ಖ್ಯಾತ ಖಳನಟ ರಘುವರನ್ ತಮ್ಮ ಜೀವನವನ್ನು ತಾವೇ ಹಾಳುಮಾಡಿಕೊಂಡದ್ದು ಹೀಗೆ !?

in ಮನರಂಜನೆ/ಸಿನಿಮಾ 70 views

ಸಿನಿಮಾ ಲೋಕವೇ ಹಾಗೆ ಅದೊಂದು ಮಾಯ ಕನ್ನಡಿಯಂತೆ. ದಶಕಗಳ ಕಾಲ ತೆರೆಯ ಮೇಲೆ ಅಭಿನಯಿಸಿ, ಅಭಿಮಾನಿಗಳನ್ನು ರಂಜಿಸಿ ಸಾಕಷ್ಟು ಹೆಸರು-ಹಣ ಮಾಡಿದ ಅದೆಷ್ಟೋ ನಟ- ನಟಿಯರ ರಿಯಲ್  ಜೀವನ ಮಾತ್ರ ಅದೇಕೋ ಏನೋ ಸೂತ್ರವಿಲ್ಲದ ಗಾಳಿ ಪಟದಂತಾಗಿ ಬಿಟ್ಟಿರುತ್ತದೆ. ಈ ರೀತಿಯಾಗಿ ನಡೆದ ಅದೆಷ್ಟೋ ಉದಾಹರಣೆಗಳು ನಮ್ಮ ಕಣ್ಮುಂದೆ ಇರುತ್ತವೆ. ಅಂತಹ ನಟರ ಸಾಲಲ್ಲಿ ಸೇರಿರುವವರು ದಕ್ಷಿಣ ಭಾರತ ಕಂಡ ಅದ್ಬುತ ಕಲಾವಿದ, ಅಲ್ಲದೇ ಚಿತ್ರರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಿ, ತಮ್ಮ ಮ್ಯಾನರಿಸಂ ಹಾಗೂ ವಿಭಿನ್ನ ನಟನಾ ಕೌಶಲ್ಯದಿಂದಲೇ ಖ್ಯಾತರಾಗಿ, ಖಳನಾಯಕನ ಪಾತ್ರಗಳಿಗೆ ಜೀವ ತುಂಬುತ್ತ, ಪೋಷಕ ಪಾತ್ರಗಳಲ್ಲೂ ಕೂಡ ತನ್ನನ್ನು ತಾನು ತೊಡಗಿಸಿಕೊಂಡ ನಟ ರಘುವರನ್ ಅವರು.

Advertisement

 

Advertisement

Advertisement

ಕನ್ನಡ ಸೇರಿದಂತೆ ತೆಲುಗು, ತಮಿಳು, ಮಲೆಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಅಭಿನಯಿಸಿ ತನ್ನದೇ ಆದ ಛಾಪು ಮೂಡಿಸಿರುವ ರಘುವರನ್ ಅವರು ಸುಮಾರು 150 ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿ ಖ್ಯಾತಿ ಪಡೆದಿದ್ದಾರೆ. 1982 ರಲ್ಲಿ ಮಲೆಯಾಳಂ ಸಿ‌ನಿಮಾ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಅವರು, ತದನಂತರ ದಕ್ಷಿಣ ಭಾರತದ ನಾಲ್ಕು ಭಾಷೆಗಳಲ್ಲಿ ಒಬ್ಬ ಬೇಡಿಕೆಯ ನಟರಾದರು. ಖಳನ ಪಾತ್ರಗಳಲ್ಲಿ ಅವರ ಖದರ್, ಪಕ್ಕಾ ಟೈಮಿಂಗ್ ಡೈಲಾಗ್ ಡಿಲೆವರಿ ಅವರ ಪ್ಲಸ್ ಪಾಯಿಂಟ್ ಗಳಾದವು‌. ರುದ್ರ‌ನೇತ್ರ, ಪಸಿವಾಡಿ ಪ್ರಾಣಂ, ಶಿವ ಹೀಗೆ ಅನೇಕ ಸೂಪರ್ ಹಿಟ್ ತೆಲುಗು ಸಿನಿಮಾಗಳ ಮೂಲಕ ಯಶಸ್ಸನ್ನು ಪಡೆದುಕೊಂಡರು.

Advertisement

ಸಾಲು ಸಾಲು ಹಿಟ್ ಸಿನಿಮಾಗಳಲ್ಲಿ ಅಭಿನಯಿಸಿ, ತಮ್ಮ ಸಿನಿ ಜೀವನದಲ್ಲಿ ಯಶಸ್ಸು ಕಾಣುತ್ತಿರುವಾಗಲೇ, ಅಂದಿನ ದಕ್ಷಿಣದ ಭಾರತ ಚಿತ್ರರಂಗದ ಹೆಸರಾಂತ ನಟಿ ರೋಹಿಣಿ ಅವರನ್ನು ಪ್ರೀತಿಸಿ ಮದುವೆಯಾದರು. ಈ ದಂಪತಿಗಳ ಪ್ರೀತಿಯ ಫಲವಾಗಿ ಒಬ್ಬ ಗಂಡು ಮಗ ಕೂಡಾ ಜನಿಸುತ್ತಾನೆ. ಹೀಗೆ ದಿನಗಳು ಉರುಳಿದಂತೆ ದಕ್ಷಿಣ ಭಾರತದ ಚಿತ್ರರಂಗದಲ್ಲೇ ರಘುವರನ್ ಅವರಿಗೆ ಸಿನಿಮಾಗಳಲ್ಲಿ ಬೇಡಿಕೆಗಳು ಕಡಿಮೆಯಾಗುತ್ತದೆ . ಮೊದಮೊದಲು ತನ್ನ ಪ್ರೀತಿಯ ಪತ್ನಿಗಗೊಸ್ಕರ ಮದ್ಯಚಟವನ್ನು ದೂರ ಮಾಡಿದ್ದ ಅವರು ಮತ್ತೆ ಅದರ ದಾಸರಾಗುತ್ತಾರೆ. ಇದರಿಂದ ತಮ್ಮ ಕುಟುಂಬದಲ್ಲಿ ವೈಮನಸ್ಸು ಉಂಟಾಗುತ್ತದೆ. ಇದರಿಂದ ಬೇಸತ್ತ ಪತ್ನಿ ರೋಹಿಣಿ ಅವರು’ ರಘುವರನ್ ಅವರಿಗೆ ವಿಚ್ಛೇದನ ನೀಡಿ ಬೇರೆಯಾಗಿ ಬಿಡುತ್ತಾರೆ.

ರೋಹಿಣಿ ಅವರು ಬೇರೆಯಾಗುತ್ತಿದ್ದಂತೆ ನಟ ರಘುವರನ್ ಮದ್ಯಪಾನವನ್ನು  ತನ್ನ ಸಂಗಾತಿಯನ್ನಾಗಿ ಮಾಡಿಕೊಂಡು ಬಿಡುತ್ತಾರೆ. ದಿನ ಕಳೆದಂತೆ ಅವರ ಆರೋಗ್ಯ ಬಹಳ ಹದಗೆಡುತ್ತದೆ. ಕುಡಿತಕ್ಕೆ ದಾಸರಾದ ಕಾರಣ ತನ್ನ 49 ನೇ ವಯಸ್ಸಿಗೆ ಅವರು ಇಹಲೋಕ ತ್ಯಜಿಸಿ ಬಿಡುತ್ತಾರೆ. ರಘುವರನ್ ನಿಧನರಾದಾಗ ಹಲವರು ಮರುಕಪಟ್ಟರು, ಅಭಿಮಾನಿಗಳು ವೇದನೆ ಪಟ್ಟರು, ಅವರ ಆಪ್ತರು ರಘುವರನ್ ತನ್ನ ಜೀವನವನ್ನು ತಾನೇ ತನ್ನ ಕೈಯ್ಯಾರೆ ಹಾಳು ಮಾಡಿಕೊಂಡರು ಎಂದು ಬೇಸರವನ್ನು ವ್ಯಕ್ತಪಡಿಸಿದರು..

Advertisement
Share this on...