ರಾಹು ಕೇತು ಬದಲಾವಣೆ : ಈ ರಾಶಿಯವರಿಗೆ ವಿಪರೀತ ರಾಜಯೋಗ ! ಆದರೆ….

in ಜ್ಯೋತಿಷ್ಯ 13,416 views

ಶ್ರೀ ಶಾರ್ವರಿ ನಾಮ ಸಂವತ್ಸರೆ, ದಕ್ಷಿಣಾಯಣೆ, ಶರತ್   ಋತು,  ಅಧಿಕ ಮಾಸೆ, ಕೃಷ್ಣ ಪಕ್ಷದ ಚತುರ್ಥಿ ತಿಥಿ, ಕೃತಿಕ ನಕ್ಷತ್ರ, ಸಿದ್ದ  ಯೋಗ,  ಬಾಲವ ಕರಣ,  ಅಕ್ಟೋಬರ್ 06, ಮಂಗಳವಾರದ ಪಂಚಾಂಗ ಫಲವನ್ನು ಶ್ರೀ ರವಿಶಂಕರ್ ಗುರೂಜಿ ಅವರು ನೀಡಿದ್ದಾರೆ.   ಇಂದು ಅಮೃತ ಕಾಲ ಮಧ್ಯಾಹ್ನ 3 ಗಂಟೆ 12 ನಿಮಿಷದಿಂದ 5ಗಂಟೆ ವರೆಗೂ ಇದೆ.

Advertisement

ನಮಗೆ ಗೊತ್ತಿಲ್ಲದ ಹಾಗೆ ಒಂದು ಅಗೋಚರ ಶಕ್ತಿ ನಮಗೆ ಶಕ್ತಿಯನ್ನು ತುಂಬಿಸುವ ಮತ್ತು ನಿಶ್ಶಕ್ತಿಯನ್ನು ತುಂಬಿಸುವ ಕೆಲಸ ಮಾಡುತ್ತದೆ. ನಿಮ್ಮಲ್ಲಿ ಎಷ್ಟೇ ಪ್ರತಿಭೆ ಇದ್ದರೂ ಜ್ಞಾನವಿದ್ದರೂ ಅದನ್ನು ಸರಿಯಾಗಿ ಉಪಯೋಗಿಸಿಕೊಳ್ಳಲು ಆಗದೇ ಇರುವಂತೆ ಕಟ್ಟಿ ಹಾಕುವುದೇ ರಾಹು ಪ್ರಭಾವ. ಅಲ್ಲದೇ ಸ್ವಲ್ಪ ಮಾಡಿ ನಾನು ಅಷ್ಟು ಮಾಡಿದೆ ಎಂದು ಹೇಳಿಕೊಳ್ಳುವುದು ಕೂಡ ರಾಹುವಿನ ಪ್ರಭಾವವೇ. ನಿಜವಾಗಿ ಕೆಲಸ ಮಾಡುವವರು ಕುಬ್ಜವಾಗಿ ಮನಸ್ಸಿನಲ್ಲಿ ಇಟ್ಟುಕೊಂಡು ಯಾರಿಗೂ ಹೇಳುವುದಿಲ್ಲ ಇದು ಕೂಡ ರಾಹು ಪ್ರಭಾವ. ರಾಹು ಕೇತು ಚಲಿಸುವಾಗ ಗುರು ಹನ್ನೆರಡನೇ ಮನೆಯಲ್ಲಿದ್ದಾನೆ. ಯೋಗ ಕಾರಕ ಶುಕ್ರ ಕೇಂದ್ರಸ್ಥಾನದಲ್ಲಿದ್ದಾನೆ.  ಕುಜ ಕೇಂದ್ರ ಸ್ಥಾನದಲ್ಲಿ ವಕ್ರವಾಗಿ ಬಲವಾಗಿದ್ದಾನೆ. ಎದುರಾಳಿ ಬಲವಾಗಿ ಇರಬಾರದು ವ್ಯಾಪಾರ ಮಾಡುವಾಗ ಮನಸ್ಸನ್ನು ಹೇಳಿದ ಹಾಗೆ ಮಾಡಬಾರದು.

