ಈ ರಾಶಿಯವರಿಗೆ ಆ’ಕಸ್ಮಿಕ ಕು’ತ್ತು , ಆ’ಪತ್ತು ತಂದಿಡುವಂತಹ ಎ’ಳೆದಾಟವಿದೆ ಎಚ್ಚರಿಕೆ

in ಜ್ಯೋತಿಷ್ಯ 1,180 views

ಶ್ರೀ ಶಾರ್ವರಿ ನಾಮ ಸಂವತ್ಸರೆ, ದಕ್ಷಿಣಾಯಣೆ, ಶರತ್ ಋತು,  ಅಧಿಕ ಮಾಸೆ,  ಶುಕ್ಲ ಪಕ್ಷದ ಪೌರ್ಣಮಿ ತಿಥಿ, ಉತ್ತರಾಭಾದ್ರಾ ನಕ್ಷತ್ರ,  ವೃದ್ಧಿ ಯೋಗ, ಭದ್ರಂಕ್ ಕರಣ, ಅಕ್ಟೋಬರ್ 01 , ಗುರುವಾರದ ಪಂಚಾಂಗ ಫಲವನ್ನು ಶ್ರೀ ರವಿಶಂಕರ್ ಗುರೂಜಿ ಅವರು ನೀಡಿದ್ದಾರೆ.   ಇಂದು ಅಮೃತ ಕಾಲ ಮಧ್ಯರಾತ್ರಿ ಬರುವುದರಿಂದ ಉಲ್ಲೇಖ ಮಾಡಿಲ್ಲ.

Advertisement

ಮನುಷ್ಯನ ಬದುಕು ಯಾವಾಗಲೂ ಸಮುದ್ರವನ್ನು ನೋಡಿ ಕಲಿಯಬೇಕು. ಸಮುದ್ರದಲ್ಲಿ ಅಲೆಗಳು ಎಷ್ಟೇ ರಭಸವಾಗಿ ಬಂದು ಬಡಿದರೂ ಕೂಡ ಸಮುದ್ರ ಶಾಂತವಾಗಿಯೇ ಇರುತ್ತದೆ. ಹಾಗೆಯೇ ಮನುಷ್ಯ ಕೂಡ ಜೀವನದಲ್ಲಿ ಬರುವ ಎಲ್ಲಾ ರೀತಿಯ ಕಷ್ಟ ಸುಖವೆಂಬ ಅಲೆಗಳನ್ನು ಸಹಿಸಿ ಶಾಂತವಾಗಿ ದೃಢವಾಗಿ ನಿಲ್ಲಬೇಕು. ಉದ್ಯೋಗ,  ಭದ್ರತೆ ಇಲ್ಲದಂತಹ ಅಲೆ,  ಮಕ್ಕಳ ವಿಚಾರದ ಅಲೆ, ಹೀಗೆ ಮುಂತಾದ ಕಷ್ಟ ಸುಖಗಳು ಸಂಭವಿಸುತ್ತವೆ. ಸಾಮಾನ್ಯವಾಗಿ ಸಮುದ್ರ ಉಕ್ಕುವುದಿಲ್ಲ, ಉಕ್ಕಿದ್ದೇ ಆದಲ್ಲಿ ಪ್ರಳಯ ಖಂಡಿತ. ಸಮುದ್ರ ನೋಡಿದಷ್ಟು ದೂರ,  ಮತ್ತೆ ಅದರ ಆಳವನ್ನು ಕೂಡ ಹೇಗೆ ನಾವು ಕಂಡು ಹಿಡಿಯಲು ಆಗುವುದಿಲ್ಲ. ಹೇಗೆ ಸಮುದ್ರ ಶಾಂತವಾಗಿ  ಎಲ್ಲವನ್ನೂ ತನ್ನ ಒಳಗೆ ಬಚ್ಚಿಟ್ಟು ಕೊಂಡಿರುತ್ತದೊ ಹಾಗೆಯೇ ನಾವು ಶಾಂತಚಿತ್ತವಾಗಿರಬೇಕು. ಜೀವನದಲ್ಲೂ ಕೂಡ ಹಾಗೇ ಬರುವಂತಹ ಅಲೆಗಳಿಗೆ ಎದೆಗುಂದಬೇಡಿ ಧೈರ್ಯವಾಗಿ ಶಾಂತಯುತವಾಗಿ  ಗಾಬರಿಯಾಗದೆ ಅದನ್ನು ನಿಭಾಯಿಸಿ. ಆಸೆ ಬಂದಾಗಲೂ ಕೂಡ ಕದಲಬಾರದು ನಿರಾಸೆಯಾದಾಗಲೂ ಕೂಡ ಕದಲಬಾರದು ದೃಢವಾಗಿ ಸಮುದ್ರದಂತೆ ಇರಬೇಕು.

