ಇದೊಂದು ವಿಚಾರ ಅಪ್ಪಾಜಿ ಅವರಿಗೆ ಬಹಳ ಬೇಸರವನ್ನುಂಟು ಮಾಡಿತ್ತು!

in ಮನರಂಜನೆ/ಸಿನಿಮಾ 206 views

ಕರುನಾಡ ಜನತೆಗೆ ರಾಜ್ ಅವರ ಹೆಸರು ಕೇಳಿದರೆ  ರೋಮಾಂಚನ. ಅವರು ಅಭಿನಯಿಸಿರುವ ಸಿನಿಮಾಗಳು ಇಂದಿಗೂ ಕೂಡ ಮಾದರಿಯಾಗಿದೆ. ಅವರ ಸಿನಿಮಾಗಳು ನೀಡುತ್ತಿದ್ದ ಸಾಮಾಜಿಕ ಸಂದೇಶವೇ ಜನರಿಗೆ ಸ್ಪೂರ್ತಿ ಮತ್ತು ಸಿನಿಮಾವನ್ನು ಹೊರತು ಪಡಿಸಿ ಅವರು ಬದುಕುತ್ತಿದ್ದ ಸರಳ ಜೀವನ ರಾಜ್ ಅವರನ್ನು ಮೇರು ವ್ಯಕ್ತಿಯ ಸ್ಥಾನದಲ್ಲಿ ಇರಿಸಿದೆ. ಅವರ ವ್ಯಕ್ತಿತ್ವ  ನೆನಸಿಕೊಂಡರೆ ಇಂದಿಗೂ ಕೂಡ ರೋಮಾಂಚನವಾಗುತ್ತದೆ. ಕರ್ನಾಟಕದಲ್ಲಿ ಮಾತ್ರವಲ್ಲ, ಇಡೀ ಭಾರತೀಯ ಚಿತ್ರರಂಗದಲ್ಲಿ ಡಾ. ರಾಜ್ ಕುಮಾರ್ ಅವರಿಗೆ ಸರಿಸಾಟಿಯಾದ ನಟ ಮತ್ತೊಬ್ಬರಿಲ್ಲ ಎನ್ನುವುದು ಅಭಿಮಾನಿಗಳ ಮಾತು. ಅವರು ಅಭಿನಯಿಸಿದ ಪಾತ್ರಗಳು, ಮಾಡಿದ ಸಿನಿಮಾಗಳೆಲ್ಲಾ ಬರೆದ ದಾಖಲೆಗಳು, ಚಿತ್ರರಂಗಕ್ಕೆ ಹಾಗೂ ನಮ್ಮ ಭಾಷೆ-ಸಂಸ್ಕೃತಿಗೆ ರಾಜ್ ಅವರು ನೀಡಿದ ಕೊಡುಗೆಗಳು ಇದಕ್ಕೆ ಉದಾಹರಣೆ .ಇಂತಹ ಮೇರುನಟರನ್ನು ಕಳೆದುಕೊಂಡ ನಮ್ಮ ಚಿತ್ರರಂಗ ಇಂದಿಗೂ ಕೂಡ ಶೋಕದಿಂದ ಕೂಡಿದೆ , ದಿಕ್ಕೆಟ್ಟು ಹೋಗಿದೆ. ಚಿತ್ರಗಳು ತಮ್ಮ ಹಾದಿಯನ್ನೆ ತಪ್ಪಿವೆ. ಕ್ರೌರ್ಯ, ಅಶ್ಲೀಲತೆ ಇಂದಿನ ಸಿನಿಮಾಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು, ಸಾಮಾಜಿಕ ಬದ್ಧತೆಯೇ ಇಲ್ಲ ಎಂದು ಅನೇಕರು ಆರೋಪಿಸುತ್ತಾರೆ. ಆದರೆ ಇಂತಹ ಮಾತುಗಳನ್ನು ಅಪ್ಪಾಜಿ ಅವರು ಸುಮಾರು ಮೂರು ದಶಕಗಳ ಹಿಂದೆ ಅವರೇ ಹೇಳಿದ್ದರು. 90ರ ದಶಕದಲ್ಲಿಯೇ ಚಿತ್ರರಂಗ ಸಾಗುತ್ತಿರುವ ದಿಕ್ಕಿನ ಬಗ್ಗೆ ಅವರು ಬೇಸರ ವ್ಯಕ್ತಪಡಿಸಿದ್ದರು.

