ಪತ್ನಿಯೊಂದಿಗೆ ಬಂಡಿಪುರಕ್ಕೆ ದಿಢೀರ್ ಭೇಟಿ ನೀಡಿದ ನಿರ್ದೇಶಕ ರಾಜಮೌಳಿ…ಕಾರಣ ಏನಿರಬಹುದು..?

in ಮನರಂಜನೆ/ಸಿನಿಮಾ 220 views

ಎಸ್​​.ಎಸ್. ರಾಜಮೌಳಿ, ಟಾಲಿವುಡ್​ಗೆ ಸಾಲು ಸಾಲು ಹಿಟ್ ಚಿತ್ರಗಳನ್ನು ನೀಡಿದ ಸ್ಟಾರ್ ನಿರ್ದೇಶಕ. ಛತ್ರಪತಿ, ವಿಕ್ರಮಾರ್ಕುಡು, ಮಗಧೀರ, ಮರ್ಯಾದಾ ರಾಮಣ್ಣ, ಈಗ, ಬಾಹುಬಲಿಯಂತ ಹಿಟ್ ಚಿತ್ರಗಳನ್ನು ನೀಡಿದ ರಾಜಮೌಳಿ ಸದ್ಯಕ್ಕೆ ‘ಆರ್​​ಆರ್​ಆರ್’ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಶೂಟಿಂಗ್ ಇನ್ನೂ ಆರಂಭವಾಗದ ಕಾರಣ ರಾಜಮೌಳಿ, ಪತ್ನಿ ರಮಾ ಜೊತೆ ಸುಂದರ ತಾಣಗಳಿಗೆ ಭೇಟಿ ನೀಡಿ ಎಂಜಾಯ್ ಮಾಡುತ್ತಿದ್ದಾರೆ. ಆದರೆ ರಾಜಮೌಳಿ ಹಾಗೂ ರಮಾ ರಾಜಮೌಳಿ ಪ್ರವಾಸ ಹೊರಟಿದ್ದು ಬೇರೆ ರಾಜ್ಯಕ್ಕಲ್ಲ. ಕರ್ನಾಟಕದ ಚಾಮರಾಜನಗರದ ಗುಂಡ್ಲುಪೇಟೆಗೆ ರಾಜಮೌಳಿ ಪತ್ನಿಯೊಂದಿಗೆ ಭೇಟಿ ನೀಡಿದ್ದಾರೆ. ಕರ್ನಾಟಕಕ್ಕೂ ರಾಜಮೌಳಿಗೆ ಮೊದಲಿನಿಂದಲೂ ಬಹಳ ನಂಟು. ಏಕೆಂದರೆ ಅವರು ಹುಟ್ಟಿದ್ದೇ ಕರ್ನಾಟಕದಲ್ಲಿ. ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಅಮರೇಶ್ವರ ಕ್ಯಾಂಪ್​ ಎಂಬಲ್ಲಿ ರಾಜಮೌಳಿ ಜನಿಸಿದರು. ಹುಟ್ಟಿ ಬೆಳೆದದ್ದು ಕರ್ನಾಟಕದಲ್ಲೇ ಆದ್ದರಿಂದ ಅವರಿಗೆ ಕರ್ನಾಟಕ ಹಾಗೂ ಇಲ್ಲಿನ ಸುಂದರ ತಾಣಗಳ ಬಗ್ಗೆ ಅವರಿಗೆ ಚೆನ್ನಾಗಿ ಗೊತ್ತು.

