ರಕ್ಷಿತ್’ಗೆ ಮತ್ತೆ ಜೋಡಿಯಾದ ರಶ್ಮಿಕಾ ಮಂದಣ್ಣ!

in ಮನರಂಜನೆ 172 views

ಸ್ಯಾಂಡಲ್ ವುಡ್ ಬೆಡಗಿ ರಶ್ಮಿಕಾ ಮಂದಣ್ಣ ನಿಜಕ್ಕೂ ಟಾಲಿವುಡ್ನಲ್ಲಿ ಹೆಚ್ಚು ಬೇಡಿಕೆಯಿರುವ ನಟಿಯರಲ್ಲಿ ಒಬ್ಬರು. ಬಹುತೇಕರು ಅವರನ್ನು ಲಕ್ಕಿ ಮ್ಯಾಸ್ಕಾಟ್ ಎಂದೇ ಗುರುತಿಸುತ್ತಾರೆ. ತಮ್ಮ ನಟನಾ ಕೌಶಲ್ಯ ಮತ್ತು ಕ್ಯೂಟ್ ಲುಕ್’ನಿಂದ ಪ್ರೇಕ್ಷಕರನ್ನು ಆಕರ್ಷಿಸಿರುವ ರಶ್ಮಿಕಾ ಇತ್ತೀಚೆಗೆ ಸೂಪರ್ ಸ್ಟಾರ್ ಮಹೇಶ್ ಬಾಬು ಚಿತ್ರದಲ್ಲಿ ನಟಿಸಿದರು. ಈ ಪಾತ್ರವನ್ನು ಅವರು ಬಹಳ ಲೀಲಾಜಾಲವಾಗಿ ಮತ್ತು ಪರಿಪೂರ್ಣತೆಯಿಂದ ನಿರ್ವಹಿಸಿದ್ದು, ಈ ಚಿತ್ರದಲ್ಲಿನ ತಮ್ಮ ನಟನೆಗೆ ಉತ್ತಮ ಅಂಕಗಳನ್ನು ಪಡೆದರು.
ಕಳೆದೆರಡು ದಿನಗಳಿಂದ ಕೇಳು ಬರುತ್ತಿರುವ ಸುದ್ದಿ ಏನೆಂದರೆ ಕಿರಿಕ್ ಪಾರ್ಟಿ ಚಿತ್ರದ ನಿರ್ಮಾಪಕರು ಕಿರಿಕ್ ಪಾರ್ಟಿ ಮುಂದುವರಿದ ಭಾಗದೊಂದಿಗೆ ಬರಲು ಯೋಜಿಸುತ್ತಿದ್ದಾರೆ. ಈ ಹಿಂದೆ ಚಿತ್ರದಲ್ಲಿ ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದರು. ಚಿತ್ರದ ಚಿತ್ರೀಕರಣ ಸಮಯದಲ್ಲಿ ಇಬ್ಬರಿಗೂ ಪ್ರೀತಿ ಮೂಡಿದ್ದು ನಿಮಗೆಲ್ಲರಿಗೂ ತಿಳಿದಿದೆ. ಆದರೆ ಮುಂದೇನಾಯ್ತು ಗೊತ್ತಿಲ್ಲ. ಇಬ್ಬರ ಪ್ರೀತಿ ನಿಶ್ಚಿತಾರ್ಥದವರೆಗೂ ಹೋಗಿ, ನಂತರ ಬ್ರೇಕ್ ಅಪ್ ಆಯಿತು.

Advertisement

 

