ರಾಘವೇಂದ್ರ ರಾಜ್ ಕುಮಾರ್ ಅವರು ಶಿವಣ್ಣ ಮಗಳ ವಿಚಾರದಲ್ಲಿ ಭಾವುಕರಾಗಿದ್ದು ಹೀಗೆ !

in ಮನರಂಜನೆ/ಸಿನಿಮಾ 597 views

ತಮ್ಮಗೆಲ್ಲರಿಗೂ ತಿಳಿದಿರುವ ಹಾಗೆ ಕನ್ನಡ ಕುವರ, ಅಭಿಮಾನಿಗಳನ್ನು ದೇವರು ಎಂದು ಕರೆದ ಕಲಾದೇವಿಯ ಪುತ್ರ ಮಾಡಿದಂತಹ ಸಿನಿಮಾಗಳು, ಬದುಕಿದ ಪರಿ ಇಂದಿಗೂ ಕೂಡ ಪ್ರತಿಯೊಬ್ಬರಿಗು ಸ್ಪೂರ್ತಿದಾಯಕವಾಗಿದೆ. ಅವರ ತ್ರೀವೇಣಿ ರತ್ನಗಳಾದ ಮೂವರು ಗಂಡು ಮಕ್ಕಳು ಅಪ್ಪನ ಹಾದಿಯಲ್ಲಿಯೇ ನಡೆಯುತ್ತಿದ್ದು, ಅಪ್ಪನ ಹೆಸರನ್ನು  ಇಂದಿಗೂ ಕೂಡ ಜೀವಂತ ಮಾಡಿದ್ದಾರೆ. ಚಂದನವನದ ದೊಡ್ಮನೆ ಎಂದೇ ಕರೆಯಲ್ಪಡುವ ಅಪ್ಪಾಜಿ ಅವರ ಕುಟುಂಬ ಅದೆಷ್ಟೋ ವಿಚಾರಗಳಿಂದ ಜನರಿಗೆ ಸ್ಪೂರ್ತಿಯಾಗಿದೆ. ಅಪ್ಪಾಜಿ ಅವರಿಗೆ ಅಭಿಮಾನಿ ದೇವರುಗಳು ಯಾವ ರೀತಿ ಗೌರವ ನೀಡುತ್ತಿದ್ದರೋ ಅದೇ ರೀತಿ ಗೌರವವನ್ನು ಮೂವರು ಮಕ್ಕಳಿಗೆ ನೀಡುತ್ತಿದ್ದಾರೆ.ಆ ರೀತಿಯ ಬಾಂಧವ್ಯವನ್ನು ಅಭಿಮಾನಿಗಳೊಂದಿಗೆ ದೊಡ್ಮನೆಯ ಮಕ್ಕಳು ಬೆಳೆಸಿಕೊಂಡಿದ್ದಾರೆ. ಇನ್ನು ಅಪ್ಪಾಜಿ ಅವರ ಕುಟುಂಬದ ಬಗ್ಗೆ ಅಂತೂ ಯಾರು ಬೆರಳು ತೋರಿಸಿ ಮಾತಾಡುವಂತಿಲ್ಲ. ಆ ರೀತಿಯಾಗಿ ಅನ್ಯರಿಗೆ ಮಾದರಿಯಾಗುವಂತೆ ಈ ಸಹೋದರರು ಬಾಳುತ್ತಿದ್ದಾರೆ.