Advertisement

Advertisement

ಮಂಗಳವಾರವೇ ಗುಂಡ್ಲುಪೇಟೆಗೆ ಬಂದು ತಲುಪಿದ ರಾಜಮೌಳಿ ಪತ್ನಿಯೊಂದಿಗೆ ರೆಸಾರ್ಟ್​ವೊಂದರಲ್ಲಿ ತಂಗಿದ್ದರು. ಬುಧವಾರ ಬೆಳಗ್ಗೆ ಬಂಡಿಪುರ ಫಾರೆಸ್ಟ್ ಏರಿಯಾಗೆ ತೆರಳಿ ಅಲ್ಲಿನ ಸುಂದರ ಪ್ರಕೃತಿ ಸೌಂದರ್ಯವನ್ನು ಸವಿದರು. ನಂತರ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ತೆರಳಿ ದೇವರ ದರ್ಶನ ಪಡೆದರು. ರಾಜಮೌಳಿ ಬಂಡಿಪುರ ಕ್ಯಾಂಪಸ್​​ಗೆ ದಿಢೀರ್ ಭೇಟಿ ನೀಡಿದ್ದು ಅಲ್ಲಿನ ಸಿಬ್ಬಂದಿಗೂ ಆಶ್ಚರ್ಯ ತಂದಿತ್ತು. ಹೆಸರಾಂತ ನಿರ್ದೇಶಕನನ್ನು ಕಣ್ಣ ಮುಂದೆ ನೋಡುತ್ತಿರುವುದಕ್ಕೆ ಸಿಬ್ಬಂದಿಗಳು ಥ್ರಿಲ್ ಆದರು. ರಾಜಮೌಳಿ ಜೊತೆ ಫೋಟೋ ತೆಗೆಸಿಕೊಂಡು ಸಿಬ್ಬಂದಿ ಖುಷಿ ಪಟ್ಟರು.

Advertisement

Advertisement

ಬಂಡಿಪುರ ಸುತ್ತಮುತ್ತಲಿನ ಪ್ರದೇಶಗಳನ್ನು ಸುತ್ತುಹಾಕಿದ ರಾಜಮೌಳಿ ಪರಿಸರವನ್ನು ಸ್ವಚ್ಛವಾಗಿರಿಸಿಕೊಂಡಿರುವುದಕ್ಕೆ ಅರಣ್ಯ ಸಿಬ್ಬಂದಿಗಳಿಗೆ ಮೆಚ್ಚುಗೆ ಸೂಚಿಸಿದರು. ತಮ್ಮನ್ನು ಮಾತನಾಡಿಸಿದವರ ಜೊತೆ ಅಲ್ಪಸ್ವಲ್ಪ ಕನ್ನಡದಲ್ಲೇ ಮಾತನಾಡಿಸಿ ನಗುತ್ತಲೇ ಸೆಲ್ಫಿಗೆ ಪೋಸ್ ನೀಡಿದರು. ಇಲ್ಲಿಗೆ ನಾನು ಮೊದಲ ಬಾರಿ ಭೇಟಿ ನೀಡಿದ್ದು ಈ ಸ್ಥಳ ನೋಡಿ ಫಿದಾ ಆಗಿದ್ದೇನೆ. ಶೀಘ್ರದಲ್ಲೇ ಮತ್ತೊಮ್ಮೆ ಈ ಸ್ಥಳಕ್ಕೆ ಭೇಟಿ ನೀಡುತ್ತೇನೆ ಎಂದು ಸುಂದರ ಪರಿಸರವನ್ನು ತಮ್ಮ ಕ್ಯಾಮರಾದಲ್ಲಿ ಸೆರೆಹಿಡಿದರು.

ಈಟಿವಿ ತೆಲುಗು ಚಾನೆಲ್​​ಗೆ ‘ಶಾಂತಿ ನಿವಾಸಂ’ ಎಂಬ ಧಾರಾವಾಹಿಯನ್ನು ನಿರ್ದೇಶಿಸುವ ಮೂಲಕ ಬಣ್ಣದ ಲೋಕಕ್ಕೆ ಬಂದ ರಾಜಮೌಳಿ ಈಗ ಸ್ಟಾರ್ ನಿರ್ದೇಶಕ. ರಾಜಮೌಳಿ ಕರ್ನಾಟಕದ ಭೇಟಿ ಇದೇ ಮೊದಲಲ್ಲ. ಇದಕ್ಕೂ ಮುನ್ನ ಅವರು ಚಿಕ್ಕಮಗಳೂರು, ಮೈಸೂರು, ಬೆಂಗಳೂರು, ಕೋಲಾರ ಸೇರಿದಂತೆ ಅನೇಕ ಸ್ಥಳಗಳಿಗೆ ಭೇಟಿ ನೀಡಿದ್ದಾರೆ. ಆದರೆ ಈ ಕೊರೊನಾ ಸಮಯದಲ್ಲಿ ಇದ್ದಕ್ಕಿದ್ದಂತೆ ಬಂಡಿಪುರ ಅರಣ್ಯ ಪ್ರದೇಶಕ್ಕೆ ಭೇಟಿ ನೀಡಿರುವುದು ಎಲ್ಲರ ಆಶ್ಚರ್ಯಕ್ಕೆ ಕಾರಣವಾಗಿದೆ. ಬಹುಶ: ‘ಆರ್​ಆರ್​ಆರ್’ ಅಥವಾ ತಮ್ಮ ಮುಂದಿನ ಚಿತ್ರಕ್ಕೆ ಲೊಕೇಶನ್ ನೋಡಲು ಬಂದಿರಬಹುದು ಎನ್ನಲಾಗುತ್ತಿದೆ.

