ತುಪ್ಪದ ಹುಡುಗಿ ಫ್ಲ್ಯಾಟ್ ಮಾರಾಟಕ್ಕೆ…ಬೆಂಗಳೂರು​​​​ ಬಿಟ್ಟು ತವರು ಸೇರಲಿದ್ಯಾ ರಾಗಿಣಿ ಕುಟುಂಬ…?

in ಮನರಂಜನೆ/ಸಿನಿಮಾ 151 views

‘ಏನೋ ಮಾಡಲು ಹೋಗಿ ಏನು ಮಾಡಿದೆ ನೀನು….’ ಎಂಬ ಹಾಡನ್ನು ನೀವೆಲ್ಲಾ ಕೇಳಿರುತ್ತೀರಿ. ವೈಭವದ ಜೀವನ ನಡೆಸಲು ಹೋಗಿ ಈಗ ಸಿಸಿಬಿ ಖೆಡ್ಡಾಗಿ ಬಿದ್ದಿರುವ ರಾಗಿಣಿ ದ್ವಿವೇದಿಗೆ ಈ ಹಾಡು ಬಹಳ ಚೆನ್ನಾಗಿ ಹೊಂದುತ್ತದೆ ಎಂದರೆ ತಪ್ಪಿಲ್ಲ. ಹೇಗೋ ಕನ್ನಡ ಚಿತ್ರರಂಗದಲ್ಲಿ ರಾಗಿಣಿ ಒಂದು ನೆಲೆ ಕಂಡಿದ್ದರು. ಪಂಜಾಬಿ ಕುಟುಂಬದವರಾದರೂ ರಾಗಿಣಿಯನ್ನು ಕನ್ನಡ ಚಿತ್ರಪ್ರೇಮಿಗಳು ಒಪ್ಪಿಕೊಂಡಿದ್ದರು, ಆಕೆಯ ಕೈ ಹಿಡಿದು ಬೆಳೆಸಿದ್ದರು. ಆದರೆ ರಾಗಿಣಿ ಇದನ್ನು ಉಳಿಸಿಕೊಳ್ಳಲಿಲ್ಲ. ಅತಿಯಾಸೆ ಗತಿ ಕೇ#ಡು ಎಂಬಂತೆ ತನಗಾಗಿ ಖರ್ಚು ಮಾಡುತ್ತಿದ್ದ ಮದುವೆಯಾಗಿರುವ ರವಿಶಂಕರ್ ಎಂಬಾತನನ್ನು ರಾಗಿಣಿ ಪರಿಚಯ ಮಾಡಿಕೊಂಡರು. ಆಸಾಮಿ ಈ ತುಪ್ಪದ ಹುಡುಗಿಗಾಗಿ ಹೆಂಡತಿ, ಮಕ್ಕಳನ್ನೇ ಬಿಟ್ಟ. ಈಗ ಆತ ಕೂಡಾ ಈ ಪ್ರಕ#ರಣದಲ್ಲಿ ವಿ#ಚಾರಣೆ ಎದುರಿಸುತ್ತಿದ್ದಾರೆ. ಪರ#ಪ್ಪನ ಅಗ್ರಹಾರ ಸೇರಿರುವ ರಾಗಿಣಿ ಆರೋ#ಪ ಸಾಬೀತಾದರೆ ಏನಿಲ್ಲ ಎಂದರೂ ಕನಿಷ್ಠ 10 ವರ್ಷವಾದರೂ ಶಿ#ಕ್ಷೆ ಅನುಭವಿಸಲೇಬೇಕಿದೆ. ಮಗಳು ಈ ಸ್ಥಿತಿ ತಂದುಕೊಂಡಳಲ್ಲಾ ಎಂದು ಪೋಷಕರು ಕೂಡಾ ದು:#ಖದಲ್ಲಿದ್ದಾರೆ.

