ರಾಹು ಕೇತು ಬದಲಾವಣೆ :ಈ ರಾಶಿಯವರಿಗೆ ಅಧಿಕಾರ ಯೋಗ, ವಾಹನ ಯೋಗ, ಭೂಮಿ ಯೋಗ, ಅದೃಷ್ಟ ಯೋಗ….

in ಜ್ಯೋತಿಷ್ಯ 2,188 views

ಶ್ರೀ ಶಾರ್ವರಿ ನಾಮ ಸಂವತ್ಸರೆ, ದಕ್ಷಿಣಾಯಣೆ, ಶರತ್   ಋತು,  ಅಧಿಕ ಮಾಸೆ,  ಕೃಷ್ಣ  ಪಕ್ಷದ ಪಂಚಮಿ ತಿಥಿ, ರೋಹಿಣಿ ನಕ್ಷತ್ರ, ವ್ಯತಿಪಾತಿ ಯೋಗ,  ತೈತುಲ ಕರಣ, ಅಕ್ಟೋಬರ್ 7   ಬುಧವಾರದ ಪಂಚಾಂಗ ಫಲವನ್ನು ಶ್ರೀ ರವಿಶಂಕರ್ ಗುರೂಜಿ ಅವರು ನೀಡಿದ್ದಾರೆ.  ಇಂದು ಅಮೃತ ಕಾಲ ಸಂಜೆ  5 ಗಂಟೆ 2 ನಿಮಿಷದಿಂದ  6 ಗಂಟೆ 49 ನಿಮಿಷದವರೆಗೂ ಇದೆ.

Advertisement

ಗುಪ್ತನಿಧಿ ಗುಪ್ತ ಶಕ್ತಿ ನಿಗೂಢ ಶಕ್ತಿ ರಾತ್ರಿ ಕನಸಿನಲ್ಲಿ ಮನೆಯಲ್ಲ ಗೆಜ್ಜೆ ಧರಿಸಿ ಓಡಾಡಿದಂತೆ ಅನುಭವ, ವಿಚಿತ್ರವಾದ ಕನಸುಗಳು ಬೀಳುವುದು,  ಅದು ನಿಜವಾಗುವುದು ಎನ್ನುವಂತೆ ಭಾಸವಾಗುವುದು. ಯಾರನ್ನಾದರೂ ನೋಡಿದಾಗ ಇವರನ್ನು ಎಲ್ಲವನ್ನೂ ನೋಡಿದ್ದೇನೆ ಎಂದು ಅನಿಸುವುದು, ಯಾವುದೋ ಒಂದು ಜಾಗವನ್ನು ಮೊದಲೇ  ನೋಡಿದ್ದೇನೆ ಎಂಬ ಭಾವ,  ತನ್ನ ಶಕ್ತಿಯ ಮೇಲೆಯೇ ಅನುಮಾನ, ಇದು ಕೂಡ ರಾಹು ಪ್ರಭಾವವೇ . ಒಳಗಡೆ ಇರುವ  ಅಪಾರವಾದ ಶಕ್ತಿಯು ರಾಹು ಪ್ರೇರಣೆ ಇಲ್ಲದೇ ಹೊರಗೆ ಬರುವುದಿಲ್ಲ. ಜಟ್ಟಿಯಾಗುವುದು,  ಮಲ್ಲಯುದ್ಧ,  ಕುಸ್ತಿ ಮಾಡುವುದು , ಪೊಲೀಸ್,   ಸ್ಪೋರ್ಟ್ಸ್ ಮ್ಯಾನ್, ಲಾಯರ್,  ಜಡ್ಜ್,  ಗೋರಿಗಳು, ಜಟಾ ಧಾರಿಗಳು,  ಸಾಧುಗಳು, ಇವರೆಲ್ಲರಿಗೂ ರಾಹು ಪ್ರಭಾವವಿರುತ್ತದೆ.

