ಮತ್ತೊಮ್ಮೆ ಮಾನವೀಯತೆ ಮೆರೆದ ನಟ ರಾಘವ, ಅಡ್ವಾನ್ಸ್ ಆಗಿ ಬಂದಿದ್ದ 3 ಕೋಟಿ, ದೇಣಿಗೆ…!

in News 57 views

ಮಹಾಮಾರಿ ಕೊರೊನಾ ವೈರಸ್ ವಿರುದ್ಧ ಹೋರಾಡಲು ಈಗಾಗಲೇ ಅನೇಕ ನಟ-ನಟಿಯರು ಹಣದ ಸಹಾಯವನ್ನ ಮಾಡಿದ್ದಾರೆ. ಇದೀಗ ನೃತ್ಯ ನಿರ್ದೇಶಕ, ರಾಘವ್ ಲಾರೆನ್ಸ್ ಕೋವಿಡ್-19 ವಿರುದ್ಧ ಹೋರಾಟಕ್ಕೆ ಸಹಾಯ ಹಸ್ತವನ್ನ ಚಾಚಿದ್ದಾರೆ. ರಾಘವ ಲಾರೆನ್ಸ್ ಅವರು ಡ್ಯಾನ್ಸರ್ ಆಗಿ ಸಿನಿಮಾ ರಂಗಕ್ಕೆ ಬಂದರು. ಬಳಿಕ ಡ್ಯಾನ್ಸ್ ನಿರ್ದೇಶಕನಾಗಿಯೂ, ನಟನಾಗಿಯೂ ಸಿನಿಮಾದಲ್ಲಿ ಮಿಂಚಿದ್ದಾರೆ.

Advertisement

 

Advertisement

Advertisement

 

Advertisement

ಸಿನಿಮಾರಂಗದಲ್ಲಿ ಮಾತ್ರವಲ್ಲದೆ ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುತ್ತಿರುತ್ತಾರೆ. ರಾಘವರವರು ಲಾರೆನ್ಸ್ ಎಂಬ ಟ್ರಸ್ಟ್ ಅನ್ನ ನಡೆಸುತ್ತಿದ್ದಾರೆ. ಈ ಲಾರೆನ್ಸ್ ಚಾರಿಟೇಬಲ್ ಟ್ರಸ್ಟ್ ಎಜುಕೇಷನ್ ನಲ್ಲಿ ಮಕ್ಕಳಿಗೆ ಮನೆ ಹಾಗೂ ಅಂಗವಿಕಲ ಡ್ಯಾನ್ಸರ್ ಗಳಿಗೆ ವೈದ್ಯಕೀಯ ಸೌಲಭ್ಯ ಹೀಗೆ ವಿಭಿನ್ನ ಸಮಾಜಮುಖಿ ಕೆಲಸ ಹಾಗೂ ಕಾರ್ಯಗಳನ್ನ ಮಾಡುತ್ತಿದ್ದಾರೆ. ಈ ಟ್ರಸ್ಟ್ ಈಗ.15ನೇ ವರ್ಷಕ್ಕೆ ಕಾಲಿಡುತ್ತಿದೆ. ಇದನ್ನ ಸಂಭ್ರಮಿಸಲು ಮಂಗಳಮುಖಿಯರಿಗಾಗಿ ಮನೆ ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಈಗಾಗಲೇ ಟ್ರಸ್ಟ್ ಮೂಲಕ ಮಂಗಳಮುಖಿಯರಿಗಾಗಿ ಮನೆ ಕಟ್ಟಲು ಭೂಮಿಯನ್ನ ನೀಡಿದ್ದಾರೆ. ಇಷ್ಟೆಲ್ಲಾ ಸಮಾಜಮುಖಿ ಕೆಲಸವನ್ನ ಮಾಡುತ್ತಿರುವ ರಾಘವ ಈಗ ಕೊರೋನಾ ಪರಿಹಾರ ನಿಧಿಗೆ ದೇಣಿಗೆ ನೀಡಿದ್ದಾರೆ.