Advertisement

Advertisement

ಮನೋಕಾರಕ ಚಂದ್ರ ಕೆಟ್ಟು  ಹನ್ನೊಂದನೇ ಮನೆಯಲ್ಲಿದ್ದಾನೆ. ವಿಪರೀತ ರಾಜಯೋಗ ಮಕರ ರಾಶಿಯವರಿಗೆ ಪೂರ್ಣಕುಂಭ , ಪೂರ್ಣ ಮಳೆ,  ಪೂರ್ಣ ತೃಪ್ತಿ, ರಾಹು ಬರುವಾಗ ಪೂರ್ವ ಪುಣ್ಯಾ ಧಿಪತಿ ಶುಕ್ರ ಸಪ್ತಮದಲ್ಲಿ ಕುಳಿತಿದ್ದಾನೆ. ಹಂಡ್ರೆಡ್ ಪರ್ಸೆಂಟ್ ರಾಜಯೋಗ.  ರಾಜ್ಯ ಯೋಗವನ್ನು ಕೊಡುವಂತಹ ಸೂರ್ಯ ಭಾಗ್ಯ ಸ್ಥಾನದಲ್ಲಿದ್ದಾನೆ. ಭೂಮಿ ಮನೆ ಅಳು ಕಾಳು ಎಲ್ಲವನ್ನೂ ಪಡೆಯುವಂತಹ ಅದೃಷ್ಟ ಆದರೆ ಅದನ್ನು ಅನುಭವಿಸಲು ಕರ್ಮಾಧಿಪತಿಯಾದ ಶನಿ ವಕ್ರ ವಾಗಿರುವುದರಿಂದ  ಆತಂಕವಿರುತ್ತದೆ. ಇಷ್ಟು ದಿನ ನಡೆದ ಪೆಟ್ಟು ನೋವು ಆತಂಕ ಎಳೆದಾಟ.  ಗುರು ಧರ್ಮ ಕಾರ್ಯದಕ್ಕೆ ಖರ್ಚು ಮಾಡಿಸಲು ಹನ್ನೆರಡನೇ ಮನೆಯಲ್ಲಿದ್ದಾನೆ. ಶುಕ್ರ ಕೇಂದ್ರದಲ್ಲಿ ಕುಳಿತಿರುವುದರಿಂದ ನಾನೇ ಮದುವೆ ಎರಡನೇ ಬದುಕು. ಡೈವರ್ಸ್ ಆಗಿರುವವರು ಸಂಗಾತಿ ಇಲ್ಲದವರು ಎರಡನೇ ಮದುವೆ ಮಾಡಿಕೊಳ್ಳಲು ಅಥವಾ ಮರಳಿ ಬದುಕು ಕಟ್ಟಿಕೊಳ್ಳುವ ಸುಯೋಗವಿದೆ. ಗಿರ್ರನೆ ಅವಕಾಶವನ್ನು ಭಗವಂತ ನಿಮಗೇ ಕೊಡುತ್ತಿದ್ದೇನೆ ಅದನ್ನು ಸರಿಯಾಗಿ ಉಪಯೊಗಿಸಿಕೊಳ್ಳಿ.

Advertisement

ಮೂಲ ತ್ರಿಕೋನ ಸ್ಥಾನದಲ್ಲಿ ಶನಿ ರಾಹು ಸೂರ್ಯ ವಕ್ರವಾಗಿ ಯಾದರೂ ಅಧಿಕಾರವನ್ನು ತಂದು ಕೊಡುತ್ತದೆ. ಅದನ್ನು ಸರಿಯಾಗಿ ಉಪಯೋಗಿಸಿಕೊಳ್ಳಿ.  ಅಪಾರ ಹೆಸರು ಮನ್ನಣೆಯನ್ನು ಪಡೆಯುತ್ತೀರಿ,  ಗುಡಿಗೋಪುರಗಳನ್ನು ಕಟ್ಟಿಸುತ್ತೀರ ಕ್ಲಬ್ಬು ಪಬ್ಬು ಎಂಬ ವಿಚಾರಗಳಿಗೆ ಹೋಗಬೇಡಿ ಇದರಿಂದ ತೊಂದರೆಯಾಗುತ್ತದೆ.  ಮಕರ ರಾಶಿಯವರ ಬಗ್ಗೆ ಇನ್ನಷ್ಟು ಮಾಹಿತಿಯನ್ನು ತಿಳಿದುಕೊಳ್ಳಲು ಈ ಕೆಳಗಿನ ವಿಡಿಯೊವನ್ನು ನೋಡಿ.

