ಶೃಂಗಾರ ಕಾವ್ಯ ಖ್ಯಾತಿಯ ರಘುವೀರ್ ಮತ್ತು ಸಿಂಧು ಜೀವನದ ಕರಾಳ ಸತ್ಯಗಳು…!

in ಮನರಂಜನೆ/ಸಿನಿಮಾ 666 views

ಇಂಜಿನಿಯರಿಂಗ್ ಓದುತ್ತಿದ್ದ ರಘುವೀರ್ ತಂದೆ ಮುನಿಯಲ್ಲಪ್ಪ ದೊಡ್ಡ ಬಿಲ್ಡಿಂಗ್ ಕಂಟ್ರಾಕ್ಟರ್ ಆಗಿದ್ದ ಕಾರಣ ತಂದೆಯ ಹಾದಿಯಲ್ಲಿ ನಡೆಯಲು ಸಿವಿಲ್ ಇಂಜಿನಿಯರಿಂಗ್ ಅನ್ನು ಓದುತ್ತಿದ್ದರು. ಅಂಬರೀಷ್ ಅವರ ಮನೆ ಕಟ್ಟುವ ಕಂಟ್ರ್ಯಾಕ್ಟ  ರಘುವೀರ್ ಅವರ ತಂದೆಗೆ ಸಿಕ್ಕಿತ್ತು.  ಪ್ರಾಕ್ಟಿಕಲ್ ಎಕ್ಸ್ಪೀರಿಯನ್ಸ್ ಗಾಗಿ  ಆಗಾಗ ಅಲ್ಲಿಗೆ ಭೇಟಿ ಕೊಡುತ್ತಿದ್ದರು. ಆಗ ಅಂಬರೀಶ್ ಅವರ ಪರಿಚಯವಾಯಿತು. ಅಂಬರೀಶ್ ಅವರ ಗತ್ತು ಮತ್ತು ಸ್ಟೈಲ್ ಅನ್ನು ನೋಡಿ ತಾನೂ ಒಬ್ಬ ಹೀರೋ ಆಗಬೇಕು ಎಂದುಕೊಂಡು ತಂದೆಯ ಬಳಿ ಹೇಳಿಕೊಳ್ಳುತ್ತಾರೆ. ಮಗನ ಮೇಲೆ ಅಪಾರ ಪ್ರೀತಿಯನ್ನು ಹೊಂದಿದ್ದ ಅವರ  ತಂದೆ ಮಗನ ಆಸೆಗೆ ಒಪ್ಪಿಗೆ ನೀಡಿ ಡ್ಯಾನ್ಸ್ ಮತ್ತು ಆಕ್ಟಿಂಗ್ ತರಬೇತಿಯನ್ನು ಕಲಿಯಲು ಕಳುಹಿಸಿದರು. ಮಗ ಹೀರೋ ಆಗಬೇಕೆಂಬ ಆಸೆಯಿಂದ ಅಜಯ್ ವಿಜಯ್ ಎಂಬ ಸಿನಿಮಾಕ್ಕೆ ಮೂವತ್ತು ಲಕ್ಷ ರೂಗಳನ್ನು ಹಾಕಿ ನಿರ್ಮಾಣ ಮಾಡಿದರು. ಆದರೆ ಆ ಚಿತ್ರ ಅಷ್ಟೊಂದು ಯಶಸ್ಸು ಗಳಿಸಿ ಕೊಡಲಿಲ್ಲ. ಅಸಿಸ್ಟೆಂಟ್ ಡೈರೆಕ್ಟರ್ ಆಗಿದ್ದ ಎಸ್ ನಾರಾಯಣ್ ಅವರಿಗೆ  ಅವಕಾಶ ಕೊಡುವ  ಮೂಲಕ ರಘುವೀರ್ ಚೈತ್ರದ ಪ್ರೇಮಾಂಜಲಿ ಎಂಬ ಸಿನಿಮಾದ ಮೂಲಕ ಪೂರ್ಣ ಪ್ರಮಾಣದ ನಾಯಕ ನಟನಾಗಿ ಬೆಳ್ಳಿ ತೆರೆಗೆ ಪಾದಾರ್ಪಣೆ ಯನ್ನು ಮಾಡಿದರು.

