ಟಾಲಿವುಡ್ ನಲ್ಲಿ ಆಫರ್ ಗಳನ್ನು ಪಡೆಯುತ್ತಿರುವ ರಚಿತಾ ರಾಮ್, ಕಾರಣ ಏನು ನೋಡಿ!

in ಮನರಂಜನೆ/ಸಿನಿಮಾ 226 views

ಬಾಲಿವುಡ್’ನ ಅನೇಕ ನಟಿಯರು ದಕ್ಷಿಣ ಭಾರತದ ಚಿತ್ರರಂಗವನ್ನು ಪ್ರವೇಶಿಸುತ್ತಾರೆ. ಆದರೆ 2-3 ವರ್ಷಗಳ ಅವಧಿಯಲ್ಲಿ ಕಣ್ಮರೆಯಾಗುತ್ತಾರೆ. ಆದರೆ ದಕ್ಷಿಣ ಭಾರತದ ಕೆಲವು ಸುಂದರಿಯರು ಮಾತ್ರ ಅನೇಕ ವರ್ಷಗಳಿಂದ ನಂಬರ್ ಒನ್ ಸ್ಥಾನದಲ್ಲಿಯೇ ಇದ್ದಾರೆ. ಅವರು ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲಿ ಕೆಲಸ ಮಾಡಿದ್ದು, ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ತ್ರಿಶಾ ಮತ್ತು ಕೀರ್ತಿ ಸುರೇಶ್ ಮೂರು ಭಾಷೆಗಳ ಚಲನಚಿತ್ರಗಳಲ್ಲಿ ಅಭಿನಯಿಸಿದರೆ, ನಯನತಾರಾ ಎಲ್ಲಾ ನಾಲ್ಕು ಭಾಷೆಗಳಲ್ಲಿ ಕೆಲಸ ಮಾಡಿದ್ದಾರೆ. ಇದೇ ರೀತಿ ಕನ್ನಡದ ಬೆಡಗಿಯೂ ಈಗ ಟಾಲಿವುಡ್’ನಲ್ಲಿ ಹಲವಾರು ಆಫರ್’ಗಳನ್ನು ಪಡೆಯುತ್ತಿದ್ದಾರೆ. ಹೌದು, ಅವರು ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ನಾಯಕಿ. ತೆಲುಗಿನಲ್ಲಿ ನಟಿ ಸಮಂತಾ ಬಗ್ಗೆ ಕ್ರೇಜ್ ಇರುವಂತೆ, ಕನ್ನಡದಲ್ಲಿ ಈಕೆಗೆ ಆ ಮಟ್ಟದ ಕ್ರೇಜ್ ಇದೆ ಎಂದು ವರದಿಯಾಗಿದೆ. ಹೌದು, ಆ ನಟಿ ಬೇರಾರೂ ಅಲ್ಲ, ಕನ್ನಡಿಗರ ನೆಚ್ಚಿನ ತಾರೆ ರಚಿತಾ ರಾಮ್. ಸ್ಯಾಂಡಲ್ ವುಡ್ ನಲ್ಲಿ ಭಾರೀ ಫಾಲೋಯಿಂಗ್ ಹೊಂದಿರುವ ರಚಿತಾ, ಕರ್ನಾಟಕದಲ್ಲಿ ಸ್ಟಾರ್ ಹೀರೋಯಿನ್ ಆಗಿದ್ದರೂ, ಟಾಲಿವುಡ್’ನಲ್ಲಿ ವಿಶೇಷವಾಗಿ ಯುವ ನಟರ ಆಫರ್ ಗಳನ್ನು ಪಡೆಯಲು ಪ್ರಯತ್ನಿಸುತ್ತಿದ್ದಾರೆ.

Advertisement

 

Advertisement


ಬಾಲಯ್ಯ-ಬೋಯಪತಿ ಚಿತ್ರದಲ್ಲಿ ರಚಿತಾಗೆ ಒಂದು ಪಾತ್ರವನ್ನು ನೀಡಲಾಗಿದೆಯೆಂದು ವರದಿಯಾಗಿದ್ದು, ಜೊತೆಗೆ ವೆಂಕಟೇಶ್ ಅವರೊಂದಿಗೆ ಕೆಲಸ ಮಾಡುವ ಪ್ರಸ್ತಾಪವನ್ನು ಸಹ ಅವರು ತಿರಸ್ಕರಿಸಿದ್ದಾರೆ ಎಂಬ ಸುದ್ದಿ ಇದೆ. ಸದ್ಯ ಕನ್ನಡದ ಈ ಸ್ಟಾರ್ ನಾಯಕಿ ಕಲ್ಯಾಣ್ ದೇವ್ ಅವರಂತಹ ಹೊಸ ನಾಯಕರ ಜೊತೆ ಕೆಲಸ ಮಾಡುತ್ತಿದ್ದಾರೆ. ಯುವ ನಟರು ಟಾಲಿವುಡ್ನಲ್ಲಿ ಆಕೆಗೆ ಅವಕಾಶಗಳನ್ನು ನೀಡುತ್ತಾರೋ, ಇಲ್ಲವೋ ಎಂದು ಕಾದು ನೋಡಬೇಕು. ಕನ್ನಡದ ಕಿರುತೆರೆಯ ದೈನಿಕ ಧಾರಾವಾಹಿ ‘ಅರಸಿ’ ಎಂಬ ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದ ರಚಿತಾ, ಮೊಟ್ಟ ಮೊದಲ ಬಾರಿಗೆ “ಬುಲ್ ಬುಲ್” ಚಿತ್ರದಲ್ಲಿ ದರ್ಶನ್ ಜೊತೆ ನಾಯಕಿಯಾಗಿ ನಟಿಸುವ ಮೂಲಕ ಚಿತ್ರರಂಗದಲ್ಲಿ ಗುರುತಿಸಿಕೊಂಡರು.

Advertisement

Advertisement

 

ಮೊದಲ ಚಿತ್ರ ಬುಲ್ ಬುಲ್ ಯಶಸ್ಸು ಕಂಡ ನಂತರ ದಿಲ್ ರಂಗೀಲಾ ಹಾಗೂ ಅಂಬರೀಶ ಚಿತ್ರಗಳಲ್ಲಿ ನಟಿಸಿದರು.ಇದುವರೆಗೂ 14 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ರಚಿತಾ, ಮೂಲತಃ ಭರತನಾಟ್ಯ ನೃತ್ಯಗಾರ್ತಿ. ಅವರು 40 ಕ್ಕೂ ಹೆಚ್ಚು ಪ್ರದರ್ಶನಗಳನ್ನು ನೀಡಿದ್ದು, ಅವರ ತಂದೆ ಕೂಡ ಭರತನಾಟ್ಯ ನೃತ್ಯಗಾರ. ನಟಿ ನಿತ್ಯಾ ರಾಮ್ ಅವರು ರಚಿತಾ ರಾಮ್ ಅವರ ಸಹೋದರಿ.

Advertisement
Share this on...