‘ಹಾಯಾಗಿ ಕುಳಿತಿರು ನೀನು ರಾಣಿಯ ಹಾಗೆ’ ಎಂದು ಹಾಡುತ್ತಿದ್ದಾರೆ ರಾಮ್​​ಚರಣ್ ತೇಜ

in ಮನರಂಜನೆ 146 views

ಸಿನಿಮಾ ಸ್ಟಾರ್​​​​ಗಳು ಈಗ #BeTheRealMan ಚಾಲೆಂಜ್ ಆರಂಭಿಸಿದ್ದಾರೆ. ಲಾಕ್​ಡೌನ್​​​ನಿಂದ ಸೆಲಬ್ರಿಟಿಗಳು ಮನೆಯಲ್ಲೇ ಕುಳಿತು ಕುಟುಂಬದವರೆಲ್ಲಾ ಒಟ್ಟಿಗೆ ಕಾಲ ಕಳೆಯುತ್ತಿದ್ದಾರೆ. ಲಾಕ್​​ಡೌನ್​​ಗೂ ಮುನ್ನ ಸೆಲಬ್ರಿಟಿಗಳು ತಮ್ಮ ಪಾಡಿಗೆ ಸಿನಿಮಾ, ಪ್ರಮೋಷನ್, ಶೂಟಿಂಗ್ ಸೇರಿ ಏನಾದರೂ ಒಂದು ಕಾರ್ಯಕ್ರಮಗಳಲ್ಲಿ ಬ್ಯುಸಿ ಇರುತ್ತಿದ್ದರು. ಮನೆಯಲ್ಲಿ ಸೆಲಬ್ರಿಟಿಗಳ ತಾಯಿ ಅಥವಾ ಪತ್ನಿ ಕೆಲಸದವರ ಜೊತೆಗೂಡಿ ಮನೆ ಕೆಲಸ ನಿಭಾಯಿಸುತ್ತಿದ್ದರು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಮನೆಗೆಲಸದವರು ಬರದೆ ಸೆಲಬ್ರಿಟಿಗಳು ತಮ್ಮ ಮನೆ ಕೆಲಸವನ್ನು ತಾವೇ ಮಾಡಿಕೊಳ್ಳುತ್ತಿದ್ದಾರೆ.

Advertisement

 

Advertisement

 

ಇತ್ತೀಚೆಗಷ್ಟೇ ಅರ್ಜುನ್ ರೆಡ್ಡಿ ಖ್ಯಾತಿಯ ಸಂದಿಪ್ ರೆಡ್ಡಿ ವಂಗ ಮನೆಗೆಲಸ ಮಾಡುವ ವಿಡಿಯೋ ಮಾಡಿ ಅದನ್ನು ನಿರ್ದೇಶಕ ರಾಜಮೌಳಿಗೆ ಟ್ಯಾಗ್ ಮಾಡಿದ್ದರು. ರಾಜಮೌಳಿ ಕೂಡಾ ಕಸ ಗುಡಿಸಿ ಮನೆ ಒರೆಸಿ ರಾಮ್​ಚರಣ್ ತೇಜ, ಸಂಗೀತ ನಿರ್ದೇಶಕ ಎಂ.ಎಂ. ಕೀರವಾಣಿ ಹಾಗೂ ಜ್ಯೂನಿಯರ್ ಎನ್​​​ಟಿಆರ್​ಗೆ ಈ ಚಾಲೆಂಜ್ ನೀಡಿದ್ದರು.

 

 

ತಾರಕ್ ಈ ಚಾಲೆಂಜ್ ಸ್ವೀಕರಿಸಿ ಮನೆ ಒಳಗೆ ಹಾಗೂ ಹೊರಗೆ ಕಸ ಗುಡಿಸಿ ಚಾಲೆಂಜ್ ಪೂರೈಸಿದ್ದರು. ಈಗ ರಾಮ್​​ಚರಣ್ ತೇಜ ಸರದಿ. ‘ಹಾಯಾಗಿ ಕುಳಿತಿರು ನೀನು ರಾಣಿಯ ಹಾಗೆ’ ಎನ್ನುತ್ತಾ ಪತ್ನಿ ಉಪಾಸನಾ ಅವರನ್ನು ಹಾಯಾಗಿ ಸೋಫಾ ಮೇಲೆ ಕುಳಿಸಿ ತಾವೇ ಮನೆ ಕೆಲಸ ಎಲ್ಲಾ ಮಾಡಿದ್ದಾರೆ. ಈ ವಿಡಿಯೋದಲ್ಲಿ ರಾಮ್​ ಬಟ್ಟೆಗಳನ್ನು ವಾಷಿಂಗ್ ಮೆಷಿನ್​​ಗೆ ಹಾಕಿ, ಮನೆ ಒರೆಸಿ, ಗಿಡಗಳಿಗೆ ನೀರು ಹಾಕಿ, ಕಾಫಿ ಮಾಡಿ ಸೋಫಾ ಮೇಲೆ ಹಾಯಾಗಿ ಪುಸ್ತಕ ಓದುತ್ತಾ ಕುಳಿತಿದ್ದ ಉಪಾಸನಾ ಅವರಿಗೆ ನೀಡುತ್ತಾರೆ.