ನಿಮ್ಮ ರಾಶಿ ಫಲದ  ಬಗ್ಗೆ ಮಾಹಿತಿ ಹೀಗಿದೆ :

ಮೇಷ ರಾಶಿ : ಚೆನ್ನಾಗಿದೆ ಸೂರ್ಯನ ಪ್ರಭಾವದಲ್ಲಿ ಚಂದ್ರ ಇರುವುದರಿಂದ ಅನುಕೂಲಕರ ನಿಮ್ಮ ಆಲೋಚನೆಗೆ ತಕ್ಕಂತೆ ಕೆಲಸ ಕಾರ್ಯಗಳನ್ನು ನಡೆಸಿಕೊಂಡು ಹೋಗುವಂತಹ ಅನುಕೂಲಕರವಾದ ದಿನ.

ವೃಷಭ ರಾಶಿ : ಒಂದು ರೀತಿಯ ಗ್ರಹಣದ ಛಾಯೆ ಸೂರ್ಯ ಚಂದ್ರನ ಸಾಲದಲ್ಲಿದ್ದ ಚಂದ್ರ ಸೂರ್ಯನ ಸಾರದಲ್ಲಿ ಇರುವುದರಿಂದ ಸ್ವಲ್ಪ ಗಲಿಬಿಲಿಯ ವಾತಾವರಣ ಉಂಟಾಗುತ್ತದೆ ಶಿವ ಸಹಸ್ರನಾಮ ಅಥವಾ ಓಂ ನಮಃ ಶಿವಾಯ ಎಂದು ಜಪ ಮಾಡಿಕೊಳ್ಳಿ ಬೆಳಗ್ಗೆ ತಿಂಡಿ ತಿನ್ನುವ ಮೊದಲು ಸ್ವಲ್ಪವನ್ನು ಪಶುಪಕ್ಷಿಗಳಿಗೆ ಹಾಕಿ ಆನಂತರ ತಿಂಡಿಯನ್ನು ಸೇವಿಸಿ ಸಮಾಧಾನ ಎನಿಸುತ್ತದೆ.

ಮಿಥುನ ರಾಶಿ : ಪ್ರಯಾಣದಲ್ಲಿ ಸ್ವಲ್ಪ ವಿಳಂಬವನ್ನು ಬಿಟ್ಟರೆ ಮಿಕ್ಕಂತೆ ಯಾವುದೇ ರೀತಿಯ ತೊಂದರೆ ಇಲ್ಲ.

ಕರ್ಕಾಟಕ ರಾಶಿ : ಮನೋಬಲ ಯಾವಾಗ ಮನಸ್ಸಿಗೆ ಬಲವಿರುತ್ತದೆ ಆಗ ಮಾಡುವ ಎಲ್ಲ ಕೆಲಸ ಕಾರ್ಯಗಳು ಕೂಡ ಪ್ರಗತಿಯಾಗುತ್ತದೆ.

ಸಿಂಹ ರಾಶಿ : ಸ್ವಂತ ಉದ್ಯೋಗ ವ್ಯಾಪಾರ ವ್ಯವಹಾರಗಳಲ್ಲಿ ಸ್ವಲ್ಪ ಖರ್ಚು ವೆಚ್ಚಗಳು ಹೆಚ್ಚು.

ಕನ್ಯಾ ರಾಶಿ : ಲಾಭ ಕಾರಕ  ದಿನ. ತಂದೆ ಮಾವ ಮತ್ತಿತರ ಆತ್ಮೀಯರೊಡನೆ ಮಾಡುತ್ತಿರುವಂತಹ ಕೆಲಸ ಕಾರ್ಯಗಳಲ್ಲಿ ವಿಶೇಷ ಪ್ರಗತಿ .