Advertisement

Advertisement

 

Advertisement

ಈ ನಡುವೆ ಪ್ರಕ#ರಣದಲ್ಲಿ ರಾಗಿಣಿ ಪರ ವಕೀಲರಿಗೆ ನೀಡಲು ಹಣಕಾಸಿನ ಸಮಸ್ಯೆ ಎದುರಾಗಿದ್ದು ರಾಗಿಣಿ ಪೋಷಕರು ಯಲಹಂಕದಲ್ಲಿರುವ ಫ್ಲಾಟ್ ಮಾರಾಟಕ್ಕೆ ಇಟ್ಟಿದ್ದಾರೆ ಎನ್ನಲಾಗಿದೆ. ವಕೀಲರಿಗೆ ಫೀಸ್ ನೀಡಲು ಹಣ ಇಲ್ಲ. ಆದ್ದರಿಂದ ಫ್ಲಾಟ್ ಮಾರಾಟ ಮಾಡುತ್ತಿದ್ದೇವೆ ಎಂದು ರಾಗಿಣಿ ಪೋಷಕರು ಆಪ್ತರ ಬಳಿ ದು:ಖ ತೋಡಿಕೊಂಡಿದ್ದಾರೆ ಎನ್ನಲಾಗಿದೆ. ಇನ್ನು ಪ್ರಸ್ತುತ ಬೆಳವಣಿಗೆ ನೋಡುತ್ತಿದ್ದರೆ ಇನ್ಮುಂದೆ ರಾಗಿಣಿಗೂ ಕನ್ನಡ ಚಿತ್ರರಂಗಕ್ಕೂ ಶಾಶ್ವತ ಬ್ರೇಕ್ ಅಪ್ ಆಗುವುದು ಖಂಡಿತ ಎನ್ನಲಾಗುತ್ತಿದೆ. ಮತ್ತೊಂದು ಮೂಲಗಳ ಪ್ರಕಾರ ರಾಗಿಣಿ ಕುಟುಂಬ ತಮ್ಮ ತವರಿನತ್ತ ಮರಳಲಿದೆ ಎಂಬ ಮಾತು ಕೂಡಾ ಕೇಳಿ ಬರುತ್ತಿದೆ. ಇದು ನಿಜವಾದರೆ ತುಪ್ಪದ ಹುಡುಗಿ ಸಿನಿಪ್ರಿಯರಿಗೆ ಇನ್ನು ಕನಸು ಮಾತ್ರ.

Advertisement

ಪಂಜಾಬಿ ಕುಟುಂಬಕ್ಕೆ ಸೇರಿದ ರಾಗಿಣಿ ಹುಟ್ಟಿ ಬೆಳೆದದ್ದು ಮಧ್ಯಪ್ರದೇಶದಲ್ಲಿ. ಕಾಲೇಜಿನಲ್ಲೇ ಮಾಡಲಿಂಗ್​​​​ನತ್ತ ಹೊರಳಿದ ರಾಗಿಣಿ, ಕೊಡಗಿಗೆ ಸೇರಿದ ಖ್ಯಾತ ಫ್ಯಾಷನ್​​​ ಸ್ಟೈಲಿಸ್ಟ್ ಪ್ರಕಾಶ್ ಬಿದ್ದಪ್ಪ ಅವರ ಶೋಗಳಲ್ಲಿ ರ್‍ಯಾಂಪ್ ವಾಕ್ ಮಾಡುತ್ತಿದ್ದವರು. ರಾಗಿಣಿ 2009ರಲ್ಲಿ ಬಿಡುಗಡೆಯಾದ ‘ವೀರ ಮದಕರಿ’ ಚಿತ್ರದಲ್ಲಿ ಸುದೀಪ್ ಜೊತೆ ನಟಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರು. ಈ ಸಿನಿಮಾ ನಂತರ ಶಂಕರ್ ಐಪಿಎಸ್, ಕೆಂಪೇಗೌಡ, ಕಳ್ಳ ಮಳ್ಳ ಸುಳ್ಳ, ಆರಕ್ಷಕ, ಶಿವ, ವಿಕ್ಟರಿ, ಕಿಚ್ಚು, ಅಧ್ಯಕ್ಷ ಇನ್ ಅಮೆರಿಕ ಸೇರಿ ಅನೇಕ ಸಿನಿಮಾಗಳಲ್ಲಿ ನಟಿಸಿದರು. ಜನರು ರಾಗಿಣಿಯನ್ನು ಗುರುತಿಸಿದರೂ ಆಕೆಗೆ ಯಾವ ಸಿನಿಮಾ ಕೂಡಾ ಬ್ರೇಕ್ ನೀಡಲಿಲ್ಲ. ಆದರೆ ರವಿಚಂದ್ರನ್, ರಮೇಶ್ ಅಭಿನಯದ ‘ಕಳ್ಳ ಮಳ್ಳ ಸುಳ್ಳ’ ಚಿತ್ರದ ‘ತುಪ್ಪ ಬೇಕಾ ತುಪ್ಪ’ ಹಾಡಿನಿಂದ ಅವರು ತುಪ್ಪದ ಹುಡುಗಿ ಎಂದೇ ಫೇಮಸ್ ಆದ್ರು.

