ನಾನು ಯಾರು ? ಯಾಕಾಗಿ ಇದ್ದೀನಿ? ಮುಂದೇನು ಮಾಡಬೇಕು? ರಮ್ಯಾ ಹೀಗೆ ಹೇಳಿದ್ಯಾಕೆ !

in ಕನ್ನಡ ಮಾಹಿತಿ/ಮನರಂಜನೆ 109 views

ಚಂದನವನ ಕಂಡ ಪ್ರತಿಭಾವಂತ ನಾಯಕಿ ಮತ್ತು ದಶಕಗಳ ಕಾಲ ಚಿತ್ರರಂಗದಲ್ಲಿ ಸ್ಥಾಪಿಸಿಕೊಂಡು ಸಿನಿ ರಸಿಕರಿಗೆ ರಸದೌತಣ ನೀಡಿ ಮೋಹಕ ತಾರೆಯಾದವರು ರಮ್ಯಾ. ಪಾರ್ವತಮ್ಮ ಅವರ ಬ್ಯಾನರ್ ಅಡಿಯಲ್ಲಿ ಪುನೀತ್ ರಾಜ್ ಅವರ ನಾಯಕತ್ವದ ಚಿತ್ರದ ಮೂಲಕ ಚಂದನವನಕ್ಕೆ ಪಾದಾರ್ಪಣೆ ಮಾಡಿದ ರಮ್ಯಾ, ಕನ್ನಡದ ಬಹುತೇಕ ಸ್ಟಾರ್ ನಟರಿಂದ ಹಿಡಿದು ಯುವ ನಟರ ಜೊತೆ ಅಭಿನಯಿಸಿ ಸುಮಾರು ನಲವತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದರ ಜೊತೆಗೆ ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಬಣ್ಣ ಹಚ್ಚಿ ಕರ್ನಾಟಕ ರಾಜ್ಯ ಪ್ರಶಸ್ತಿ, ಉದಯ ಪ್ರಶಸ್ತಿ ,ಫಿಲ್ಮ್ ಫೇರ್ ಪ್ರಶಸ್ತಿ ಹೀಗೆ ಸಾಕಷ್ಟು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ..ಇನ್ನು ದಶಕಗಳ ಹಿಂದೆ ರಮ್ಯಾ ಕರುನಾಡ ಮನೆ ಮಗಳಾಗಿದ್ದಳು ಅಲ್ಲದೆ ಯುವ ಪೀಳಿಗೆಗಳ ಡ್ರೀಮ್ ಗರ್ಲ್ ಕೂಡ ಆಗಿದ್ದಾರೆ ಮೋಹಕ ತಾರೆ, ತಮ್ಮ ನಟನೆ ಮತ್ತು ಗ್ಲಾಮರ್ ಲುಕ್ ನಿಂದ ಕೋಟ್ಯಂತರ ಅಭಿಮಾನಿಗಳನ್ನು ಸೆರೆ ಹಿಡಿದಿದ್ದಾರೆ. ಇನ್ನು ರಾಜಕೀಯಕ್ಕೆ ಧುಮುಕಿದ ರಮ್ಯಾ ಚಿತ್ರರಂಗದಲ್ಲಿ ಕಾಣಿಸಿಕೊಳ್ಳುವುದನ್ನು ಕಮ್ಮಿ ಮಾಡಿದರು ಅಲ್ಲದೇ ಅವರ ಸಿನಿಮಾ ಬಿಡುಗಡೆಯಾಗಿ ಬಹುತೇಕ ಎರಡುಮೂರು ವರ್ಷಗಳು ಕಳೆದು ಹೋಗಿದೆ.

