2016 ರಲ್ಲೇ ಕಿಡ್ನಿ ಕಸಿ ಮಾಡಿಸಿಕೊಂಡಿದ್ದರಾ ರಜನಿಕಾಂತ್..? ! ಏನಿದು ರಜನಿ ಆರೋಗ್ಯ ರಹಸ್ಯ..!

in ರಾಜಕೀಯ/ಸಿನಿಮಾ 165 views

ಸೂಪರ್ ಸ್ಟಾರ್ ರಜನಿಕಾಂತ್ ರಾಜಕೀಯ ಪ್ರವೇಶದ ಬಗ್ಗೆ 2017ರಿಂದ ಭಾರೀ ಚರ್ಚೆ ನಡೆಯುತ್ತಲೇ ಇದೆ. ತಮ್ಮದೇ ಹೊಸ ರಾಜಕೀಯ ಪಕ್ಷ ಸ್ಥಾಪಿಸಿ ಆ ಮೂಲಕ ತಮಿಳುನಾಡಿನಾದ್ಯಂತ ಹೊಸ ರಾಜಕೀಯ ಅಲೆ ಸೃಷ್ಟಿಸುವುದಾಗಿಯೂ ರಜನಿ ಘೋಷಿಸಿದ್ದರು. ಅದಾದ ಬಳಿಕ ಲೋಕಸಭೆ ಚುನಾವಣೆಯಲ್ಲಿ, ತಮಿಳುನಾಡು ಸ್ಥಳೀಯ ಚುನಾವಣೆಯಲ್ಲಿ ಕೂಡ ರಜನಿಕಾಂತ್ ತಮ್ಮ ರಾಜಕೀಯ ನಿಲುವು ಪ್ರಕಟಿಸುತ್ತಾರೆ ಎಂಬ ಕುತೂಹಲ ದೇಶಾದ್ಯಂತ ಅವರ ಅಭಿಮಾನಿಗಳು ಸೇರಿದಂತೆ ಎಲ್ಲರಲ್ಲೂ ಮನೆಮಾಡಿತ್ತು. ನಂತರದ ದಿನಗಳಲ್ಲಿ ಈ ಬಗ್ಗೆ ರಜನಿ ಸ್ಪಷ್ಟವಾಗಿ ಏನನ್ನೂ ಪ್ರಕಟಿಸಲಿಲ್ಲ. ಇದೀಗ ತಮಿಳುನಾಡು ಚುನಾವಣೆ ಸಮೀಪಿಸಿದ ಬೆನ್ನಲ್ಲೇ ಮತ್ತೆ ರಜನಿ ರಾಜಕೀಯದ ಬಗ್ಗೆ ಕುತೂಹಲ ಮುಂದುವರೆದಿದೆ. ಇದೇ ವೇಳೆ ಈಗ ರಜನಿಕಾಂತ್ ಅವರ ಆರೋಗ್ಯದ ಬಗ್ಗೆ ಹೊಸದೊಂದು ಸುದ್ದಿ, ಚರ್ಚೆ ಆರಂಭವಾಗುವ ಮೂಲಕ ಸೂಪರ್ ಸ್ಟಾರ್ ಅಭಿಮಾನಿಗಳಲ್ಲಿ ಕೊಂಚ ಆತಂಕ ಕೂಡ ಆರಂಭವಾಗಿದೆ.

