ಒಡಿಶಾದಲ್ಲಿ ಉಂಟಾದ ಚಂಡಮಾರುತಕ್ಕೆ ಈ ಅಪ್ಸರೆಯೇ ಕಾರಣ ಅಂತೆ…ರಾಮ್​​​ಗೋಪಾಲ್ ವರ್ಮಾ

in ಮನರಂಜನೆ/ಸಿನಿಮಾ 148 views

ರಾಮ್​​ಗೋಪಾಲ್ ವರ್ಮಾ..ನಿಮ್ಮೆಲ್ಲರ ಕರ್ಮ, ನಾನೊಬ್ಬ ತಿಕ್ಕಲು ಮನುಷ್ಯ ಹೀಗೆ ತನ್ನ ಬಗ್ಗೆಯೇ ವಿಚಿತ್ರವಾಗಿ ಮಾತನಾಡುತ್ತಾ ಚಿತ್ರವಿಚಿತ್ರವಾಗಿ ವರ್ತಿಸುವ ರಾಮ್​​ಗೋಪಾಲ್​ ವರ್ಮಾ ಎಂದರೆ ಫನ್ನಿ ಡೈರೆಕ್ಟರ್​ ಎನ್ನಿಸುವುದು ನಿಜ. ಅವರ ಹುಟ್ಟುಗುಣವೇ ಹಾಗೆಯೋ ಅಥವಾ ಸದಾ ಸುದ್ದಿಯಲ್ಲಿರಬೇಕೆಂಬ ಆಸೆಗೆ ವಿವಾದಿತ ಹೇಳಿಕೆ ನೀಡುತ್ತಾರೋ ಯಾರಿಗೂ ಗೊತ್ತಿಲ್ಲ.ಬಹಳ ದಿನಗಳ ನಂತರ ರಾಮ್​ಗೋಪಾಲ್​ ವರ್ಮಾ ಸೋಷಿಯಲ್ ಮೀಡಿಯಾದ್ಯಂತ ಮತ್ತೆ ಸುತ್ತು ಹಾಕುತ್ತಿದ್ದಾರೆ. ಅದೂ ಒಬ್ಬರೇ ಅಲ್ಲ, ಅಪ್ಸರೆ ಜೊತೆಗೆ. ಇದ್ಯಾರಪ್ಪಾ ದೇವಲೋಕದಿಂದ ಇಳಿದುಬಂದ ಅಪ್ಸರೆಯಾ ಎಂದುಕೊಳ್ಳಬೇಡಿ. ಅಪ್ಸರಾ ರಾಣಿ ಎಂಬ ಒಡಿಶಾಗೆ ಸೇರಿದ ನಟಿಯೊಂದಿಗೆ ಇರುವ ವರ್ಮಾ ಫೋಟೋ ವೈರಲ್ ಆಗುತ್ತಿದೆ. ಈ ಯುವತಿ ಈಗ ಹೈದಾರಾಬಾದ್​​ನಲ್ಲಿ ನೆಲೆಸಿದ್ದಾರೆ. ಈಗಾಗಲೇ 2-3 ತೆಲುಗು ಸಿನಿಮಾಗಳಲ್ಲೂ ಈಕೆ ನಟಿಸಿದ್ದಾರೆ. ಆದರೆ ಆಕೆಯನ್ನು ಯಾರೂ ಗುರುತಿಸಿಲ್ಲ.

Advertisement

Advertisement

ಅಪ್ಸರಾ ರಾಣಿಗೆ ಮುತ್ತು ಕೊಡುತ್ತಿರುವ ರಾಮ್​​​ಗೋಪಾಲ್​ ವರ್ಮಾ ಫೋಟೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ಹುಡುಗಿ ಈಗ ವರ್ಮಾ ಹೊಸ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಆಕೆಯ ಹಾಟ್ ಫೋಟೋಗಳನ್ನು ತಮ್ಮ ಸೋಷಿಯಲ್ ಮಿಡಿಯಾದಲ್ಲಿ ಷೇರ್ ಮಾಡಿಕೊಳ್ಳುತ್ತಿರುವ ವರ್ಮಾ, ‘ನನಗೆ ಒಡಿಶಾ ಬಗ್ಗೆ ಹೆಚ್ಚಿಗೆ ತಿಳಿದಿರಲಿಲ್ಲ. ಆದರೆ ಹಲವು ವರ್ಷಗಳ ಹಿಂದೆ ಒಡಿಶಾದಲ್ಲಿ ಉಂಟಾದ ಚಂಡಮಾರುತದ ಬಗ್ಗೆ ಮಾತ್ರ ತಿಳಿದಿತ್ತು. ಆದರೆ ಅಪ್ಸರಾ ರಾಣಿಯನ್ನು ಭೇಟಿ ಆದ ನಂತರ ಅಲ್ಲಿ ಉಂಟಾದ ಚಂಡಮಾರುತಕ್ಕೆಲ್ಲಾ ಆಕೆಯೇ ಕಾರಣ, ಏಕೆಂದರೆ ಆಕೆ ನಿಜಕ್ಕೂ ಅಪ್ಸರೆಯೇ’ ಎಂದು ಬರೆದುಕೊಂಡಿದ್ದಾರೆ.

Advertisement

Advertisement

ಮದುವೆಯಾಗಿ ಪತ್ನಿಗೆ ವಿಚ್ಛೇದನ ನೀಡಿ ಏಕಾಂಗಿಯಾಗಿ ಬದುಕುತ್ತಿರುವ ಈತನ ಮಗಳಿಗೆ ಮದುವೆಯಾಗಿ ಮೊಮ್ಮಗು ಕೂಡಾ ಇದೆ. ಇಂತ ವಯಸ್ಸಲ್ಲಿ ಹೀಗೆ ಹುಡುಗಿಯರ ವಿಚಾರದಲ್ಲೇ ಹೆಚ್ಚು ಸುದ್ದಿಯಾಗುವ ಈತನ ಬಗ್ಗೆ ನೆಟಿಜನ್ಸ್ ವಿಧವಿಧವಾಗಿ ಕಮೆಂಟ್ ಮಾಡುತ್ತಿದ್ದಾರೆ.

Advertisement
Share this on...