ಏನೂ ಕೆಲಸ ಇಲ್ಲದೆ ತೂಕ ಹೆಚ್ಚಿಸಿಕೊಳ್ತಿದ್ದೀರ…ಹಾಗಿದ್ರೆ ರಾಗಿಣಿ ನೀಡುವ ಟಿಪ್ಸ್ ನಿಮಗಾಗಿ..!

in ಮನರಂಜನೆ 24 views

ಸದ್ಯದ ಪರಿಸ್ಥಿತಿಯಲ್ಲಿ ಎಲ್ಲಾ ಜಿಮ್​​​​​ಗಳು ಬಂದ್ ಆಗಿವೆ. ನೀವು ಜಿಮ್​​​​ಗೆ ಹೋಗಿ ವರ್ಕೌಟ್​​​​ ಮಾಡಬೇಕು ಎಂದಾದಲ್ಲಿ ಲಾಕ್​ಡೌನ್ ಮುಗಿಯುವವರೆಗೂ ಕಾಯಬೇಕು. ಆದರೆ ಅದು ಈಗಲೇ ಸಾಧ್ಯವಿಲ್ಲ. ದಿನೇ ದಿನೆ ಕೊರೊನಾ ಪ್ರಕರಣಗಳು ಹೆಚ್ಚುತ್ತಿದ್ದು ಲಾಕ್​ಡೌನ್​ ಈಗಲೇ ಮುಗಿಯುವ ಹಾಗೆ ಕಾಣುತ್ತಿಲ್ಲ. ಇನ್ನು ಅಮ್ಮ ಮಾಡಿದ ಊಟ ತಿಂದು , ಹೆಚ್ಚಿಗೆ ಕೆಲಸವೂ ಇಲ್ಲದೆ ಸುಮ್ಮನೆ ಕುಳಿತು ತೂಕ ಹೆಚ್ಚಿಸಿಕೊಳ್ಳುತ್ತಿರುವವರಿಗೆ ಸ್ಯಾಂಡಲ್​​ವುಡ್​​ ತುಪ್ಪದ ಹುಡುಗಿ ಅಲಿಯಾಸ್ ರಾಗಿಣಿ ದ್ವಿವೇದಿ ಒಂದು ಟಿಪ್ಸ್ ಕೊಟ್ಟಿದ್ದಾರೆ.

Advertisement

 

Advertisement

Advertisement

 

Advertisement

ವರ್ಕೌಟ್ ಮಾಡಲು ನೀವು ಜಿಮ್​​​​ಗೆ ಹೋಗಬೇಕು ಎಂದೇನಿಲ್ಲ. ಮನಸ್ಸು ಮಾಡಿದರೆ ಮನೆಯಲ್ಲೇ ಸುಲಭವಾಗಿ ವರ್ಕೌಟ್ ಮಾಡಿ ತೂಕ ಇಳಿಸಿಕೊಳ್ಳಬಹುದು. ಅದಕ್ಕಾಗಿ ಯಾವ ಜಿಮ್ ಸಾಧನಗಳೂ ಬೇಕಿಲ್ಲ. ಮನೆಯಲ್ಲಿ ಕಸ ಗುಡಿಸುವುದು, ಮನೆ ಒರೆಸುವುದು ಹಾಗೂ ಇನ್ನಿತರ ಬಗ್ಗಿ, ಎದ್ದು ಮಾಡುವ ಕೆಲಸಗಳನ್ನು ನೀವು ಪ್ರತಿದಿನ ಮಾಡುತ್ತಾ ಬಂದರೆ ಸುಲಭವಾಗಿ ತೂಕ ಇಳಿಸಬಹುದು ಎನ್ನುತ್ತಾರೆ ರಾಗಿಣಿ. ತಾವು ಪೊರಕೆ ಹಿಡಿದು ಕಸ ಗುಡಿಸುವ ವಿಡಿಯೋ ಮಾಡಿಸಿ ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಅಪ್​​ಲೋಡ್ ಮಾಡಿದ್ದಾರೆ. ಪೊರಕೆಯನ್ನು ನೀಟಾಗಿ ನೆಲದ ಮೇಲೆ ಊರಿ , ಮೂಲೆ ಮೂಲೆಯಲ್ಲೂ ನೀಟಾಗಿ ಕಸ ಗುಡಿಸಿದರೆ ನಿಮಗೆ ಅದೇ ದೊಡ್ಡ ವರ್ಕೌಟ್ ಎಂದಿದ್ದಾರೆ ನಟಿ ರಾಗಿಣಿ.

 

 

ರಾಗಿಣಿ ಇತ್ತೀಚೆಗೆ ಭಾರೀ ಸುದ್ದಿಯಲ್ಲಿದ್ದಾರೆ. ಲಾಕ್​​ಡೌನ್ ಆರಂಭವಾದಾಗಿನಿಂದ ರಾಗಿಣಿ ನಿರ್ಗತಿಕರಿಗೆ ಸಹಾಯ ಮಾಡಲಾರಂಭಿಸಿದ್ದಾರೆ. ಬಿಬಿಎಂಪಿ ಪೌರ ಕಾರ್ಮಿಕರನ್ನು ಮನೆಗೆ ಕರೆದು ಅವರಿಗೆ ಟೀ, ತಿಂಡಿ ನೀಡಿ ಅವರ ಕೆಲಸ, ಕಷ್ಟ, ಸುಖಗಳನ್ನು ವಿಚಾರಿಸಿದ್ದರು. ಕೊರೊನಾ ಪೀಡಿತರ ಸೇವೆ ಮಾಡುತ್ತಿರುವ ಸುಮಾರು 150 ಮಂದಿ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಗಳಿಗಾಗಿ ಅಪ್ಪ-ಅಮ್ಮನ ಸಹಾಯದಿಂದ ತಾವೇ ಅಡುಗೆ ಮಾಡಿ ಅದನ್ನು ಆಸ್ಪತ್ರೆಗೆ ಕಳಿಸಿಕೊಟ್ಟಿದ್ದರು. ಬೆಂಗಳೂರಿನ ಫ್ರೇಜರ್ ಟೌನ್​​​ ಗೋಶಾಲೆಯಲ್ಲಿ ಮೇವು ಇಲ್ಲದೆ ಕಸಾಯಿಖಾನೆಗೆ ಸಾಗಿಸುತ್ತಿದ್ದ ಗೋವುಗಳನ್ನು ರಕ್ಷಿಸಿ ಅವುಗಳಿಗೆ ಮೇವು ಪೂರೈಸಿದ್ದರು.

 

 

ಒಟ್ಟಿನಲ್ಲಿ ರಾಗಿಣಿ ದ್ವಿವೇದಿ ತಾವು ನಟಿ ಮಾತ್ರವಲ್ಲ ಒಳ್ಳೆ ಹೃದಯವಂತಿಕೆ ಉಳ್ಳ ಯುವತಿ ಎಂಬುದನ್ನು ಈ ಕೆಲಸಗಳ ಮೂಲಕ ತೋರಿಸಿಕೊಟ್ಟಿದ್ದಾರೆ. ಬಡಜನರಿಗೆ ನೀವೂ ಕೂಡಾ ಆದಷ್ಟು ಸಹಾಯ ಮಾಡಿ ಎಂದು ರಾಗಿಣಿ ತಮ್ಮ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.

 

 

Advertisement
Share this on...