ರಮ್ಯಾ ಅವರ ವಿವಾಹದ ಬಗ್ಗೆ ಟ್ವಿಸ್ಟ್ ಕೊಟ್ಟ ಅವರ ತಾಯಿ!

in ಮನರಂಜನೆ/ಸಿನಿಮಾ 110 views

ಚಂದನವನ ಕಂಡ ಪ್ರತಿಭಾವಂತ ನಾಯಕಿ ಮತ್ತು ದಶಕಗಳ ಕಾಲ ಚಿತ್ರರಂಗದಲ್ಲಿ  ನೆಲೆ ಸ್ಥಾಪಿಸಿಕೊಂಡು  ಸಿನಿ ರಸಿಕರಿಗೆ ರಸದೌತಣ ನೀಡಿ ಮೋಹಕ ತಾರೆ ಯಾದವರು ರಮ್ಯ.  ಪಾರ್ವತಮ್ಮ ಅವರ ಬ್ಯಾನರ್ ನಡಿಯಲ್ಲಿ ಪುನೀತ್ ರಾಜ್ಕುಮಾರ್  ಅವರ ನಾಯಕತ್ವದ ಚಿತ್ರದ ಮೂಲಕ ಚಂದನವನಕ್ಕೆ ಪಾದಾರ್ಪಣೆ ಮಾಡಿದ ರಮ್ಯಾ, ಕನ್ನಡದ ಬಹುತೇಕ ಸ್ಟಾರ್ ನಟರಿಂದ ಹಿಡಿದು ಯುವ ನಟರ ಜೊತೆ ಅಭಿನಯಿಸಿ ಸುಮಾರು ನಲವತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದರ ಜೊತೆಗೆ ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಬಣ್ಣ ಹಚ್ಚಿ ಕರ್ನಾಟಕ ರಾಜ್ಯ ಪ್ರಶಸ್ತಿ, ಉದಯ ಪ್ರಶಸ್ತಿ ,ಫಿಲ್ಮ್ ಫೇರ್ ಪ್ರಶಸ್ತಿ ಹೀಗೆ ಸಾಕಷ್ಟು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ.. ಇನ್ನು ದಶಕಗಳ ಹಿಂದೆ ರಮ್ಯಾ ಕರುನಾಡ ಮನೆ ಮಗಳಾಗಿದ್ದಳು ಅಲ್ಲದೆ ಯುವ ಪೀಳಿಗೆಗಳ ಡ್ರೀಮ್ ಗರ್ಲ್ ಕೂಡ ಆಗಿದ್ದರು . ಮೋಹಕ ತಾರೆ, ತಮ್ಮ ನಟನೆ ಮತ್ತು ಗ್ಲಾಮರ್ ಲುಕ್ ನಿಂದ ಕೋಟ್ಯಂತರ ಅಭಿಮಾನಿಗಳನ್ನು ಸೆರೆ ಹಿಡಿದಿದ್ದಾರೆ. ಇನ್ನು ರಾಜಕೀಯಕ್ಕೆ ಧುಮುಕಿದ ರಮ್ಯಾ ಚಿತ್ರರಂಗದಲ್ಲಿ ಕಾಣಿಸಿಕೊಳ್ಳುವುದನ್ನು ಕಮ್ಮಿ ಮಾಡಿದರು ಅಲ್ಲದೇ ಅವರ ಸಿನಿಮಾ ಬಿಡುಗಡೆಯಾಗಿ ಬಹುತೇಕ ಎರಡು ಮೂರು ವರ್ಷಗಳು ಕಳೆದು ಹೋಗಿದೆ.

Advertisement

Advertisement

ನಮ್ಮ ಸ್ಯಾಂಡಲ್ ವುಡ್ ಕ್ವೀನ್ ಯಾವಾಗ ಮತ್ತೆ ಬಣ್ಣ ಹಚ್ಚುತ್ತಾರಾಪ್ಪಾ ?ಎಂದು ಅಭಿಮಾನಿಗಳು ಎದುರು ನೋಡುತ್ತಿದ್ದಾರಂತೆ. ಅಭಿಮಾನಿಗಳು ಮಾತ್ರವಲ್ಲದೆ ಸ್ಟಾರ್ ನಟರು ಸಹ ರಮ್ಯಾ ಮತ್ತೆ ಚಿತ್ರರಂಗಕ್ಕೆ ಬರಲಿ ಎಂದು ಬಯಸುತ್ತಿದ್ದಾರೆ. ಇದೀಗ ಅವರು ಮತ್ತೊಮ್ಮೆ ಸುದ್ಧಿಯಲ್ಲಿದ್ದು,  ಅದು ವಿವಾಹ ಎಂಬುದೆ  ವಿಶೇಷ !ಮೋಹಕ ತಾರೆ ರಮ್ಯಾ ಅವರು ಕಳೆದ ಕೆಲವು ದಿನಗಳಿಂದ  ಮದುವೆ ಆಗ್ತಿದ್ದಾರೆ ಎನ್ನುವ ಸುದ್ದಿ ಗಾಂಧಿನಗರದಲ್ಲಿ ಹರಿದಾಡುತ್ತಿದ್ದು, ತನ್ನ ಬಹುದಿನದ ಗೆಳೆಯ ರಾಫೆಲ್ ಜೊತೆ ಸಪ್ತಪದಿ ತುಳಿಯುತ್ತಿದ್ದಾರೆ ಎಂಬ ವಿಚಾರ ಕೆಲದಿನಗಳಿಂದ ಸಾಕಷ್ಟು ಚರ್ಚೆಗೀಡಾಗಿತ್ತು. ಆದರೆ ಇದೀಗ ಈ ಮೋಹಕತಾರೆಯ ಕಲ್ಯಾಣಕ್ಕೆ ಟ್ವಿಸ್ಟ್​ ಸಿಕ್ಕಿದ್ದು, ರಮ್ಯಾ ಅವರ ವಿವಾಹಕ್ಕೆ ಎದುರಾಗಿರುವ ಅಸಲಿ ಸಮಸ್ಯೆಯನ್ನು ರಮ್ಯಾ ಅವರ ತಾಯಿ ಬಿಚ್ಚಿಟ್ಟಿದ್ದಾರೆ.