Advertisement

Advertisement

ಸ್ವಲ್ಪ ನೋವನ್ನು ಕೂಡ ನಾವು ನಮ್ಮಲ್ಲಿ ಅಡಗಿಸಿ ಇಟ್ಟುಕೊಳ್ಳುವುದಿಲ್ಲ. ತುಲಾ ರಾಶಿಯವರಿಗೆ ಅಷ್ಟಮಸ್ಥ ರಾಹು ಅಲ್ಲೊಂದು ಪುಟ್ಟ ಪ್ರಭಂಜನವನ್ನು ಉಂಟುಮಾಡುವಂತಹ ಪ್ರಭಾವವಿದೆ. ಅರ್ಧಾಷ್ಟವ ಶನಿ  ವಾಕ್ ಸ್ಥಾನದಲ್ಲಿ ಕೇತು ಬೇರೆ ಉಚ್ಚ ಏನೋ ಒಂದು ರೀತಿಯ ಮೈ ಮರೆವನ್ನು ತಂದಿಡುವಂತಹ ಭೀತಿ ಇದೇ ಎಚ್ಚರಿಕೆ. ಕೌಟುಂಬಿಕವಾಗಿ ಮಾನಸಿಕವಾಗಿ ಬಾಧೆಯನ್ನು ಪಡುತ್ತೀರಿ. ತುಲಾ ರಾಶಿಯವರಿಗೆ ಆಕಸ್ಮಿಕ ಕುತ್ತು , ಆಪತ್ತು ತಂದಿಡುವಂತಹ ಎಳೆದಾಟ ವಿದೆ ಎಚ್ಚರಿಕೆ. ಮುಖ್ಯವಾಗಿ ನಿಮ್ಮ ಮನಸ್ಸು ನಿಮ್ಮ ಸ್ಥಿಮಿತದಲ್ಲಿ ಇರುವುದಿಲ್ಲ. ನಿಮ್ಮ ಮಾತು ನಿಮ್ಮದಾಗುವುದಿಲ್ಲ. ನಮ್ಮವರಿಲ್ಲ ನಮ್ಮನ್ನು ಪ್ರೀತಿಸುವವರಿಲ್ಲ ಎಲ್ಲಾದರೂ ದೂರ ಹೋಗಿ ಬದುಕೋಣ ಎಂಬ ಭಾವ ಬರುತ್ತದೆ. ಸಮುದ್ರದ ಹಾಗೆ ಎಷ್ಟೇ ಅಡೆತಡೆಗಳು ಕಷ್ಟಗಳು ಬಂದರೂ ಶಾಂತವಾಗಿ ಇದ್ದುಬಿಡಿ. ಸಮುದ್ರ ಘೋಷ ತುಲಾ ರಾಶಿಯವರಿಗೆ ಏನೋ ಒಂದು ರೀತಿಯ ಭೀತಿ ಮಾ’ಟ ಮಂತ್ರ ಪ್ರಯೋಗ ನಡೆಯುತ್ತಿದೆ ಎಂದು ಅನಿಸುತ್ತದೆ. ಲಾಭಾಧಿಪತಿಯಾದ ಸೂರ್ಯ ಹನ್ನೆರಡನೇ ಮನೆಯಲ್ಲಿ ಇರುವುದರಿಂದ ಎಳೆದಾಟವಿದೆ. ಬರುವ ದುಡ್ಡೆಲ್ಲಾ ಸುಂಕದ ರೀತಿಯಲ್ಲಿ ಖರ್ಚಾಗುತ್ತದೆ. ಸರ್ಕಾರದ ವ್ಯವಹಾರದಲ್ಲಿ ಮೋ’ಸದಿಂದ ಅನ್ಯ ಮಾರ್ಗದಲ್ಲಿ ಏನಾದರೂ ತೆಗೆದುಕೊಂಡಿದ್ದೆ ಆದಲ್ಲಿ ಬಾಧೆಗೆ ಒಳಗಾಗುತ್ತೀರ. ತುಲಾ ರಾಶಿಯವರ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಲು ಈ ಕೆಳಗಿನ ವಿಡಿಯೋವನ್ನು ನೋಡಿ.