Advertisement


ಈಗ, ಕಿರಿಕ್ ಪಾರ್ಟಿ ತಯಾರಕರು ಮುಂದುವರೆದ ಭಾಗದಲ್ಲಿಯೂ ರಕ್ಷಿತ್ ಮತ್ತು ರಶ್ಮಿಕಾ ಪ್ರಮುಖ ಪಾತ್ರಗಳನ್ನು ನಿರ್ವಹಿಸಬೇಕೆಂದು ಬಯಸಿದ್ದಾರೆ. ಈ ಚಿತ್ರದಲ್ಲಿ ರಕ್ಷಿತ್’ಗೆ ಜೋಡಿಯಾಗಿ ನಟಿಸಲು ರಶ್ಮಿಕಾಗೆ ಯಾವುದೇ ತೊಂದರೆ ಇಲ್ಲ ಎಂಬುದು ಸುದ್ದಿ. ಆದರೆ ಈ ಕುರಿತು ಇನ್ನೂ ಯಾವುದೇ ಅಧಿಕೃತ ಮಾಹಿತಿ ಇಲ್ಲ, ಆದರೆ ಶೀಘ್ರದಲ್ಲೇ ಪ್ರಕಟಣೆ ಬರಬಹುದು. ಸದ್ಯ ರಶ್ಮಿಕಾ ಅಲ್ಲು ಅರ್ಜುನ್ ಜೊತೆ ‘ಪುಷ್ಪಾ’ ಚಿತ್ರದಲ್ಲಿ ಕೆಲಸ ಮಾಡಲು ತಯಾರಿ ನಡೆಸುತ್ತಿದ್ದಾರೆ. ಹಾಗೆಯೇ ಎನ್ಟಿಆರ್ ತ್ರಿವಿಕ್ರಮ್ ಚಿತ್ರದಲ್ಲಿಯೂ ಆಕೆ ನಾಯಕಿ ಎಂದು ಮೂಲಗಳು ತಿಳಿಸಿವೆ. ‘ಪುಷ್ಪಾ’ ಚಿತ್ರದಲ್ಲಿ ರಶ್ಮಿಕಾ ಹಳ್ಳಿ ಹುಡುಗಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರವು ಚಿತ್ತೂರಿನ ಹಿನ್ನೆಲೆ ಹೊಂದಿರುವ ಕಾರಣ ಕಲಾವಿದರೆಲ್ಲರೂ ಇಲ್ಲಿನ ಆಡುಭಾಷೆಯನ್ನು ಕಲಿಯಲು ಶ್ರಮಿಸುತ್ತಿದ್ದಾರೆ. ‘ಪುಷ್ಪಾ’ ಚಿತ್ರದ ಪಾತ್ರಕ್ಕೆ ತನ್ನ ಧ್ವನಿಯನ್ನೇ ನೀಡಬೇಕೆಂದು ರಶ್ಮಿಕಾ ನಿರ್ಧರಿಸಿರುವುದರಿಂದ, ಚಿತ್ತೂರು ಭಾಷೆಯನ್ನು ನಿರರ್ಗಳವಾಗಿ ಕಲಿಯಲು ಈ ಲಾಕ್ ಡೌನ್ ಸಮಯವನ್ನು ಸರಿಯಾಗಿ ಸದುಪಯೋಗಪಡಿಸಿಕೊಂಡಿದ್ದಾರೆ ಎಂಬ ಸುದ್ದಿ ಬಂದಿದೆ.

Advertisement

 

Advertisement


ಅಂದಹಾಗೆ ಈ ಚಿತ್ರದಲ್ಲಿ ಅಲ್ಲು ಅರ್ಜುನ್ ಲಾರಿ ಡ್ರೈವರ್ ಆಗಿ ಕಾಣಿಸಿಕೊಳ್ಳಲಿದ್ದು, ಅವರ ಪತ್ನಿ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ ಕಾಣಿಸಿಕೊಳ್ಳಲಿದ್ದಾರಂತೆ.
ಮೂಲಗಳ ಪ್ರಕಾರ, ಈ ಚಿತ್ರವು ತನ್ನ ಹೆಂಡತಿಯ ಸಾವಿಗೆ ಪ್ರತೀಕಾರ ತೀರಿಸಿಕೊಳ್ಳಲು ಬಯಸುವ ಟ್ರಕ್ ಚಾಲಕನ ಜೀವನದ ಬಗ್ಗೆ ಹೇಳುತ್ತದೆ. ಈ ಚಿತ್ರ ತೆಲುಗು, ಹಿಂದಿ, ತಮಿಳು, ಮಲಯಾಳಂ ಮತ್ತು ಕನ್ನಡದಲ್ಲಿ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಮೈತ್ರಿ ಮೂವಿ ಮೇಕರ್ಸ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ರಾಕ್ ಸ್ಟಾರ್ ದೇವಿ ಶ್ರೀ ಪ್ರಸಾದ್ ಸಂಗೀತ ನೀಡುತ್ತಿದ್ದಾರೆ.

Advertisement
Share this on...