ಹನುಮನ ಪಾತ್ರಕ್ಕಾಗಿ ವಿಕ್ರಮ್ ಮುಸ್ತಾಲ್ ಹೆಚ್ಚಿಸಿಕೊಂಡ ತೂಕವೆಷ್ಟು ಗೊತ್ತಾ ?

in ಮನರಂಜನೆ 31 views

ಖ್ಯಾತ ಕಿರುತೆರೆ ನಿರ್ದೇಶಕ ಆನಂದ್ ಸಾಗರ್ ಅವರ ರಾಮಾಯಣವನ್ನು ಮತ್ತೊಮ್ಮೆ ದಂಗಲ್ ಚಾನೆಲ್ನಲ್ಲಿ ತೋರಿಸಲಾಗುತ್ತಿದೆ. ಮುಂಬರುವ ಕಂತುಗಳಲ್ಲಿ ರಾಮನ ಭಕ್ತ ಹನುಮನ ಪ್ರವೇಶವಿದೆ. ಅಲ್ಲದೆ, ರಾಮ ಮತ್ತು ಹನುಮನ ನಡುವಿನ ಅನ್ಯೋನ್ಯ ಸಂಬಂಧವನ್ನು ತೋರಿಸಲಾಗುತ್ತದೆ. ಎಲ್ಲರಿಗೂ ಗೊತ್ತಿರುವಂತೆ ರಾಮಾಯಣದಲ್ಲಿ ಹನುಮನ ಪಾತ್ರ ಬಹಳ ಮುಖ್ಯ. ಅಂದಹಾಗೆ ಹನುಮನ ಪಾತ್ರವನ್ನು ನಟ ವಿಕ್ರಮ್ ಮುಸ್ತಾಲ್ ಹೆಚ್ಚು ಇಷ್ಟಪಟ್ಟು ನಿರ್ವಹಿಸಿದ್ದಾರೆ. ವಿಕ್ರಮ್ ಆಕಸ್ಮಿಕವಾಗಿ ಈ ಪಾತ್ರವನ್ನು ಪಡೆದರಂತೆ. ವಿಕ್ರಮ್ ಅವರು ಹೇಳುವ ಹಾಗೆ “ನಾನು ರಾಮಾಯಣದ ಆಡಿಷನ್ ನಡೆಯುತ್ತಿರುವಾಗ ಆನಂದ್ ಸಾಗರ್ ಅವರ ಕಚೇರಿಗೆ ಹೋಗಿದ್ದೆ. ಮೇಘನಾದ ಪಾತ್ರಕ್ಕಾಗಿ ನಾನು ಆಡಿಷನ್ ಮಾಡಬೇಕೆಂದು ಯೋಚಿಸಿದೆ.

Advertisement

Advertisement

ಆದರೆ ಪ್ರೊಡಕ್ಷನ್ ತಂಡವು ನನ್ನ ಆಡಿಷನ್ ಅನ್ನು ತುಂಬಾ ಇಷ್ಟಪಟ್ಟು, ನನಗೆ ಹನುಮನ ಪಾತ್ರವನ್ನು ನೀಡಿದರು. ಆದರೆ ನನಗೆ ಹನುಮನ ಪಾತ್ರ ಮಾಡಲು ಸಾಧ್ಯವಾಗುತ್ತದೆಯೇ ಎಂದು ಯೋಚಿಸಿದೆ. ಏಕೆಂದರೆ ನನ್ನದು ತೆಳ್ಳನೆಯ ದೇಹ. ರಾಕೇಶ್ ಜೈನ್ ಮತ್ತು ಶಹಾಬ್ ಶಂಶಿ ಅವರು 6 ತಿಂಗಳ ನಂತರ ನನ್ನ ಪಾತ್ರ ಬರಲಿದೆ ಎಂದು ಹೇಳಿದರು. ಅಲ್ಲಿಯವರೆಗೆ ನಾನು ನನ್ನ ದೇಹದ ಸ್ನಾಯುಗಳನ್ನು ಹುರಿಗಟ್ಟಿಸಲು ವ್ಯಾಯಾಮ ಮಾಡಬೇಕಿತ್ತು. ಆ ಸಮಯದಲ್ಲಿ ನಾನು ಇಂಡಸ್ಟ್ರಿಗೆ ಹೊಸಬನಾಗಿದ್ದರಿಂದ ಜಿಮ್ಗೆ ಹೋಗಲು ಅಥವಾ ಸಪ್ಲಿಮೆಂಟ್’ಗಳನ್ನು ಖರೀದಿಸಲು ನನ್ನ ಬಳಿ ಹಣವಿರಲಿಲ್ಲ. ಆನಂದ್ ಜಿ ಅವರೇ ನನಗೆ ಪ್ರತಿ ತಿಂಗಳು ಇಪ್ಪತ್ತು ಸಾವಿರ ರೂಪಾಯಿಗಳನ್ನು ಸಪ್ಲಿಮೆಂಟ್ ಖರೀದಿಸಲು ನೀಡಿದರು” ಎಂದು ತಿಳಿಸಿದ್ದಾರೆ.

Advertisement


ಅಷ್ಟೇ ಅಲ್ಲ, “ಆನಂದ್ ಜಿ ನಾನು 6 ತಿಂಗಳಲ್ಲಿ ಹನುಮನಂತೆ ಕಾಣುವಂತೆ ನೋಡಿಕೊಂಡರು. ಅವರ ಪ್ರೋತ್ಸಾಹ ಮತ್ತು ಅವರ ಕೆಲಸ, ಅವರ ಸಮರ್ಪಣೆ ನನ್ನ ದೇಹವನ್ನು ಹನುಮನ ಹಾಗೆ ನಿರ್ಮಿಸಲು ಪ್ರೇರೇಪಿಸಿತು. ನಂತರ ನನ್ನ ತೂಕ 76 ಕೆಜಿಯಿಂದ 101 ಕೆಜಿಗೆ ಹೆಚ್ಚಿತು. ಹನುಮನ ಪಾತ್ರವನ್ನು ನಿರ್ವಹಿಸಲು ನಾನು ಸಿದ್ಧನಾದೆ” ಎಂದು ವಿಕ್ರಮ್ ತಾವು ಹನುಮನ ಪಾತ್ರಕ್ಕೆ ಆಯ್ಕೆಯಾಗಿದ್ದರ ಬಗ್ಗೆ ಹೇಳಿಕೊಂಡಿದ್ದಾರೆ. ರಾಮಾಯಣ ಧಾರವಾಹಿ ದಂಗಲ್ ಟಿವಿಯಲ್ಲಿ ರಾತ್ರಿ 7.30 ಮತ್ತು ಮರುದಿನ ಬೆಳಿಗ್ಗೆ 9.30 ಕ್ಕೆ ಪ್ರಸಾರ ಮಾಡಲಾಗುತ್ತಿದೆ. ಇದು ರಾಮನಂದ್ ಸಾಗರ್ ಅವರ ರಾಮಾಯಣದ ರಿಮೇಕ್ ಆಗಿದೆ, ಇದರಲ್ಲಿ ಗುರ್ಮೀತ್ ಚೌಧರಿ ರಾಮನ ಪಾತ್ರ ಮತ್ತು ಡೆಬಿನಾ ಬ್ಯಾನರ್ಜಿ ಸೀತಾ ಪಾತ್ರದಲ್ಲಿದ್ದಾರೆ. ಇದು 2008 ರಲ್ಲಿ ಮೊದಲು ಪ್ರಸಾರವಾಗಿತ್ತು.

Advertisement

Advertisement
Share this on...