Advertisement

Advertisement

 

Advertisement

ಕುಂಭ ರಾಶಿಗೆ ರಾಹು ನಾಲ್ಕನೆ ಮನೆಯಲ್ಲಿ ದಶಮ ಸ್ಥಾನದಲ್ಲಿ ಉಚ್ಚನಾಗಿದ್ದಾನೆ ಭಾಗ್ಯ ಸ್ಥಾನದಲ್ಲಿ ಬುಧ, ವಿಶೇಷವಾಗಿ  ಗುರು ಹನ್ನೊಂದನೇ ಮನೆ, ಹನ್ನೆರಡನೇ ಮನೆಯಲ್ಲಿ ಶನಿ,  ಮೂರನೇ ಮನೆಯಲ್ಲಿ ಕುಜ ಇರುವುದರಿಂದ ಬಲ ಬರುತ್ತದೆ.  ಬಲದಿಂದ ಹೆಚ್ಚು ಹೆಚ್ಚು ದುಡಿಯುತ್ತೀರಿ ಅಷ್ಟೇ ಖರ್ಚು ಕೂಡ ಆಗುತ್ತದೆ. ಸ್ತ್ರೀ ವಿಚಾರದಲ್ಲಿ ಎಳೆದಾಟ ಮತ್ತು  ಒಂದು ಪೆಟ್ಟು ಕೂಡ ಇದೆ.  ಕುಜ ಶುಕ್ರನ ಸಾರದಲ್ಲಿ ಇರುವುದರಿಂದ ಒಡಹುಟ್ಟಿದವರ ಏಳಿಗೆಯಾಗುತ್ತದೆ. ಬದುಕು ತುಂಬಾ ಅದ್ಭುತವಾಗಿರುತ್ತದೆ.  ಒಡಹುಟ್ಟಿದ ಸ್ತ್ರೀಯರಿಗೆ  ಬೆನ್ನೆಲುಬಾಗಿ ನಿಲ್ಲುತ್ತೀರ.   ಪುತ್ರ ಸಂತಾನ ಯೋಗವಿದೆ ಸರ್ಕಾರಿ ಕೆಲಸದ ಯೋಗವೂ ಕೂಡ ಇದೆ. ತಂದೆ ತಾಯಿಯ ಮತ್ತು ಹಿರಿಯರ ಆರೋಗ್ಯದ ಕಡೆ ಗಮನ ಕೊಡಿ.   ಚಂದ್ರ ಗುರು ಸ್ಥಳದಲ್ಲಿದ್ದು ಕೇತು ಕೇತು ಸಾರದಲ್ಲಿ ಇರುವುದರಿಂದ ನದಿ ಸ್ನಾನ,  ಸಮುದ್ರ ಸ್ನಾನ,  ದೇವಿ ದರ್ಶನ, ಶಿವದರ್ಶನ , ಗುರುದರ್ಶನ,  ಗುರು ಕಟಾಕ್ಷಕ್ಕೆ ಒಳಗಾಗುವ ಸುಯೋಗ. ಅಧಿಕಾರ ಯೋಗ ವಾಹನ ಯೋಗ ಭೂಮಿ ಯೋಗ ಅದೃಷ್ಟ ಯೋಗ ಬುಧ ವರ್ಗೋತ್ತಮನಾಗಿ ನಿಲ್ಲುವಂತಹ ಅದ್ಭುತ. ಶಕ್ತಿ ದೇವತೆಯನ್ನು ದೇವತೆಯ ಪೂಜೆಯನ್ನು ಅಷ್ಟಮಿ ದಿನ ಮಂಗಳವಾರ ಶುಕ್ರವಾರದಂದು ಮನೆಯಲ್ಲಿ ಎಲ್ಲರೂ ಸೇರಿ ಪೂಜೆ ಮಾಡಿಕೊಳ್ಳಿ . ಮನೆಯವರ ಎಲ್ಲರ ಹೆಸರಿನಲ್ಲಿ ಏನಾದರೂ ಸೇವೆಯನ್ನು ಮಾಡಿಸಿ . ಕುಂಭ ರಾಶಿಗೆ ರಾಹು ಆಗಮನದಿಂದಾಗುವ ಫಲಾನುಫಲಗಳ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಲು ಈ ಕೆಳಗಿನ ವಿಡಿಯೋವನ್ನು ನೋಡಿ.