Advertisement

Advertisement

ರಜನಿಕಾಂತ್ ಅನಾರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ಮೂತ್ರಪಿಂಡ ಕಸಿ ಮಾಡಿಸಿಕೊಂಡಿರುವುದರಿಂದ ವೈದ್ಯರು ಅವರಿಗೆ ಹೆಚ್ಚು ಓಡಾಡಬಾರದು ವಿಶ್ರಾಂತಿ ತೆಗೆದುಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ. ಹಾಗಾಗಿ ರಾಜಕೀಯ ಪ್ರಚಾರಗಳಲ್ಲಿ ಭಾಗಿಯಾಗುವುದು ಅನುಮಾನ ಎಂದು ಸಾಮಾಜಿಕ ಜಾಲತಾಣಗಲಲ್ಲಿ ಪತ್ರವೊಂದು ಹರಿದಾಡುತ್ತಿದೆ. ಈ ಪತ್ರದಲ್ಲಿ ವೈದ್ಯರು ರಜನಿಕಾಂತ್ ಅವರಿಗೆ ಕಿಡ್ನಿ ಕಸಿ ಮಾಡಿಸಿಕೊಂಡಿರುವುದರಿಂದ ಹಾಗೂ ಕೊರೊನಾದಂತ ಈ ಕಠಿಣ ಸ್ಥಿತಿಯಲ್ಲಿ ಹೆಚ್ಚು ಓಡಾಟ ನಡೆಸದಿರುವುದು ಉತ್ತಮ. ಕೊರೊನಾಗೆ ಇನ್ನೂ ಲಸಿಕೆ ಲಭ್ಯವಾಗಿಲ್ಲ. ಅದು ಯಾವಾಗ ಲಭ್ಯವಾಗಲಿದೆ ಎಂಬುದೂ ಗೊತ್ತಿಲ್ಲ. ಕೊರೊನಾ ವೈರಸ್ ನಂತಹ ಈ ಸಂದರ್ಭದಲ್ಲಿ ನಿಮ್ಮ ಆರೋಗ್ಯ ಸಮಸ್ಯೆಗಳ ನಡುವೆ ನಿಮ್ಮಲ್ಲಿರುವ ರೋಗನಿರೋಧಕ ಶಕ್ತಿ ಕೂಡ ಕಡಿಮೆಯಿರುವುದರಿಂದ ರಾಜಕೀಯ ಪ್ರಚಾರಸಭೆಗಳಲ್ಲಿ ಭಾಗಿಯಾಗುವುದು, ಜನರನ್ನು ಭೇಟಿಯಾಗುವುದನ್ನು ಮಾಡದೇ ವಿಶ್ರಾಂತಿ ತೆಗೆದುಕೊಳ್ಳುವುದು ಸೂಕ್ತ ಎಂದು ವೈದ್ಯರು ಸಲಹೆ ನೀಡಿದ್ದರು.

Advertisement

ರಜನಿಕಾಂತ್ ಅವರಿಗೆ ಕಿಡ್ನಿ ಸಮಸ್ಯೆಯಿರುವ ಬಗ್ಗೆಯಾಗಲಿ, ಅವರು ಚಿಕಿತ್ಸೆ ಪಡೆದುಕೊಳ್ಳುತ್ತಿರುವ ಬಗ್ಗೆಯಾಗಲಿ ಈವರೆಗೂ ಯಾರಿಗೂ ಗೊತ್ತಿಲ್ಲ, ಈ ಪತ್ರವನ್ನು ನೋಡಿದ ಅಭಿಮಾನಿಗಳು ಆತಂಕಗೊಂಡಿದ್ದು, ರಜನಿ ಆರೋಗ್ಯದ ಬಗ್ಗೆ ಹಲವು ಪ್ರಶ್ನೆಗಳು ಮೂಡಿವೆ. ಅಲ್ಲದೇ ಅವರ ರಾಜಕೀಯ ನಿಲುವಿನ ಬಗ್ಗೆ ಹೊಸ ಅನುಮಾನ ಕೂಡ ಆರಂಭವಾಗಿದೆ.

