‘ರಾಮಾಯಣ’ ಲವ ಈಗ ಎರಡು ಮಕ್ಕಳ ತಂದೆ..ಇವರ ಬಗ್ಗೆ ಇಲ್ಲಿದೆ ಮಾಹಿತಿ

in ಮನರಂಜನೆ 42 views

1987 ರಲ್ಲಿ ಅಂದರೆ ಸುಮಾರು 30 ವರ್ಷಗಳ ಹಿಂದೆ ಪ್ರಸಾರವಾಗಿದ್ದ ರಮಾನಂದ್ ಸಾಗರ್ ಅವರ ‘ರಾಮಾಯಣ’ ಮರುಪ್ರಸಾರವಾಗುತ್ತಿರುವುದು ನಿಮಗೆ ತಿಳಿದ ವಿಚಾರ. ಈ ಐತಿಹಾಸಿಕ ಧಾರಾವಾಹಿಯಲ್ಲಿ ನಟಿಸಿದ ಪ್ರತಿ ಪಾತ್ರವನ್ನೂ ಜನರು ಇಂದಿಗೂ ಗುರುತಿಟ್ಟುಕೊಂಡಿದ್ದಾರೆ. ಈ ಧಾರಾವಾಹಿಯಲ್ಲಿ ಅಂದು ಲವನ ಪಾತ್ರದಲ್ಲಿ ಮಯೂರೇಶ್​ ಕ್ಷೇತ್ರಮಾಡೆ ನಟಿಸಿದ್ದರೆ ಕುಶನ ಪಾತ್ರದಲ್ಲಿ ಸ್ವಪ್ನಿಲ್​​​​​​ ಜೋಷಿ ನಟಿಸಿದ್ದರು. ಈ ಎಲ್ಲಾ ನಟರು ಈಗ ಎಲ್ಲಿರಬಹುದು ಎಂಬ ಕುತೂಹಲ ಧಾರಾವಾಹಿಪ್ರಿಯರಿಗೆ ಇದ್ದೇ ಇರುತ್ತದೆ.ಲವನ ಪಾತ್ರದಲ್ಲಿ ನಟಿಸಿದ್ದ ಮಯೂರೇಶ್ ಕ್ಷೇತ್ರಮಾಡೆಗೆ ಈಗ ಅಮೆರಿಕದ ನ್ಯೂಜೆರ್ಸಿಯಲ್ಲಿದ್ದಾರೆ. ರಾಮಾಯಣ ಧಾರಾವಾಹಿಯಲ್ಲಿ ನಟಿಸುತ್ತಿದ್ದಾಗ ಅವರಿಗೆ 12 ವರ್ಷ. 5ನೇ ವರ್ಷದಿಂದಲೇ ಬಾಲನಟನಾಗಿ ನಟನೆ ಆರಂಭಿಸಿದ ಮುಯೂರೇಶ್​​​​​​​​​​​​​​ ರಾಮಾಯಣ ಧಾರಾವಾಹಿ ನಂತರ ಬೇರೆ ಯಾವ ಧಾರಾವಾಹಿಗಳಲ್ಲೂ ನಟಿಸಲೇ ಇಲ್ಲವಂತೆ. ಅವಕಾಶಗಳು ಸಾಲು ಸಾಲಾಗಿ ಬರುತ್ತಿದ್ದರೂ ಓದಿನ ಕಡೆ ಗಮನ ನೀಡಲು ಮತ್ತೆ ಆ್ಯಕ್ಟಿಂಗ್ ಕಡೆ ಬರಲಾಗಲಿಲ್ಲ. ಮುಂಬೈ ಯೂನಿವರ್ಸಿಟಿಯಲ್ಲಿ ಪದವಿ ಪಡೆದುನಂತರ ಅಮೆರಿಕದ ನ್ಯೂಜೆರ್ಸಿಗೆ ತೆರಳಿ ದೊಡ್ಡ ಕಂಪನಿಯೊಂದರಲ್ಲಿ ಈಗ ಸಿಇಓ ಆಗಿ ಕೆಲಸ ಮಾಡುತ್ತಿದ್ದಾರೆ.

Advertisement

 

Advertisement

Advertisement

ಮಯೂರೇಶ್ ಇಂದು ಭಾರತದಲ್ಲಿ ಇಲ್ಲದಿದ್ದರೂ, ಅವರು ರಾಮಾಯಣದಲ್ಲಿ ನಟಿಸಿ 30 ವರ್ಷಗಳ ಮೇಲಾದರೂ ಜನರು ಮಾತ್ರ ಇನ್ನೂ ಅವರನ್ನು ಮರೆತಿಲ್ಲ. ಮತ್ತೆ ಧಾರಾವಾಹಿ ಪ್ರಸಾರ ಆರಂಭವಾದಾಗಿನಿಂದ ಮಯೂರೇಶ್​​​ಗೆ ಜನರು ಸಂದೇಶದ ಮೇಲೆ ಸಂದೇಶ ಕಳಿಸುತ್ತಿದ್ದಾರೆ. ಅವರನ್ನು ಸಂಪರ್ಕಿಸಲು ಯತ್ನಿಸುತ್ತಿದ್ಧಾರಂತೆ. ಇದರಿಂದ ಮಯೂರೇಶ್ ಬಹಳ ಸಂತೋಷ ವ್ಯಕ್ತಪಡಿಸಿದ್ದಾರೆ. ಮಯೂರೇಶ್​​ ಈಗ ಮದುವೆಯಾಗಿ ಅಮೆರಿಕದಲ್ಲಿ ನೆಮ್ಮದಿ ಜೀವನ ನಡೆಸುತ್ತಿದ್ದಾರೆ.

Advertisement

 

 

ಜನರು ಸುಮಾರು 45 ದಿನಗಳಿಂದ ಲಾಕ್​​ಡೌನ್​​​ನಲ್ಲಿದ್ಧಾರೆ. ಈ ವೇಳೆ ಧಾರಾವಾಹಿಗಳು ಕೂಡಾ ಫ್ರೆಷ್ ಎಪಿಸೋಡ್ ಪ್ರಸಾರ ನಿಲ್ಲಿಸಿದ್ದರಿಂದ ದೂರದರ್ಶನ ಮತ್ತೆ ರಾಮಾಯಣ ಧಾರಾವಾಹಿಯನ್ನು ಮರುಪ್ರಸಾರ ಮಾಡುತ್ತಿದೆ. ರಾಜ್ಯದಲ್ಲಿ ಇದೀಗ ಮೇ 25 ರಿಂದ ಧಾರಾವಾಹಿ ಚಿತ್ರೀಕರಣಕ್ಕೆ ಷರತ್ತುಬದ್ಧ ಅನುಮತಿ ನೀಡಿದ್ದು ವೀಕ್ಷಕರು ಮತ್ತೆ ಮೊದಲಿನಂತೆ ನಿಮ್ಮ ಮೆಚ್ಚಿನ ಧಾರಾವಾಹಿಗಳ ಪ್ರೆಷ್ ಎಪಿಸೋಡ್ ನೋಡಬಹುದು.

RKS

Advertisement
Share this on...