ಒಂದು ಕಾಲದ ಟಾಪ್ ನಟ ಅವಕಾಶಗಳಿಲ್ಲದೆ ಈಗ ಎಲ್ಲಿದ್ದಾರೆ ಗೊತ್ತಾ..?

in ಮನರಂಜನೆ/ಸಿನಿಮಾ 21 views

ಸಿನಿಮಾ ರಂಗದಲ್ಲಿ ಸ್ವಲ್ಪ ಟೈಮ್ ಸರಿ ಇಲ್ಲ ಎಂದರೂ ಸಂಕಷ್ಟಕ್ಕೆ ಸಿಲುಕುವುದು ಖಂಡಿತ. ಸಿನಿಮಾ ರಂಗದಲ್ಲಿ ಉತ್ತುಂಗದಲ್ಲಿದ್ದಂತಹ ಅದೇಷ್ಟೋ ನಟ-ನಟಿಯರು ಸಮಯ ಕೆಟ್ಟಾಗ ಅವಕಾಶಗಳಿಲ್ಲದೆ ಕಂಗೆಟ್ಟು ಸಂಕಷ್ಟಕ್ಕೆ ಸಿಲುಕಿದ ಅದೆಷ್ಟೋ ಉದಾಹರಣೆಗಳು ನಮಗೆ ಸಿಗುತ್ತವೆ. ಇನ್ನೂ ಕೆಲವು ನಟ-ನಟಿಯರಂತು ಮಾನಸಿಕ ಖಿನ್ನತೆಗೆ ಒಳಗಾಗಿ ಕೆಟ್ಟ ನಿರ್ಧಾರಗಳನ್ನು ಸಹ ತೆಗೆದುಕೊಂಡಿದ್ದಾರೆ. ಈ ನಟ ಸಹ ಅವಕಾಶಗಳಿಲ್ಲದೆ ತಮ್ಮ ಜೀವನವನ್ನು ಸಂಕಷ್ಟಕ್ಕೆ ದೂಡಿಕೊಂಡರು. ಬಾಲಿವುಡ್ ನಲ್ಲಿ 36 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ನಂತರ ಅವಕಾಶಗಳಿಲ್ಲದೆ ಸಿನಿಮಾ ರಂಗದಿಂದಲೇ ಕಾಣೆಯಾಗಿ ಹೋದರು. ಯಾರಿಗೂ ಈ ನಟನ ಸುಳಿವೇ ಸಿಗಲಿಲ್ಲ. ಆ ನಟ ಬೇರೆ ಯಾರು ಅಲ್ಲ. ಬಾಲಿವುಡ್ ನಲ್ಲಿ ಒಂದು ಕಾಲದಲ್ಲಿ ಮಿಂಚಿದ ನಟ ರಾಜ್ ಕಿರಣ್. ರಿಷಿ ಕಪೂರ್ ಅವರ ‘ಕಚ್ಚ್’ ಎಂಬ ಸಿನಿಮಾದಿಂದ ತುಂಬಾ ಫೇಮಸ್ ಆದರೂ ನಟ ರಾಜ್ ಕಿರಣ್. ಬಾಲಿವುಡ್ ನಲ್ಲಿ ತುಂಬಾ ಬೇಡಿಕೆಯಲ್ಲಿ ಇರುವಾಗಲೇ ರೂಪ ಮಹ್ತಾನಿ ಎಂಬುವವರನ್ನು ಮದುವೆಯಾದರು. ಈ ದಂಪತಿಗೆ ಮುದ್ದಾದ ಹೆಣ್ಣು ಮಗು ಜನಿಸಿತು.

Advertisement

Advertisement

ಜೀವನ ಸರಿದಾರಿಯಲ್ಲಿ ಸಾಗುತ್ತಿರುವಾಗಲೇ ರಾಜ್ ಕಿರಣ್ ಕೆಲವು ಅನಾರೋಗ್ಯ ಸಮಸ್ಯೆಗಳಿಗೆ ತುತ್ತಾದರು. ಸಿನಿಮಾಗಳಲ್ಲಿ ಅವಕಾಶಗಳು ಸಹ ಕಡಿಮೆಯಾದವು. ಆರ್ಥಿಕ ಸಮಸ್ಯೆ ತಲೆದೋರಿತು. ಇದೇ ವೇಳೆ ಪತ್ನಿ ರೂಪ ಸಹ ರಾಜ್ ಕಿರಣ್ ರವರಿಂದ ದೂರವಾದರು. ಇದೆಲ್ಲದರಿಂದ ರಾಜ್ ಕಿರಣ್ ಖಿನ್ನತೆಗೆ ಒಳಗಾದರು. ನಂತರ ರಾಜ್ ಕಿರಣ್ ಚಿತ್ರರಂಗದಲ್ಲಿ ಕಾಣಿಸಲೇ ಇಲ್ಲ. ರಾಜ್ ಕಿರಣ್ ಅಮೇರಿಕಾಗೆ ಹೋದರು ಎಂಬ ಸುದ್ದಿ ಬಾಲಿವುಡ್ ನಲ್ಲಿ ಹರಿದಾಡಿತ್ತು. ರಾಜ್ ಕಿರಣ್ ರವರ ಬಗ್ಗೆ ಒಬ್ಬರು ಒಂದೊಂದು ರೀತಿ ಮಾತನಾಡಿಕೊಂಡರು.

Advertisement


ಇನ್ನೂ ಇತ್ತೀಚಿನ ಕೆಲವು ವರ್ಷಗಳ ಹಿಂದೆ ಬಾಲಿವುಡ್ ನ ಖ್ಯಾತ ನಟ ರಿಷಿ ಕಪೂರ್ ಅವರು ಅಮೇರಿಕಾದ ಅಟ್ಲಾಂಟಾದ ಹುಚ್ಚಾಸ್ಪತ್ರೆಯಲ್ಲಿ ರಾಜ್ ಕಿರಣ್ ರವರನ್ನು ನೋಡಿರುವುದಾಗಿ ಹೇಳಿಕೊಂಡಿದ್ದರು. ಪಾಪ ಹುಚ್ಚಾಸ್ಪತ್ರೆಯಲ್ಲಿ ರಾಜ್ ಕಿರಣ್ ಅವರ ಪರಿಸ್ಥಿತಿಯನ್ನು ನೋಡಿ ನನಗೆ ನಂಬಲಾಗಲಿಲ್ಲ ಎಂದು ತಮ್ಮ ಕೆಲವು ಆಪ್ತರ ಬಳಿ ರಾಜ್ ಕಿರಣ್ ರವರ ಬಗ್ಗೆ ರಿಷಿ ಕಪೂರ್ ಅನುಕಂಪ ವ್ಯಕ್ತಪಡಿಸಿದ್ದರು. ಜೀವನವನ್ನು ತುಂಬಾ ಸೀರಿಯಸ್ ಆಗಿ ತೆಗೆದುಕೊಳ್ಳದೆ ಬಂದದ್ದನ್ನು ಬಂದ ಹಾಗೆ ಸ್ವೀಕರಿಸಿ ತಲೆಕೆಡಿಸಿಕೊಳ್ಳದೆ ಇದ್ದಿದ್ದರೆ ಇಂದು ಈ ನಟನಿಗೆ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ.

Advertisement

– ಸುಷ್ಮಿತಾ

Advertisement
Share this on...