ತುಲಾ ರಾಶಿ : ಉದ್ಯೋಗದಲ್ಲಿ ಪರಿಶ್ರಮದ ಛಾಯೆ ನನ್ನನ್ನು ಗುರುತಿಸುವಿಕೆ  ಇಲ್ಲ ಎಂಬ ತಳಮಳ ಸೂರ್ಯ ಯಂತ್ರವನ್ನು ಧರಿಸಿ. ನಿಮಗೆ ಎರಡನೇ ಮನೆಯಲ್ಲಿ ಕೇತು ಇರುವುದರಿಂದ ನಿಮ್ಮ ಎಲ್ಲ ಶಕ್ತಿಗಳನ್ನು ಅದು ಕಟ್ಟಿ ಹಾಕಿಬಿಡುತ್ತದೆ.

ವೃಶ್ಚಿಕ ರಾಶಿ : ವಿಜಯ ಪ್ರಾಪ್ತಿ ಮಾಡುವ ಎಲ್ಲ ಕೆಲಸ ಕಾರ್ಯಗಳಲ್ಲೂ ವಿಶೇಷ ಫಲ .

ಧನಸ್ಸು ರಾಶಿ : ಬರವಿದೆ ಗೌರವ ಇದೆ ಸನ್ಮಾನ ಇದೇ ಉದ್ಯೋಗದಲ್ಲಿ ಒಂದು ರೆಸ್ಪೆಕ್ಟ್ ಸಿಗುವಂತಹ ಅದ್ಭುತವಾದ ದಿನ.

ಮಕರ ರಾಶಿ : ಹೊಟ್ಟೆ ನೋವು, ಹೊಟ್ಟೆ ತೊಳಲುವಿಕೆ, ವಾಟರ್ ಇನ್ಫೆಕ್ಷನ್ ಥ್ರೋಟ್ ಇನ್ಫೆಕ್ಷನ್ ಆಗುವ ಸಂಭವವಿದೆ ಆದಷ್ಟು ಹೊರಗಡೆ ತಿನ್ನುವುದನ್ನು ಕಡಿಮೆ ಮಾಡಿ. ಜೊತೆಗೆ ಶಂಕರ ಅಮೃತವನ್ನು ಸೇವಿಸಿ.

ಕುಂಭ ರಾಶಿ : ಆಗದ ಕೆಲಸಗಳೆಲ್ಲವನ್ನು ಸುಲಲಿತವಾಗಿ ಮಾಡಿಕೊಳ್ಳುವಂತಹ ಅದ್ಭುತವಾದ ದಿನ ವಕ್ರವಾಗಿರುವುದರಿಂದ ಕೆಲವು ರಾಶಿಗಳಿಗೆ ಯೋಗ ಅಂತಹ ರಾಶಿಗಳಲ್ಲಿ ಕುಂಭ ರಾಶಿ ಕೂಡ ಒಂದು.

ಮೀನ ರಾಶಿ : ಚೆನ್ನಾಗಿದೆ ಸ್ವಲ್ಪ ಹೊಟ್ಟೆ ನೋವಿನ ಸಮಸ್ಯೆ, ವಿಪರೀತ ಉಷ್ಣದ ಬಾಧೆಯಿಂದ ಬಳಲುವಿರಿ. ಕಾಮಕಸ್ತೂರಿ ಬೀಜವನ್ನು ನೀರಿನಲ್ಲಿ ನೆನೆಸಿ ಎರಡು ಗಂಟೆಗಳ ನಂತರ ಅದನ್ನು ಕುಡಿಯಿರಿ. ಇಲ್ಲವೇಸ್ವಲ್ಪ ನಿಂಬೆಹಣ್ಣನ್ನು ಸೇರಿಸಿದ ಎಳನೀರನ್ನು ಸೇವಿಸಿ ತಂಪಾಗುತ್ತದೆ.

All Rights reserved Namma  Kannada Entertainment.

Advertisement
Share this on...