ಲಾಕ್ ಡೌನ್ ಸಮಯದಲ್ಲಿ ಗಮನಿಸಿದ ಒಳ್ಳೆಯ ವಿಚಾರವನ್ನ ರಿವಿಲ್ ಮಾಡಿದ ರಾಧಿಕಾ…!

in ಸಿನಿಮಾ 165 views

ಸ್ಯಾಂಡಲ್ ವುಡ್ ನಟಿ ರಾಧಿಕಾ ಪಂಡಿತ್ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುತ್ತಾರೆ. ಒಂದಲ್ಲ ಒಂದು ಫೋಟೋ ವಿಡಿಯೋಗಳನ್ನ ಶೇರ್ ಮಾಡುತ್ತಿರುತ್ತಾರೆ. ಇದೀಗ ಲಾಕ್ ಡೌನ್ ಸಮಯದಲ್ಲಿ ತಾವು ಗಮನಿಸಿದ ಒಳ್ಳೆಯ ವಿಷಯವೊಂದನ್ನ ಶೇರ್ ಮಾಡಿಕೊಂಡಿದ್ದಾರೆ. ಕೊರೋನಾದಿಂದ ಇಡೀ ದೇಶವೇ ಲಾಕ್ ಡೌನ್ ಆಗಿದೆ. ಹೀಗಾಗಿ ಯಾರೂ ಕೂಡ ಮನೆಯಿಂದ ಹೊರಬರುತ್ತಿಲ್ಲ. ನಟ-ನಟಿಯರು ಕೂಡ ತಮ್ಮ ಕುಟುಂಬದವರ ಜೊತೆ ಸಮಯ ಕಳೆಯುತ್ತಿದ್ದಾರೆ. ಜನರು ಕೂಡ ಮನೆಯಲ್ಲಿದ್ದು ಬೇಸರವಾದಾಗ ಮನೆಯ ಟೆರೇಸ್ ಮತ್ತು ಬಾಲ್ಕನಿಗಳಿಗೆ ಬಂದು ಕುಟುಂಬದವರೊಂದಿಗೆ ಕಾಲಕಳೆಯುತ್ತಿದ್ದಾರೆ. ಇದನ್ನ ಗಮನಿಸಿದ ರಾಧಿಕಾರವರು ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ ರಾಧಿಕಾ ಪಂಡಿತ್ ತಮ್ಮ ಮನೆಯ ಬಾಲ್ಕನಿಯಲ್ಲಿ ನಿಂತುಕೊಂಡಿರುವ ಫೋಟೋವೊಂದನ್ನ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಆ ಫೋಟೋಗೆ ಈ ಲಾಕ್ ಡೌನ್ ಸಮಯದಲ್ಲಿ ನಾನು ಗಮನಿಸಿದ ಒಳ್ಳೆಯ ವಿಷಯವೇನೆಂದರೆ ಅನೇಕ ಜನರು ತಮ್ಮ ಮನೆಯಿಂದ ಹೊರಬಂದು ತಮ್ಮ ಮನೆಯ ಟೆರೆಸ್ ಮತ್ತು ಬಾಲ್ಕನಿಗಳಲ್ಲಿ ಸಮಯ ಕಳೆಯುತ್ತಿದ್ದಾರೆ.

Advertisement

 

Advertisement

 