Advertisement

Advertisement

ಸುಮಾರು ಮೂರು ದಶಕಗಳ ಹಿಂದೆ ಒಂದು ಸಂದರ್ಶನದಲ್ಲಿ ಮಾತನಾಡಿದ ವರನಟ ಡಾ.ರಾಜ್ ಕುಮಾರ್ ಅವರು ಇತ್ತೀಚಿಗೆ ತೆರೆಕಾಣುತ್ತಿರುವ ಚಿತ್ರಗಳ ಗುಣಮಟ್ಟ ನೋಡಿದಾಗ ನಿಜಕ್ಕೂ ಮನಸ್ಸಿಗೆ ಬಹಳ ನೋವಾಗುತ್ತದೆ. ಹಿಂದೆ ನಮ್ಮ ಕನ್ನಡ ಚಿತ್ರರಂಗದಲ್ಲಿ ಎಂತಹ ಒಳ್ಳೆಯ ಸಿನಿಮಾಗಳು ಬಂದಿದ್ದವು. ಆದರೆ ಇದೀಗ ಹಿಂಸೆ, ಕ್ರೌರ್ಯವನ್ನು ವಿಜೃಂಭಿಸುವ ಚಿತ್ರಗಳು ಹಾಗೂ ಹೆಣ್ಣನ್ನು ಅರೆಬೆತ್ತಲೆ ಮಾಡಿ ತೋರಿಸುವ ಸಿನಿಮಾಗಳೆ ಹೆಚ್ಚಾಗಿ ಬರುತ್ತಿವೆ. ಇಂತಹ ಚಿತ್ರಗಳು ನಮಗೆ ಬೇಕೇ ? ಎಂದು ವರನಟ ಡಾ. ರಾಜ್ ಕುಮಾರ್ ಅವರು ಖೇದ ವ್ಯಕ್ತಪಡಿಸಿದ್ದರು.

Advertisement

Advertisement

ಬೇಸರದಿಂದಲೇ ಅವರು ನಮ್ಮ ಚಿತ್ರರಂಗದ ಆರಂಭದ ಕಾಲ ಹೇಗುತ್ತು ಅಂತಿರಾ? ಬಹಳ ಸುಂದರವಾಗಿತ್ತು. ಅದನ್ನು ನೆನಪಿಸಿಕೊಂಡರೆ ಬಹಳ ಮಧುರವಾಗುತ್ತದೆ. ಅನುಭವಕ್ಕಿಂತ ಅದರ ನೆನಪೇ ಸವಿ ಎನ್ನುತ್ತಾರಲ್ಲ, ಅಷ್ಟು ಸುಮಧುರವಾಗಿದ್ದವು. ಚಿತ್ರರಂಗಕ್ಕೆ ಅದು ಬಹಳ ಕಷ್ಟದ ದಿನಗಳು. ನಮಗೂ ಕಷ್ಟವಿತ್ತು. ಆದರೆ ಇಂತಹ ಕಷ್ಟಗಳ ನಡುವಲ್ಲೂ ಕೂಡ ನಮ್ಮ ಚಿತ್ರರಂಗದಲ್ಲಿ ಒಳ್ಳೆಯ ಚಿತ್ರಗಳು ಬಂದಿದ್ದವು. ಇದೀಗ ಎಲ್ಲರಿಗು ಬಹಳ ಅನುಕೂಲತೆಗಳಿವೆ. ಆಧುನಿಕ ಯಂತ್ರೋಪಕರಣಗಳಿವೆ. ಆದರೆ ಮೆದುಳಿಗೆ ಕಸರತ್ತು ನೀಡುವ ವಿಚಾರದಲ್ಲಿ ನಾವು ಹಿಂದೆ ಉಳಿದಿದ್ದೇವೆ ಎಂದು ಚಿತ್ರರಂಗ ಬಗೆಗಿನ ನೋವನ್ನು ಹಂಚಿಕೊಂಡಿದ್ದರು.

