ಬಟನ್ ಇಲ್ಲದ ಶರ್ಟ್ ಧರಿಸಿ ಸುದ್ದಿಯಾದ ರಾಕುಲ್ ಪ್ರೀತ್ ಸಿಂಗ್ !

in ಮನರಂಜನೆ 35 views

ಲಾಕ್ ಡೌನ್ ಆದಾಗಿನಿಂದಲೂ ಸೋಶಿಯಲ್ ಮೀಡಿಯಾ ಮೂಲಕ ತನ್ನ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿರುವ ನಟಿ ರಾಕುಲ್ ಪ್ರೀತ್ ಸಿಂಗ್, ಇತ್ತೀಚೆಗೆ ಹಾಟ್ ಫೋಟೋವೊಂದನ್ನು ಪೋಸ್ಟ್ ಮಾಡಿ ಪಡ್ಡೆ ಹುಡುಗರ ಹೃದಯದಲ್ಲಿ ಕಿಚ್ಚು ಹತ್ತಿಸಿದ್ದಾರೆ. ಹೌದು, ಥ್ರೋ ಬ್ಯಾಕ್ ಫೋಟೋವನ್ನು ಹಂಚಿಕೊಂಡಿರುವ ರಾಕುಲ್, ಈ ಫೋಟೋದಲ್ಲಿ ಬಟನ್ ಇಲ್ಲದ ಶರ್ಟ್ ಧರಿಸಿ ತಮ್ಮ ಎದೆ ಭಾಗವನ್ನು ಸ್ವಲ್ವವೂ ಮುಜುಗರವಿಲ್ಲದೆ ತೋರಿಸಿದ್ದಾರೆ. ಈ ಥ್ರೋ ಬ್ಯಾಕ್ ಫೋಟೋ ಈಗ ಅಂತರ್ಜಾಲದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ರಾಕುಲ್ ಅಭಿಮಾನಿಗಳ ನಿದ್ದೆ ಕೆಡಿಸಿರುವುದಂತೂ ಸುಳ್ಳಲ್ಲ. ಅಂದಹಾಗೆ ಇನ್ಸ್ಟಾಗ್ರಾಮ್ನಲ್ಲಿ 14 ಮಿಲಿಯನ್’ಗೂ ಹೆಚ್ಚು ಫಾಲೋವರ್ಸ್ ಹೊಂದಿರುವ ರಾಕುಲ್, ಸೋಷಿಯಲ್ ಮೀಡಿಯಾದಲ್ಲಿ ಸದಾ ಆಕ್ಟಿವ್. ರಾಕುಲ್ ಅವರನ್ನು ಪ್ರತಿಯೊಬ್ಬರೂ ಫಿಟ್ನೆಸ್ ಫ್ರೀಕ್ ಎಂದೇ ಕರೆಯುತ್ತಾರೆ. ಏಕೆಂದರೆ ಈ ಲಾಕ್ ಡೌನ್ ನಲ್ಲಿಯೂ ಸಹ ಅವರು ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ. ಅವರ ದಿನಚರಿಯ ವಿಡಿಯೋಗಳು ಮತ್ತು ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಆಗುತ್ತಲೇ ಇರುತ್ತವೆ. ಅದನ್ನು ಅವರ ಅಭಿಮಾನಿಗಳು ಮತ್ತು ಅನುಯಾಯಿಗಳು ಸಹ ಇಷ್ಟಪಡುತ್ತಿದ್ದಾರೆ.

Advertisement

 

Advertisement


ಬ್ಯಾಕ್-ಟು-ಬ್ಯಾಕ್ ಚಿತ್ರಗಳಲ್ಲಿ ಬ್ಯೂಸಿಯಾಗಿದ್ದರೂ ಜಿಮ್’ನಲ್ಲಿ ಬೆವರಿಳಿಸುವುದನ್ನು ಮರೆಯದ 29 ವರ್ಷದ ರಾಕುಲ್, ಒಂದು ಕಾಲದಲ್ಲಿ ಟಾಲಿವುಡ್’ನ ಸ್ಟಾರ್ ನಟಿಯರ ಪಟ್ಟಿಯಲ್ಲಿದ್ದರು. ಆದರೆ, ಈಗ ಸಮಯ ಸಂಪೂರ್ಣವಾಗಿ ಬದಲಾಗಿದ್ದು, ರಾಕುಲ್ ಬಗ್ಗೆ ಪ್ರೀತಿ ಸ್ವಲ್ಪ ಕಡಿಮೆಯಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ, ರಾಕುಲ್’ಗೆ ಟಾಲಿವುಡ್’ನಲ್ಲಿ ಹೇಳಿಕೊಳ್ಳುವಂತಹ ಆಫರ್ ಬರದ ಕಾರಣ ಅವರು ಬಾಲಿವುಡ್’ನತ್ತ ಗಮನ ಹರಿಸಿದ್ದಾರೆ. ಆದರೆ ಇತ್ತೀಚಿನ ಅಪ್ ಡೇಟ್ಸ್ ಎಂದರೆ ರಾಕುಲ್ ಸ್ಟೇಜ್ ಶೋಗಳಿಗೆ ಹೆಚ್ಚಿನ ಸಂಭಾವನೆ ವಿಧಿಸುತ್ತಿದ್ದಾರೆ. ಚಲನಚಿತ್ರಗಳಲ್ಲಿ ನಟಿಸುವುದರ ಜೊತೆಗೆ, ಅವರು ಕೆಲವು ಕಾರ್ಯಕ್ರಮಗಳು ಮತ್ತು ಸ್ಟೇಜ್ ಶೋಗಳಲ್ಲಿಯೂ ಭಾಗವಹಿಸುತ್ತಿದ್ದಾರೆ. ವರದಿಗಳ ಪ್ರಕಾರ, ಅವರು ಸ್ಟೇಜ್ ಶೋನಲ್ಲಿ ಪಾಲ್ಗೊಳ್ಳಲು 1 ಕೋಟಿ ರೂ. ಸಂಭಾವನೆ ತೆಗೆದುಕೊಳ್ಳುತ್ತಿದ್ದಾರೆ.

Advertisement

 

Advertisement


ಅಲ್ಲದೆ, ಅವರು ಸ್ಪೆಷಲ್ ಸಾಂಗ್’ನಲ್ಲಿ ಹೆಜ್ಜೆ ಹಾಕಲೂ ಒಪ್ಪಿಗೆ ಕೊಟ್ಟಿದ್ದಾರಂತೆ. ಕೆಲವು ವೆಬ್ ಸೈಟ್ ಮಾಹಿತಿಗಳ ಪ್ರಕಾರ ರಾಜಮೌಳಿ ನಿರ್ದೇಶನದ ಆರ್ ಆರ್ ಆರ್ ಚಿತ್ರದಲ್ಲಿ ರಾಕುಲ್ ಸ್ಪೆಷಲ್ ಸಾಂಗ್ ಒಂದರಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಆದರೆ, ಈ ಕುರಿತು ಇನ್ನೂ ಅಧಿಕೃತ ಪ್ರಕಟಣೆ ಬಂದಿಲ್ಲ.

Advertisement
Share this on...