ನಿಮ್ಮ ರಾಶಿ ಫಲದ  ಬಗ್ಗೆ ಮಾಹಿತಿ ಹೀಗಿದೆ :

ಮೇಷ ರಾಶಿ : ಚೆನ್ನಾಗಿದೆ ಭೂಮಿ ಮನೆ ವ್ಯವಹಾರಗಳಲ್ಲಿ ವಿಶೇಷ ಪ್ರಗತಿ ಆದರೆ ಅಡ್ಡದಾರಿಯಲ್ಲಿ ಭೂಮಿಯನ್ನು ತೆಗೆದುಕೊಂಡಿದ್ದರೆ ಅದರಿಂದ ಕೈ ಸುಟ್ಟುಕೊಳ್ಳುತ್ತೀರ.

ವೃಷಭ ರಾಶಿ : ಇಂತಹ ಶತ್ರುವಾದರು  ನಿಮ್ಮ ಮುಂದೆ ತಲೆ ತಗ್ಗಿಸಬೇಕು ಮುಂದಕ್ಕೆ ಹೆಜ್ಜೆ ಯಾಕೆ ಗೆಲುವು ನಿಮ್ಮದೆ.

ಮಿಥುನ ರಾಶಿ : ಚಂದ್ರನ ಭಾವದಲ್ಲಿ ಚಂದ್ರನೇ ಇರುವುದರಿಂದ ಅಲ್ಲಿ ರಾಹು ಸೇರಿರುವುದರಿಂದ ಆತಂಕಕ್ಕೆ ಒಳಗಾಗುತ್ತೀರ. ಆದ್ದರಿಂದ ಮನೆಯಲ್ಲಿ ಕಾಮಾಕ್ಷಿ ದೀಪವನ್ನು ಹಚ್ಚಿ.

ಕರ್ಕಾಟಕ ರಾಶಿ : ಮನಸ್ಸು ಒಂದು ವೃತ್ತಿಯ ಪ್ರಫುಲ್ಲತೆಯಿಂದ ಇರುತ್ತದೆ ನೊಂದುಕೊಂಡ ಕೆಲಸ ಕಾರ್ಯಗಳೆಲ್ಲವೂ ಪ್ರಗತಿ ಹೊಂದುವಂತಹ ದಿನ.

 

ಸಿಂಹ ರಾಶಿ : ತಂದೆಯ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದಾರೆ ಅದರಲ್ಲಿ ಸ್ವಲ್ಪ ಎಳೆದಾಟ ವಿರುದ್ಧದ ನನ್ನ ಬಿಟ್ಟರೆ ಯಾವುದೇ ರೀತಿಯ ತೊಂದರೆ ಇಲ್ಲ.

ಕನ್ಯಾ ರಾಶಿ : ಹತ್ತಿರದವರ ವಿಚಾರದಿಂದ ಮನಸ್ಸಿಗೆ ಸ್ವಲ್ಪ ನೋವು ಮತ್ತು ದುಡುಕಿ ಮಾತನಾಡುವ ಸಂಭವವಿರುತ್ತದೆ ಮನಸ್ಸನ್ನು ಸ್ವಲ್ಪ ಹುಳಿ ಮಾಡಿಕೊಳ್ಳುತ್ತೀರ ಬೆಳಗ್ಗೆ ಎದ್ದ ತಕ್ಷಣ ಒಂದು ಸ್ಪೂನ್ ಜೇನು ತುಪ್ಪವನ್ನು ಸೇವಿಸಿ ವಿಷ್ಣುಸಹಸ್ರನಾಮವನ್ನು ಕೇಳಿ. ಬುಧ ಚೆನ್ನಾಗಿದ್ದಾನೆ ಬುದ್ಧಿ ಮಾತನ್ನು ಕೇಳಿ ಮನಸ್ಸಿನ ಮಾತನ್ನು  ಕೇಳಬೇಡಿ.

