ರಾಹು ಕುಜ ಶನಿಯ ವಿ’ಸ್ಫೋ’ಟಕ್ಕೆ ದೈವ ಸಂಕಲ್ಪ

in ಜ್ಯೋತಿಷ್ಯ 1,603 views

ಶ್ರೀ ಶಾರ್ವರಿ ನಾಮ ಸಂವತ್ಸರೆ, ದಕ್ಷಿಣಾಯಣೆ, ಶರತ್   ಋತು,  ಅಧಿಕ ಮಾಸೆ,  ಕೃಷ್ಣ  ಪಕ್ಷದ ಚತುರ್ದಶಿ ತಿಥಿ, ಉತ್ತರಫಾಲ್ಗುಣಿ  ನಕ್ಷತ್ರ,  ಬ್ರಹ್ಮ ಯೋಗ, ಭದ್ರಾಂಕ್ ಕರಣ, ಅಕ್ಟೋಬರ್ 15 , ಗುರುವಾರದ ಪಂಚಾಂಗ ಫಲವನ್ನು ಶ್ರೀ ರವಿಶಂಕರ್ ಗುರೂಜಿ ಅವರು ನೀಡಿದ್ದಾರೆ.   ಇಂದು ಅಮೃತ ಕಾಲ ಬೆಳ್ಳಗೆ  11 ಗಂಟೆ 35 ನಿಮಿಷದಿಂದ ಮದ್ಯಾಹ್ನ 1ಗಂಟೆ ವರೆಗೂ ಇದೆ.

Advertisement

ವಿಶೇಷವಾದ ದೈವ ಸಂಕಲ್ಪದ ಬಗ್ಗೆ ಗುರೂಜಿ ರವರು ಇಂದು ತಿಳಿಸಿಕೊಡಲಿದ್ದಾರೆ. ಕುಜ ಮತ್ತು ಶನಿ ಪಕ್ಕ ಪಕ್ಕದಲ್ಲಿ ಬರಬಾರದು ಬಂದರೆ ವಿ’ಸ್ಫೋ’ಟವಾಗುತ್ತದೆ. ಶನಿ ಕುಜ ರಾಹು ಒಟ್ಟಿಗೆ  ಇದ್ದರೆ ಸರಿಯಾಗಿರುವುದು ಉಲ್ಟಾ ಆಗುತ್ತದೆ, ಉಲ್ಟಾ ಇರುವುದು ಸರಿಯಾಗುತ್ತದೆ. ಶನಿ ಕುಜ ರಾಹು ಒಟ್ಟಿಗೆ ಇದ್ದಾಗ ಗೆಲ್ಲುವಂಥವರು ಸೋಲುತ್ತಾರೆ,  ಸೋಲುವವರು ಗೆಲ್ಲುತ್ತಾರೆ,  ತುಂಬಾ ಕನ್ಫ್ಯೂಸ್ ಗಳು ಕೂಡ ಉಂಟಾಗುತ್ತದೆ. ಗಾಳಿ ವಿ’ಸ್ಫೋ’ಟ, ಕಾಯಿಲೆ ವಿ’ಸ್ಫೋ’ಟ,  ಮಳೆ ವಿ’ಸ್ಫೋ’ಟಗಳಾಗುತ್ತವೆ. ನೀವು ಮಾಡದೆ ಇರುವ ತಪ್ಪಿಗೆ ನೋವು ತಿನ್ನುತ್ತಿದ್ದರೆ,  ಅವಮಾನಗಳು ಆಗುತ್ತಿದ್ದರೆ , ಶಿ’ಕ್ಷೆ  ಅನುಭವಿಸುವಂತಾದರೆ,  ನೀವು ಏನು ತಪ್ಪು ಮಾಡಿಲ್ಲದಿದ್ದರೂ ಕೂಡ ನೀವು ಕಷ್ಟಕ್ಕೆ ಸಿಲುಕಿ ಕೊಳ್ಳುವಂತಹ ಪರಿಸ್ಥಿತಿ ಸೃಷ್ಟಿಯಾಗುತ್ತದೆ, ಅದು ರಾಹು ಕುಜ ಶನಿಯ ಪ್ರಭಾವ.  ಯಾರಿಗೆ ಈ ರೀತಿ ಆಗುತ್ತಿರುತ್ತದೊ ಅಂಥವರು ಪ್ರತಿ ಅಮಾವಾಸ್ಯೆಯ ಹಿಂದಿನ ದಿನ ದೇವಿ ಕ್ಷೇತ್ರಕ್ಕೆ ಅಥವಾ ಸರ್ಪ ಕ್ಷೇತ್ರಕ್ಕೆ ಹೋಗಿ ಉಳಿದುಕೊಳ್ಳಿ. ಅಮವಾಸ್ಯೆಯ ಪೂಜೆ ಮಾಡಿಸಿ ದೇವಿಗೆ  ಅರ್ಚನೆ   ಅರಿಸಿನದ  ಅಭಿಷೇಕ ಮಾಡಿಸಿ ಆ ಅರಿಶಿನವನ್ನು ತಂದು ಮನೆಯಲ್ಲಿ ಪ್ರೋಕ್ಷಣೆ ಮಾಡಿ.  ಜೊತೆಗೆ ಮನೆಯಲ್ಲಿ ಅಷ್ಟಮಿಯ ದಿನದಂದು ಸ್ವಸ್ತಿಕ ಯಂತ್ರವನ್ನು ಸ್ಥಾಪಿಸಿ. ಶನಿ ಕುಜ ರಾಹು ಸಂಧಿ ಬಗ್ಗೆ ಮತ್ತಷ್ಟು ವಿಚಾರವನ್ನು ತಿಳಿಯಲು ಈ ಕೆಳಗಿನ ವಿಡಿಯೋವನ್ನು ನೋಡಿ.