Advertisement

Advertisement

ನಮ್ಮ ಸ್ಯಾಂಡಲ್ ವುಡ್ ಕ್ವೀನ್ ಯಾವಾಗ ಮತ್ತೆ ಬಣ್ಣ ಹಚ್ಚುತ್ತಾರಾಪ್ಪಾ ಎಂದು ಅಭಿಮಾನಿಗಳು ಎದುರು ನೋಡುತ್ತಿದ್ದಾರೆ. ಅಭಿಮಾನಿಗಳು ಮಾತ್ರವಲ್ಲದೆ ಸ್ಟಾರ್ ನಟರು ಸಹ ರಮ್ಯಾ ಮತ್ತೆ ಚಿತ್ರರಂಗಕ್ಕೆ ಬರಲಿ ಎಂದು ಬಯಸುತ್ತಿದ್ದಾರೆ.ಇನ್ನು ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಅವರು ಇದೀಗ ಮತ್ತೆ ಪ್ರತ್ಯಕ್ಷವಾಗಿದ್ದು, ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸೋತ ನಂತರ ಆಕೆ ಮಾಯವಾಗಿದ್ದರು‌.‌ ಆದರೆ ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣದ ಹೆಡ್ ಆಗಿ ಕೆಲಸಮಾಡುತ್ತಿದ್ದರು. ನಂತರ ಇದ್ದಕ್ಕಿದ್ದಂತೆ ಎಲ್ಲಾ ಅಕೌಂಟ್ ಅನ್ನು ಕೂಡ ಡಿಲಿಟ್ ಮಾಡಿ ಬೇರೆ ದೇಶಕ್ಕೆ ಹಾರಿದ್ದರು. ತಿಂಗಳುಗಳ ನಂತರ ರಮ್ಯಾ ಇದ್ದಕ್ಕಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಮತ್ತೇ ಅಕ್ಟಿವ್ ಆಗಿದ್ದಾರೆ.

Advertisement

Advertisement

ಸಂದರ್ಶನದಲ್ಲಿ ಮಾತಾನಾಡಿದ ರಮ್ಯಾ ‘ನಾವೆಲ್ಲರೂ ಭಾವೋದ್ರಿಕ್ತ ವ್ಯಕ್ತಿತ್ವವುಳ್ಳವರು, ಹೀಗಾಗಿಯೇ ಪ್ರಪಂಚದಲ್ಲಿ ಏನೇ ನಡೆದರೂ ಬೇಸರ ಮಾಡಿಕೊಳ್ಳುತ್ತೇವೆ. ಇಂತಹ ಪರಿಸ್ಥಿತಿಯಲ್ಲಿ ನಾವು ಸಿಕ್ಕಿಹಾಕಿಕೊಂಡರೆ ನಮ್ಮಲ್ಲಿನ ಜೀವನ ಉತ್ಸಾಹವೇ ಕುಗ್ಗಿ ಹೋಗುತ್ತದೆ. ಹೀಗಾದಾಗ ನಾವು ಹಿಂದೆ ಹೆಜ್ಜೆಯಿಡಲು ಮುಂದಾಗುತ್ತೇವೆ. ಎಲ್ಲರಿಂದ ಪತ್ಯೇಕವಾಗಿರಲು ಬಯಸುತ್ತೇವೆ. ನಮ್ಮ ನಮ್ಮಲ್ಲೇ ಬೇಸರ ಮಾಡಿಕೊಳ್ಳುತ್ತೇವೆ.ಇವೆಲ್ಲಕ್ಕಿಂತ ಹೆಚ್ಚಾಗಿ ನಮ್ಮಲ್ಲೇ ಅನೇಕ ಪ್ರಶ್ನೆಗಳು ಮೂಡುತ್ತವೆ.

ನಾನು ಯಾರು? ಯಾಕಾಗಿ ಇದ್ದೀನಿ? ಮುಂದೇನು ಮಾಡಬೇಕು? ನನ್ನ ಜೀವನದ ಅರ್ಥವೇನು? ಹೀಗೆಲ್ಲಾ ನಮ್ಮನ್ನು ನಾವೇ ಆತ್ಮವಲೋಕನ ಮಾಡಿಕೊಳ್ಳುತ್ತೇವೆ.ನಾವು ದುಃಖ ಮತ್ತು ಸುಖವನ್ನು ಬ್ಯಾಲೆನ್ಸ್ ಮಾಡುವುದನ್ನು ಕಲೀಬೇಕು. ಕಷ್ಟದ ಸಮಯದೊಂದಿಗೆ ಜೀವನವನ್ನು ಎಂಜಾಯ್ ಮಾಡಬೇಕು ಎಂಬುದು ನನ್ನ ಅಭಿಪ್ರಾಯ. ಜೀವನವೇ ಒಂದು ನಿಜವಾದ ಹೋರಾಟ. ಹೀಗಾಗಿ ನಮ್ಮನ್ನು ನಾವು ಮೊದಲು ತಿಳಿದುಕೊಳ್ಳುವ ಮೂಲಕ ಬದುಕಬೇಕು’ ಎಂದು ಮೋಹಕತಾರೆ ಹೇಳಿದ್ದಾರೆ.

Advertisement