ರಾಘವ ಲಾರೆನ್ಸ್ ಅನಾಥಾಶ್ರಮದ ಮಕ್ಕಳಿಗೂ ತಾಕಿತಾ ಕೊರೊನಾ…ಈ ಬಗ್ಗೆ ರಾಘವ ಏನು ಹೇಳ್ತಾರೆ…?

in News 53 views

ಈ ಕೊರೊನಾ ಎಂಬ ರಾಕ್ಷಸ ಭಾರತಕ್ಕೆ ಕಾಲಿಟ್ಟಿದ್ದೇ ಇಟ್ಟದ್ದು ಲಕ್ಷಾಂತರ ಮಂದಿಗೆ ಈ ವೈರಸ್ ಅಟ್ಯಾಕ್ ಆಗಿ ಕಷ್ಟಪಡುತ್ತಿದ್ದಾರೆ. ಒಬ್ಬರಿಗೆ ಒಂದು ವಾಸಿಯಾದರೆ ಸರಿ, ಆದರೆ ಇದು ಒಬ್ಬರಿಂದ ಒಬ್ಬರಿಗೆ ಹರಡುವ ಮಾರಕ ವೈರಸ್. ಸಾಕಷ್ಟು ಜನರು ಇದುವರೆಗೂ ಕೊರೊನಾದಿಂದ ಪ್ರಾಣ ಕಳೆದುಕೊಂಡಿದ್ದಾರೆ. ಈ ಮಾರಣಾಂತಿಕ ವೈರಸ್​​​​​ಗೆ ಸಾಮಾನ್ಯ ಜನರು, ಸೆಲಬ್ರಿಟಿಗಳು, ಬಡವರು, ಶ್ರೀಮಂತರು, ಪುಟ್ಟ ಮಕ್ಕಳು, ವೃದ್ಧರು ಎಂಬುದಿಲ್ಲ.ನಿನ್ನೆಯಷ್ಟೇ ಬಾಲಿವುಡ್ ಸಂಗೀತ ನಿರ್ದೇಶಕ ವಾಜಿದ್ ಖಾನ್ ಕೊರೊನಾದಿಂದ ಮೃತಪಟ್ಟಿದ್ದರು. ಇನ್ನು ತಮಿಳು ನಟ ರಾಘವ ಲಾರೆನ್ಸ್ ನಡೆಸುತ್ತಿರುವ ಅನಾಥಾಶ್ರಮದ ಮಕ್ಕಳಿಗೂ ಈ ವೈರಸ್ ತಗುಲಿದೆ. ನಟ, ನೃತ್ಯ ನಿರ್ದೇಶಕ, ನಿರ್ದೇಶಕನಾಗಿ ಹೆಸರು ಮಾಡಿರುವ ರಾಘವ ಲಾರೆನ್ಸ್​​​​ ಸಮಾಜಸೇವೆಯಲ್ಲೂ ಮುಂದಿದ್ದಾರೆ. ಅನಾಥರು ಕಷ್ಟ ಪಡಬಾರದು ಎಂಬ ಉದ್ಧೇಶಕ್ಕೆ ಸ್ವಂತ ಹಣದಲ್ಲಿ ಅನಾಥಾಶ್ರಮ ಕಟ್ಟಿದ್ದಾರೆ. ಆದರೆ ಈ ಅನಾಥಾಶ್ರಮದ ಮಕ್ಕಳಿಗೂ ಕೊರೊನಾ ದೃಢವಾಗಿದೆ. ಅಲ್ಲಿನ ಕೆಲವೊಂದು ಸಿಬ್ಬಂದಿಗಳಿಗೂ ವೈರಸ್ ಹಬ್ಬಿದೆ.

Advertisement

Advertisement

ಆರಂಭದಲ್ಲಿ ಇದು ಗಾಳಿಸುದ್ದಿ ಎನ್ನಲಾಗಿತ್ತು. ಆದರೆ ಈ ಬಗ್ಗೆ ರಾಘವ ಲಾರೆನ್ಸ್ ಅಧಿಕೃತವಾಗಿ ಹೇಳಿಕೆ ನೀಡಿದ್ದು ಸೋಷಿಯಲ್ ಮೀಡಿಯಾದಲ್ಲಿ ಮಕ್ಕಳಿಗೆ ಕೊರೊನಾ ಇರುವ ವಿಚಾರ ನಿಜ ಎಂಬ ವಿಚಾರವನ್ನು ಹಂಚಿಕೊಂಡಿದ್ದಾರೆ. ‘ ಅನಾಥಾಶ್ರಮದ 18 ಮಕ್ಕಳಿಗೆ ಕೊರೊನಾ ವೈರಸ್​​​ ಧೃಡಪಟ್ಟಿದೆ. ಮಕ್ಕಳೊಂದಿಗೆ ಮೂವರು ಸಿಬ್ಬಂದಿಗೂ ಸೋಂಕು ತಗುಲಿದೆ. ಈ ಮೂವರಲ್ಲಿ ಇಬ್ಬರು ಅಂಗವಿಕಲರು’ ಎಂದು ಹೇಳಿಕೊಂಡಿದ್ದಾರೆ.

Advertisement

 

Advertisement

ಕಳೆದ ವಾರ ಮಕ್ಕಳಿಗೆ ಕೊರೊನಾ ಗುಣಲಕ್ಷಣಗಳು ಕಂಡುಬಂದಿದ್ದರಿಂದ ಅವರಿಗೆಲ್ಲಾ ಪರೀಕ್ಷೆ ನಡೆಸಲಾಯ್ತು. ಈ ಪರೀಕ್ಷೆಯಲ್ಲಿ ಸೋಂಕು ಇರುವುದು ದೃಢಪಟ್ಟಿದೆ. ಸದ್ಯಕ್ಕೆ ಎಲ್ಲರಿಗೂ ಚಿಕಿತ್ಸೆ ನೀಡಲಾಗುತ್ತಿದೆ. ವೈದ್ಯರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ. ಎಲ್ಲರೂ ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿರುವುದಾಗಿ ವೈದ್ಯರು ಮಾಹಿತಿ ನೀಡಿದ್ದಾರೆ. ನಾನು ಮಾಡಿದ ಸಮಾಜ ಸೇವೆಯೇ ಮಕ್ಕಳನ್ನು ಉಳಿಸುತ್ತದೆ ಎಂಬ ನಂಬಿಕೆ ನನಗೆ ಇದೆ ಎಂದು ರಾಘವ ಲಾರೆನ್ಸ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ

Advertisement
Share this on...