Advertisement

Advertisement

ನಿಮ್ಮ ರಾಶಿ ಫಲದ  ಬಗ್ಗೆ ಮಾಹಿತಿ ಹೀಗಿದೆ :

Advertisement

ಮೇಷ ರಾಶಿ : ಚಂದ್ರ ವಿಶೇಷವಾಗಿ ಸೂರ್ಯನ ಸಾರದಲ್ಲಿ ಇರುವುದರಿಂದ ಚೆನ್ನಾಗಿದೆ ಆದರೆ ಭೂಮಿಯ ವಿಚಾರದಲ್ಲಿ ತಗಾದೆಗಳು ಇದ್ದರೆ ತೊಳಲಾಡಿ ಬಿಡುತ್ತೀರಾ ಕೋರ್ಟಿನ ವರೆಗೂ ತೆಗೆದುಕೊಂಡು ಹೋಗುತ್ತದೆ ಎಚ್ಚರಿಕೆ.

ವೃಷಭ ರಾಶಿ : ಮಕ್ಕಳ ವಿಚಾರದಲ್ಲಿ ಹಿರಿಯರ ವಿಚಾರದಲ್ಲಿ ಸ್ವಲ್ಪ ಕಿರಿಕಿರಿ ಇರುತ್ತದೆ. ಆತಂಕ ಗಾಬರಿ ನಾಳೆ ಅಮಾವಾಸ್ಯೆಯಾದರೂ ಇಂದೇ ಅಮಾವಾಸ್ಯೆಯ ಪ್ರಭಾವವಿರುತ್ತದೆ ಆದ್ದರಿಂದ ಸ್ವಸ್ತಿಕ ಯಂತ್ರವನ್ನು  ಮನೆಯಲ್ಲಿ ಇರಿಸಿ ಪೂಜಿಸಿ.

ಮಿಥುನ ರಾಶಿ : ಸರಕಾರಿ ಮಟ್ಟದ ಹಾಗೂ ಸ್ವಂತ  ವ್ಯವಹಾರಗಳಲ್ಲಿ ಇರುವವರಿಗೆ ಪ್ರಗತಿ.

ಕರ್ಕಾಟಕ ರಾಶಿ : ವಿಜಯೋತ್ಸವ, ಮಾಡುವ ಕೆಲಸ ಕಾರ್ಯಗಳೆಲ್ಲ ಅದ್ಭುತ ಪ್ರಗತಿ.

ಸಿಂಹ ರಾಶಿ : ಆತುರಗಾರನಿಗೆ ಬುದ್ಧಿ ಮಟ್ಟ ಹಾಗೂ ಪ್ರಯಾಣದಲ್ಲಿ ಜಾಗ್ರತೆ. ವಾಹನಗಳ ಬಿಡಿ ಭಾಗ, ವಾಹನಗಳ ವ್ಯಾಪಾರ,  ಆಟೋ ಮೊಬೈಲ್ಸ್ ಇಂಡಸ್ಟ್ರಿ, ಈ ವ್ಯವಹಾರಗಳಲ್ಲಿ ತೊಡಗಿರುವವರಿಗೆ ಹೆಚ್ಚು ಒತ್ತಡವಿರುತ್ತದೆ.