ಶ್ರೀ ಆದಿಶಕ್ತಿ ಚೌಡೇಶ್ವರಿ ಆರಾಧಕರಾದ ಶ್ರೀ ಪಂಡಿತ್ ಶ್ರೀನಿವಾಸ್ ಭಟ್ ( ಕುಡ್ಲ ) ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡದ ಪ್ರಸಿದ್ಧ ಜ್ಯೋತಿಷ್ಯರು. ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ಆರೋಗ್ಯ ವ್ಯಾಪಾರ ಲಗ್ನ ಸಂತಾನ ಸ್ತ್ರೀ – ಪುರುಷ ವಶೀಕರಣ ಶತ್ರುನಾಶ ಮಾಟ ಮಂತ್ರ ಸತಿಪತಿ ಕಲಹ ರ ಮದುವೆ ದುಷ್ಟಶಕ್ತಿ ಲೈಂಗಿಕ ಸಮಸ್ಯೆ ಇತರ ಎಲ್ಲಾ ನಿಮ್ಮ ವೈಯಕ್ತಿಕ ಸಮಸ್ಯೆಗಳಿಗೆ 48 ಗಂಟೆಗಳ ಒಳಗೆ ಪರಿಹಾರ ಶತಸಿದ್ಧ. ಬೇರೆ ಜ್ಯೋತಿಷ್ಯರುಗಳ ಬಳಿ ಜ್ಯೋತಿಷ್ಯ ಕೇಳಿ ಪರಿಹಾರ ಸಿಗದೆ ನೊಂದಿದ್ದರೆ ಒಮ್ಮೆ ಕರೆ ಮಾಡಿ. ಶ್ರೀ ಆದಿಶಕ್ತಿ ಚಾಮುಂಡೇಶ್ವರಿ ಜ್ಯೋತಿಷ್ಯ ಕೇಂದ್ರ Phone no : 9972245888 ಬದಲಾಗುತ್ತದೆ. ಫೋನಿನ ಮೂಲಕ ಪರಿಹಾರವನ್ನು ನೀಡಲಾಗುತ್ತದೆ.

ವಾಕ್ ಸಿದ್ಧಿ ಜಪ ಸಿದ್ಧಿ ಯಂತ್ರ ಸಿದ್ಧಿ ಹಾಗೂ ಮಂತ್ರ ಸಿದ್ಧಿಯಲ್ಲಿ ಪರಿಣಿತಿ ಹೊಂದಿರುವ ಪಂಡಿತ್ ಶ್ರೀನಿವಾಸ ಭಟ್ ಇವರು ವಶೀಕರಣ ಮಹಾ ಮಾಂತ್ರಿಕರು ಸರ್ವಸಿದ್ಧಿ ಸಾಧಕರಾದ ಇವರು ನಿಮ್ಮ ಧೀರ್ಘ ಕಾಲದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ನೀಡುತ್ತಾರೆ. ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಒಳ್ಳೆಯ ಸರ್ಕಾರೀ ಕೆಲಸ ಸಿಗಲು ಅಥವ ಹಣಕಾಸಿನ ಸಮಸ್ಯೆಗಳು ಅಥವ ಸ್ತ್ರೀ ವಶೀಕರಣ, ಹಾಗೂ ಪುರುಷ ವಶೀಕರಣ, ಅತ್ತೆ ಸೊಸೆ ಕಿರಿಕಿರಿ, ಸಂತಾನಫಲ, ಶತ್ರುನಾಶ, ರಾಜಕೀಯ, ಹಣಕಾಸಿನ ಸಮಸ್ಯೆ, ಇನ್ನು ಯಾವುದೇ ರೀತಿಯ ಗುಪ್ತ ಸಮಸ್ಯೆಗಳಿಗೂ ಸಹ 48 ಗಂಟೆಗಳ ಒಳಗೆ ಶಾಶ್ವತ ಪರಿಹಾರ. ಈ ಕೂಡಲೇ 9972245888 ಸಂಖ್ಯೆಗೆ ಕರೆ ಮಾಡಿರಿ.

Advertisement
Share this on...