ಕನ್ನಡದ ಖ್ಯಾತ ಖಳನಟನ ಲವ್ ಶುರು ಆಗಿದ್ದು ಹೇಗೆ ಗೊತ್ತಾ ….! ಅಚ್ಚರಿ ಪಡ್ತೀರಾ…!

in ಸಿನಿಮಾ 100 views

ಕೋರೋನಾ ಭೀತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹೀಗಾಗಿ ಎರಡನೇ ಬಾರಿಯು ಸರ್ಕಾರ ಲಾಕ್ ಡೌನ್ ಮುಂದುವರಿಸಿದೆ. ಆದ್ದರಿಂದ ಸರ್ಕಾರದ ಆದೇಶವನ್ನ ಗೌರವಿಸಲೇಬೇಕು ಅಂತ ಅನೇಕರು ನಿಶ್ಚಿತಾರ್ಥ, ಮದುವೆ, ಶುಭ ಸಮಾರಂಭ ಇತ್ಯಾದಿ ಕಾರ್ಯಕ್ರಮಗಳನ್ನ ಕ್ಯಾನ್ಸಲ್ ಮಾಡಿಕೊಂಡಿದ್ದಾರೆ. ಇದೀಗ ಇದೇ ಕಾರಣಕ್ಕೆ ಕನ್ನಡದ ಪ್ರತಿಭಾವಂತ ಖಳನಟರೊಬ್ಬರು ತಮ್ಮ ವಿವಾಹ ಸಮಾರಂಭವನ್ನ ಮುಂದೂಡಿದ್ದಾರೆ.

Advertisement

 

Advertisement

Advertisement

 

Advertisement

ರಾಜ್ ದೀಪಕ್ ಶೆಟ್ಟಿ ಪಂಚತಂತ್ರ, ಗಡಿಯಾರ, ಕೋಟಿಗೊಬ್ಬ-3, ಭರ್ಜರಿ ಸೇರಿದಂತೆ 30 ಕ್ಕೂ ಹೆಚ್ಚು ಕನ್ನಡ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಕನ್ನಡ ಮಾತ್ರವಲ್ಲದೆ ಎರಡು ತೆಲುಗು ಚಿತ್ರಗಳಲ್ಲಿ ನಟಿಸಿ ಹೆಸರು ಮಾಡಿರುವ ನಟ ರಾಜ್ ದೀಪಕ್ ಶೆಟ್ಟಿ ಕೋರೋನಾ ಕಾರಣದಿಂದ ತಮ್ಮ ಮದುವೆಯನ್ನ ಮುಂದೂಡಿದ್ದಾರೆ. ರಾಜ್ ದೀಪಕ್ ಶೆಟ್ಟಿ ಮದುವೆ ಮುಂದಿನ ತಿಂಗಳು ಮೇ 17ಕ್ಕೆ ನಿಶ್ಚಯವಾಗಿತ್ತು. ಆದರೆ ಕೋರೋನಾ ಲಾಕ್ ಡೌನ್ ಮುಂದುವರಿದ ಕಾರಣದಿಂದಾಗಿ ಶೆಟ್ಟಿ ತಮ್ಮ ವಿವಾಹ ಸಮಾರಂಭವನ್ನ ಮುಂದೂಡಿದ್ದಾರೆ.

 

 

ದೀಪಕ್ ಶೆಟ್ಟಿ ದಕ್ಷಿಣ ಭಾರತದ ಹೆಸರಾಂತ ಖಳನಟರಲ್ಲಿ ಒಬ್ಬರು. ಇವರು ಸೋನಿಯ ರಾಡ್ರಿಗಸ್ ರವರನ್ನ ಮದುವೆಯಾಗುತ್ತಿದ್ದಾರೆ. ಮೇ 17ಕ್ಕೆ ಮಂಗಳೂರಿನಲ್ಲಿ ವಿವಾಹ ಆಗಬೇಕು ಅಂತ ಪ್ಲಾನ್ ಕೂಡ ಮಾಡಿಕೊಂಡಿದ್ದರು‌. ಆದರೆ ಕೋರೋನಾ ಕಾರಣದಿಂದ ವಿವಾಹ ಸಮಾರಂಭವನ್ನ ಮುಂದೂಡಿದ್ದಾರೆ. ಸೋನಿಯ ರಾಡ್ರಿಗಸ್ ಈವೆಂಟ್ ಆರ್ಗನೈಸರ್ ಆಗಿದ್ದು ಮಂಗಳೂರು ಫ್ಯಾಷನ್ ವೀಕ್ ನ ಮಾಲಕಿಯಾಗಿದ್ದಾರೆ. ರಾಜ್ ದೀಪಕ್ ಶೆಟ್ಟಿ ಮತ್ತು ಸೋನಿಯಾ ಫೇಸ್ ಬುಕ್ ನಲ್ಲಿ ಸ್ನೇಹಿತರಾಗಿ ನಂತರ ಇಬ್ಬರು ಪರಸ್ಪರ ಪ್ರೀತಿ ಮಾಡುತ್ತಿದ್ದರು. ನಂತರ ಇಬ್ಬರೂ ತಮ್ಮ ಪ್ರೀತಿಯ ವಿಚಾರವನ್ನ ಮನೆಯಲ್ಲಿ ಹೇಳಿದ್ದಾರೆ. ಬಳಿಕ ಎರಡು ಮನೆಯವರು ಇವರ ಪ್ರೀತಿಗೆ ಒಪ್ಪಿಗೆ ಸೂಚಿಸಿದರು.

