ಗೋವಾದಲ್ಲಿ ಡಾ. ರಾಜ್ ಕುಮಾರ್ ಅವರನ್ನೆ ಬಂಧಿಸಿದ್ದ ಪೋಲಿಸರು ! ಇಂಟ್ರೆಸ್ಟಿಂಗ್ ಸ್ಟೋರಿ ಇಲ್ಲಿದೆ ನೋಡಿ!

in ಮನರಂಜನೆ/ಸಿನಿಮಾ 148 views

ಕರುನಾಡ ಇತಿಹಾಸದಲ್ಲಿ ದಂತಕಥೆಯಂತೆ ಬೆರೆತು ಹೋಗಿರುವ  ರತ್ನ ಒಂದಿದೆ  ಎಂದರೆ ಅದು ವರನಟ ಡಾ. ರಾಜ್ ಕುಮಾರ್ ಅವರು. ಆಡು ಮುಟ್ಟದ ಸೊಪ್ಪಿಲ್ಲ ಅಣ್ಣಾವ್ರು ಮಾಡದ ಪಾತ್ರವಿಲ್ಲ. ಹೌದು ಒಮ್ಮೆ ಕಣ್ಣು ಮುಚ್ಚಿ ನೆನೆಸಿಕೊಂಡರೆ ಅಣ್ಣಾವ್ರು ಮಾಡಿದ ಪಾತ್ರಗಳೆಲ್ಲಾ ಎಷ್ಟು ಬಲಿಷ್ಟವಾದದ್ದು, ಅವರ ಅಭಿನಯ ಎಷ್ಟು ನೈಜವಾಗಿತ್ತು ಎಂಬುದು ತಿಳಿಯುತ್ತದೆ. ನಾವು ನಿಜವಾಗಿಯೂ ದೇವರನ್ನು ನೋಡಿಲ್ಲ ಆದರೆ ಶ್ರೀನಿವಾಸ ಕಲ್ಯಾಣ ಸಿನಿಮಾ ನೋಡಿದರೆ ಶ್ರೀಮಾನ್ ವೆಂಕಟೇಶ್ವರ ಅಪ್ಪಾಜಿ ಅಂತೆಯೇ ಇದ್ದಾರಾ? ಎಂದೆನಿಸಿಬಿಡುತ್ತದೆ. ಯಾಕೆಂದರೆ ಆ ರೀತಿಯಾದ  ಜೀವವನ್ನು ಪಾತ್ರಕ್ಕೆ ತುಂಬಿದ್ದರು ಅಪ್ಪಾಜಿ. ಯುಗ ಯುಗ ಕಳೆದರು ಅಪ್ಪಾಜಿ ಅವರ ಹೆಸರನ್ನು ಅಳಿಸಲು ಸಾಧ್ಯವಿಲ್ಲ. ಕರುನಾಡಿಗೆ ಒಬ್ಬನೇ ರಾಜಕುಮಾರ. ಈ ರೀತಿಯಾದಂತಹ ನಟ ಮತ್ತೊಮ್ಮೆ ಹುಟ್ಟಲು ಸಾಧ್ಯವೇ ಇಲ್ಲ..  ಅವರು ನಡೆದು ಬಂದಂತಹ ದಾರಿ, ಮಾಡಿದಂತಹ ಪಾತ್ರಗಳು, ಜೀವಿಸಿದ ಪರಿ, ಹಾಕಿದ ಹೆಜ್ಜೆ ಎಲ್ಲವೂ ಕೂಡ ಮಾದರಿಯಾಗುವಂಥದ್ದು.  ರಾಜ್ ಅವರು  ಓರ್ವ ಪ್ರೀತಿಯ ಮನುಷ್ಯ. ಅವರಿಗೆ ಎಲ್ಲರೂ ಬೇಕು, ಯಾರು ಹೆಚ್ಚು ಯಾರು ಕಮ್ಮಿ ಎನ್ನುವ ಪ್ರಶ್ನೆ ಅವರಲ್ಲಿ ಮೂಡುತ್ತಲೇ ಇರಲಿಲ್ಲ.  ಇತಂಹ ನಟನನ್ನು ಪೋಲಿಸರು ಒಮ್ಮೆ ಬಂಧಿಸಿದ್ದರು. ಆಶ್ಚರ್ಯವಾಗುತ್ತಿದೆಯಾ? ಮುಂದೇ ಓದಿ..

