ಮೊದಲ ಬಾರಿಗೆ ಕನ್ನಡ ಕಿರುತೆರೆಗೆ ಬಂದ ರಮ್ಯಕೃಷ್ಣನ್…..ಅದು ಧಾರಾವಾಹಿನಾ….ರಿಯಾಲಿಟಿ ಶೋನಾ….?

in ಮನರಂಜನೆ/ಸಿನಿಮಾ 4,454 views

ಒಂದು ದಶಕದಲ್ಲಿ ಸಿನಿಮಾದಲ್ಲಿ ದೊಡ್ಡ ಹೆಸರು ಮಾಡಿದ ಅನೇಕ ನಟ-ನಟಿಯರು ಇಂದು ಕಿರುತೆರೆಯಲ್ಲೂ ನಟಿಸುತ್ತಿದ್ದಾರೆ. ಕನ್ನಡ ಕಿರುತೆರೆಯಲ್ಲಿ ಈಗಾಗಲೇ ಸುಧಾರಾಣಿ, ಜೈಜಗದೀಶ್, ಛಾಯಾಸಿಂಗ್, ಹೇಮ ಚೌಧರಿ, ಅಂಬಿಕ ಅವರಂಥ ನಟಿಯರು ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದಾರೆ. ಇದೀಗ ಮತ್ತೊಬ್ಬರು ನಟಿ, ದಕ್ಷಿಣ ಭಾರತದ ಖ್ಯಾತ ನಟಿ ರಮ್ಯಕೃಷ್ಣನ್ ಕೂಡಾ ಕಿರುತೆರೆಗೆ ಬರುತ್ತಿದ್ದಾರೆ. ಬಟ್ಟಲು ಕಣ್ಣುಗಳ ಚೆಲುವೆ ರಮ್ಯಕೃಷ್ಣನ್​​ ಯಾರಿಗೆ ತಾನೇ ಗೊತ್ತಿಲ್ಲ..? ತೆಲುಗು, ತಮಿಳು, ಮಲಯಾಳಂ, ಹಿಂದಿ ಹಾಗೂ ಕನ್ನಡ ಸಿನಿಮಾಗಳಲ್ಲಿ ನಟಿಸಿ ಹೆಸರು ಮಾಡಿದ ಇವರು ರಾಜಮೌಳಿ ನಿರ್ದೇಶನದ ಬಾಹುಬಲಿ ಚಿತ್ರದಲ್ಲಿ ಶಿವಗಾಮಿ ಪಾತ್ರ ಮಾಡಿದ ನಂತರವಂತೂ ಮತ್ತಷ್ಟು ಹೆಸರಾದರು. ಬಹುತೇಕ ಸಿನಿಮಾಗಳಲ್ಲಿ ದೇವಿ ಪಾತ್ರಕ್ಕೆ ಕೂಡಾ ಬಣ್ಣ ಹಚ್ಚಿದವರು ಈ ನಟಿ. ಏಕೆಂದರೆ ಆ ಪಾತ್ರ ಅವರಿಗೆ ಬಹಳ ಹೊಂದುತ್ತಿತ್ತು. ಇದೀಗ ಅವರು ಮೊದಲ ಬಾರಿಗೆ ಕನ್ನಡ ಕಿರುತೆರೆಗೆ ಬರುತ್ತಿದ್ದಾರೆ. ಕಿರುತೆರೆ ಎಂದರೆ ಅವರು ರಿಯಾಲಿಟಿ ಶೋನಲ್ಲಿ ಭಾಗವಹಿಸುತ್ತಿದ್ದಾರಾ ಅಥವಾ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರಾ ಎಂಬ ಪ್ರಶ್ನೆ ಬರಬಹುದು. ರಮ್ಯಕೃಷ್ಣ ಧಾರಾವಾಹಿಯೊಂದಕ್ಕೆ ಬಣ್ಣ ಹಚ್ಚುತ್ತಿದ್ದಾರೆ.

