ತುಂಬಾ ಸುಂದರವಾಗಿರುವ ಕನ್ನಡದ ಈ ನಟಿ ಈಗ ಗುರುತೇ ಸಿಗದಷ್ಟು ಬದಲಾಗಿದ್ದಾರೆ‌..! ಯಾರು ಈ ನಟಿ..?

in ಮನರಂಜನೆ/ಸಿನಿಮಾ 146 views

ಕೆಲವೊಮ್ಮೆ ನಮ್ಮ ಸ್ನೇಹಿತರೊ, ಸಂಬಂಧಿಗಳೋ ಹಲವಾರು ವರ್ಷಗಳ ನಂತರ ಅಪರೂಪಕ್ಕೆ ನಮಗೆ ಎಲ್ಲಾದರೂ ಎದುರಾದರೆ ಏನು ಹೀಗಾಗಿ ಬಿಟ್ಟಿದ್ದೀಯಾ? ಗುರುತೇ ಸಿಗದಷ್ಟು ಬದಲಾಗಿದ್ದಿಯಾ? ಎಂದು ಮಾತು ಪ್ರಾರಂಭಿಸುತ್ತೇವೆ. ಇನ್ನು ಆ ಕಡೆಯ ವ್ಯಕ್ತಿಯಿಂದ ಸಹ ನೀನು ಅಷ್ಟೇ ತುಂಬಾ ಬದಲಾಗಿ ಹೋಗಿದ್ದೀಯಿ ಎಂಬ ಮಾತುಗಳು ಕೇಳಿ ಬರುತ್ತವೆ. ಇನ್ನೂ ತೆರೆ ಮೇಲೆ ನಟಿಸುವ ಸಿನಿಮಾ ನಟ-ನಟಿಯರು ಸಿನಿಮಾರಂಗ ತೊರೆದ ಹಲವಾರು ವರ್ಷಗಳ ನಂತರ ಸಾರ್ವಜನಿಕವಾಗಿ ಎಲ್ಲಾದರೂ ಕಾಣಿಸಿಕೊಂಡರು ಸಹ ಜನ ಏನು ಇವರು ಇಷ್ಟು ಬದಲಾಗಿ ಬಿಟ್ಟಿದ್ದಾರೆ ಎಂದು ಮಾತನಾಡಿಕೊಳ್ಳುತ್ತಾರೆ. ಒಂದು ಕಾಲದಲ್ಲಿ ಟಾಪ್ ನಟಿಯಾಗಿ ದಕ್ಷಿಣ ಭಾರತದ ಸಿನಿಮಾರಂಗದಲ್ಲಿ ಮಿಂಚಿದ ನಟಿ ಈಗ ಗುರುತೇ ಸಿಗದಷ್ಟು ಬದಲಾಗಿದ್ದಾರೆ. ಹಾಗಾದರೆ ಆ ನಟಿ ಯಾರು ಗೊತ್ತಾ..? ದಿಗ್ವಿಜಯ ಎಂಬ ಚಿತ್ರದ ಮೂಲಕ ಕನ್ನಡ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದ ನಟಿ ರಾಧ. ಅಂದಕ್ಕೆ ಪರ್ಯಾಯ ಪದ ನಟಿ ರಾಧ ಎನ್ನುವಂತೆ ಸುಂದರವಾಗಿದ್ದರು. ನಟಿ ರಾಧರವರು ಜೂನ್ 3, 1965 ರಂದು ಕೇರಳದಲ್ಲಿ ಜನಿಸಿದರು. ತಂದೆ ಕುಂಜನ್ ನಾಯರ್, ತಾಯಿ ಸಾರಸಮ್ಮ. 80 ರ ದಶಕದಲ್ಲಿ ನಟಿ ರಾಧಾರವರು ತಮಿಳು, ತೆಲುಗು, ಮಲೆಯಾಳಂ ಸಿನಿಮಾಗಳಲ್ಲಿ ಮಿಂಚಿದರು.

Advertisement

 

Advertisement

Advertisement

 

Advertisement

ಕನ್ನಡದಲ್ಲಿ ದಿಗ್ವಿಜಯ, ಸಾವಿರ ಸುಳ್ಳು, ಸೌಭಾಗ್ಯಲಕ್ಷ್ಮಿ, ರಣಚಂಡಿ ಚಿತ್ರಗಳೂ ಸೇರಿ ಸುಮಾರು 5 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ನಟಿ ರಾಧಾ ರೆಬಲ್ ಸ್ಟಾರ್ ಅಂಬರೀಷ್, ಪ್ರಣಯ ರಾಜ ಶ್ರೀನಾಥ್ ಹಾಗೂ ಕ್ರೇಜಿ಼ ಸ್ಟಾರ್ ರವಿಚಂದ್ರನ್ ರವರಿಗೆ ನಾಯಕಿಯಾಗಿ ನಟಿಸಿದ್ದರು. ನಟಿ ರಾಧಾರವರು ಇನ್ನೂ ಕಮಲ ಹಾಸನ್ , ಚಿರಂಜೀವಿ ಸೇರಿದಂತೆ ತೆಲುಗು, ತಮಿಳು, ಮಲೆಯಾಳಂನ ಎಲ್ಲಾ ಸೂಪರ್ ಸ್ಟಾರ್ ನಟರ ಜೊತೆಯಲ್ಲಿಯೂ ಸಹ ನಟಿಸಿದ್ದಾರೆ. ನಟಿ ರಾಧ ನಟಿ ಅಂಬಿಕಾ ರವರ ಸ್ವಂತ ತಂಗಿ. ನಟಿ ರಾಧ 1991 ರಲ್ಲಿ ಉದ್ಯಮಿ ರಾಜಶೇಖರ್ ನಾಯರ್ ಎಂಬುವವರನ್ನು ಮದುವೆಯಾಗಿದ್ದರು. ರಾಧಾರವರಿಗೆ ಇಬ್ಬರು ಹೆಣ್ಣು ಮಕ್ಕಳು ಹಾಗೂ ಒಬ್ಬ ಗಂಡು ಮಗನಿದ್ದಾನೆ. ನಟಿ ರಾಧಾರವರ ಮಗಳು ಕಾರ್ತಿಕ ಕೂಡ ನಟಿಯಾಗಿದ್ದು ತೆಲುಗು, ತಮಿಳು, ಮಲೆಯಾಳಂ ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಇನ್ನು ಕನ್ನಡದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಜೊತೆ ಬೃಂದಾವನ ಚಿತ್ರದಲ್ಲಿ ನಾಯಕಿಯಾಗಿಯೂ ಸಹ ನಟಿಸಿದ್ದಾರೆ.ಪ್ರಸ್ತುತ ತಮ್ಮ ಪತಿ ಹಾಗೂ ಮೂವರು ಮಕ್ಕಳೊಂದಿಗೆ ಮುಂಬೈನಲ್ಲಿ ನಲೆಸಿದ್ದಾರೆ.

– ಸುಷ್ಮಿತಾ

Advertisement
Share this on...