾದರು; ನಿಜಕ್ಕೂ ಭಾವುಕನಾದೆ. ಹೆಸರು ಕೇಳಬೇಕು ಎನ್ನುವಷ್ಟರಲ್ಲಿ ತುಂಬಾ ಉತ್ಸಾಹಿಕನಾಗಿ ನಗುತ್ತಲೇ ಹೊರಟೇ ಬಿಟ್ಟರು. ತಮ್ಮ ಹೆಸರು, ಊರು ಯಾವುದೂ ಹೇಳದೆ ಕೇವಲ ತಮ್ಮ ಕಾರ್ಯ ವೈಖರಿ; ನನ್ನ ಮೇಲಿನ ಅಭಿಮಾನವನ್ನ ವ್ಯಕ್ತಪಡಿಸಿದ ಅಭಿಮಾನಿಗಳಿಗೆ ಸದಾ ಚಿರಋಣಿ❤️? ನಿಮ್ಮ ಪ್ರೀತಿಯ ಆಟೋ ನಿಮ್ಮ ಜೀವನದ ಪಯಣವನ್ನ ಸುಖಕರವಾಗಿರಿಸಲಿ ಅಂತ ದೇವರಲ್ಲಿ ಬೇಡ್ಕೋತೀನಿ❤️? ನನ್ನ ಕಲಾಬದುಕಿಗೆ ಜೀವ ಕೊಟ್ಟವರು ಅಭಿಮಾನಿಗಳು. ಅಭಿಮಾನಿಗಳ ಹೃದಯ ಶ್ರೀಮಂತಿಕೆಯ ಮುಂದೆ ಬೇರೆಲ್ಲ ಶೂನ್ಯ ನಿಮ್ಮ ಪ್ರೀತಿ ಅಭಿಮಾನ ಸದಾ ಹೀಗೆ ಇರಲಿ? ಭಾವುಕಳಾದ ಕ್ಷಣದಲ್ಲಿ ಅವರ ಹೆಸರು ವಿವರ ತೆಗೆದುಕೊಳ್ಳಲಾಗಲಿಲ್ಲ, ದಯವಿಟ್ಟು ಈ ಪೋಸ್ಟ್ ನೋಡಿದ ಕೂಡಲೇ ನೀವು ಈ ಫೋಟೋವನ್ನ ನಿಮ್ಮ instagram account ನಲ್ಲಿ ಹಾಕಿ ನನ್ನನ್ನ tag ಮಾಡಿ. ನಾನು repost ಮಾಡುತ್ತೆನೆ ಜೊತೆಗೆ ನಿಮ್ಮ ಹೆಸರು ತಿಳಿದುಕೊಳ್ಳಬೇಕೆಂಬ ಆಸಕ್ತಿ ನನಗಿದೆ. ನಿಮ್ಮ, ರಚಿತಾ ರಾಮ್

A post shared by Rachita Ram (@rachita_instaofficial) on

ಹೆಸರು ಕೇಳಬೇಕು ಎನ್ನುವಷ್ಟರಲ್ಲಿ ತುಂಬಾ ಉತ್ಸುಕರಾಗಿ ನಗುತ್ತಲೇ ಹೊರಟೇ ಬಿಟ್ಟರು. ತಮ್ಮ ಹೆಸರು, ಊರು ಯಾವುದೂ ಹೇಳದೆ ಕೇವಲ ತಮ್ಮ ಕಾರ್ಯ ವೈಖರಿ, ನನ್ನ ಮೇಲಿನ ಅಭಿಮಾನವನ್ನ ವ್ಯಕ್ತಪಡಿಸಿದ ಅಭಿಮಾನಿಗಳಿಗೆ ಸದಾ ಚಿರಋಣಿ.. ನಿಮ್ಮ ಪ್ರೀತಿಯ ಆಟೋ ನಿಮ್ಮ ಜೀವನದ ಪಯಣವನ್ನ ಸುಖಕರವಾಗಿರಿಸಲಿ ಅಂತ ದೇವರಲ್ಲಿ ಬೇಡ್ಕೋತೀನಿ. ನನ್ನ ಕಲಾಬದುಕಿಗೆ ಜೀವ ಕೊಟ್ಟವರು ಅಭಿಮಾನಿಗಳು. ಅಭಿಮಾನಿಗಳ ಹೃದಯ ಶ್ರೀಮಂತಿಕೆಯ ಮುಂದೆ ಬೇರೆಲ್ಲ ಶೂನ್ಯ ನಿಮ್ಮ ಪ್ರೀತಿ ಅಭಿಮಾನ ಸದಾ ಹೀಗೆ ಇರಲಿ. ಭಾವುಕಳಾದ ಕ್ಷಣದಲ್ಲಿ ಅವರ ಹೆಸರು ವಿವರ ತೆಗೆದುಕೊಳ್ಳಲಾಗಲಿಲ್ಲ, ದಯವಿಟ್ಟು ಈ ಪೋಸ್ಟ್ ನೋಡಿದ ಕೂಡಲೇ ನೀವು ಈ ಫೋಟೋವನ್ನ ನಿಮ್ಮ ಇನ್ಸ್ಟಾಗ್ರಾಂ ನಲ್ಲಿ ಹಾಕಿ ನನ್ನನ್ನ ಟ್ಯಾಗ್ ಮಾಡಿ. ನಾನು ಮತ್ತೆ ರೀಪೋಸ್ಟ್ ಮಾಡುತ್ತೆನೆ.. ಜೊತೆಗೆ ನಿಮ್ಮ ಹೆಸರು ತಿಳಿದುಕೊಳ್ಳಬೇಕೆಂಬ ಆಸಕ್ತಿ ನನಗಿದೆ.” ಎಂದು ಬರೆದು ಪೋಸ್ಟ್ ಮಾಡಿದ್ದಾರೆ.. ಈ ಆಟೋ ಹುಡುಗ ನಿಮಗೆ ತಿಳಿದಿದ್ದರೆ ಟ್ಯಾಗ್ ಮಾಡಿ.. ಎಂದು ಬರೆದಿಕೊಂಡಿದ್ದಾರೆ. ಅಭ್ಬಾ ಎಂತಹ ಸರಳ ಮನಸ್ಸು ಇವರದ್ದು ಅಲ್ಲವೇ?

Advertisement
Share this on...