Advertisement

ನಿಮ್ಮ ರಾಶಿ ಫಲದ  ಬಗ್ಗೆ ಮಾಹಿತಿ ಹೀಗಿದೆ :

ಮೇಷ ರಾಶಿ : ಸ್ವಲ್ಪ ಖರ್ಚಿನ ದಿನ ಆದರು  ಸ್ವಂತ ವ್ಯವಹಾರಗಳಲ್ಲಿ ಸರ್ಕಾರಿ ವ್ಯವಹಾರಗಳಲ್ಲಿ ಪ್ರಗತಿ.

ವೃಷಭ ರಾಶಿ : ಪರಿಶ್ರಮ ಉಂಟು ಪರಿಶ್ರಮಕ್ಕೆ ತಕ್ಕಂತೆ ಬೆಲೆಯೂ ಉಂಟು ತೊಂದರೆ ಏನೂ ಇಲ್ಲ.

ಮಿಥುನ ರಾಶಿ : ಪರಿಶ್ರಮದಿಂದ ಸ್ವಲ್ಪ ಲಾಭವುಂಟು ಹಾಗೆಯೇ ನಿಮ್ಮ ಕೆಳ ವರ್ಗದ ಕೆಲಸದವರಿಂದ ಎಳದಾಟ ಕೂಡ ಉಂಟು.

ಕರ್ಕಾಟಕ ರಾಶಿ : ಚೆನ್ನಾಗಿದೆ ತೊಂದರೆಯೇನೂ ಇಲ್ಲ ಅದೃಷ್ಟವೊಂದೇ ನಮ್ಮ ಜೀವನವನ್ನು ನಡೆಸುವುದಿಲ್ಲ ಯೋಗ್ಯತೆಯೂ ಬೇಕು ಆ ಯೋಗ್ಯತೆಯನ್ನು ಸಂಪಾದಿಸಿ ಕೊಳ್ಳುವಂತಹ ದಿನ ಇಂದು.

ಸಿಂಹ ರಾಶಿ : ಚಂದ್ರ ಶನಿ ಸಾರದಲ್ಲಿ ಅಷ್ಟಮದಲ್ಲಿರುವುದರಿಂದ ಎದ್ದೇಳುವುದು,  ಹೋಗುವುದು,  ಮಾಡುವ ಎಲ್ಲ ರೀತಿ ಕೆಲಸ ಕಾರ್ಯಗಳು ಸ್ವಲ್ಪ ವಿಳಂಬ ಆದ್ದರಿಂದ  ಒಂದು ಬೊಗಸೆ ಎಳ್ಳೆಣ್ಣೆಯನ್ನು ಹನುಮಂತ ದೇವಸ್ಥಾನಕ್ಕೆ ಕೊಟ್ಟು ಅರ್ಚನೆ ಮಾಡಿಸಿ ಮುಂದಕ್ಕೆ ಹೆಜ್ಜೆ ಇಡಿ.

ಕನ್ಯಾ ರಾಶಿ : ಹುಳಿ ತತ್ವ,  ವಿಪರೀತ ಗ್ಯಾಸ್ಟಿಕ್,  ದೇಹದಲ್ಲಿ ಶಕ್ತಿಯೇ ಇಲ್ಲದಿರುವುದು , ಸೂರ್ಯ ವಿಪರೀತವಾಗಿರುವುದರಿಂದ ಬ್ರಹ್ಮ ಶಂಕರವನ್ನು ಸೇವಿಸಿ ನೀವು ಚಟುವಟಿಕೆಯಿಂದ ಇರುತ್ತೀರಿ. ನಿಮ್ಮ ಸ್ವಭಾವ ತಮ್ಮ ಮನಸ್ಸು ಮಕ್ಕಳಂತೆಯೇ ಹಾಗಾಗಿ ಬ್ರಹ್ಮಾವರವನ್ನು ಸೇವಿಸಿ ಸದಾ ಚಟುವಟಿಕೆಯಿಂದ ಇರಿ.