Advertisement

Advertisement

ರಮ್ಯಕೃಷ್ಣನ್ ‘ನಾಗಭೈರವಿ’ ಎಂಬ ಧಾರಾವಾಹಿಯಲ್ಲಿ ನಟಿಸುತ್ತಿದ್ದು ಈ ಧಾರಾವಾಹಿ ಜೀ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಮಾರ್ಚ್ 1 ರಿಂದ ಸೋಮವಾರದಿಂದ ಶುಕ್ರವಾರದವರೆಗೆ ಮಧ್ಯಾಹ್ನ 3ರಿಂದ 4ರವರೆಗೆ ಪ್ರಸಾರವಾಗಲಿರುವ ‘ನಾಗಭೈರವಿ’ ಎಂಬ ಧಾರಾವಾಹಿಯಲ್ಲಿ ರಮ್ಯಕೃಷ್ಣನ್ ನಟಿಸುತ್ತಿದ್ದಾರೆ. ಈಗಾಗಲೇ ತೆಲುಗಿನಲ್ಲಿ ಪ್ರಸಾರವಾಗುತ್ತಿರುವ ‘ನಾಗಭೈರವಿ’ ಕನ್ನಡಕ್ಕೆ ಡಬ್ಬಿಂಗ್ ಆಗಿ ಪ್ರಸಾರವಾಗಲಿದೆ. ದಾಸಮ್ ವೆಂಕಟರಾಬ್ ಬರೆದಿರುವ ಈ ಫ್ಯಾಂಟಸಿ ಸೂಪರ್​​ ನ್ಯಾಚುರಲ್​​ ನಾಗಭೈರವಿ ಕಥೆಗೆ ವರನಾಂಜನೇಯಲು ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಧಾರಾವಾಹಿಯಲ್ಲಿ ರಮ್ಯಕೃಷ್ಣನ್ ಜೊತೆಗೆ ಪವನ್, ಯಶ್ಮಿ ಗೌಡ, ರಮ್ಯಕೃಷ್ಣನ್, ಕಲ್ಕಿ ರಾಜ, ಅಶ್ವಿನಿ ಹಾಗೂ ಇನ್ನಿತರರು ನಟಿಸಿದ್ದಾರೆ.

Advertisement

‘ನಾಗಭೈರವಿ’ ಫ್ಯಾಂಟಸಿ ಸೂಪರ್​ ನ್ಯಾಚುರಲ್ ಧಾರಾವಾಹಿ ಆಗಿರುವುದರಿಂದ ಅದ್ಧೂರಿ ಸೆಟ್​​​ಗಳು, ವಿಶ್ಯುವಲ್ ಎಫೆಕ್ಟ್​​​​​​​​​​​​​​​​​​​ಗಳು, ಕುತೂಹಲಕಾರಿ ಕಥೆಯನ್ನು ವೀಕ್ಷಕರು ಧಾರಾವಾಹಿಯಲ್ಲಿ ನೋಡಬಹುದು. ಸಸ್ಪೆನ್ಸ್​ ಹಾಗೂ ಐತಿಹಾಸಿಕ ಅಂಶಗಳು ಇರುವುದರಿಂದ ಈಗಾಗಲೇ ತೆಲುಗು ಭಾಷೆಯಲ್ಲಿ ಈ ಧಾರಾವಾಹಿ ಒಳ್ಳೆ ಟಿಆರ್​​​ಪಿ ಗಳಿಸಿದೆ. ಈಗಾಗಲೇ ನಾಗದೇವತೆ ಬಗ್ಗೆ ನಾಗಕನ್ನಿಕೆ, ನಾಗಿಣಿ, ನಂದಿನಿಯಂಥ ಅನೇಕ ಧಾರಾವಾಹಿಗಳು ಪ್ರಸಾರವಾಗಿವೆ. ‘ನಾಗಭೈರವಿ’ ಕೂಡಾ ನಾಗದೇವತೆಗೆ ಸಂಬಂಧಿಸಿದ ಕಥೆ ಆದರೂ ಇದು ವಿಭಿನ್ನವಾಗಿ ಮೂಡಿಬರುತ್ತಿದೆ. ಹಿರಿಯ ನಟಿ ರಮ್ಯಕೃಷ್ಣನ್ ಈ ಧಾರಾವಾಹಿಯಲ್ಲಿ ಪ್ರಮುಖ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ. ಕನ್ನಡ ಕಿರುತೆರೆಪ್ರಿಯರು ಈ ಧಾರಾವಾಹಿಯನ್ನು ಹೇಗೆ ಸ್ವೀಕರಿಸಲಿದ್ದಾರೆ ಕಾದು ನೋಡಬೇಕು.

Advertisement

ರಮ್ಯಕೃಷ್ಣನ್ ತಮಿಳು ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದವರು. ಕನ್ನಡದಲ್ಲಿ ಅವರು ಕೃಷ್ಣ ರುಕ್ಮಿಣಿ , ಗಡಿಬಿಡಿ ಗಂಡ, ಮಾಂಗಲ್ಯಂ ತಂತು ನಾನೇನ, ಯಾರೇ ನೀ ಅಭಿಮಾನಿ, ನೀಲಾಂಬರಿ, ಆಂಧ್ರ ಹೆಂಡ್ತಿ, ಚಾಮುಂಡಿ ಸೇರಿ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. 2017 ರಲ್ಲಿ ಬಿಡುಗಡೆಯಾದ ಪುನೀತ್ ರಾಜ್​ಕುಮಾರ್ ಅಭಿನಯದ ಅಂಜನಿ ಪುತ್ರ ಚಿತ್ರದ ನಂತರ ಅವರು ಯಾವುದೇ ಕನ್ನಡ ಸಿನಿಮಾದಲ್ಲಿ ನಟಿಸಿಲ್ಲ.

Advertisement