ಸಿನಿಮಾ, ಶೂಟಿಂಗ್, ಪಾರ್ಟಿ, ಬ್ಯೂಟಿ ಪಾರ್ಲರ್ ಎಂದೆಲ್ಲಾ ಸಂತೋಷದಂದ ತಿರುಗಾಡಿಗೊಂಡಿದ್ದ ರಾಗಿಣಿ ದ್ವಿವೇದಿ ಕಳೆದ ವರ್ಷ ಡ್ರ’ಗ್ಸ್ ಪ್ರಕರಣದ ಆರೋಪದ ಮೇಲೆ ಬಂಧನವಾಗಿ ಪರಪ್ಪನ ಅಗ್ರಹಾರ ಸೇರಿದ್ದರು. ಜಾಮೀನು ದೊರೆಯದೆ ಪರಪ್ಪನ ಅಗ್ರಹಾರದಲ್ಲೇ ಪೊಲೀಸರು ನೀಡಿದ ಊಟ ತಿಂದು ಕಾಲ ಕಳೆಯುತ್ತಿದ್ದ ರಾಗಿಣಿ ಅನಾರೋಗ್ಯಕ್ಕೆ ಒಳಗಾದ ನಂತರ ಕೊನೆಗೂ ಜಾಮೀನು ಪಡೆದು ಹೊರಬಂದರು. ಸುಮಾರು 145 ದಿನಗಳ ನಂತರ ಪರಪ್ಪನ ಅಗ್ರಹಾರದಿಂದ ಹೊರಬಂದ ರಾಗಿಣಿ ಮೊದಲು ಮಾಡಿದ ಕೆಲಸ ಪೋಷಕರೊಂದಿಗೆ ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸಿ ಬಂದಿದ್ದು. ಇದೀಗ ಮೊದಲಿನ ಜೀವನಕ್ಕೆ ಒಗ್ಗಿಕೊಳ್ಳುತ್ತಾ ಬಂದಿರುವ ರಾಗಿಣಿ ಬಾಕಿ ಉಳಿದಿರುವ ‘ಗಾಂಧಿಗಿರಿ’ ಚಿತ್ರೀಕರಣದಲ್ಲಿ ಶೀಘ್ರವೇ ಭಾಗಿಯಾಗಲಿದ್ದಾರೆ. ಚಿತ್ರದ ನಾಯಕ ಪ್ರೇಮ್ ಸದ್ಯಕ್ಕೆ ಏಕ್ ಲವ್ ಯಾ ಚಿತ್ರೀಕರಣದಲ್ಲಿ ಬ್ಯುಸಿ ಇದ್ದು ಆ ಸಿನಿಮಾ ನಂತರ ಅವರು ಕೂಡಾ ‘ಗಾಂಧಿಗಿರಿ’ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ನಡುವೆ ರಾಗಿಣಿ ‘ಕರ್ವ 3’ ಎಂಬ ಮತ್ತೊಂದು ಚಿತ್ರ ಒಪ್ಪಿಕೊಂಡಿದ್ದಾರೆ. ಈ ಮೂಲಕ ರಾಗಿಣಿ ಸಿನಿಮಾ ಕರಿಯರ್ ಮುಗಿಯಿತು ಎಂದುಕೊಳ್ಳುತ್ತಿದ್ದವರಿಗೆ ಉತ್ತರ ನೀಡಲು ಹೊರಟಿದ್ದಾರೆ ತುಪ್ಪದ ಹುಡುಗಿ. ಈ ಸಿನಿಮಾಗಳ ಜೊತೆಗೆ ರಾಗಿಣಿ ಟಿ10 ಕ್ರಿಕೆಟ್ ಟೂರ್ನಿಯ ಬ್ರಾಂಡ್ ಅಂಬಾಸಿಡರ್ ಆಗಿ ಆಯ್ಕೆ ಆಗಿದ್ದಾರೆ.