ತುಲಾ ರಾಶಿ : ಕಾನೂನು ಪಂಡಿತರು,  ಡಾಕ್ಟರ್,  ಸ್ಪೆಷಲಿಸ್ಟ್, ಆಗಿರುವವರಿಗೆ ಇಂದು ಪ್ರಗತಿಯ ದಿನ.

ವೃಶ್ಚಿಕ ರಾಶಿ : ವಿಶೇಷ ಬಲವಿರುವ ದಿನ ಅದ್ಭುತವಾದ ದಿನ. ಗೌರವ ಹೆಸರು ಪ್ರತಿಷ್ಠೆಯನ್ನು ವೃತ್ತಿಪರವಾಗಿ ಪಡೆಯುತ್ತೀರಾ. ದಿನದ ಆರಂಭ ವಿಳಂಬವಾದರೂ ಗೆಲ್ಲುತ್ತೀರಿ.

ಧನಸ್ಸು ರಾಶಿ :  ನೀವು ಮಾಡುವುದಿಲ್ಲ ಬೇರೆಯವರನ್ನು ಬಿಡುವುದಿಲ್ಲ ಈ ರೀತಿಯಾದ ಭಾವ ಆದ್ದರಿಂದ ತಾಯಿಯಿಂದ ಅಥವಾ ತಾಯಿ ಸಮಾನರಾದ ಧರ್ಮಪತ್ನಿಯಿಂದ ಅಥವಾ ಅಕ್ಕ ತಂಗಿಯರಿಂದ   ಒಂದು ರೂಪಾಯಿಯನ್ನಾದರೂ ತೆಗೆದುಕೊಂಡು ತೂಗಿ ಒಳ್ಳೆಯದಾಗುತ್ತದೆ.

ಮಕರ ರಾಶಿ : ಅಂದುಕೊಂಡ ಕೆಲಸ ಕಾರ್ಯಗಳೆಲ್ಲವೂ ಸುಸೂತ್ರವಾಗಿ ನಡೆದುಕೊಂಡು ಹೋಗುವಂತಹ ದಿನ ಚೆನ್ನಾಗಿದೆ ಆದರೆ ಟ್ಯಾಕ್ಸ್ ಡಿಪಾರ್ಟ್ಮೆಂಟ್ ನಲ್ಲಿ ಕೆಲಸ ಮಾಡುವವರಿಗೆ ಸ್ವಲ್ಪ ತಲೆಬಿಸಿ ತಲೆನೋವಿನ ಸಂಭವವೂ ಕೂಡ ಇದೆ.

ಕುಂಭ ರಾಶಿ : ಎದ್ದಿದ್ದು ಲೇಟ್ ಓಡಾಟ ಲೇಟು ಮಾಡುವ ಕೆಲಸವೂ ಕೂಡ ಲೇಟು ಸ್ವಲ್ಪ ಪ್ರಯಾಸ ಎನಿಸಿದರೂ ಕೂಡ ದಿನದ ಅಂತ್ಯಕ್ಕೆ ಶುಭಕರವಾದ ದಿನ.

ಮೀನ ರಾಶಿ : ಚೆನ್ನಾಗಿದೆ ಅದ್ಭುತವಾಗಿ ಇರುವಂತಹ ದಿನ ತೊಂದರೆ ಏನೂ ಇಲ್ಲ ಆದರೆ ಸ್ವಲ್ಪ ಲೆಕ್ಕಾಚಾರ ಮಾಡುತ್ತೀರಿ ಮಾಡುವಂತಹ ಖರ್ಚೆಲ್ಲಾ ಒಳ್ಳೆಯದಕ್ಕೆ ಆಗುತ್ತದೆ ಚಿಂತಿಸಬೇಡಿ.

All Rights reserved Namma  Kannada Entertainment.

Advertisement
Share this on...