ರಾಗಿ ತಿಂದು ನಿರೋಗಿ ಆಗಿ !

in ಕನ್ನಡ ಆರೋಗ್ಯ/ಕನ್ನಡ ಮಾಹಿತಿ 314 views

ರಾಗಿ ತಿಂದು ನಿರೋಗಿಯಾಗಿ ಎಂಬದು ಹಿಂದಿನಿಂದಲೂ ಚಾಲ್ತಿಯಲ್ಲಿರುವ ಮಾತು. ದಕ್ಷಿಣ ಭಾರತದಲ್ಲಿ ಜನಪ್ರಿಯವಾಗಿರುವ ರಾಗಿ ನಮ್ಮ ರಾಜ್ಯದಲ್ಲಿ ಹೆಚ್ಚಾಗಿ ಬೆಳೆಯುತ್ತಾರೆ. ಕರ್ನಾಟಕದ ಹೊರತಾಗಿ ತಮಿಳುನಾಡು ಮತ್ತು ಮಹಾರಾಷ್ಟ್ರಗಳಲ್ಲೂ ರಾಗಿಯನ್ನು ಬೆಳೆಯಲಾಗುತ್ತದೆ. ಫಿಂಗರ್ ಮಿಲೆಟ್ ಎಂದು ಕರೆಯಲ್ಪಡುವ ರಾಗಿಯು ಪೋಷಕಾಂಶಗಳ ಆಗರವಾಗಿದೆ. ಪ್ರೊಟೀನ್ ,ಕ್ಯಾಲ್ಸಿಯಂ , ಖನಿಜಾಂಶಗಳನ್ನು ಒಳಗೊಂಡಿರುವ ರಾಗಿಯು ಆರೋಗ್ಯವರ್ಧಕವೂ ಹೌದು. ರಾಗಿಯು ಮೂಳೆಗಳನ್ನು ಬಲಪಡಿಸುವ ಶಕ್ತಿಯನ್ನು ಹೊಂದಿದೆ. ರಾಗಿಯಲ್ಲಿ ಕ್ಯಾಲ್ಶಿಯಂ ಪ್ರಮಾಣ ಅಧಿಕವಾಗಿದೆ. ಇದು ಮೂಳೆಯ ಬಲವನ್ನು ಹೆಚ್ಚಿಸುತ್ತದೆ. ಅದೇ ಕಾರಣದಿಂದ ರಾಗಿಯಿಂದ ತಯಾರಿಸಿದ ಆಹಾರಗಳನ್ನು ಆಗಾಗ ಸೇವಿಸುತ್ತಿರಬೇಕು. ಇದರಲ್ಲಿರುವ ಪಾಲಿಫಿನಾಲ್ ಅಂಶವು ಜೀರ್ಣಕ್ರಿಯೆಯನ್ನು ನಿಧಾನವಾಗಿರಿಸುತ್ತದೆ. ಮಾತ್ರವಲ್ಲ ಇದು ರಕ್ತದ ಸಕ್ಕರೆ ಮಟ್ಟವು ನಿಯಂತ್ರಣದಲ್ಲಿರುವಂತೆ ಮಾಡುತ್ತದೆ. ರಾಗಿಯಲ್ಲಿ ಪ್ರೊಟೀನ್ ಹಾಗೂ ಅಮಿನೋ ಆಮ್ಲವಿದ್ದು ಸ್ನಾಯುಗಳ ಚಟುವಟಿಕೆಗೆ ನೆರವಾಗುತ್ತದೆ. ಇದರ ಜೊತೆಗೆ ಚಯಾಪಚಯ ಕ್ರಿಯೆಯನ್ನು ನಿಯಂತ್ರಿಸುವ ಇದು ಖಿನ್ನತೆಯನ್ನು ದೂರ ಮಾಡುವಲ್ಲಿ ಸಹಕರಿಸುತ್ತದೆ.