ಇದಕ್ಕೂ ಮುನ್ನ ಒಂದೆರಡು ಬಾರಿ ಕಾಂ#ಟ್ರೊವ#ರ್ಸಿಗಳಲ್ಲಿ ಸಿಲುಕಿದ್ದ ರಾಗಿಣಿ ಅದರಿಂದ ತೊಂ#ದರೆಯೇನೂ ಅನುಭವಿಸಲಿಲ್ಲ. ಕೊರೊನಾ ಲಾಕ್ ಡೌನ್ ವೇಳೆ ತಮ್ಮ ಆರ್​ಡಿ ವೆಲ್​ಫೇರ್ ಅಸೋಸಿಯೇಷನ್ ಮೂಲಕ ಸಾಮಾಜಿಕ ಸೇವೆ ಮಾಡುವ ಮೂಲಕ ಗುರುತಿಸಿಕೊಂಡಿದ್ದ ರಾಗಿಣಿಗೆ ಕಳೆದ 15 ದಿನಗಳಿಂದ ಕೆಟ್ಟ ಕಾಲ ಶುರುವಾಗಿದೆ. ಪ್ರಕರಣದಿಂದ ದೋ#ಷಮುಕ್ತರಾಗಿ ಹೊರಗಿ ಬರಲಿದ್ದಾರಾ…ಶಿ#ಕ್ಷೆ ಅನುಭವಿಸಲಿದ್ದಾರಾ ಕೆಲವೇ ದಿನಗಳಲ್ಲಿ ತಿಳಿಯಲಿದೆ.

ಓಂ ಶ್ರೀ ವಿದ್ಯಾ ಚೌಡೇಶ್ವರಿ ಜ್ಯೋತಿಷ್ಯ ಫಲ ದ ಪ್ರಸಿದ್ಧ ಜ್ಯೋತಿಷಿಗಳಾದ ಶ್ರೀ ಪಂಡಿತ್ ಬ್ರಹ್ಮನಂದ ಭಟ್ ರವರು ನಿಮ್ಮ ಸಮಸ್ಯೆ ಏನೇ ಇರಲಿ,  ಎಷ್ಟೇ ಕಠಿಣ ವಾಗಿರಲಿ , ನಿಮ್ಮ ಗುಪ್ತ ಸಮಸ್ಯೆಗಳು ಹಾಗೂ ನಿಮ್ಮ ಕಠಿಣ ಸಮಸ್ಯೆಗಳಿಗೆ ಪರಿಹಾರ ಒಂದೇ ನಿಮಿಷದಲ್ಲಿ ಒಂದು ಕರೆಯಲ್ಲಿ ಸೂಚಿಸುತ್ತಾರೆ. ಒಮ್ಮೆ ಕರೆ ಮಾಡಿ 7618717450 ಎಷ್ಟೋ ಜ್ಯೋತಿಷಿಗಳ ಬಳಿ ಹೋಗಿ ಜ್ಯೋತಿಷ್ಯ ಕೇಳಿ ನಿಮಗೆ ಪರಿಹಾರ ಸಿಗದೇ ಹೋಗಿದ್ದರೆ ಇಲ್ಲಿ ಪರಿಹಾರ ಖಂಡಿತ.

Advertisement
Share this on...