ದರ್ಶನ್ ಋಣ ತೀರಿಸಲು ಹೊರಟ ರಚಿತಾರಾಮ್ ! ಏನದು ಈ ಸ್ಟೋರಿ ಓದಿ…

in ಸಿನಿಮಾ 126 views

ಸದ್ಯ ಸ್ಯಾಂಡಲ್ ವುಡ್ ನಲ್ಲಿ ಬಹುಬೇಡಿಕೆಯ ನಟಿ ಎಂದರೆ ಅದು ಲಕ್ಕಿ ಗರ್ಲ್, ಡಿಂಪಲ್​ ಕ್ವೀನ್​ ರಚಿತಾ ರಾಮ್ ಅವರು. ರಚ್ಚು ಬಹುತೇಕ ಹಿಟ್​ ಸಿನಿಮಾಗಳನ್ನೇ ಕೊಡುತ್ತಾ ಬರುತ್ತಿದ್ದಾರೆ. ಕನ್ನಡದ ಬಹುತೇಕ ಎಲ್ಲಾ ಸ್ಟಾರ್​ ನಟರ ಸಿನಿಮಾಗಳಲ್ಲಿ ನಟಿಸಿ ಸೈ ಅನ್ನಿಸಿಕೊಂಡಿರೋ ಈ ಡಿಂಪಲ್ ಕ್ವೀನ್, ಬ್ಯಾಕ್​ ಟು ಬ್ಯಾಕ್​ ಸಿನಿಮಾಗಳನ್ನ ಒಪ್ಪಿಕೊಂಡು ಸದಾ ನಿರತರಾಗಿರುತ್ತಾರೆ. ಇದೀಗ ಹೊಸ ಪ್ರಯತ್ನಕ್ಕೆ ಕೈ ಹಾಕುವ ಸುಳಿವು ನೀಡಿರುವ ರಚ್ಚು ಎಲ್ಲರಲ್ಲೂ ಕುತೂಹಲ ಮೂಡಿಸಿದ್ದಾರೆ. ಇನ್ನು ಸಿನಿಮಾರಂಗದಲ್ಲಿ ಬರೀ ಸ್ಟಾರ್​ ನಟರಷ್ಟೆ ಅಲ್ಲದೇ, ನಟಿಮಣಿಯರು ಕೂಡ ಸಿನಿಮಾ ನಿರ್ಮಾಣ ಮಾಡುವ ಕನಸು ಕಾಣುತ್ತಿರುತ್ತಾರೆ. ನಟನೆಯ ಜೊತೆ, ಸಿನಿಮಾ ನಿರ್ಮಾಣದ ಮೇಲೂ ನಟಿಮಣಿಯರು ಹೆಚ್ಚು ಮನಸು ಮಾಡುತ್ತಾರೆ. ಕನ್ನಡದ ಲಕ್ಕಿ ಗರ್ಲ್ ರಚಿತಾ ರಾಮ್​ ಅವರು ಕೂಡ ಇದೀಗ ಸಿನಿಮಾ ನಿರ್ಮಾಣ ಸಂಸ್ಥೆ ಹುಟ್ಟಾಕ್ಕುವ ಸುಳಿವು ಕೊಟ್ಟಿದ್ದು, ತಮ್ಮ ಬ್ಯಾನರ್​​ನ ಮೊದಲನೇ ಸಿನಿಮಾದಲ್ಲಿ ದರ್ಶನ್​ ನಟಿಸಬೇಕು ಎಂಬುದು ಅವರ ಮಹದಾಸೆಯಾಗಿದೆ.

Advertisement

Advertisement

ಬುಲ್ ಬುಲ್ ಎಂಬ ಸಿನಿಮಾದ ಮೂಲಕ 7 ವರ್ಷಗಳ ಹಿಂದೆ ತೂಗುದೀಪ ಪ್ರೊಡಕ್ಷನ್ಸ್​ ಬ್ಯಾನರ್​​ನಲ್ಲಿ ರಚಿತಾರಾಮ್​ ಬೆಳ್ಳಿತೆರೆಗೆ ಪಾದರ್ಪಣೆ ಮಾಡಿದರು. ಅಲ್ಲಿಂದ ಮುಂದೆ ಅವರು ಎಂದು ತಿರುಗಿ ನೋಡಲೇ ಇಲ್ಲ. ಡಿ ಬಾಸ್ ದರ್ಶನ್​ ಮತ್ತು ದಿನಕರ್​ ತೂಗುದೀಪ ಅವರು ತಮ್ಮ ಚಿತ್ರದಲ್ಲಿ ಹೊಸ ನಟಿಗೆ ಅವಕಾಶವನ್ನು ಕೊಟ್ಟಿದ್ದರು. ಆ ಅವಕಾಶವನ್ನ ಬಳಸಿಕೊಂಡು ರಚ್ಚು ಮುಂದೆ ಸಾಲು ಸಾಲು ಹಿಟ್​ ಸಿನಿಮಾಗಳಲ್ಲಿ ನಟಿಸಿ, ಚಿತ್ರರಂಗದ ಬಹುಬೇಡಿಕೆಯ ನಟಿಯಾಗಿದ್ದಾರೆ. ಇನ್ನು ನಿರ್ಮಾಪಕಿಯಾಗಬೇಕು ಎಂಬುದು ಇಂದು ನೆನ್ನೆಯ ಕನಸಲ್ಲ. ಈಗಾಗಲೇ ಅವರು ರಿಷಭಪ್ರಿಯ ಎಂಬುವಂತಹ ಒಂದು ಕಿರು ಚಿತ್ರವನ್ನು ಕೂಡ ನಿರ್ಮಾಣ ಮಾಡಿದ್ದು, ಇದೀಗ ಪೂರ್ಣಪ್ರಮಾಣದ ದೊಡ್ಡ ಸಿನಿಮಾ ಮಾಡಬೇಕು ಅನ್ನುವ ಇರಾದೆ ಅವರಿಗಿದೆ.

Advertisement

Advertisement

 

ಸಿನಿಮಾ ನಿರ್ಮಾಣ ಸಂಸ್ಥೆ ಶುರುವಾದ್ರೆ, ತಮ್ಮ ಬ್ಯಾನರ್​ನಲ್ಲಿ ಚಾಲೆಂಜಿಂಗ್​ ಸ್ಟಾರ್​ಗೆ ಮೊದಲ ಸಿನಿಮಾ ಮಾಡ್ಬೇಕು ಅನ್ನೋದು ರಚಿತಾ ರಾಮ್​ ಕನಸು. ಆ ಮೂಲಕ ಚಿತ್ರರಂಗದಲ್ಲಿ ತಮಗೆ ಮೊದಲ ಅವಕಾಶ ಕೊಟ್ಟ ದರ್ಶನ್​​ ಅವರ ಋಣ ಸಂದಾಯ ಮಾಡಬೇಕು ಅನ್ನೋ ಆಸೆಯನ್ನ ಡಿಂಪಲ್​ ಕ್ವೀನ್​ ವ್ಯಕ್ತಪಡಿಸಿದ್ದಾರೆ.

Advertisement
Share this on...