ತುಲಾ ರಾಶಿ : ವ್ಯವಹಾರ ವ್ಯಾಪಾರ ಕನ್ಸಲ್ಟೆಂಟ್ ಆಗಿದ್ದಾರೆ ಅದ್ಭುತ ಆಗಿರುವಂತಹ ದಿನ.

ವೃಶ್ಚಿಕ ರಾಶಿ : ಶತ್ರುವಿನಿಂದಲೂ ಲಾಭ ಬರುವಂತಹ ದಿನ.

ಧನಸ್ಸು ರಾಶಿ : ಆರೋಗ್ಯವನ್ನು ಸ್ವಲ್ಪ ನೋಡಿಕೊಳ್ಳಿ.  ನಿಮ್ಮ ಹತ್ತಿರದವರಿಂದಲೇ ನಿಮಗೆ  ಮನಸ್ಸಿಗೆ ನೋವಾಗುವುಂಟು. ಗಂಡ ಹೆಂಡತಿಯ ನಡುವೆ ಅನುಮಾನಗಳ ಉಂಟಾಗುತ್ತದೆ ಇದರಿಂದ ಸುಮಂಗಲಿ ಪೂಜೆಯನ್ನು ಮಾಡಿಕೊಳ್ಳಿ.  ಎಂಟು ಶುಕ್ರವಾರಗಳ ಕಾಲ ಮನೆಯಲ್ಲಿ ತುಪ್ಪದ ದೀಪವನ್ನು ಹಚ್ಚಿ. ತುಪ್ಪದ ನೈವೇದ್ಯವನ್ನು ಇಟ್ಟು ಒಂಬತ್ತನೇ  ದಿನ ಐದು ಜನ ಮುತ್ತೈದೆಯರಿಗೆ ಅರಿಶಿನ ಕುಂಕುಮವನ್ನು ಕೊಡಿ ಇದರಿಂದ ಇಂತಹ ಅಡ್ಡ ಆಲೋಚನೆ ನಿಮ್ಮಲ್ಲಿ ಮತ್ತು  ನಿಮ್ಮ ಸಂಗಾತಿಯಲ್ಲಿ ಇದ್ದರೆ  ಅದು ದೂರವಾಗುತ್ತದೆ.

ಮಕರ ರಾಶಿ : ಚೆನ್ನಾಗಿದೆ, ತುಂಬಾ ಹತ್ತಿರದಿಂದ ನಿಮ್ಮ ಕೆಲಸ ಕಾರ್ಯಗಳಿಗೆ ಸಹಕಾರ ದೊರೆಯುತ್ತದೆ.

ಕುಂಭ ರಾಶಿ : ಆಗದ ಕೆಲಸ ಕಾರ್ಯಗಳು ಕೂಡ ಇಂದು ಸುಲಲಿತವಾಗಿ ಆಗುತ್ತದೆ. ಆದರೆ ಹತ್ತಿರದಿಂದ ಮನಸ್ಸಿಗೆ ನೋವು ಉಂಟಾಗುತ್ತದೆ.

ಮೀನ ರಾಶಿ : ಅಪಾರವಾದ ಬಲವಿದೆ ಏನೇ ಕೆಲಸ ಕಾರ್ಯಗಳನ್ನು ಮಾಡಬೇಕಾದರೂ ನೇರವಾಗಿ ಮುಂದಕ್ಕೆ ಹೆಜ್ಜೆ ಇಡಿ. ಕುಜ ವಕ್ರವಾಗಿ ಇರುವುದರಿಂದ ಸ್ವಲ್ಪ ಆತುರ ಬೇಡ. ಕುಜ ವಕ್ರವಾಗಿ ಇರುವುದರಿಂದ ಮೂಗಿಗೆ,  ಬಾಯಿಗೆ,  ನೆತ್ತಿಗೆ,  ಕಾಲಿಗೆ,  ಪೆಟ್ಟು ಉಂಟಾಗುತ್ತದೆ ಎಚ್ಚರಿಕೆ.

All Rights reserved Namma  Kannada Entertainment.

Advertisement
Share this on...