Advertisement

 

Advertisement

Advertisement

ಕನ್ನಡದ ಕುವರ  ಡಾ ರಾಜ್ ಕುಮಾರ್ ಅವರು ಮೊದಲ ಬಾರಿಗೆ ಚಂದನವನದಲ್ಲಿ ಬಾಂಡ್ ಸರಣಿಯ ಸಿನಿಮಾಗಳಿಗೆ ನಾಂದಿ ಹಾಡಿದರು.  ಅವರ ಅಭಿನಯದಲ್ಲಿ ಮೂಡಿ ಬಂದಂತಹ  ಗೋವಾದಲ್ಲಿ ಸಿಐಡಿ 999 ಸಿನಿಮಾವನ್ನು ಚಂದನವನದಲ್ಲಿ  ಮರೆಯಲು ಸಾಧ್ಯವೇ ಇಲ್ಲ. ಕನ್ನಡದಲ್ಲಿ ಬಾಂಡ್ ಮಾದರಿ ಸಿನಿಮಾಗಳು ಬಹಳ ಕಡಿಮೆ, ಆದರೆ ನೋಡುಗನಿಗೆ ವಿಶಿಷ್ಟವಾದ ಹಾಗೂ ವಿಭಿನ್ನವಾದ ಅನುಭವ ನೀಡುವ ಇಂತಹ ವಿಶಿಷ್ಟ ಸಿನಿಮಾಗಳಲ್ಲಿ ನಟಿಸಿ ಜನರನ್ನು ಮೆಚ್ಚಿಸಿದವರು ವರನಟ ಡಾ. ರಾಜ್ ಕುಮಾರ್ ಅವರು.  ಗೋವಾದಲ್ಲಿ ಸಿಐಡಿ 999 ಸಿನಿಮಾದ  ಚಿತ್ರೀಕರಣದ ಸಂದರ್ಭದಲ್ಲಿ ಒಂದು ಮರೆಯಲಾರದಂತಹ ಘಟನೆ ನಡೆದಿದ್ದು, ಆ‌ ಘಟನೆಯಲ್ಲಿ ಕನ್ನಡದ ಕುವರ ಡಾ. ರಾಜ್ ಅವರು ಪೋಲೀಸ್ ಠಾಣೆಯ ಮೆಟ್ಟಿಲನ್ನು ಏರಿದ್ದರು. ಯಾಕೆಂದರೆ ಈ ಸಿನಿಮಾದ ಚಿತ್ರೀಕರಣಕ್ಕಾಗಿ  ನಿರ್ದೇಶಕರು ಮೂರು ಕಾರುಗಳನ್ನು ಬಳಸಿದ್ದರು.

Advertisement

ಆ ಕಾರುಗಳ ನಂಬರ್ ಪ್ಲೇಟ್ ಮೇಲೆ ಇಂಗ್ಲೀಷ್ ನಲ್ಲಿ ಗೋವಾ ಎಂದು ಬರೆಸಿ ಚಿತ್ರೀಕರಣ ಮಾಡಲಾಗಿತ್ತು. ಹೀಗೆ ಚಿತ್ರೀಕರಣ ನಡೆಯುವಾಗ ಅಲ್ಲಿನ ಸಾರ್ಜೆಂಟ್ ಒಬ್ಬರು ಕಾರಿನ ನಂಬರ್ ಪ್ಲೇಟನ್ನು ಗಮನಿಸಿ ಗೊಂದಲಕ್ಕೆ ಒಳಗಾಗಿದ್ದರು . ಆ ನಂತರ ನಂಬರ್ ಪ್ಲೇಟ್ ಅನ್ನು ನೋಡಿದ ಅವರಿಗೆ  ಅನುಮಾನ ಬಂದಿದೆ. ಕೂಡಲೇ ಅವರು  ಆಫೀಸಿಗೆ ಹೋಗಿ ಫೈಲ್ ಗಳನ್ನು ಪರಿಶೀಲನೆ ಮಾಡಿದ್ದಾರೆ. ಆಗ ಅವರಿಗೆ ತಿಳಿದಿದ್ದು ಗೋವಾದಲ್ಲಿ ಆ ನಂಬರಿನ ಯಾವುದೇ ಕಾರುಗಳು ಇಲ್ಲವೇ ಇಲ್ಲ ಎಂದು.