Advertisement

Advertisement

ಹಿರಿಯ ಮಗ ಶಿವಣ್ಣನಿಗೆ ಇಬ್ಬರು ಹೆಣ್ಣು ಮಕ್ಕಳಾದರೆ, ರಾಘಣ್ಣನಿಗೆ ಇಬ್ಬರು ಗಂಡು ಮಕ್ಕಳು ಹಾಗೂ ಅಪ್ಪು ಅವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಇವರು ಅಣ್ಣನ ಮಕ್ಕಳು, ಅವರು ತಮ್ಮನ ಮಕ್ಕಳು ಎಂಬ ಯಾವ ಬೇದಭಾವ ವಿಲ್ಲದೆ ೬ ರತ್ನವನ್ನು ತಮ್ಮ ಸ್ವಂತ ಮಕ್ಕಳಂತೆ ಪ್ರೀತಿಯಿಂದ  ಬೆಳೆಸಿದ್ದಾರೆ. ತಮಗೆಲ್ಲಿರಿಗೂ ತಿಳಿದಿರುವ ಹಾಗೆ ಅಪ್ಪು ಮತ್ತು ಶಿವಣ್ಣನಿಗೆ ಹೋಲಿಸಿದರೆ ರಾಘಣ್ಣ ಅವರು ಬಹಳ ಸೂಕ್ಷ್ಮ ಸ್ವಭಾವದವರು. ಕುಟುಂಬ ಅಂತ ಬಂದಾಗ ಭಾವುಕರಾಗಿಬಿಡುತ್ತಾರೆ. ಅದರಲ್ಲಿಯೂ ಮಕ್ಕಳ ವಿಚಾರದಲ್ಲಂತೂ ಒಂದು ಪಟ್ಟು ಭಾವುಕತನ ಹೆಚ್ಚಾಗೇ ಇರುತ್ತದೆ. ಅವರೊಬ್ಬರು ಸೂಷ್ಮ ಸ್ವಭಾವವುಳ್ಳ ಸರಳ ಜೀವಿ. ಇತ್ತೀಚೆಗಷ್ಟೆ ಶಿವಣ್ಣ ಅವರ ಹಿರಿಯ ಪುತ್ರಿ ನಿವೇದಿತಾ ಅವರ ಹುಟ್ಟು ಹಬ್ಬವಿತ್ತು. ಕುಟುಂಬಸ್ಥರೆಲ್ಲಾ ಸೇರಿ ಮನೆಯ ಹಿರಿಯ ಮಗಳಿಗೆ ಆರೋಗ್ಯ,  ಐಶ್ವರ್ಯ  ಮತ್ತು ಆಯಸ್ಸನ್ನು  ಆ ಭಗವಂತ ನೀಡಲಿ ಎಂದು ಶುಭ ಹಾರೈಸಿದರು.

Advertisement

Advertisement

ಯಾವುದೇ ಕಷ್ಟ ಬಂದರೂ ಅದು ನನಗೆ ಬರಲಿ, ತನ್ನ ಮಕ್ಕಳಿಗೆ ಬೇಡ ಎಂಬ ಮನೋಭಾವವುಳ್ಳ ರಾಘಣ್ಣ ಅವರು, ತಮ್ಮ ಮನೆಯ ಹಿರಿಯ ಪುತ್ರಿಗೆ ತಾವೇ ತಮ್ಮ ಕೈಯಾರೆ ವಿಶೇಷವಾದ ಉಡುಗೊರೆಯನ್ನು ಸಿದ್ಧಪಡಿಸಿದ್ದಾರೆ. ನಿವೇದಿತಾ ಅವರು ಚಿಕ್ಕ ವಯ್ಯಸ್ಸಿನಿಂದ ಹಿಡಿದು ಇಲ್ಲಿಯ ತನಕದ ವಿಶೇಷ ಚಿತ್ರವನ್ನು ಸಂಗ್ರಹಿಸಿ , ಅದನ್ನು ಎಡಿಟ್ ಮಾಡಿಸಿ ಅದನ್ನು ಸಾಮಾಜಿಕ ಜಾಲತಾಣದ ತಮ್ಮ ಖಾತೆಯಲ್ಲಿ ಹಂಚಿಕೊಂಡಿರುವ ಅವರು “ಮಗಳೇ ನಿನಗೆ ಏನೇ ಕಷ್ಟವಿದ್ದರೂ ಅದೆಲ್ಲಾ ನನಗೆ ಬರಲಿ.ನನ್ನ ಎಲ್ಲಾ ಸುಖ ನಿನಗೆ ಇರಲಿ “ಎಂದು ಭಾವುಕರಾಗಿ ಹಾರೈಸಿದ್ದಾರೆ..  ಇನ್ನು ಇತ್ತೀಚಿಗೆ ರಾಘಣ್ಣ ಅವರು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದು ತಮ್ಮ ಜೀವನದ ವಿಶೇಷ ಅನುಭವಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ತಮ್ಮ ಮಗಳಿಗೆ ಶುಭ ಕೋರಿರುವ ಪರಿಯನ್ನು ವೀಕ್ಷಿಸಿದ ನಿವೇದಿತಾ ಅವರು ಕೂಡ ಖುಷಿ ಪಟ್ಟಿದ್ದಾರೆ

Advertisement
Share this on...