 

 

ಈ ವಿಡಿಯೋವನ್ನು ರಾಮ್ ಚರಣ್ ಸೋಷಿಯಲ್ ಮೀಡಿಯಾಗೆ ಅಪ್​​ಲೋಡ್ ಮಾಡಿದ್ದು ವಿಡಿಯೋ ವೈರಲ್ ಆಗುತ್ತಿದೆ. ಅಲ್ಲದೆ ಈ ಸವಾಲನ್ನು ತೆಲುಗು ನಟರಾದ ರಾಣಾ ದಗ್ಗುಬಾಟಿ , ಶರ್ವಾನಂದ್ ಹಾಗೂ ಬಾಲಿವುಡ್ ನಟ ರಣವೀರ್ ಸಿಂಗ್ ಮೂವರಿಗೂ ನೀಡಿದ್ದಾರೆ. ಈ ಮೂವರೂ ಈ ಸವಾಲು ಸ್ವೀಕರಿಸಿ ಮನೆ ಕೆಲಸ ಮಾಡಿ ವಿಡಿಯೋವನ್ನು ಷೇರ್ ಮಾಡಲಿದ್ದಾರಾ ಎಂಬುದನ್ನು ಕಾದು ನೋಡಬೇಕು.

 

 

ಇನ್ನು ಟಾಲಿವುಡ್​​​ನ ಕ್ಯೂಟ್ ಜೋಡಿಗಳಲ್ಲಿ ಮೆಗಾಸ್ಟಾರ್ ಚಿರಂಜೀವಿ ಪುತ್ರ ರಾಮ್​​​ಚರಣ್ ತೇಜ ಹಾಗೂ ಸೊಸೆ ಉಪಾಸನಾ ಕಾಮಿನೇನಿ ಜೋಡಿ ಕೂಡಾ ಒಬ್ಬರು. ಕಾಲೇಜಿನಲ್ಲಿ ಕ್ಲಾಸ್​​​​ಮೆಟ್​​​​ಗಳಾಗಿದ್ದ ಉಪಸನಾ ಹಾಗೂ ರಾಮ್​​ಚರಣ್ ಪ್ರೀತಿಸಿ ಮದುವೆಯಾಗಿದ್ದಾರೆ. ಉಪಾಸನಾ ಅವರು ಅಪೋಲೊ ಸಮೂಹ ಸಂಸ್ಥೆಯ ಸ್ಥಾಪಕರಾದ ಡಾ. ಸಿ. ಪ್ರತಾಪ್​ ರೆಡ್ಡಿ ಅವರು ಮೊಮ್ಮಗಳು. ಉಪಾಸನಾ ಕೂಡಾ ಅಪೋಲೊ ಸಂಸ್ಥೆಯ ಉಪಾಧ್ಯಕ್ಷೆಯಾಗಿ ಕೆಲಸ ಮಾಡುತ್ತಿದ್ದಾರೆ. ಸದಾ ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಇರುವ ಉಪಾಸನಾ ಜನರಿಗೆ ಆರೋಗ್ಯ ಕುರಿತು ಟಿಪ್ಸ್​​​ಗಳನ್ನು ಹೇಳುತ್ತಿರುತ್ತಾರೆ. ಬಡವರಿಗೆ ಉಚಿತ ಔಷಧ ವಿತರಿಸುವಂತೆ ಇತ್ತೀಚೆಗೆ ಉಪಾಸನಾ ತಮ್ಮ ಆಸ್ಪತ್ರೆ ಸಿಬ್ಬಂದಿಗಳಿಗೆ ಸೂಚಿಸಿದ್ದರು.

 

Advertisement
Share this on...