Advertisement

Advertisement

ಶೂಟಿಂಗ್ ಎಲ್ಲ ಮುಗಿದ ಮೇಲೆ ವಿತರಕರಿಗೆ ಸಿನಿಮಾವನ್ನು ತೋರಿಸಿದರು ವೀಕ್ಷಿಸಿದ ವಿತರಕರೆಲ್ಲಾ ಸಿನಿಮಾವನ್ನು ನೋಡಿ  ನಗಲಾರಂಭಿಸಿದರು. ಈ ಚಿತ್ರದ ಮೈನಸ್ ಪಾಯಿಂಟ್  ರಘುವೀರ್ ಎಂಬುದಾಗಿ ಹೇಳಿದರು. ಖರೀದಿ ಮಾಡಲು ಕೂಡ ಯಾವುದೇ ವಿತರಕರು ಮುಂದೆ ಬರಲಿಲ್ಲ ಆಗ ಮುಂದೆ ಬಂದ ರಾಮು ಅವರು ಚೈತ್ರದ ಪ್ರೇಮಾಂಜಲಿ ಚಿತ್ರವನ್ನು ಖರೀದಿಸಿ  ರಿಲೀಸ್ ಮಾಡಿದರು. ಆ ನಂತರ ಯಾರೂ ಊಹಿಸದ ರೀತಿಯಲ್ಲಿ ಚೈತ್ರದ ಪ್ರೇಮಾಂಜಲಿ ಸಿನಿಮಾ ಬಹಳ ಹಿಟ್ಟಾಯಿತು. ರಘುವೀರ್ ಅವರನ್ನು ಅವಮಾನಿಸಿದ ವಿತರಕರು ರಘುವೀರ್ ಅವರ ಡೇಟ್ಸ್  ಗಾಗಿ ಮನೆ ಮುಂದೆ  ಕಾಯುತ್ತಿದ್ದರು.

Advertisement

 

Advertisement

ಚಿತ್ರರಂಗದಲ್ಲಿ ಸಕ್ಸಸ್ ಕಂಡ ರಘುವೀರ್ ಅವರು ಆ ನಂತರ ಶೃಂಗಾರ ಕಾವ್ಯ ಎಂಬ ಚಿತ್ರವನ್ನು ಎತ್ತಿಕೊಂಡರು . ಈ ಸಿನಿಮಾಕ್ಕೆ ನಾಯಕಿಯಾಗಿ ಚೆನ್ನೈನಿಂದ ಸಿಂಧೂ ಅವರನ್ನು ಕರೆತರಲಾಯಿತು. ಶೃಂಗಾರ ಕಾವ್ಯ ಕೂಡ ಸೂಪರ್ ಹಿಟ್ ಆಯಿತು.  ನಂತರ ಸಿಂಧು ಮತ್ತು ರಘುವೀರ್ ಅವರ ಮಧ್ಯೆ ಪ್ರೇಮಾಂಕುರವಾಯಿತು. ಮದುವೆಯಾಗಲು ನಿರ್ಧರಿಸಿದರು.  ಆದರೆ ಈ ಮದುವೆ ರಘುವೀರ್ ಅವರ ತಂದೆಗೆ ಸ್ವಲ್ಪವೂ ಇಷ್ಟವಿರಲಿಲ್ಲ.  ಕೊನೆಗೆ ತಂದೆಯ ಮಾತನ್ನೇ ಧಿಕ್ಕರಿಸಿ ನಟ ರಘುವೀರ್ ಸಿಂಧೂ ಅವರನ್ನು ಮದುವೆಯಾದರು.  ಆ ನಂತರ ತಂದೆ ಮತ್ತು ಮಗನ ಮಧ್ಯೆ ಮನಸ್ತಾಪ ಉಂಟಾಗಿ ತಂದೆಯ ಮನೆಯನ್ನು ಬಿಟ್ಟು ರಘುವೀರ್ ಹೊರಗೆ ಬಂದರು. ಮನೆಯವರ ಜೊತೆ ಮಾತನಾಡುವುದನ್ನು ಕೂಡ ನಿಲ್ಲಿಸಿದರು. ಮೂಲತಃ ತಮಿಳುನಾಡಿನ ಮೂಲದವರಾದ ಸಿಂಧು ಖ್ಯಾತ ನಟಿ ಮಂಜುಳಾ ವಿಜಯ್ ಕುಮಾರ್ ಅವರ ಸೋದರಿಯ ಮಗಳು. ಈ ದಂಪತಿಗೆ ಒಂದು ಹೆಣ್ಣು ಮಗು ಕೂಡ ಇದೆ.

ರಘುವೀರ್ ಮನೆ ಬಿಟ್ಟು ಬಂದಿದ್ದಾನೆ,  ರಘುವೀರ್ ಬಳಿ ನಯಾಪೈಸೆ ಇಲ್ಲ,  ತಂದೆ ಮನೆಯಿಂದ ಹೊರಹಾಕಿದ್ದಾರೆ,  ಈ  ರೀತಿ ಹಲವು ಗಾಳಿ ಸುದ್ದಿಗಳು ಗಾಂಧಿನಗರದಲ್ಲಿ  ಹರಿದಾಡಲು ಆರಂಭಿಸಿತು. ಆ ನಂತರ ರಘುವೀರ್ ರವರಿಗೆ ಯಾವುದೇ ಸಿನಿಮಾಗಳಲ್ಲಿ ಅವಕಾಶಗಳು ಸಿಗಲಿಲ್ಲ.  ಬ್ಯಾಕ್ ಟು ಬ್ಯಾಕ್ ಹಿಟ್  ಸಿನಿಮಾಗಳನ್ನು ಕೊಟ್ಟಂತ ರಘುವೀರ್ ಅವರನ್ನು ಕೇಳುವವರೇ ಇಲ್ಲದಂತಾಯಿತು.