 

 

ನಟ ರಾಘವ್ ಲಾರೆನ್ಸ್ ಕೋರೋನಾ ವಿರುದ್ಧ ಹೋರಾಡಲು ತಮಗೆ ಅಡ್ವಾನ್ಸ್ ಆಗಿ ಬಂದಿದ್ದ 3 ಕೋಟಿ ಹಣವನ್ನ ದೇಣಿಗೆಯಾಗಿ ನೀಡಿದ್ದಾರೆ. ನಟ ರಾಘವ್ ಲಾರೆನ್ಸ್ ಗೆ ಸೂಪರ್ ಸ್ಟಾರ್ ರಜನಿಕಾಂತ್ ರವರ ಸಿನಿಮಾದಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿದೆ. ರಾಘವ್ ಚಂದ್ರಮುಖಿ-2 ಸಿನಿಮಾದಲ್ಲಿ ರಜನಿಕಾಂತ್ ಜೊತೆ ನಟಿಸುತ್ತಿದ್ದಾರೆ. ಈ ಸಿನಿಮಾಗೆ ಅಡ್ವಾನ್ಸ್ ರೂಪದಲ್ಲಿ ರಾಘವ್ ಲಾರೆನ್ಸ್ ಗೆ 3 ಕೋಟಿ ಹಣವನ್ನ ನೀಡಲಾಗಿತ್ತು. ಇದೀಗ ಅದೇ ಹಣವನ್ನ ರಾಘವ್ ಕೋರೊನಾ ವಿರುದ್ದದ ಹೋರಾಟಕ್ಕೆ ದೇಣಿಗೆಯಾಗಿ ನೀಡಿದ್ದಾರೆ. ಈ ಬಗ್ಗೆ ರಾಘವ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.

 

 

ಸ್ನೇಹಿತರು ಮತ್ತು ಅಭಿಮಾನಿಗಳಿಗೆ ನಮಸ್ಕಾರ. ನಿಮ್ಮೆಲ್ಲರೊಂದಿಗೆ ಸಂತೋಷ ಸುದ್ದಿ ಹಂಚಿಕೊಳ್ಳಲು ನಾನು ಬಯಸುತ್ತೇನೆ. ನನ್ನ ಮುಂದಿನ ಪ್ರಾಜೆಕ್ಟ್ ನಲ್ಲಿ ರಜನಿಕಾಂತ್ ರವರ ಚಂದ್ರಮುಖಿ-2 ಸಿನಿಮಾದಲ್ಲಿ ಅಭಿನಯಿಸುತ್ತಿದ್ದೀನಿ. ಈ ಸಿನಿಮಾವನ್ನ ಪಿ.ವಾಸು ಸರ್ ನಿರ್ದೇಶಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿರುವುದು ನನ್ನ ಅದೃಷ್ಟ ಹೀಗಾಗಿ ಈ ಸಿನಿಮಾಗಾಗಿ ಮುಂಗುಡವಾಗಿ ಪಡೆದುಕೊಂಡಿರುವ 3 ಕೋಟಿ ಹಣವನ್ನ ಕೋರೊನಾ ವೈರಸ್ ಪರಿಹಾರ ನಿಧಿಗೆ ನೀಡುತ್ತಿದ್ದೇನೆ ಅಂತ ಹೇಳಿದ್ದಾರೆ.

 

 