Advertisement

ಇದೆಲ್ಲದರ ಬಗ್ಗೆಯೂ ಇದೀಗ ಸ್ವತ: ರಜನಿಕಾಂತ್ ಸ್ಪಷ್ಟನೆ ನೀಡಿದ್ದು, ನನ್ನ ಆರೋಗ್ಯದ ಬಗ್ಗೆ ಹರಿದಾಡುತ್ತಿರುವ ಪತ್ರದಲ್ಲಿನ ವಿಚಾರ ಹಾಗೂ ವೈದ್ಯರ ಸಲಹೆ ಸತ್ಯ. ಆದರೆ ಆ ಪತ್ರವನ್ನು ನಾನು ಬರೆದಿಲ್ಲ. ಇನ್ನು ನನ್ನ ರಾಜಕೀಯ ನಿಲುವಿನ ಬಗ್ಗೆ ರಜನಿ ಮಕ್ಕಳ್ ಮಂಡ್ರಂ ಜೊತೆ ಚರ್ಚಿಸಿ ನಿರ್ಧಾರ ಪ್ರಕಟಿಸುತ್ತೇನೆ ಎಂದು ತಿಳಿಸಿದ್ದಾರೆ. ಈ ಮೂಲಕ ಸೂಪರ್ ಸ್ಟಾರ್ ಗೆ ಆರೋಗ್ಯ ಸಮಸ್ಯೆಯಿರುವುದು ನಿಜವಾಗಿದೆ. ಆದರೆ ರಜನಿಕಾಂತ್ ತಮ್ಮದೇ ಹೊಸ ಪಕ್ಷದ ಮೂಲಕ ರಾಜಕೀಯ ರಂಗಕ್ಕೆ ಪ್ರವೇಶ ಮಾಡ್ತಾರಾ? ಈ ಬಾರಿ ತಮಿಳುನಾಡು ಚುನಾವಣೆಯಲ್ಲಿ ಸ್ಪರ್ಧೆ ಮಾಡ್ತಾರಾ? ಎಂಬುದು ಸ್ಪಷ್ಟವಾಗಿಲ್ಲ.

ಅಂದಹಾಗೇ ರಜನಿಕಾಂತ್ ಎರಡು ದಶಕಗಳಿಂದಲೂ ತಮಗೆ ರಾಜಕೀಯಕ್ಕೆ ಸೇರುವ ಆಸಕ್ತಿಯಿರುವ ಬಗ್ಗೆ ಹೇಳುತ್ತಲೇ ಇದ್ದಾರೆ. 2017 ಡಿಸೆಂಬರ್ 31ರಂದು ಈ ಬಗ್ಗೆ ಅಧಿಕೃತವಾಗಿ ಘೋಷಿಸಿದರು. ತಮಿಳುನಾಡಿನಲ್ಲಿ ರಾಜಕೀಯ ವ್ಯವಸ್ಥೆ ಸಂಪೂರ್ಣ ಕುಸಿದಾಗ ತಮ್ಮದೇ ಹೊಸ ಪಕ್ಷದ ಮೂಲಕ ಇಡೀ ರಾಜ್ಯದಲ್ಲಿ ಬದಲಾವಣೆ ಪರ್ವ ಆರಂಭಿಸುವುದಾಗಿ ಹೇಳಿದ್ದರು. ಮುಂಬರುವ ತಮಿಳುನಾಡು ವಿಧಾನಸಭೆ ಚುನಾವಣೆ ತಮ್ಮ ಆದ್ಯತೆ ಎಂದು ಹೇಳುವ ಮೂಲಕ ತಮ್ಮ ಸಂಘಟನೆಯನ್ನು ಆರಂಭಿಸಿದ್ದರು. ಇದೀಗ ರಜನಿಕಾಂತ್ ಅನಾರೋಗ್ಯದ ಬಗ್ಗೆ ಚರ್ಚೆಗಳು ಆರಂಭವಾಗುವ ಮೂಲಕ ಅವರು ರಾಜಕೀಯವನ್ನೇ ತೊರೆಯುತ್ತಾರಾ ಎಂಬ ಅನುಮಾನ ಕೂಡ ಆರಂಭವಾಗಿದೆ. ಈ ಬಗ್ಗೆ ಸ್ವತ: ರಜನಿಕಾಂತ್ ಅವರೇ ಶೀಘ್ರದಲ್ಲಿ ಅಧಿಕೃತವಾಗಿ ಪ್ರಕಟಿಸಲಿದ್ದಾರೆ.

Advertisement
Share this on...