Advertisement

Advertisement

ಒಂದು ವೇಳೆ ಈ ಲಾಕ್ ಡೌನ್ ಇಲ್ಲದೆ ಹೋಗಿದ್ದರೆ ಟೆರೆಸ್ ಮತ್ತು ಬಾಲ್ಕನಿಗಳನ್ನ ಜನರು ನಿರ್ಲಕ್ಷ ಮಾಡ್ತಾ ಇದ್ದರು ಅಂತ ಬರೆದುಕೊಂಡಿದ್ದಾರೆ. ಕಳೆದ ವರ್ಷ ರಾಧಿಕಾರವರು ತಮ್ಮ ಮನೆಯ ಬಾಲ್ಕನಿಯಲ್ಲಿ ಮಾತನಾಡುತ್ತಿದ್ದಾಗ ಕ್ಲಿಕ್ಕಿಸಿದ ಫೋಟೋ ಇದಾಗಿದೆ. ಇತ್ತೀಚಿಗಷ್ಟೇ ರಾಧಿಕಾರವರು ತಮ್ಮ ಮಕ್ಕಳನ್ನ ಹೇಗೆ ನೋಡಿಕೊಳ್ಳುತ್ತಿದ್ದೇನೆ ಎಂಬುದನ್ನ ಸೋಶಿಯಲ್ ಮೀಡಿಯಾದಲ್ಲಿ ತಿಳಿಸಿದ್ದರು. ರಾಧಿಕಾ ಪಂಡಿತ್ ರವರಿಗೆ ಇಬ್ಬರು ಮಕ್ಕಳು. ಹೀಗಾಗಿ ತಮ್ಮ ಮಕ್ಕಳ ಜೊತೆ ಮನೆಯಲ್ಲಿ ಖುಷಿಯಿಂದ ಕಾಲಕಳೆಯುತ್ತಿದ್ದಾರೆ. ಕೆಲವರಿಗೆ ಒಂದು ಮಗುವನ್ನ ನೋಡಿಕೊಳ್ಳುವುದೇ ಕಷ್ಟವೆನಿಸುತ್ತದೆ. ಆದರೆ ರಾಧಿಕಾರವರು ಇಬ್ಬರು ಪುಟ್ಟ ಮಕ್ಕಳನ್ನ ನೋಡಿಕೊಳ್ಳುತ್ತಿದ್ದಾರೆ. ಹೀಗಾಗಿ ಈ ಬಗ್ಗೆ ಸ್ವತಃ ರಾಧಿಕಾರವರೇ ತಮ್ಮ ಮಕ್ಕಳನ್ನ ಹೇಗೆ ನೋಡಿಕೊಳ್ಳುತ್ತಿದ್ದೇನೆ ಎಂಬುದನ್ನು ಸೋಶಿಯಲ್ ಮೀಡಿಯಾದಲ್ಲಿ ತಿಳಿಸಿದ್ದರು.

ರಾಧಿಕಾ ತಮ್ಮ ಅಪ್ಪ-ಅಮ್ಮ ಐರಾಳನ್ನ ಎತ್ತಿಕೊಂಡಿರುವ ಫೋಟೋವನ್ನ ಶೇರ್ ಮಾಡಿದ್ದರು. ಅದಕ್ಕೆ ನಾನು ಇಬ್ಬರು ಮಕ್ಕಳನ್ನ ನೋಡಿಕೊಳ್ಳುವ ಜವಾಬ್ದಾರಿಯನ್ನ ಹೇಗೆ ನಿರ್ವಹಿಸುತ್ತಿದ್ದೇನೆ ಎಂಬ ಬಗ್ಗೆ ಹಲವರು ಕುತೂಹಲ ಹೊಂದಿದ್ದಾರೆ ಎಂಬುದು ನನಗೆ ತಿಳಿದಿದೆ. ಈ ಫೋಟೋದಲ್ಲಿರುವ ಇಬ್ಬರನ್ನ ನೋಡಿ ಇವರೇ ನನ್ನ ಸೀಕ್ರೆಟ್. ಇವರಿಂದ ನಾನು ವಿಶ್ರಾಂತಿ ಪಡೆಯುತ್ತೇನೆ ಎಂದಿದ್ದರು. ಅಲ್ಲದೆ ಐರಾ ಮತ್ತು ಜೂನಿಯರ್ ಯಶ್ ಇವರಿಲ್ಲದೆ ಇರಲು ಸಾಧ್ಯವಿಲ್ಲ. ಅವರು ನನಗೆ ಮಮ್ಮಿ, ಪಪ್ಪ ಆದರೆ ಐರಾ ಮತ್ತು ಜೂನಿಯರ್ ಯಶ್ ಗೆ ಮಿಮ್ಮಿ ಮತ್ತು ಅಜ್ಜ ಆಗಿದ್ದಾರೆ. ಐರಾ ತಮ್ಮ ಅಮ್ಮಮ್ಮನನ್ನ ಮಿಮ್ಮಿ ಎಂದು ಕರೆಯುತ್ತಾಳೆ. ಏಕೆಂದರೆ ನಾನು ಅಮ್ಮನನ್ನ ಮಮ್ಮಿ ಎಂದು ಕರೆಯುತ್ತೇನೆ ಅದನ್ನ ಕೇಳಿಸಿಕೊಂಡು ಐರಾ ಮಿಮ್ಮಿಯೆಂದು ಕರೆಯುತ್ತಾಳೆ ಎಂದು ಬರೆದುಕೊಂಡಿದ್ದರು.

– ಸುಷ್ಮಿತಾ

Advertisement
Share this on...