ಸೆನ್ಸಾರ್ ಮಂಡಳಿ ಬಗ್ಗೆ ಸಹಿತ ಮಾತನಾಡಿದ ಅವರು ಹೆಣ್ಣನ್ನು ಗೌರವಿಸುವ ಪರಂಪರೆ ನಮ್ಮ ರಾಜ್ಯದ್ದು. ಆದರೆ ಈಗಿನ ಕಾಲದಲ್ಲಿ ಆ ಪರಂಪರೆಯನ್ನು ಮರೆತು ಕಲೆಯ ಹೆಸರಿನಲ್ಲಿ ವ್ಯಾಪಾರ ನಡೆಯುತ್ತಿದೆ. ನಮ್ಮ ಹೆಣ್ಣಿನ ಅಂಗಾಂಗ ಪ್ರದರ್ಶನಕ್ಕೆ ಮಹತ್ವ ನೀಡಲಾಗುತ್ತಿದೆ. ಅಶ್ಲೀಲತೆಯನ್ನು ಬಿಂಬಿಸುವ ಸಿನಿಮಾಗಳೇ ಹೆಚ್ಚಾಗಿ ಬರುತ್ತಿವೆ. ಇದರ ಜೊತೆ ಹಿಂಸೆಯ ವೈಭವೀಕರಣ ಸಹ ನಡೆಯುತ್ತಿದೆ. ಇಂತಹ ಚಿತ್ರಗಳಿಗೆ ಕಡಿವಾಣ ಹಾಕಬೇಕು. ಸಮಾಜದ ಸ್ವಾಸ್ಥ್ಯ ಕೆಡಿಸುವ ಇಂತಹ ಚಿತ್ರಗಳು ಬರುವುದಕ್ಕೆ ಸೆನ್ಸಾರ್ ಮಂಡಳಿ ಅವಕಾಶ ನೀಡಬಾರದು. ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.

ಜಾಹಿರಾತು

“ಇಷ್ಟ ಪಟ್ಟ ಸ್ತ್ರೀ ಪುರುಷ ವಶೀಕರಣ ದಲ್ಲಿ ಓಪನ್ ಚಾಲೆಂಜ್” ನಿಮ್ಮ ಸರ್ವ ಸಂಕಷ್ಟಗಳಿಗೆ ಪರಿಹಾರವನ್ನು ತಿಳಿಯಲು ಇಂದೆ ಕರೆ ಮಾಡಿ 9535242057. ನಂ 1 ವಶೀಕರಣ ದೈವಶಕ್ತಿ ಮಾಂತ್ರಿಕ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು ಶ್ರೀ ಪವನ ಶರ್ಮ ಗುರೂಜಿ 9535242057. ಅಮವಾಸ್ಯೆ ಹುಣ್ಣಿಮೆ ಗ್ರಹಣ ಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿಪೂಜೆ ಚೌಡಿ ಉಪಾಸನ ಶಕ್ತಿಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾ ಪ್ರಾಪ್ತಿ, ಮದುವೆ, ಸಂತಾನ, ಪ್ರೀತಿಯಲ್ಲಿ ನಂಬಿ ಮೋಸ, ಸ್ತ್ರೀ ಪುರುಷ ವಶೀಕರಣ, ಜನ ವಶೀಕರಣ, ಸಾಲದಿಂದ ವಿಮುಕ್ತಿ, ನಿಮ್ಮ ಎಲ್ಲಾ ಕಾರ್ಯಗಳಿಗೆ 5 ದಿನಗಳಲ್ಲಿ ಸವರ್ಜಯ ಯಾವುದೆ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ ಕರೆ ಮಾಡಿ 9535242057 ನಿಮ್ಮ ನೋವನ್ನು ಹಂಚಿಕೊಳ್ಳಿ.

Advertisement
Share this on...