Advertisement

Advertisement

ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ  ರಮ್ಯಾ ಅವರು  ವಿವಾಹವಾಗುತ್ತಿದ್ದಾರೆ ಎಂಬ ವಿಚಾರ ದೊಡ್ಡ ಸುದ್ಧಿಯಲ್ಲಿದ್ದು, ತಮ್ಮ ಬಹುಕಾಲದ ಗೆಳೆಯ ಪೋರ್ಚುಗಲ್ ದೇಶದವರಾಗಿರುವ ರಾಫೆಲ್​ ಜೊತೆ ಹೊಸಬದುಕಿಗೆ ಕಾಲಿಡಲಿದ್ದಾರೆ  ಎಂದು ಹೇಳಲಾಗಿತ್ತು.ಆದರೆ ಈ ವಿಚಾರ ಅಧಿಕೃತವಾಗಿ ನಿಜ ಎಂದು ತಿಳಿದಿರಲಿಲ್ಲ. ಇದೀಗ ಈ ವಿಚಾರವನ್ನು  ರಮ್ಯಾ ಅವರ ತಾಯಿ ರಂಜಿತಾ ಖಚಿತಪಡಿಸಿದ್ದಾರೆ. ಇನ್ನು ರಮ್ಯಾ ಮತ್ತು ರಾಫೆಲ್​ ಅವರ ನಡುವೆ ವಿವಾಹದ  ಪ್ರಸ್ತಾಪ ನಡೆಯುತ್ತಿರುವುದಂತು ಸತ್ಯ. ಆದರೆ ಅವರನ್ನು ವಿವಾಹವಾಗಿ ಬಿಟ್ಟರೆ ರಮ್ಯಾ ಅವರು  ರಾಫೆಲ್ ರವರ ದೇಶಕ್ಕೆ ಹೋಗಬೇಕಾಗುತ್ತದೆ.  ಅದು ರಮ್ಯಾ ಅವರಿಗೆ ಇಷ್ಟವಿರಲಿಲ್ಲ. ಇನ್ನು ರಾಫೆಲ್‌ ಅವರಿಗೂ ಕೂಡ ಇಲ್ಲಿಗೆ ಬರಲು ಇಷ್ಟವಿರಲಿಲ್ಲ ಈ ರೀತಿಯ ಭಿನ್ನಾಭಿಪ್ರಾಯಗಳ ಕಾರಣ ಮದುವೆಯ ಮಾತು ಮುಂದಕ್ಕೆ ಹೋಗುತ್ತಿಲ್ಲ ಎಂದಿದ್ದಾರೆ.

ಮಗಳು ನೂತನ ಜೀವನಕ್ಕೆ ಪಾದಾರ್ಪಣೆ ಮಾಡುವ ಆ ಗಳಿಗೆಗೋಸ್ಕರ   ನಾನು  ಕಾತುರದಿಂದ ಆ ಕಾಯುತ್ತಿದ್ದೇನೆ ಎಂದು ರಮ್ಯಾ ಅವರ ತಾಯಿ ರಂಜಿತಾ ತಿಳಿಸಿದ್ದಾರೆ. ಅಲ್ಲದೇ  ಪದೇ ಪದೇ  ಮದುವೆ ಪ್ರಸ್ತಾಪ ಮಾಡುತ್ತಾರೆ ಎಂಬ ಕಾರಣಕ್ಕೆ ಅಮ್ಮನ ಜತೆಗೂ ಕೂಡ ರಮ್ಯಾ ಮುನಿಸಿಕೊಂಡಿದ್ದಾರಂತೆ. ಅವಳು ಮದುವೆಯಾಗ್ತೀನಿ ಎಂದರೆ ನನಗೆ ಅದಕ್ಕಿಂತ ಖುಷಿ ಇನ್ನೊಂದಿಲ್ಲ. ಆದರೆ ಕೇಳಿದಾಗಲೆಲ್ಲಾ ಈಗ ಬೇಡ ಎನ್ನುತ್ತಾಳೆ ಎಂದು ಹೇಳಿದ್ದಾರೆ.

Advertisement
Share this on...