AdvertisementView this post on Instagram
AdvertisementAdvertisement
“ವಿಶೇಷ ಚೇತನರಿಗಾಗಿ ನಡೆಸುವ ಟಿ10 ಕ್ರಿಕೆಟ್ ಟೂರ್ನಿಗೆ ರಾಗಿಣಿ ರಾಯಭಾರಿಯಾಗಿ ಆಯ್ಕೆ ಆಗಿದ್ದಾರೆ. ಈ ಟೂರ್ನಿ ಮಾರ್ಚ್ 11ರಂದು ನಡೆಯಲಿದೆ. ಕರ್ನಾಟಕ ವಿಕಲಾಂಗ ಚೇತನರ ಕ್ರಿಕೆಟ್ ಅಸೋಸಿಯೇಷನ್ ಈ ಟೂರ್ನಿಯನ್ನು ಆಯೋಜಿಸಿದೆ. ಭಾರತದ ವಿವಿದ ರಾಜ್ಯಗಳಿಂದ ಆಯ್ಕೆಯಾಗಿರುವ ಸುಮಾರು 28 ತಂಡ ಈ ಟೂರ್ನಿಯಲ್ಲಿ ಭಾಗವಹಿಸುತ್ತಿದೆ. ಭಾರತದಲ್ಲಿ ಕ್ರಿಕೆಟ್ ಬಹಳ ಹೆಸರಾದ ಆಟ. ವಿಶೇಷ ಚೇತನರು ಈ ಆಟ ಆಡುತ್ತಿದ್ದಾರೆ ಎಂದರೆ ನಾವು ಅವರನ್ನು ಪ್ರೋತ್ಸಾಹಿಸಬೇಕು. ಬಹುಶ: ಇಡೀ ಭಾರತದಲ್ಲಿ ಕರ್ನಾಟಕ ರಾಜ್ಯ ಮಾತ್ರ ಮೊದಲ ಬಾರಿಗೆ ವಿಕಲಾಂಗ ಚೇತನರ ಕ್ರಿಕೆಟ್ ಟೂರ್ನಿಯನ್ನು ಪ್ರೋತ್ಸಾಹಿಸಿ ಆಯೋಜಿಸುತ್ತಿದೆ. ನಾನೂ ಕೂಡಾ ಇವರಿಗೆ ಬೆಂಬಲ ನೀಡಲು ಬಯಸುತ್ತೇನೆ. ಅವರೆಲ್ಲಾ ಆಟವಾಡುವುದನ್ನು ನಾನು ನೋಡಲು ಬಯಸುತ್ತೇನೆ” ಎಂದು ರಾಗಿಣಿ ಹೇಳಿಕೊಂಡಿದ್ದಾರೆ.
“ಅಷ್ಟೇ ಅಲ್ಲ, ಈ ಟೂರ್ನಿಯಲ್ಲಿ ಸುಮಾರು 600 ಮಂದಿ ಪಾಲ್ಗೊಳ್ಳಲಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ನಂತೆ ಈ ಟೂರ್ನಿ ಕೂಡಾ ಜನಪ್ರಿಯವಾಗುವುದೆಂಬ ನಂಬಿಕೆ ಇದೆ. ಈ ಟೂರ್ನಿಯಲ್ಲಿ ಭಾಗವಹಿಸುತ್ತಿರುವವವರು ಬಹಳ ಶ್ರಮ ವಹಿಸಿ ತಯಾರಾಗುತ್ತಿದ್ದಾರೆ” ಎಂದು ರಾಗಿಣಿ ಹೇಳಿದ್ದಾರೆ. ತಾವು ಬ್ಯಾಟ್ ಹಿಡಿದಿರುವ ಫೋಟೋವೊಂದನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ರಾಗಿಣಿ, “ವಿಕಲಾಂಗ ಚೇತನರಿಗಾಗಿ ವಿಶ್ವ ಟಿ10 ಕ್ರಿಕೆಟ್ ಟೂರ್ನಿ ನಡೆಯುತ್ತಿದೆ ಎಂದು ಘೋಷಿಸಲು ಸಂತೋಷವಾಗುತ್ತಿದೆ. ಕ್ರಿಕೆಟ್ ಪ್ರೇಮಿಗಳು ಈ ಟೂರ್ನಿಗೆ ಆಗಮಿಸಿ ಆಟಗಾರರನ್ನು ಪ್ರೋತ್ಸಾಹಿಸಿ” ಎಂದು ಮನವಿ ಮಾಡಿದ್ದಾರೆ.
ಪಂಜಾಬಿ ಕುಟುಂಬಕ್ಕೆ ಸೇರಿದ ರಾಗಿಣಿ ದ್ವಿವೇದಿ ಮಧ್ಯಪ್ರದೇಶದಲ್ಲಿ ಹುಟ್ಟಿ ಬೆಳೆದವರು. ಪ್ರಸಾದ್ ಬಿದ್ದಪ್ಪ ಫ್ಯಾಷನ್ ತಂಡದಲ್ಲಿಗುರುತಿಸಿಕೊಂಡಿದ್ದು, ರಾಗಿಣಿ ಸಿನಿಮಾ ಕ್ಷೇತ್ರಕ್ಕೆ ಬರಲು ಸಹಾಯವಾಯ್ತು. 2009 ರಲ್ಲಿ ಸುದೀಪ್ ಜೊತೆ ‘ವೀರ ಮದಕರಿ’ ಚಿತ್ರದಲ್ಲಿ ನಟಿಸುವ ಮೂಲಕ ಚಿತ್ರರಂಗಕ್ಕೆ ಬಂದ ರಾಗಿಣಿ ಶಂಕರ್ ಐಪಿಎಸ್, ಕೆಂಪೇಗೌಡ, ಕಳ್ಳಮಳ್ಳಸುಳ್ಳ, ವಿಕ್ಟರಿ, ರಾಗಿಣಿ ಐಪಿಎಸ್, ಪರಪಂಚ ಸೇರಿ ಅನೇಕ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ.