ರಾಕುಲ್ ಹೋಗಿದ್ದು ವೈನ್ ಶಾಪ್’ಗೆ ಅಲ್ಲ ಕಣ್ರೀ, ಸರಿಯಾಗಿ ವಿಡಿಯೋ ನೋಡಿ ಎಂದ ಅಭಿಮಾನಿಗಳು

in News 38 views

ಮದ್ಯದ ಅಂಗಡಿಗಳು ತೆರೆಯುತ್ತಿದ್ದಂತೆ ಪುರುಷರು ಮಾತ್ರವಲ್ಲ, ಮಹಿಳೆಯರು ಕೂಡ ಮದ್ಯ ಖರೀದಿಸಲು ವೈನ್ ಅಂಗಡಿಗಳ ಬಳಿ ದೀರ್ಘ ಸರತಿ ಸಾಲಿನಲ್ಲಿ ನಿಂತಿರುವ ಸುದ್ದಿಯನ್ನು ನೀವು ಈಗಾಗಲೇ ಕೇಳಿದ್ದೀರಿ, ನೋಡಿದ್ದೀರಿ. ಮದ್ಯದಂಗಡಿಗಳ ಮುಂದೆ ಮಹಿಳೆಯರು ನಿಂತಿರುವ ಚಿತ್ರಗಳು ಮತ್ತು ವಿಡಿಯೋಗಳ ಜೊತೆಗೆ ಸೆಲೆಬ್ರಿಟಿಯೊಬ್ಬರು ಮಾಸ್ಕ್ ಧರಿಸಿ ಸಣ್ಣ ಬಾಟಲಿಯೊಂದನ್ನು ತೆಗೆದುಕೊಂಡು ಹೋಗುವ ವಿಡಿಯೋ ಅಂತರ್ಜಾಲದಲ್ಲಿ ಕಾಣಿಸಿಕೊಂಡಿತ್ತು. ಸೆಲೆಬ್ರಿಟಿಯನ್ನು ಬಾಟಲಿಯೊಂದಿಗೆ ನೋಡಿ ಜನರು ಬೆರಗಾಗಿದ್ದರು. ಕೆಲವು ಯೂಟ್ಯೂಬ್ ಚಾನೆಲ್’ಗಳಂತೂ ಆ ಸೆಲೆಬ್ರಿಟಿಯನ್ನು ರಾಕುಲ್ ಪ್ರೀತ್ ಸಿಂಗ್ ಎಂದು ಗುರುತಿಸಿ, ಮುಂಬೈನ ಮದ್ಯದಂಗಡಿಯಿಂದ ವೈನ್ ಖರೀದಿಸಿದ್ದಾಗಿ ಹೇಳಿವೆ. ಆದರೆ ಸತ್ಯ ಏನೆಂದರೆ, ರಾಕುಲ್ ಹೋಗಿದ್ದು, ವೈನ್ ಅಂಗಡಿಗೆ ಅಲ್ಲ, ಬದಲಾಗಿ ಮೆಡಿಕಲ್ ಶಾಪ್. ರಾಕುಲ್ ಬಳಿ ಇದ್ದ ಬಾಟಲ್ ವೈನ್ ಅಲ್ಲ, ಇದು ಒಂದು ರೀತಿಯ ಸಿರಪ್ ಬಾಟಲ್ ಆಗಿದೆ.

Advertisement

 

Advertisement

Advertisement

 

Advertisement

ರಾಕುಲ್ ಸಿರಪ್ ಬಾಟಲ್ ನೋಡಿದವರು ಎಲ್ಲರಂತೆಯೇ ರಾಕುಲ್ ಕೂಡ ವೈನ್ ಅಂಗಡಿಗಳನ್ನು ತೆರೆಯಲು ಕಾಯುತ್ತಿದ್ದರು ಎಂದು ತಪ್ಪಾಗಿ ಬಿಂಬಿಸಿದರು. ನಾವು ರಾಕುಲ್ ಅವರನ್ನು ಫಿಟ್ನೆಸ್ ಫ್ರೀಕ್ ಎಂದು ಕರೆಯುತ್ತೇವೆ. ಅಷ್ಟೇ ಅಲ್ಲ, ಈ ಲಾಕ್ ಡೌನ್ ನಲ್ಲಿಯೂ ಸಹ ಅವರು ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ. ಅವರ ದಿನಚರಿಯ ವಿಡಿಯೋಗಳು ಮತ್ತು ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಆಗುತ್ತಲೇ ಇರುತ್ತವೆ. ಅದನ್ನು ಅವರ ಅಭಿಮಾನಿಗಳು ಮತ್ತು ಅನುಯಾಯಿಗಳು ಸಹ ಇಷ್ಟಪಡುತ್ತಿದ್ದಾರೆ.

 

ಅಂತಹುದರಲ್ಲಿ ರಾಕುಲ್ ಅವರಂತಹ ಸೆಲೆಬ್ರಿಟಿಗಳ ವಿರುದ್ಧ ಏನನ್ನಾದರೂ ಪ್ರಕಟಿಸುವ ಮೊದಲು ಯೂಟ್ಯೂಬ್ ಚಾನೆಲ್ಗಳು ಸತ್ಯ ಪರಿಶೀಲನೆ ಮಾಡುವ ಅಗತ್ಯವಿದೆ. ದೆಹಲಿ ಮೂಲದ ನಟಿ ರಾಕುಲ್ ಪ್ರೀತ್ ಸಿಂಗ್ ಕಳೆದ ಕೆಲವು ದಿನಗಳ ಹಿಂದೆಯಷ್ಟೇ, ಗುರಗಾಂವ್’ನಲ್ಲಿರುವ ತಮ್ಮ ಮನೆಯ ಸುತ್ತ ಆಹಾರದ ಅವಶ್ಯಕತೆ ಇರುವ, ಹಸಿವಿನಿಂದ ಬಳಲುತ್ತಿರುವ 200 ಕುಟುಂಬಗಳಿಗೆ ಆಹಾರವನ್ನು ನೀಡಿದರು. ಹೆಚ್ಚಾಗಿ ಫೋಟೋಶೂಟ್ ಗಳಿಂದಲೇ ಸುದ್ದಿಯಾಗುವ ರಾಕುಲ್ ಇದೇ ಮೊದಲ ಬಾರಿಗೆ ಇಂತಹ ಸಾಮಾಜಿಕ ಸೇವೆಯ ಮೂಲಕ ಸುದ್ದಿಯಲ್ಲಿರುವುದು ನಿಜಕ್ಕೂ ಖುಷಿಯ ವಿಷಯ. ರಾಕುಲ್’ನಂತೆಯೇ ಕೋವಿಡ್ ವಿರುದ್ಧ ಹೋರಾಡಲು ಅನೇಕ ನಟ ನಟಿಯರು ಮುಂದೆ ಬಂದಿದ್ದು, ಈಗಾಗಲೇ ಬಾಲಿವುಡ್, ಸ್ಯಾಂಡಲ್’ವುಡ್, ಕಾಲಿವುಡ್, ಟಾಲಿವುಡ್, ಕಾಲಿವುಡ್’ನಲ್ಲಿ ಖ್ಯಾತ ಸೆಲೆಬ್ರಿಟಿಗಳು ಲಕ್ಷಗಟ್ಟಲೇ ದೇಣಿಗೆ ನೀಡಿರುವುದನ್ನು ನೀವಿಲ್ಲಿ ಗಮನಿಸಬಹುದು.

Advertisement
Share this on...