 

 

ಈ ಬಗ್ಗೆ ಮಾತನಾಡಿದ ದೀಪಕ್ ಶೆಟ್ಟಿ ಮಂಗಳೂರಿನಲ್ಲಿ ಈವೆಂಟ್ ಆರ್ಗನೈಸರ್ ಆಗಿರುವ ಸೋನಿಯ ರಾಡ್ರಿಗಸ್ ಮತ್ತು ನಾನು ಬಹಳ ದಿನಗಳಿಂದ ಪ್ರೀತಿ ಮಾಡುತ್ತಿದ್ದೆವು. ಮೇ10ರಂದು ನಿಶ್ಚಿತಾರ್ಥ ಮಾಡಿಕೊಂಡು 17ಕ್ಕೆ ಮಂಗಳೂರಿನಲ್ಲಿ ಮದುವೆಯಾಗಬೇಕು ಎಂದು ಪ್ಲಾನ್ ಮಾಡಿಕೊಂಡಿದ್ದೆವು. ಆದರೆ ಕೋರೊನಾ ಕಾರಣದಿಂದ ಎಲ್ಲವೂ ಕ್ಯಾನ್ಸಲ್ ಆಗಿದೆ. ಅಕ್ಟೋಬರ್ ತಿಂಗಳಿನಲ್ಲಿ ನನ್ನ ಹುಟ್ಟುಹಬ್ಬವಿದೆ. ಅಂದು ಮದುವೆಯಾಗಲಿದ್ದೇವೆ ಎಂದಿದ್ದಾರೆ. ಸದ್ಯಕ್ಕೆ ಅಕ್ಟೋಬರ್ ತಿಂಗಳಿನಲ್ಲಿ ಮದುವೆ ಕಾರ್ಯಕ್ರಮವನ್ನ ಇಟ್ಟುಕೊಳ್ಳುವ ಯೋಚನೆ ಮಾಡಿದ್ದಾರೆ. ಅಕ್ಟೋಬರ್ 18ರಂದು ದೀಪಕ್ ಶೆಟ್ಟಿಯವರ ಹುಟ್ಟುಹಬ್ಬ ಹೀಗಾಗಿ ಅಂದಿನ ದಿನವೇ ಮದುವೆಯಾಗಲಿದ್ದಾರೆ.

 

 

ಸದ್ಯಕ್ಕೆ ಲಾಕ್ ಡೌನ್ ನಿಂದಾಗಿ ಸಿನಿಮಾ ಚಿತ್ರೀಕರಣ ಸಂಪೂರ್ಣ ಬಂದ್ ಆಗಿದೆ. ಹೀಗಾಗಿ ದೀಪಕ್ ರಾಜ್ ಮಂಗಳೂರಿನ ಸ್ವಗೃಹದಲ್ಲಿ ಕುಟುಂಬದೊಂದಿಗೆ ಕಾಲಕಳೆಯುತ್ತಿದ್ದಾರೆ. ಕೋಟಿಗೊಬ್ಬ-3 ಸೇರಿದಂತೆ ದೀಪಕ್ ನಟನೆಯ ಕೆಲ ಸಿನಿಮಾಗಳು ರಿಲೀಸ್ ಆಗಬೇಕಿದೆ. ಇನ್ನೂ ತೆಲುಗಿನ ಇಸ್ಮಾರ್ಟ್ ಶಂಕರ್ ಚಿತ್ರದ ಮೂಲಕ ಟಾಲಿವುಡ್ ನಲ್ಲೂ ಹೆಸರು ಮಾಡಿದ್ದಾರೆ. ಈಗ ಅಲ್ಲು ಅರ್ಜುನ್ ಅಭಿನಯದ ಪುಷ್ಪ ಸಿನಿಮಾಗೆ ಆಯ್ಕೆಯಾಗಿದ್ದಾರೆ.

– ಸುಷ್ಮಿತಾ

Advertisement
Share this on...