ಈ ಘಟನೆ ನಡೆದ ಮಾರನೆ ದಿನವೇ ಗೋವಾದ ಸಾರ್ಜೆಂಟ್ ನೇರವಾಗಿ ಅಪ್ಪಾಜಿ ಇದ್ದ ಜಾಗಕ್ಕೆ ಹುಡುಕಿಕೊಂಡು ಬಂದಿದ್ದಾರೆ. ಆ ಸಮಯದಲ್ಲಿ ಡಾ. ರಾಜ್ ಅವರು ಒಂದು ಕಾರನ್ನು  ಚಲಾಯಿಸುತ್ತಿದ್ದರು. ಮತ್ತೊಂದು ಕಾರ್ ಚೇಸಿಂಗ್ ನಲ್ಲಿ ಇತ್ತು ಮತ್ತು ಮೂರನೇ ಕಾರಿನಲ್ಲಿ ನಿರ್ದೇಶಕರಾದಂತಹ ಭಗವಾನ್ ಅವರು ಛಾಯಾಗ್ರಹಕರ  ಜೊತೆಗೆ ಆ ಕಾರಿನಲ್ಲಿ ಇದ್ದರಂತೆ. ತನ್ನ ಜೊತೆ ಇಬ್ಬರು ಪೋಲಿಸ್  ಪೇದೆಗಳನ್ನು ಕರೆ ತಂದಿದ್ದ ಸಾರ್ಜೆಂಟ್ ಅವರು ಈ ಮೂವರನ್ನು ಬಂಧಿಸಿ ಠಾಣೆಗೆ ಕರೆದು ಕೊಂಡು ಹೋಗಿದ್ದರು.
ಆ ಸಮಯದಲ್ಲಿ ನಿರ್ದೇಶಕ  ಭಗವಾನ್ ಅವರು ಚಿತ್ರೀಕರಣಕ್ಕಾಗಿ ಕಲೆಕ್ಟರ್ ಅವರು ತಮಗೆ ಕೊಟ್ಟ ಪರವಾನಗಿ ಪತ್ರ ತೋರಿಸುತ್ತಾರೆ ಆದರೂ ಕೂಡಾ ಸಾರ್ಜೆಂಟ್ ಇದನ್ನು ನೋಡಿ ಒಪ್ಪಲಿಲ್ಲ.

 

ಆದಾಗ ಮಾತು ಕಥೆಗೆ ನಿಂತಂತಹ ನಿರ್ದೇಕ ಭಗವಾನ್ ಅವರು ಡಾ. ರಾಜ್ ಕುಮಾರ್ ಅವರು ಒಬ್ಬ ಹೆಮ್ಮಯ ನಟ , ಅವರು ನಾನು ಹೇಳಿದಂತೆ ನಟನೆ ಮಾಡುತ್ತಾರೆ ಅಷ್ಟೇ. ಅವರನ್ನಾದ್ರೂ ಬಿಟ್ಟು ಬಿಡಿ ಎಂದು ಮನವಿ ಮಾಡಿದ್ದಾರೆ. ಈ ಮನವಿಗೆ ಮಣಿದ ಸಾರ್ಜೆಂಟ್ ಅವರು ಡಾ. ರಾಜ್ ಕುಮಾರ್ ಅವರನ್ನು ಬಿಟ್ಟಿದ್ದಾರೆ.‌ ಆದರೆ ನಿರ್ದೇಶಕ ಭಗವಾನ್ ಅವರನ್ನು ಮಾತ್ರ ಬಿಡದೆ ಅಲ್ಲಿಂದ ಎಸಿಪಿ ಆಫೀಸಿಗೆ ಕರೆದು ಕೊಂಡು ಹೋಗಿದ್ದರಂತೆ.  ಅದೃಷ್ಟವಶ ಆ ಎಸಿಪಿ ಅಫೀಸಿನಲ್ಲಿದ್ದ  ಅಧಿಕಾರಿ ಎ. ಸಿ. ಪಿ. ಸುಧೀಂದ್ರ ಕುಲಕರ್ಣಿ ಎಂಬುವವರು  ಕನ್ನಡದವರೇ ಆಗಿದ್ದರು. ನಂತರ ಭಗವಾನ್‌  ಅವರನ್ನು ಕೂರಿಸಿ ಮಾತನಾಡಿಸಿ ಚಿತ್ರೀಕರಣಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ಅಲ್ಲದೇ ಅವರು ಚಿತ್ರೀಕರಣದ ವೇಳೆಯಲ್ಲಿ ಮಾತ್ರ ಕಾರ್ ಮೇಲೆ ಆ ನಂಬರ್ ಪ್ಲೇಟ್ ಬಳಸಿ ಎಂದು ಸಲಹೆ ನೀಡಿದ್ದಾರೆ ನಂತರ ಅವರು ಕೂಡ ಡಾ. ರಾಜ್‍ಕುಮಾರ್ ಅಭಿಮಾನಿಯಾಗಿದ್ದು ಅವರನ್ನು ಒಮ್ಮೆ ಊಟಕ್ಕೆ ಕರೆದು ಕೊಂಡು ಬನ್ನಿ ಎಂದು ಹೇಳಿದ್ದರಂತೆ.‌

Advertisement
Share this on...