ರಘುವೀರ್ ಅವರ ಹುಚ್ಚಾಟಕ್ಕೆ  ಬೇಸೆತ್ತ ಸಿಂಧೂ ಅವರು ಚೆನ್ನೈಗೆ ಹೋಗಿ ನೆಲೆಸುತ್ತಾರೆ. ಸಿಂಧು  ಸಿನಿಮಾಗಳಲ್ಲಿ ಧಾರಾವಾಹಿಗಳಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ ಅಭಿನಯಿಸುವುದರ ಮೂಲಕ ದುಡಿದು ಮಗಳನ್ನು ಸಾಕುತ್ತಿದ್ದರು. ಆ ನಂತರ ರಘುವೀರ್ ಅವರಿಂದ ಡೈವರ್ಸ್ ಪಡೆದುಕೊಂಡ ಸಿಂಧೂರವರು 2003 ರಲ್ಲಿ ಟಿವಿ ನಟ ರಿಷಿ ಅವರನ್ನು ಮದುವೆಯಾಗಿದ್ದರು. ಆನಂತರ  ಸುನಾಮಿ ಸಂತ್ರಸ್ತರ ನೆರವಿಗೆ ಹೋದ  ಸಿಂಧು ಸುಂಟರ ಗಾಳಿಗೆ ಸಿಲುಕಿ ಮೂಗಿನೊಳಗೆ ಅತಿಯಾದ ಧೂಳು ಹೋಗಿದ್ದರಿಂದ 2005 ರಲ್ಲಿ ಕೋಮಾಗೆ ಜಾರಿದ ಸಿಂಧು ಆ ನಂತರ ಮರಣವ ಹೊಂದಿದರು.

ಮೊದಲೆ ಆರ್ಥಿಕ ಸಂಕಷ್ಟದಲ್ಲಿದ್ದ ರಘುವೀರ್ ಅವರಿಗೆ 2003 ರಲ್ಲಿ ಸಿಂಧು ಅವರ ಸಾವು  ದೊಡ್ಡ ಆಘಾತವನ್ನು ಉಂಟು ಮಾಡಿತ್ತು.  ಅಲ್ಲಿಗೆ ಎಲ್ಲರನ್ನೂ ಕಳೆದುಕೊಂಡ ರಘುವೀರ್ ಮಾನಸಿಕ ಖಿನ್ನತೆಗೆ ಒಳಗಾದರು . ನಂತರ ಮುಂಬೈಗೆ ಹೋಗಿ ಬೀದಿ ಬೀದಿ ಸುತ್ತುತ್ತಿದ್ದರು.  ಈ ವಿಚಾರವನ್ನು ತಿಳಿದ ಅವರ ತಂದೆ ಎಲ್ಲವನ್ನು ಮರೆತು ಮಗನನ್ನು ಮನೆಗೆ ಕರೆತಂದು ಗೌರಿ  ಎಂಬ ಹುಡುಗಿಯ ಜತೆ ಇನ್ನೊಂದು ಮದುವೆ ಮಾಡಿಸಿದರು. ಗೌರಿ ಮತ್ತು ರಘುವೀರ್  ದಂಪತಿಗಳಿಗೂ ಕೂಡ ಒಂದು ಹೆಣ್ಣು ಮಗುವಿದೆ.

ಮತ್ತೆ ರಘುವೀರ್ ಹಲವಾರು ಚಿತ್ರಗಳಲ್ಲಿ ನಟಿಸಿದರಾದರೂ ಅವರ ಸಿನಿಮಾಗಳು ಬಿಡುಗಡೆಯಾಗಲಿಲ್ಲ. ಮೇ 8 , 2014 ರಂದು ಎದೆನೋವು ಕಾಣಿಸಿಕೊಂಡಿದ್ದರಿಂದ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಅಷ್ಟೊತ್ತಿಗಾಗಲೇ ಚೈತ್ರದ ಪ್ರೇಮಾಂಜಲಿ ರಘುವೀರ ಇಹಲೋಕವನ್ನು ತ್ಯಜಿಸಿದ್ದರು. ಹೀಗೆ ಪ್ರೀತಿ ಎಂಬ ಪದ ರಘುವೀರ್ ಅವರ ಜೀವನದಲ್ಲಿ ಶಾಪವಾಗಿ ಪರಿಣಮಿಸಿತು. ಪ್ರೀತಿ ಜೀವನವನ್ನು ನಾಶ ಮಾಡುವುದಾದರೆ ಅದನ್ನು ಪಡೆಯುವುದಕ್ಕಿಂತ ತ್ಯಾಗ ಮಾಡುವುದೇ ಉತ್ತಮ. ಪ್ರೀತಿಗಿಂತ ಜೀವನ ದೊಡ್ಡದು ಇದಕ್ಕೆ ನೀವೇನು ಹೇಳುತ್ತೀರಿ ತಿಳಿಸಿ.

Advertisement
Share this on...