ಕನ್ಯಾ ರಾಶಿ : ಖರ್ಚು ವೆಚ್ಚಗಳು ಜಾಸ್ತಿ ಯಾವುದೋ ಭೂಮಿ ಮನೆ ಎಂದು ಇನ್ವೆಸ್ಟ್ ಮಾಡುತ್ತಿದ್ದರೆ ಒಳ್ಳೆಯದಾಗುತ್ತದೆ.

ತುಲಾ ರಾಶಿ : ಸರ್ಕಾರಕ್ಕೆ ಜನಕ್ಕೆ ಮೋಸ ಮಾಡಿ ದುಡ್ಡನ್ನು ದುಡಿದು ಇಟ್ಟುಕೊಂಡಿದ್ದರೆ ಅದಕ್ಕೆ ದಂಡ ತೆರಬೇಕಾಗುತ್ತದೆ. ತಂದೆಯ ಆರೋಗ್ಯದ ಕಡೆ ಗಮನ ಕೊಡಿ. ಮನೆಯಲ್ಲಿ ಸ್ವಸ್ತಿಕ ಯಂತ್ರವನ್ನು ಇಟ್ಟು ಪೂಜಿಸಿ.

ವೃಶ್ಚಿಕ ರಾಶಿ : ಮಾಡುವ ಕೆಲಸ ಕಾರ್ಯಗಳಲ್ಲಿ ಪ್ರಗತಿಯನ್ನು ಕಾಣುವಂತಹ ಅದ್ಭುತವಾದ ದಿನ.

ಧನಸ್ಸು ರಾಶಿ : ಚೆನ್ನಾಗಿದೆ ಭಾಗ್ಯಾಧಿಪತಿ ಸ್ಥಾನದಲ್ಲಿ ಚಂದ್ರನ ಇರುವುದರಿಂದ ಉದ್ಯೋಗ ನಿಮಿತ್ತ ಸ್ವಂತ ಕಾರ್ಯ ಸ್ವಂತ ವ್ಯವಹಾರಗಳಲ್ಲಿ ತೊಡಗಿರುವವರಿಗೆ ಭೂಮಿಯ ವ್ಯವಹಾರ ಗಳಲ್ಲಿ ತೊಡಗಿರುವವರಿಗೆ ಅನುಕೂಲಕರವಾಗಿರುವಂತಹ ದಿನ.

ಮಕರ ರಾಶಿ : ಕೊಡುವುದು ತೆಗೆದುಕೊಳ್ಳುವ ವಿಚಾರದಲ್ಲಿ ಮಾತು ಕೊಟ್ಟು ಸಿಕ್ಕಿಹಾಕಿಕೊಳ್ಳುತ್ತೀರಿ ಸ್ವಲ್ಪ ಎಚ್ಚರಿಕೆ ಸ್ವಲ್ಪ ನಿಧಾನಿಸಿ.

ಕುಂಭ ರಾಶಿ : ತಂದೆ ತಾಯಿಗಳ ಆರೋಗ್ಯದ ಕಡೆಗೆ ಸ್ವಲ್ಪ ಗಮನ ಕೊಡಿ. ಸ್ವಸ್ತಿಕ ಯಂತ್ರವನ್ನು ಇಟ್ಟು ನೀವು ಪೂಜಿಸಿ ಒಳ್ಳೆಯದು. ನಿಮ್ಮವರೇ ನಿಮಗೆ ಶತ್ರುಗಳು ಆದ್ದರಿಂದ ಅಷ್ಟಮಿಯ ದಿನದಂದು ಮೂರು ತಿಂಗಳಿಗೊಮ್ಮೆಯಾದರೂ ದುರ್ಗಾ ಹೋಮವನ್ನು ಮಾಡಿಸಿ.

ಮೀನ ರಾಶಿ : ಶತ್ರುಗಳು ಜಾಸ್ತಿ,  ಗೆಲುವು ಜಾಸ್ತಿ , ಕುತಂತ್ರ ಮಾಡುತ್ತಾರೆ, ಯಾವುದೇ ವ್ಯವಹಾರವನ್ನು ಮಾಡುವುದಾದರೂ ಲೀಗಲ್ ಆಗಿಯೇ ಮಾಡಿ.

All Rights reserved Namma  Kannada Entertainment.

Advertisement
Share this on...