ಟಿಆರ್‌ ಪಿಯಲ್ಲಿ ಹಳೆಯ ಎಲ್ಲಾ ರೆಕಾರ್ಡ್‌ ಗಳನ್ನು ಕುಟ್ಟಿ ಪುಡಿ ಮಾಡಿದ ರಾಮಾಯಣ, ಮಹಾಭಾರತ ಸೀರಿಯಲ್‌

in ಸಿನಿಮಾ 75 views

ಕೊರೊನಾ ಲಾಕ್‌ ಡೌನ್‌ ಪರಿಣಾಮ ಎಲ್ಲರನ್ನು ತಮ್ಮ ಮನೆ ಕೆಲಸ ಹಾಗೂ ಟಿವಿ ನೋಡುವುದರಲ್ಲಿ ಸಖತ್‌ ಬ್ಯುಸಿ ಮಾಡಿಬಿಟ್ಟಿದೆ. ಅದರಲ್ಲೂ ಈ ಲಾಕ್‌ಡೌನ್‌ನ ನಿಂದ ಜನರ ಬೇಸರ ತಣಿಸಲು ಪುನಃ ಪ್ರಸಾರ ಮಾಡಲಾಗುತ್ತಿರುವ 30 ವರ್ಷಗಳ ಪೌರಾಣಿಕ ರಾಮಾಯಣ ಧಾರಾವಾಹಿಯು ಮತ್ತೊಮ್ಮೆ ಸೂಪರ್‌ಹಿಟ್‌ ಆಗಿದೆ.

Advertisement

 

Advertisement

Advertisement

 

Advertisement

ಇದೇ ಕಳೆದ ಶನಿವಾರ ಮತ್ತು ಭಾನುವಾರ ಪ್ರಸಾರವಾದ ಕೇವಲ 4 ಎಪಿಸೋಡ್‌ಗಳನ್ನು ಭರ್ಜರಿ 17 ಕೋಟಿ ಜನ ವೀಕ್ಷಿಸಿದ್ದಾರೆ. ಇನ್ನು ಇದೇ ರಾಮಾಯಣವನ್ನು ಪುನಃ ಪ್ರಸಾರ ಮಾಡಿದ ಪ್ರಸಾರ ಭಾರತಿಯ ಕ್ರಮವು ಅತ್ಯುತ್ತಮವಾಗಿದ್ದು, ಈ ಧಾರಾವಾಹಿ ಅತಿ ಹೆಚ್ಚು ಜನ ವೀಕ್ಷಕರನ್ನು ತನ್ನತ್ತ ಸೆಳೆದಿದೆ ಎಂದು ಬಾರ್ಕ್ ಕಾರ್ಯಾಕಾರಿ ಮುಖ್ಯಸ್ಥ ಸುನಿಲ್‌ ಲುಲ್ಲಾ ಹೇಳಿದ್ದಾರೆ.
ಪ್ರಸಾರವಾದ ಮೊದಲ ದಿನ ಅಂದರೆ ಶನಿವಾರ ಬೆಳಗ್ಗೆ 3.4 ಕೋಟಿ, ಅದೇ ದಿನ ಸಂಜೆ 4.5 ಕೋಟಿ ಜನರು ರಾಮಾಯಣ ಧಾರಾವಾಹಿಯನ್ನು ವೀಕ್ಷಿಸಿದ್ದಾರೆ. ಆ ಬಳಿಕ ಭಾನುವಾರ ಈ ಪ್ರಮಾಣ ಕ್ರಮವಾಗಿ 4 ಕೋಟಿ ಮತ್ತು 5.1 ಕೋಟಿಗೆ ಏರಿತ್ತು ಎಂದು ಅವರು ಸ್ಪಷ್ಟಪಡಿಸಿದ್ದಾರೆ.

 

 

ರಾಮಾನಂದ್ ಸಾಗರ್ ನಿರ್ಮಾಣದ ಈ ಧಾರಾವಾಹಿ ಹಿಂದಿ ಮನರಂಜನಾ ವಿಭಾಗದಲ್ಲಿ ಇದುವರೆಗೂ ಅತಿಹೆಚ್ಚು ವೀಕ್ಷಿಸಿದ ಧಾರಾವಾಹಿಯಾಗಿ ಹೊರಹೊಮ್ಮಿದೆ ಎಂದು ಬಾರ್ಕ್ ತಿಳಿಸಿದೆ. ಡಿಡಿ ನ್ಯಾಶನಲ್ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ರಾಮಾಯಣ’ ಧಾರಾವಾಹಿ ಹಿಂದಿ ಜಿಇಸಿ ವಿಭಾಗದಲ್ಲಿ 2015ರ ಬಳಿಕ ಯಾವ ಶೋ ಸಹ ದಾಖಲಿಸದ ಅತ್ಯಧಿಕ ರೇಟಿಂಗ್ ದಾಖಲಿಸಿದೆ ಎಂಬುದು ವಿಶೇಷ.

Advertisement
Share this on...