ಪಿ.ಎಂ. ಕೇರ್ಸ್ ನಿಧಿಗೆ 50 ಲಕ್ಷ, ತಮಿಳುನಾಡಿನ ಸಿ.ಎಂ ಪರಿಹಾರ ನಿಧಿಗೆ 50 ಲಕ್ಷ, ಸಿನಿಮಾ ಒಕ್ಕೂಟಕ್ಕೆ 50 ಲಕ್ಷ, ನನ್ನ ಡ್ಯಾನ್ಸರ್ಸ್ ಒಕ್ಕೂಟಕ್ಕೆ 50 ಲಕ್ಷ, ಅಂಗಮಕ್ಕಳ ಕಲ್ಯಾಣ ನಿಧಿಗೆ 25 ಲಕ್ಷ ಮತ್ತು ನನ್ನ ಹುಟ್ಟೂರು ರಾಯಪುರಂ ದೇಸಿಯನಗರಕ್ಕೆ 75 ಲಕ್ಷ ಹಣವನ್ನ ನೀಡಲು ಬಯಸುತ್ತೇನೆ. ಈ ಹಣದಿಂದ ಅಲ್ಲಿನ ದೈನಂದಿನ ಕಾರ್ಮಿಕರಿಗೆ, ಬಡವರಿಗೆ, ನಿರ್ಗತಿಕರಿಗೆ, ಅಗತ್ಯವಾದ ಆಹಾರ ಪದಾರ್ಥಗಳನ್ನ ಪೊಲೀಸರ ಸಹಾಯದಿಂದ ತಲುಪಿಸಲಾಗುವುದು ಅಂತ ಬರೆದುಕೊಂಡಿದ್ದಾರೆ.

 

ಬಾಲಿವುಡ್ ಕಿಲಾಡಿ ಅಕ್ಷಯ್ ಕುಮಾರ್ ರವರು ಮಂಗಳಮುಖಿಯರ ಮನೆ ನಿರ್ಮಾಣಕ್ಕೆ ಒಂದುವರೆ ಕೋಟಿ ರೂಪಾಯಿ ದಾನ ಮಾಡಿದ್ದಾರೆ. ಈ ಬಗ್ಗೆ ನಿರ್ದೇಶಕ ರಾಘವ್ ಲಾರೆನ್ಸ್ ಫೇಸ್ಬುಕ್ನಲ್ಲಿ ಪೋಸ್ಟ್ ಮಾಡುವ ಮೂಲಕ ಅಭಿಮಾನಿಗಳಿಗೆ ತಿಳಿಸಿದರು. ಲಕ್ಷ್ಮೀಬಾಂಬ್ ಚಿತ್ರದ ಶೂಟಿಂಗ್ ವೇಳೆ ಅಕ್ಷಯ್ ಅವರ ಬಳಿ ತಮ್ಮ ಟ್ರಸ್ಟ್ ಹಾಗೂ ಮಂಗಳಮುಖಿಯರಿಗಾಗಿ ಮನೆ ನಿರ್ಮಿಸುತ್ತಿರುವ ವಿಷಯವನ್ನು ತಿಳಿಸಿದೆ. ಇದನ್ನು ಕೇಳಿದ ತಕ್ಷಣ ಅಕ್ಷಯ್ ರವರು ಮಂಗಳಮುಖಿಯರ ಮನೆ ನಿರ್ಮಾಣಕ್ಕಾಗಿ ಒಂದುವರೆ ಕೋಟಿ ರೂಪಾಯಿ ದಾನ ಮಾಡಿದ್ದಾರೆ. ದೇವರಂತೆ ಸಹಾಯ ಮಾಡುವುದನ್ನು ನಾನು ಪರಿಗಣಿಸುತ್ತೇನೆ. ಈಗ ಅಕ್ಷಯ್ ರವರು ನಮ್ಮಗೆ ದೇವರಂತೆ ಅವರ ಬೆಂಬಲಕ್ಕೆ ನಾನು ಧನ್ಯವಾದ ತಿಳಿಸುತ್ತೇನೆ. ಎಲ್ಲಾ ಮಂಗಳಮುಖಿಯರ ಪರವಾಗಿ ನಾನು ಅಕ್ಷಯ್ ರವರಿಗೆ ಧನ್ಯವಾದ ತಿಳಿಸುತ್ತೇನೆ. ಅತಿ ಶೀಘ್ರದಲ್ಲೇ ಭೂಮಿ ಪೂಜೆ ಡೇಟ್ ಅನೌನ್ಸ್ ಮಾಡುತ್ತೇನೆ ಎಂದು ಬರೆದು ಪೋಸ್ಟ್ ಮಾಡಿದರು.

– ಸುಷ್ಮಿತಾ

Advertisement
Share this on...