Advertisement

Advertisement

ಕಬ್ಬಿಣದ ಅಂಶ ಹೇರಳವಾಗಿರುವ ರಾಗಿಯು ರಕ್ತದಲ್ಲಿ ಹಿಮೋಗ್ಲೋಬೀನ್ ಹೆಚ್ಚು ಮಾಡುವತ್ತ ಸಹಾಯ ಮಾಡುತ್ತದೆ. ಅದೇ ಕಾರಣದಿಂದ ರಕ್ತಹೀನತೆ ಉಳ್ಳವರು ರಾಗಿಯನ್ನು ಸೇವಿಸುವುದು ಉತ್ತಮ. ಜೊತೆಗೆ ಇದರಲ್ಲಿರುವ ವಿಟಮಿನ್ ಸಿ ಕಬ್ಬಿಣವನ್ನು ರಕ್ತ ಹೀರುವಲ್ಲಿ ಸಹಕಾರಿ.

Advertisement

ರಾಗಿಯಲ್ಲಿರುವ ಅಮಿನೋ ಆಮ್ಲ ರಕ್ತದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆಗೊಳಿಸುತ್ತದೆ.ಯಕೃತ್ ನಲ್ಲಿರುವ ಕೆಟ್ಟ ಕೊಬ್ಬನ್ನು ಕರಗಿಸುವ ರಾಗಿಗೆ ಕೊಬ್ಬು ಹೆಚ್ಚಾಗುವುದನ್ನು ತಡೆಯುವ ಶಕ್ತಿಯಿದೆ. ಅಪೌಷ್ಟಿಕತೆಯ ಜೊತೆಗೆ ವಯಸ್ಸಿಗೂ ಮುನ್ನ ಕಾಡುವ ವೃದ್ದಾಪ್ಯ ತೊಂದರೆಗಳಿಗೆ ರಾಗಿ ಉತ್ತಮ. ಅಸ್ತಮಾಕ್ಕೂ ಕೂಡಾ ಇದು ಒಳ್ಳೆಯದು. ತೂಕ ಇಳಿಸಲು ತ ಸಹಕಾರಿಯಾಗಿರುವ ರಾಗಿಯಲ್ಲಿ ನಾರಿನಂಶವಿದೆ‌. ಹಸಿವನ್ನು ಕಡಿಮೆ ಮಾಡುವ ಶಕ್ತಿ ಇರುವ ರಾಗಿಯು ದೀರ್ಘಕಾಲ ಹೊಟ್ಟೆ ತುಂಬಿರುವಂತೆ ಮಾಡುತ್ತದೆ. ಅದೇ ಕಾರಣದಿಂದ ಇತರ ಧಾನ್ಯಗಳಿಗಿಂತ ಕೊಬ್ಬು ಕಮ್ಮಿ ಇರುವ ರಾಗಿ ತೂಕ ಇಳಿಸಲು ಉತ್ತಮ.

Advertisement

ರಾಗಿ ಹಿಟ್ಟು ,ಈರುಳ್ಳಿ ,ಹಸಿಮೆಣಸು ,ಕೊತ್ತಂಬರಿ ಸೊಪ್ಪು ,ಜೀರಿಗೆ ,ಕಾಯಿತುರಿ ,ಎಣ್ಣೆ ,ಶುಂಠಿ ,ಉಪ್ಪು ಎಲ್ಲ ಹಾಕಿ ಕಲಸಿ. ಉಂಡೆಗಳನ್ನಾಗಿ ಮಾಡಿ ತಟ್ಟಿ ಬೇಯಿಸಿದರೆ ರಾಗಿ ರೊಟ್ಟಿ ಸಿದ್ದವಾಗುತ್ತದೆ. ಅದನ್ನು ಸೇವಿಸಿದರೆ ಆರೋಗ್ಯಕ್ಕೆ ಒಳ್ಳೆಯದು. ಇದರ ಜೊತೆಗೆ ರಾಗಿ ಮುದ್ದೆಯನ್ನು ತಯಾರಿಸಿ ತಿಂದರು ಉತ್ತಮ ಆರೋಗ್ಯಕ್ಕೆ ಸಹಕಾರಿ.

ಒಟ್ಟಿನಲ್ಲಿ ರಾಗಿಯಿಂದ ತಯಾರಿಸಿದಂತಹ ಖಾದ್ಯಗಳನ್ನು ತಿನ್ನುವುದರಿಂದ ದೇಹಕ್ಕೆ ಶಕ್ತಿ ಬರುತ್ತದೆ. ಹಾಗಾಗಿ ರಾಗಿ ತಿಂದು ಆರೋಗ್ಯ ಉತ್ತಮಪಡಿಸಿಕೊಳ್ಳಿ.
– ಅಹಲ್ಯಾ

Advertisement
Share this on...