ಪವರ್ ಸ್ಟಾರ್ ಸಿನಿಮಾದಲ್ಲಿ ಕಾಣಿಸಿಕೊಂಡ ರಾಧಾ ರಮಣ ಧಾರಾವಾಹಿಯ ನಾಯಕಿ “ಶ್ವೇತಾ ಪ್ರಸಾದ್”.

in ಮನರಂಜನೆ/ಸಿನಿಮಾ 4,112 views

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಬಹು ನಿರೀಕ್ಷಿತ ಸಿನಿಮಾ ಯುವರತ್ನ ಒಂದಲ್ಲ ಒಂದು ವಿಷಯದಿಂದ ಸಕತ್ ಸುದ್ದಿಯಲ್ಲಿದೆ. ಈಗಾಗಲೇ ಸಿನಿಮಾದ ಹಾಡುಗಳು ಸಕತ್ ಫೇಮಸ್ ಆಗಿದ್ದು , ಸಿನಿಮಾ ರಿಲೀಸ್ ಆಗಲು ರೆಡಿಯಾಗುತ್ತಿದೆ. ಈಗ ಸಿನಿಮಾದ ಪ್ರಮೋಷನ್ ಕೆಲಸಗಳು ನಡೆಯುತ್ತಿದ್ದು , ಸದ್ಯಕ್ಕೆ ಚಿತ್ರತಂಡದಿಂದ 3 ಹಾಡುಗಳು ಮತ್ತು ಸಿನಿಮಾದ ಟೀಸರ್ ರಿಲೀಸ್ ಆಗಿವೆ. ಇದಿಷ್ಟು ವಿಷಯಗಳು ಅಭಿಮಾನಿಗಳ ನಿರೀಕ್ಷೆಯನ್ನು ಇನ್ನಷ್ಟು ಹೆಚ್ಚಿಸಿದೆ. ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗುತ್ತಿದ್ದ ‘ ರಾಧಾ ರಮಣ ‘ ಧಾರಾವಾಹಿಯ ಮೂಲಕ ಗುರುತಿಸಿಕೊಂಡಿದ್ದ ಶ್ವೇತಾ ಪ್ರಸಾದ್ ಈಗ ದೊಡ್ಮನೆ ಹುಡುಗ ಪುನೀತ್ ನಾಯಕ ನಟನಾಗಿ ಕಾಣಿಸಿಕೊಳ್ಳುತ್ತಿರುವ ಸಿನಿಮಾದ ಒಂದು ಭಾಗವಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ದೊಡ್ಡ ತಾರಾ ಬಳಗ ಹೊಂದಿರುವ ಈ ಚಿತ್ರತಂಡಕ್ಕೆ ಇನ್ನೋರ್ವ ಹೊಸ ನಟಿ ಸೇರ್ಪಡೆ ಆಗಿದ್ದಾರೆ. ಅಷ್ಟಕ್ಕೂ ಶ್ವೇತಾ ಯಾವ ಪಾತ್ರಕ್ಕೆ ಜೀವ ತುಂಬಲಿದ್ದಾರೆ ಅಂತಾ ನೀವು ಯೋಚ್ನೆ ಮಾಡ್ತೀರಬಹುದು. ಆದರೆ ಶ್ವೇತಾ ಪರದೆಯ ಮೇಲೆ ಕಾಣಿಸಿಕೊಳ್ಳುತ್ತಿಲ್ಲ. ಬದಲಾಗಿ ಅವರ ಧ್ವನಿ ಮಾತ್ರ ತೆರೆ ಮೇಲೆ ಕೇಳಿಸಲಿದೆ. ಏನಿದು ? ಧ್ವನಿ ಮಾತ್ರ ಕೇಳೋದಾ? ಒಂದು ಅರ್ಥ ಆಗ್ತಿಲ್ಲ ಅಂತೀರಾ ? ಜಾಸ್ತಿ ಯೋಚ್ನೆ ಮಾಡಬೇಡಿ.

