ಸೀಮಂತ ಸಂಭ್ರಮದಲ್ಲಿ ರಾಧ ರಾಮಣ ಖ್ಯಾತಿಯ ಸ್ಕಂದ ಅಶೋಕ್ ಪತ್ನಿ ಶಿಕಾ ಪ್ರಸಾದ್ ..

in ಮನರಂಜನೆ 613 views

ರಾಧ ರಮಣ ಧಾರವಾಹಿ ಖ್ಯಾತಿಯ ನಟ ಸ್ಕಂದ ಅಶೋಕ್ ಅವರ ಪತ್ನಿ ಶಿಕಾ ಪ್ರಸಾದ್ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದು, ಇತ್ತೀಚೆಗೆ ಸ್ಕಂದ ಅವರು ಬೆಂಗಳೂರಿನಲ್ಲಿ ಬೇಬಿ ಶೋವರ್ ಸಮಾರಂಭ ಆಯೋಜಿಸಿದ್ದರು.  ಇದು ಖಾಸಗಿ ಸಮಾರಂಭವಾಗಿದ್ದರೂ, ಈ ಸಮಾರಂಭದಲ್ಲಿ ಕಿರುತೆರೆಯ ಗಣ್ಯರು ಹಾಗೂ ಸ್ಯಾಂಡಲ್ವುಡ್ ನಟ-ನಟಿಯರು ಭಾಗವಹಿಸಿ, ಆಶೀರ್ವದಿಸಿದರು. ಶ್ವೇತಾ ಪ್ರಸಾದ್, ಆರ್.ಜೆ.ಪ್ರದೀಪ್, ರೂಪಾ ಮುಂತಾದವರು ಸಮಾರಂಭದಲ್ಲಿ ಭಾಗವಹಿಸಿದ್ದರು.
ಇದೀಗ ಸಮಾರಂಭದ ಚಿತ್ರಗಳು ಅನೇಕ ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ಗಳಲ್ಲಿ ವೈರಲ್ ಆಗಿದ್ದು, ದಂಪತಿಗಳು ಫೋಟೋಗಳಲ್ಲಿ ತುಂಬಾ ಸುಂದರವಾಗಿ ಕಾಣಿಸುತ್ತಿದ್ದಾರೆ. ಸ್ಕಂದಾ ಹಸಿರು ಸೂಟ್ನಲ್ಲಿ ಮಿಂಚುತ್ತಿದ್ದರೆ, ಶಿಕಾ ಸಾಂಪ್ರದಾಯಿಕ ರೇಷ್ಮೆ ಸೀರೆಯಲ್ಲಿ ಸುಂದರವಾಗಿ ಕಾಣಿಸುತ್ತಿದ್ದಾರೆ.

Advertisement

Advertisement

 

Advertisement

ಸ್ಕಂದ ಮತ್ತು ಶಿಕಾ ಸುಮಾರು ನಾಲ್ಕೂವರೆ ವರ್ಷಗಳ ಕಾಲ ಡೇಟಿಂಗ್ ಮಾಡಿ, ಮೇ 30, 2018 ರಂದು ಬೆಂಗಳೂರಿನ ಅರಮನೆಯಲ್ಲಿ ನಡೆದ ಅದ್ಧೂರಿ ಮಹೋತ್ಸವದಲ್ಲಿ ಶಿಕಾ ಪ್ರಸಾದ್ ರನ್ನ ಸ್ಕಂದ ಅಶೋಕ್ ಕೈಹಿಡಿದರು. ಸ್ಕಂದ ಅಶೋಕ್ ಕನ್ನಡ ಪ್ರೇಕ್ಷಕರಿಗೆ ಹೊಸ ಮುಖವಲ್ಲ. ಈ ಹಿಂದೆ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ದೈನಂದಿನ ಧಾರವಾಹಿ ‘ರಾಧಾ ರಮಣ’ ದಲ್ಲಿ ‘ರಮಣ’ ಪಾತ್ರಕ್ಕೆ ಖ್ಯಾತಿ ಗಳಿಸಿದ್ದರು. ಇದರಲ್ಲಿ ಜವಾಬ್ದಾರಿಯುತ ವ್ಯಕ್ತಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಸ್ಕಂದ ಅವರು, ತೆರೆಯ ಮೇಲಿನ ಪಾತ್ರಕ್ಕಾಗಿ ‘ಪರ್ ಫೆಕ್ಟ್ ಮ್ಯಾನ್’ ಎಂದು ಗುರುತಿಸಿಕೊಂಡಿದ್ದರು. ಅಂದಹಾಗೆ 2018 ರಲ್ಲಿ ಸ್ಕಂದ ಅಶೋಕ್ ‘ಟೈಮ್ಸ್ ಮೋಸ್ಟ್ ಡಿಸೈರಬಲ್ ಮೆನ್ ಆನ್ ಟೆಲಿವಿಷನ್’ ಲಿಸ್ಟ್ ನಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದರು.

Advertisement


ಮೂಲತಃ ಚಿಕ್ಕಮಗಳೂರಿನವರಾದ ಸ್ಕಂದ ಅಶೋಕ್ ಕಿರುತೆರೆಗೆ ಬರುವ ಮೊದಲೇ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ್ದರು. ಆದರೆ ಅವರಿಗೆ ಹೆಸರು ತಂದುಕೊಟ್ಟಿದ್ದು ಮಾತ್ರ ರಾಧಾ ರಮಣ ಧಾರಾವಾಹಿ. ಕನ್ನಡದಲ್ಲಿ ಪ್ರಿಯಾಮಣಿ ಜೊತೆ ‘ಚಾರುಲತಾ’ ಸಿನಿಮಾ, ಯೂಟರ್ನ್, ಕಾನೂರಾಯಣ, ರಣರಂಗ, ರಾಧಿಕಾ ಕುಮಾರಸ್ವಾಮಿ ಅವರೊಂದಿಗೆ ‘ಭೈರಾದೇವಿ’ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಅಲ್ಲದೆ, ತಮಿಳು, ತೆಲುಗು, ಮಲಯಾಳಂ, ಹಿಂದಿ ಸಿನಿಮಾಗಳಲ್ಲಿಯೂ ಸ್ಕಂದ ಅಶೋಕ್ ಅಭಿನಯಿಸಿದ್ದಾರೆ.

Advertisement
Share this on...