Advertisement


ಶ್ವೇತಾ ಪ್ರಸಾದ್ ಸಿನಿಮಾದಲ್ಲಿ ಯಾವುದೇ ಪಾತ್ರಕ್ಕೂ ಬಣ್ಣ ಹಚ್ಚುತ್ತಿಲ್ಲ ಬದಲಾಗಿ ಯುವರತ್ನ ಸಿನಿಮಾದ ನಾಯಕಿ ಸಾಯೇಶಾ ಪಾತ್ರಕ್ಕೆ ಧ್ವನಿ ನೀಡಿದ್ದಾರೆ. ಇದೇ ಮೊದಲ ಬಾರಿಗೆ ಶ್ವೇತಾ ಧ್ವನಿ ನೀಡಿದ್ದು , ಹೊಸ ಅನುಭವ ಎಂದಿದ್ದಾರೆ. ಪುನೀತ್ ರಾಜ್ ಕುಮಾರ್ ಸಿನಿಮಾದ ಮೂಲಕ ಡಬ್ಬಿಂಗ್ ಆರ್ಟಿಸ್ಟ್ ಆಗಿ ಗುರುತಿಸಿಕೊಂಡಿದ್ದಾರೆ. ಸಿನಿಮಾದ ನಾಯಕಿ  ಇದೇ ಮೊದಲ ಬಾರಿಗೆ ಕನ್ನಡ ಸಿನಿಮಾದಲ್ಲಿ ಅಭಿನಯಿಸುತ್ತಿದ್ದು , ಅವರ ಧ್ವನಿಯಾಗಿ ಶ್ವೇತಾ ಅವರ ಧ್ವನಿ ಕೇಳಿಸುತ್ತದೆ. ಕಿರುತೆರೆಯ ರಾಧಾ ರಮಣ ಧಾರಾವಾಹಿಯಲ್ಲಿನ ನಟನೆಯ ನಂತರ ಶ್ವೇತಾ ಪ್ರಸಾದ್ ಬೇರೆ ಯಾವುದೇ ಕಿರುತೆರೆ ಧಾರಾವಾಹಿಯಲ್ಲಿ ಕಾಣಿಸಿಕೊಂಡಿಲ್ಲ.

Advertisement

ತುಂಬಾ ಗ್ಯಾಪ್ ನಂತರ ಈಗ ಡಬ್ಬಿಂಗ್ ಲೋಕಕ್ಕೆ ಗ್ರಾಂಡ್ ಎಂಟ್ರಿ ನೀಡಿದ್ದಾರೆ. ” ಯುವರತ್ನ ” ಸಿನಿಮಾ ಏಪ್ರಿಲ್ 1 ರಲ್ಲಿ ಸಿನಿ ಪ್ರಿಯರೆದುರು ತೆರೆ ಮೇಲೆ ಅಬ್ಬರಿಸಲಿದೆ. ಕನ್ನಡದಲ್ಲಿ ಮಾತ್ರವಲ್ಲದೇ ತೆಲುಗು ಭಾಷೆಯಲ್ಲೂ ಕೂಡ ರಿಲೀಸ್ ಮಾಡಲು ಚಿತ್ರತಂಡ ಪ್ಲಾನ್ ಮಾಡಿಕೊಂಡಿದೆ. ಪ್ರಕಾಶ್ ರೈ , ಧನಂಜಯ್ , ದಿಗಂತ್ ಸೇರಿದಂತೆ ಇನ್ನೂ ದೊಡ್ಡ ತಾರಾ ಬಳಗವಿದೆ ಈ ಸಿನಿಮಾದಲ್ಲಿ. ನಟನೆಯ ಮೂಲಕ ಬಹಳ ಅಭಿಮಾನಿಗಳನ್ನು ಗಳಿಸಿಕೊಂಡಿದ್ದ , ಶ್ವೇತಾ ಈಗ ಧ್ವನಿಯ ಮೂಲಕ ಹೇಗೆ ಮೋಡಿ ಮಾಡಲಿದ್ದಾರೆ ನೋಡಬೇಕಿದೆ. ಇನ್ನೂ ಮುಂದೆ ನಟನೆಯ ಜೊತೆಗೆ ಡಬ್ಬಿಂಗ್ ಆರ್ಟಿಸ್ಟ್ ಆಗಿ ಕೂಡ ಅವರ ಪಯಣ ಸಾಗುತ್ತದೇಯ ಕಾದು ನೋಡಬೇಕಿದೆ ಅಷ್ಟೇ.

Advertisement
Advertisement

Advertisement